1. ಸುದ್ದಿಗಳು

ಸರ್ಕಾರದ ಈ ಕ್ರಮದಿಂದ SSLC, PUC ವಿದ್ಯಾರ್ಥಿಗಳ ಅಂಕ ಹೆಚ್ಚಳ!

Hitesh
Hitesh
SSLC, PUC students score increase by this government action!

ಸರ್ಕಾರ ತೆಗೆದುಕೊಂಡು ಈ ಒಂದು ನಿರ್ಧಾರದಿಂದಾಗಿ SSLC, PUC ವಿದ್ಯಾರ್ಥಿಗಳ ಅಂಕ (ಮಾರ್ಕ್ಸ್‌) ಹೆಚ್ಚಳವಾಗಿದೆ ಎಂದು ಹೇಳಲಾಗಿದೆ.

ಎಸ್.ಎಸ್.ಎಲ್.ಸಿ ಮತ್ತು ದ್ವಿತೀಯ ಪಿಯುಸಿ (SSLC, PUC) ವಿದ್ಯಾರ್ಥಿಗಳಿಗೆ ಈ ವರೆಗೆ ವರ್ಷಕ್ಕೊಮ್ಮೆ

ಒಂದು ವಾರ್ಷಿಕ ಪರೀಕ್ಷೆ ಮತ್ತು ಒಂದು ಪೂರಕ ಪರೀಕ್ಷೆ ನಡೆಸಲಾಗುತ್ತಿತ್ತು ಇದೀಗ ಇದನ್ನು ಬದಲಾಯಿಸಲಾಗಿದೆ.

ಈ ಸಂಬಂಧ ಮಾಹಿತಿ ನೀಡಿರುವ ಮುಖ್ಯಮಂತ್ರಿ (Siddaramaiah ) ಸಿದ್ದರಾಮಯ್ಯ ಅವರು, ಈ ಹಿಂದೆ ನಡೆಸುತ್ತಿದ್ದ

ಪರೀಕ್ಷಾ ಕ್ರಮದಿಂದ ಸಮಸ್ಯೆ ಆಗುತ್ತಿತ್ತು. ಅಲ್ಲದೇ ವಿದ್ಯಾರ್ಥಿಗಳ ಮೇಲೆ ಪರೀಕ್ಷಾ ಒತ್ತಡವನ್ನು ಹೆಚ್ಚಿಸಿ,

ಅವರ ಜ್ಞಾನಾರ್ಜನೆ ಮತ್ತು ಶೈಕ್ಷಣಿಕ ಪ್ರಗತಿಯನ್ನು ಕುಂಠಿತಗೊಳಿಸುತ್ತಿತ್ತು.

ಅಲ್ಲದೇ ವಾರ್ಷಿಕ ಮತ್ತು ಪೂರಕ ಪರೀಕ್ಷೆಯಲ್ಲಿ ಅನುತ್ತೀರ್ಣರಾದ ವಿದ್ಯಾರ್ಥಿಗಳು ಪರೀಕ್ಷೆಗಾಗಿ

ಮತ್ತೊಂದು ವರ್ಷ ಕಾಯಲಾಗದೆ ಶಿಕ್ಷಣ ಮೊಟಕುಗೊಳಿಸುತ್ತಿದ್ದ ಉದಾಹರಣೆಗಳು ಸಾಕಷ್ಟಿದ್ದವು.

Free Laptop ಕಾರ್ಮಿಕ ಮಕ್ಕಳಿಗೆ ಸಿಗಲಿದೆ ಉಚಿತ ಲ್ಯಾಪ್ ಟಾಪ್ !

ಈ ಎಲ್ಲಾ ಸಮಸ್ಯೆಗಳಿಗೆ ಪರಿಹಾರವಾಗಿ ನಮ್ಮ ಸರ್ಕಾರವು ವರ್ಷಕ್ಕೆ ಮೂರು ವಾರ್ಷಿಕ ಪರೀಕ್ಷೆಗಳನ್ನು

ನಡೆಸುವ ವಿನೂತನ ಪದ್ಧತಿ ಜಾರಿ ಮಾಡಿದೆ.

ನಮ್ಮ ಈ ವಿದ್ಯಾರ್ಥಿ ಸ್ನೇಹಿ ನಿಲುವಿನಿಂದಾಗಿ ಕಳೆದ ಆಗಸ್ಟ್ - ಸೆಪ್ಟೆಂಬರ್ ತಿಂಗಳಿನಲ್ಲಿ ನಡೆದ ದ್ವಿತೀಯ ಪಿಯುಸಿ

ಪೂರಕ ಪರೀಕ್ಷೆ -2 ರಲ್ಲಿ ಒಟ್ಟು 41,961 ವಿದ್ಯಾರ್ಥಿಗಳು ಉತ್ತೀರ್ಣರಾಗಿ, ಶಿಕ್ಷಣ ಮುಂದುವರೆಸುವ ಅರ್ಹತೆ ಗಳಿಸಿದ್ದಾರೆ ಎಂದು ಹೇಳಿದ್ದಾರೆ.

