ಕೊರೋನಾ ಮಹಾಮಾರಿಯಿಂದ ಮಾರ್ಚ್ ನಲ್ಲಿಯೇ ಶಾಲೆಗಳು ಬಂದ್ ಆಗಿದ್ದವು, ಆದರೆ ಇದೀಗ sslc, ಹಾಗೂ ದ್ವಿತೀಯ puc ವಿದ್ಯಾರ್ಥಿಗಳಿಗೆ ತರಗತಿಗಳು ಪ್ರಾರಂಭವಾಗಿದ್ದು, ಇದೀಗ ಸರ್ಕಾರವು ಪರೀಕ್ಷೆ ಮಹೂರ್ತವನ್ನು ಫಿಕ್ಸ್ ಮಾಡಿದೆ.
ಮೇ 2ನೇ ವಾರದಲ್ಲಿ ದ್ವಿತೀಯ ಪಿಯುಸಿ ಹಾಗೂ ಜೂನ್ ಮೊದಲ ವಾರದಿಂದ ಎಸ್.ಎಸ್.ಎಲ್.ಸಿ ಪರೀಕ್ಷೆಗಳು ಪ್ರಾರಂಭವಾಗಲಿವೆ ಎಂದು ಪ್ರಾಥಮಿಕ ಮತ್ತು ಪ್ರೌಢ ಶಾಲಾ ಶಿಕ್ಷಣ ಸಚಿವರಾದಂತಹ ಸುರೇಶ್ ಕುಮಾರ್ ಅವರು ತಿಳಿಸಿದರು.
ಹಾಗೂ ಇನ್ನೇನು ಕೆಲವೇ ದಿನಗಳಲ್ಲಿ ತಾತ್ಕಾಲಿಕ ವೇಳಾಪಟ್ಟಿಯನ್ನು ಬಿಡುಗಡೆ ಮಾಡಲಿದ್ದೇವೆ ಎಂದು ಸಚಿವರಾದ ಸುರೇಶ ಕುಮಾರ್ ಅವರು ಹೇಳಿದರು. ಯಾವುದೇ ವಿದ್ಯಾರ್ಥಿಗಳಿಗೆ ಹೊರೆಯಾಗದಂತೆ ಕನಿಷ್ಠ ಕಲಿಕೆಗೆ ಬೋದಿಸಬೇಕಿರುವ ಪಠ್ಯಗಳನ್ನು ಪರಿಗಣಿಸಿ, ಪರೀಕ್ಷೆ ಯನ್ನು ಗಮನದಲ್ಲಿಟ್ಟುಕೊಂಡು ಬೋಧನೆ ಹಾಗೂ ಕಲಿಕೆಗಾಗಿ ಸಿಲ್ಲಬಸ್ ನಿಗದಿಪಡಿಸಿದ್ದು, ಇದರ ವಿವರಗಳನ್ನು ಶಾಲೆಗಳಿಗೆ ಕಳಿಸಿ ಕೊಡಲಾಗುವುದು ಎಂದು ಹೇಳಿದರು.
ಒಂದರಿಂದ ಒಂಬತ್ತನೇ ತರಗತಿ ವರೆಗಿನ ವಿದ್ಯಾರ್ಥಿಗಳಿಗೆ ಪಠ್ಯದಲ್ಲಿ ಯಾವುದೇ ಕಡಿತವಿಲ್ಲ ಎಂದು ಹೇಳಿದರು.
Share your comments