SSC GD Constable recruitment: ಸಿಬ್ಬಂದಿ ನೇಮಕಾತಿ ಆಯೋಗವು ಜನರಲ್ ಡ್ಯೂಟಿ ಕಾನ್ಸ್‌ಟೇಬಲ್ ನೇಮಕಕ್ಕೆ (SSC GD Constable recruitment 2022) ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ.
ಪ್ರಧಾನಮಂತ್ರಿ ಸುರಕ್ಷಾ ಬಿಮಾ ಯೋಜನೆ: ಕೇವಲ 20 ರೂಪಾಯಿಗೆ 2 ಲಕ್ಷದ ಅಪಘಾತ ವಿಮೆ!
ಕೇಂದ್ರ ಸಶಸ್ತ್ರ ಪೊಲೀಸ್ ಪಡೆ (ಸಿಎಪಿಎಫ್), ಅಸ್ಸಾಂ ರೈಫಲ್ಸ್‌ನಲ್ಲಿ ಎನ್‌ಐಎ, ಎಸ್‌ಎಸ್‌ಎಫ್, ರೈಫಲ್‌ಮೆನ್ ಮತ್ತು ನಾರ್ಕೊಟಿಕ್ಸ್ ಸೆಂಟ್ರಲ್ ಬ್ಯೂರೋದಲ್ಲಿ ಸಫಾಯಿ ಕಾನ್ಸ್‌ಟೇಬಲ್ ಹುದ್ದೆಗಳು ಲಭ್ಯವಿದೆ.
ಆನ್‌ಲೈನ್ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಈಗಾಗಲೇ ಆರಂಭವಾಗಿದ್ದು, ಆಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು.
ಸಿಬ್ಬಂದಿ ನೇಮಕಾತಿ ಆಯೋಗವು ಜನರಲ್ ಡ್ಯೂಟಿ ಕಾನ್ಸ್‌ಟೇಬಲ್ ನೇಮಕಕ್ಕೆ (SSC GD Constable recruitment 2022) ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ.
ಒಟ್ಟು 24,369 ಹುದ್ದೆಗಳಿಗೆ ನೇಮಕ ಮಾಡಿಕೊಳ್ಳಲು ಉದ್ದೇಶಿಸಲಾಗಿದೆ.
ಆಸಕ್ತರು ನಿಮ್ಮ ವಿದ್ಯಾಹರ್ತೆ ಹಾಗೂ ವಯೋಮಾನಕ್ಕೆ ಅನುಗುಣವಾಗಿ ಅರ್ಜಿ ಸಲ್ಲಿಸಬಹುದಾಗಿದೆ.
"ಐಟಮ್" ಎಂದು ಚುಡಾಯಿಸಿದವನಿಗೆ ಜೈಲು ಸಜೆ!
ಈ ಹುದ್ದೆಗಳಿಗೆ ಆನ್‌ಲೈನ್‌ನ ಮೂಲಕ ಮಾತ್ರ ಅರ್ಜಿ ಸಲ್ಲಿಸಬಹುದಾಗಿದೆ. ಕಂಪ್ಯೂಟರ್ ಆಧರಿತ ಪರೀಕ್ಷೆ (ಸಿಬಿಇ) ಇಂಗ್ಲಿಷ್ ಮತ್ತು ಹಿಂದಿ ಭಾಷೆಯಲ್ಲಿ ಮಾತ್ರ ನಡೆಯಲಿದೆ.
ಕಾನ್ಸ್‌ಟೇಬಲ್ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಮೆಟ್ರಿಕ್ಯುಲೇಷನ್ ಅಥವಾ 10 ನೇ ತರಗತಿ ಉತ್ತೀರ್ಣರಾಗಿರಬೇಕು.