ನಮ್ಮ ಸರ್ಕಾರವು ನಾಡಿನ ಯಾವೊಬ್ಬ ವಿದ್ಯಾರ್ಥಿಯೂ ಶಿಕ್ಷಣದಿಂದ ವಿಮುಖನಾಗದೆ ಗರಿಷ್ಠ ಹಂತದ ವರೆಗೆ ಶಿಕ್ಷಣ ಪಡೆದು,

ದೇಶದ ಆಸ್ತಿಯಾಗಬೇಕೆಂಬ ನಮ್ಮ ಉದ್ದೇಶಕ್ಕೆ ದೊರೆತಿರುವ ಈ ಆರಂಭಿಕ ಯಶಸ್ಸು ಮುಂದಿನ

ದಿನಗಳಲ್ಲಿ ಮತ್ತಷ್ಟು ಶೈಕ್ಷಣಿಕ ಸುಧಾರಣೆಗಳಿಗೆ ನಾಂದಿಯಾಗಲಿದೆ ಎಂಬ ವಿಶ್ವಾಸವಿದೆ ಎಂದು ಹೇಳಿದ್ದಾರೆ.

Ration card ಗುಡ್‌ನ್ಯೂಸ್‌: ರೇಷನ್‌ ಕಾರ್ಡ್‌ ತಿದ್ದುಪಡಿ ಅಥವಾ ಸೇರ್ಪಡೆಗೆ ಅವಕಾಶ!

ದೇಶದಲ್ಲೇ ಮೊದಲ ಬಾರಿಗೆ ನಮ್ಮ ಸರ್ಕಾರವು ಗಿಗ್‌ ಕಾರ್ಮಿಕರಿಗೆ ( ಡೆಲಿವರಿ ಬಾಯ್ಸ್ ) ರೂ.2 ಲಕ್ಷ ಜೀವವಿಮೆ

ಮತ್ತು ರೂ.2 ಲಕ್ಷ ಅಪಘಾತ ಪರಿಹಾರ ವಿಮಾ ಸೌಲಭ್ಯ ಕಲ್ಪಿಸಿ ಆದೇಶ ಹೊರಡಿಸಿದೆ.

ಈ ಸಂಬಂಧ ಮಾಹಿತಿ ಹಂಚಿಕೊಂಡಿರುವ ಮುಖ್ಯಮಂತ್ರಿ (Siddaramaiah) ಅವರು ನಿತ್ಯ ಗ್ರಾಹಕರಿಗೆ ಆಹಾರ,

ದಿನಸಿ, ತರಕಾರಿ ಸೇರಿದಂತೆ ಅಗತ್ಯ ವಸ್ತುಗಳನ್ನು ಮನೆ ಬಾಗಿಲಿಗೆ ಮುಟ್ಟಿಸುವ ಡೆಲಿವರಿ ಬಾಯ್‌ಗಳು ನಿಗದಿತ ಸಮಯದಲ್ಲಿ

ಆರ್ಡರ್ ತಲುಪಿಸಬೇಕೆಂಬ ಕಾರಣಕ್ಕಾಗಿ ಸಂಚಾರ ದಟ್ಟಣೆಯ ನಡುವೆ ಪ್ರಾಣವನ್ನು ಪಣಕ್ಕಿಟ್ಟು ವಾಹನ ಚಾಲನೆ ಮಾಡುತ್ತಿದ್ದಾರೆ.

ಇಂತಹ ಅಪಾಯಕಾರಿ ವೃತ್ತಿಯಲ್ಲಿ ತೊಡಗಿಸಿಕೊಂಡಿರುವ ಶ್ರಮಜೀವಿಗಳ ನಿತ್ಯದ ಬದುಕಿನ ಸವಾಲುಗಳನ್ನು

ಅರ್ಥೈಸಿಕೊಂಡು, ಅಪಘಾತ, ಪ್ರಾಣಹಾನಿ ಸಂಭವಿಸಿದಾಗ ಅವರ ನೆರವಿಗೆ ಧಾವಿಸಬೇಕು.  

ಸರ್ಕಾರಿ ನೌಕರರಿಗೆ ಕೇಂದ್ರದಿಂದ ಬಂಪರ್‌; ಮುಂಗಡ ಸಿಗಲಿದೆ ಮಾಸಿಕ ಸಂಬಳ !

ಉದ್ದೇಶದಿಂದ ಅಪಘಾತ ವಿಮೆ ಹಾಗೂ ಜೀವ ವಿಮಾ ಸೌಲಭ್ಯ ನೀಡುವ ವಿನೂತನ ಕಾರ್ಯಕ್ರಮವನ್ನು

ಜಾರಿಮಾಡಿ ಮತ್ತೊಮ್ಮೆ ನುಡಿದಂತೆ ನಡೆದಿದ್ದೇವೆ.  

Photo Courtesy Pexsels

Published On: 13 September 2023, 02:55 PM English Summary: SSLC, PUC students score increase by this government action!

Share your comments

Latest feeds

More News
Krishi Jagran Kannada Magazine Subscription Online Subscription

CopyRight - 2024 Krishi Jagran Media Group. All Rights Reserved.