1. ಸುದ್ದಿಗಳು

ಕೃಷಿ ಇಲಾಖೆಯು ಬಿಡುಗಡೆ ಮಾಡಿರುವ ಪ್ರಸಕ್ತ ಸಾಲಿನ ಬೀಜದ ದರದ ಮಾಹಿತಿ ಇಲ್ಲಿದೆ

seeds

ಕೃಷಿ ಇಲಾಖೆಯು ಬಿಡುಗಡೆ ಮಾಡಿರುವ ಪ್ರಸಕ್ತ ಸಾಲಿನ ಬೀಜದ ದರದ ಪಟ್ಟಿ ಕಳೆದ ವರ್ಷಕ್ಕಿಂತ ಈ ವರ್ಷ ಹೆಚ್ಚಾಗಿದೆ. ಪ್ರತಿ ವರ್ಷದಂತೆ ಈ ವರ್ಷವೂ ರಾಜ್ಯದ ಕೃಷಿ ಇಲಾಖೆಯ ರೈತ ಸಂಪರ್ಕ ಕೇಂದ್ರಗಳ ಮೂಲಕ ಬಿತ್ತನೆ ಬೀಜಗಳನ್ನು ರೈತರಿಗೆ ವಿತರಿಸಲಾಗುವುದು. ಸಬ್ಸಿಡಿ ಯಥಾಸ್ಥಿತಿಯಿದ್ದರೂ ಸಹ ಬೆಲೆ ಮಾತ್ರ ಹೆಚ್ಚಳವಾಗಿದೆ. ಗುಣಮಟ್ಟದ ಬಿತ್ತನೆ ಬೀಜಗಳು ಲಭ್ಯ ಇಲ್ಲದೆ ಇರುವುದಕ್ಕೆ ಬೀಜದ ಬೆಲೆ ಹೆಚ್ಚಳಕ್ಕೆ ಕಾರಣ ಎನ್ನಲಾಗುತ್ತಿದೆ.

ಈ ವರ್ಷ ಸರ್ಕಾರ ಬಿಡುಗಡೆ ಮಾಡಿದ ದರದ ಪಟ್ಟಿ

ಹೆಸರು ಸಾಮಾನ್ಯವರ್ಗದ ರೈತರಿಗೆ ಸಬ್ಸಿಡಿಯಲ್ಲಿ 99 ರೂಪಾಯಿ, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರಿಗೆ 86.50 ರೂಪಾಯಿಗೆ ದೊರೆಯಲಿದೆ.

ಉದ್ದು ಸಾಮಾನ್ಯ ವರ್ಗದ ರೈತರಿಗೆ 79 ರೂಪಾಯಿ, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ರೈತರಿಗೆ  66.50 ರೂಪಾಯಿಯಲ್ಲಿ ದೊರೆಯಲಿದೆ.

ಸೋಯಾಬಿನ್  ಸಾಮಾನ್ಯ ವರ್ಗದ ರೈತರಿಗೆ 79 ರೂಪಾಯಿ, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ರೈತರಿಗೆ 66.50ಗೆ ದೊರೆಯಲಿದೆ.

ಭತ್ತ ಸಾಮಾನ್ಯವರ್ಗದ ರೈತರಿಗೆ ಸಬ್ಸಿಡಿಯಲ್ಲಿ 24 ರೂಪಾಯಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರಿಗೆ 20 ರೂಪಾಯಿಗೆ ದೊರೆಯಲಿದೆ.

ತೊಗರಿ ಸಾಮಾನ್ಯವರ್ಗದ ರೈತರಿಗೆ ಸಬ್ಸಿಡಿಯಲ್ಲಿ 80 ರೂಪಾಯಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರಿಗೆ 67.50 ರೂಪಾಯಿಗೆ ದೊರೆಯಲಿದೆ.

ಮೆಕ್ಕೆಜೋಳ ಸಾಮಾನ್ಯವರ್ಗದ ರೈತರಿಗೆ ಸಬ್ಸಿಡಿಯಲ್ಲಿ 106-108 ರೂಪಾಯಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರಿಗೆ 96-98 ರೂಪಾಯಿಗೆ ದೊರೆಯಲಿದೆ.

ಸಜ್ಜೆ ಸಾಮಾನ್ಯವರ್ಗದ ರೈತರಿಗೆ ಸಬ್ಸಿಡಿಯಲ್ಲಿ 194-195 ರೂಪಾಯಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರಿಗೆ 186- 187 ರೂಪಾಯಿಗೆ ದೊರೆಯಲಿದೆ.

ಸೂರ್ಯಕಾಂತಿ ಸಾಮಾನ್ಯವರ್ಗದ ರೈತರಿಗೆ ಸಬ್ಸಿಡಿಯಲ್ಲಿ 388-405 ರೂಪಾಯಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರಿಗೆ 348-365 ರೂಪಾಯಿಗೆ ದೊರೆಯಲಿದೆ.

ಮೇಲಿನ ದರಗಳು ವಿವಿಧ ಬೆಳೆಗಳಿಗೆ ತಳಿವಾರು ಹಾಗೂ ಕಂಪನಿವಾರು ಸ್ವಲ್ಪ ಬೇರೆ ಬೇರೆ ಇರುತ್ತದೆ. ರೈತರು ಹೆಚ್ಚಿನ ಮಾಹಿತಿಗಾಗಿ ಹತ್ತಿರದ ರೈತ ಸಂಪರ್ಕ ಕೇಂದ್ರಕ್ಕೆ ಅಥವಾ ಸಹಾಯಕ ಕೃಷಿ ನಿರ್ದೇಶಕರ ಕಚೇರಿಗೆ ಸಂಪರ್ಕಿಸಬಹುದು. ಈಗಾಗಲೇ ರಾಜ್ಯಾದ್ಯಂತ ಸಬ್ಸಿಡಿಯಲ್ಲಿ ಬೀಜ ವಿತರಣೆ ಮಾಡಲಾಗುತ್ತಿದೆ

Published On: 03 June 2021, 09:38 PM English Summary: sowing seeds

Share your comments

Latest feeds

More News
Krishi Jagran Kannada Magazine Subscription Online Subscription

CopyRight - 2024 Krishi Jagran Media Group. All Rights Reserved.