ಎನ್‌ಸಿಸಿ ಸರ್ಟಿಫಿಕಷೇನ್ ಹೊಂದಿರುವವರಿಗೆ (ಸಿ-ಶೇಕಡ 5, ಬಿ- 3 ಮತ್ತು ಎ-2) ಹೊಂದಿರುವವರಿಗೆ ಇನ್ಸೆಂಟಿವ್, ಬೋನಸ್ ಮಾರ್ಕ್ಸ್ ನೀಡಲಾಗುತ್ತದೆ.
ಎನ್‌ಸಿಬಿ ವಿಭಾಗದ ಸಫಾಯಿದಾರರಿಗೆ 18 ಸಾವಿರದಿಂದ 56,900 ವೇತನ ನಿಗದಿ ಮಾಡಲಾಗಿದೆ.
ಇತರೆ ವಿಭಾಗದ ಕಾನ್ಸ್‌ಟೇಬಲ್ ಹುದ್ದೆಗಳಿಗೆ 21,700ದಿಂದ 69,100 ರೂಪಾಯಿ ವೇತನ ಶ್ರೇಣಿ ಇದೆ.
ಎಫ್.ಎಂ.ಸಿ.ಜಿ ಕ್ಲಸ್ಟರ್ - ಹೂಡಿಕೆದಾರರ ಸಮಾವೇಶ; 1200 ಕೋಟಿ ಬಂಡವಾಳ, ಲಕ್ಷಾಂತರ ಜನರಿಗೆ ಉದ್ಯೋಗ!
ಅರ್ಜಿ ಸಲ್ಲಿಕೆ ಪ್ರಕ್ರಿಯೆಗಳ ವಿವರ
- ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಕೆ ಆರಂಭ: 27-10-2022
- ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 30-11-2022
- ಆನ್‌ಲೈನ್ ಅರ್ಜಿ ಪ್ರತಿ ಡೌನ್‌ಲೋಡ್ ಮಾಡಿಕೊಳ್ಳಲು ಕೊನೆಯ ದಿನಾಂಕ: 30-11-2022 (23:00)
- ಆಫ್‌ಲೈನ್ ಚಲನ್‌ಗೆ ಕೊನೆಯ ದಿನಾಂಕ: 30-11-2022(23:00)
- ಆನ್‌ಲೈನ್ ಮೂಲಕ ಅರ್ಜಿ ಶುಲ್ಕ ಪಾವತಿಸಲು ಕೊನೆಯ ದಿನಾಂಕ: 01-12-2022(23:00)
- ಚಲನ್ ಮೂಲಕ ಶುಲ್ಕ ಪಾವತಿಸಲು ಕೊನೆಯ ದಿನಾಂಕ: 01-12-2022- ಬ್ಯಾಂಕ್ ಕೆಲಸದ ಅವಧಿಯಲ್ಲಿ
- ಕಂಪ್ಯೂಟರ್ ಆಧರಿತ ನೇಮಕಾತಿ ಪರೀಕ್ಷೆ ನಡೆಯುವ ನಿರೀಕ್ಷಿತ ದಿನಾಂಕ: ಜನವರಿ, 2023
ಪುರುಷ ಅಭ್ಯರ್ಥಿಗಳಿಗೆ ಲಭ್ಯವಿರುವ ಹುದ್ದೆಗಳು
ಬಿಎಸ್‌ಎಫ್-8922, ಸಿಐಎಸ್‌ಎಫ್ 90, ಸಿಆರ್‌ಪಿಎಫ್ 8380, ಎಸ್‌ಎಸ್‌ಬಿ 1041, ಐಟಿಬಿಪಿ 1371, ಎಆರ್ 1697, ಎಸ್‌ಎಸ್‌ಎಫ್ 78 ಸೇರಿದಂತೆ ಒಟ್ಟು 21,579 ಹುದ್ದೆಗಳನ್ನು ಪುರುಷ ಅಭ್ಯರ್ಥಿಗಳಿಗೆ ಮೀಸಲಿರಿಸಲಾಗಿದೆ.
ಮಹಿಳಾ ಅಭ್ಯರ್ಥಿಗಳಿಗೆ ಲಭ್ಯವಿರುವ ಹುದ್ದೆಗಳು
ಬಿಎಸ್‌ಎಫ್-1575, ಸಿಐಎಸ್‌ಎಫ್ 10, ಸಿಆರ್‌ಪಿಎಫ್ 531, ಎಸ್‌ಎಸ್‌ಬಿ 243, ಐಟಿಬಿಪಿ 242, ಎಆರ್ 0, ಎಸ್‌ಎಸ್‌ಎಫ್ 25 ಸೇರಿದಂತೆ ಒಟ್ಟು26,26 ಹುದ್ದೆಗಳನ್ನು ಮಹಿಳಾ ಅಭ್ಯರ್ಥಿಗಳಿಗೆ ಮೀಸಲಿರಿಸಲಾಗಿದೆ.
ಅರ್ಜಿ ಸಲ್ಲಿಕೆಗೆ ವಯೋಮಿತಿ
01-01-2023ಕ್ಕೆ ಅನ್ವಯವಾಗುವಂತೆ 18-23 ವರ್ಷ ವಯೋಮಿತಿ ನಿಗದಿಪಡಿಸಲಾಗಿದೆ. ಅಂದರೆ 02-01-2000ರ ಮೊದಲು ಮತ್ತು 01-01-2005 ನಂತರ ಜನಿಸಿದವರು ಅರ್ಜಿ ಸಲ್ಲಿಸಲು ಅವಕಾಶ ಇರುವುದಿಲ್ಲ.
ವಯೋಮಿತಿಯಲ್ಲಿ ಎಸ್‌ಸಿ/ಎಸ್‌ಟಿ ಅಭ್ಯರ್ಥಿಗಳಿಗೆ ಐದು ವರ್ಷ ಮತ್ತು ಒಬಿಸಿ ಅಭ್ಯರ್ಥಿಗಳಿಗೆ ಮೂರು ವರ್ಷ ಸಡಿಲಿಕೆಗೆ ಅವಕಾಶ ಇದೆ.
ಅರ್ಜಿ ಶುಲ್ಕ ವಿವರ
100 ರೂ. ಅರ್ಜಿ ಶುಲ್ಕ ನಿಗದಿಪಡಿಸಲಾಗಿದೆ. ಮಹಿಳಾ ಅಭ್ಯರ್ಥಿಗಳು, ಎಸ್‌ಸಿ, ಎಸ್‌ಟಿ ಅಭ್ಯರ್ಥಿಗಳು ಶುಲ್ಕ ಪಾವತಿಸಬೇ ಕಿಲ್ಲ. ಭೀಮ್, ಯುಪಿಐ, ನೆಟ್‌ಬ್ಯಾಂಕಿಂಗ್ ಇತ್ಯಾದಿ ಆನ್‌ಲೈನ್ ಪಾವತಿ ವಿಧಾನಗಳ ಮೂಲಕ ಅರ್ಜಿ ಶುಲ್ಕ ಪಾವತಿಸಬಹುದು.
ಕರ್ನಾಟಕದಲ್ಲಿ ಪರೀಕ್ಷಾ ಕೇಂದ್ರ ಎಲ್ಲಿದೆ
ಕರ್ನಾಟಕದಲ್ಲಿ ಬೆಳಗಾವಿ, ಬೆಂಗಳೂರು, ಹುಬ್ಬಳ್ಳಿ, ಕಲಬುರಗಿ, ಮಂಗಳೂರು, ಮೈಸೂರು, ಶಿವಮೊಗ್ಗ, ಉಡುಪಿಗಳಲ್ಲಿ ಆನ್‌ಲೈನ್ ಪರೀಕ್ಷೆ ನಡೆಯಲಿದೆ.
ಹೆಚ್ಚಿನ ಮಾಹಿತಿಗೆ ಈ ಲಿಂಕ್ ಕ್ಲಿಕ್ ಮಾಡಬಹುದಾಗಿದೆ https://ssc.nic.in
Share your comments