ವರ್ಷದ ಮೊದಲ ಸೂರ್ಯಗ್ರಹಣ ಭಾನುವಾರಪ ಸಂಭವಿಸಿದ್ದು, ನವದೆಹಲಿ, ರಾಜಸ್ಥಾನ್, ಹರ್ಯಾಣ ಮತ್ತು ಉತ್ತರಾಖಂಡ್ ನಲ್ಲಿ ಜೂನ್ 21ರಂದು ಬೆಳಗ್ಗೆ ಆರಂಭಗೊಂಡ ಕಂಕಣ ಸೂರ್ಯಗ್ರಹಣ ಕರ್ನಾಟಕ ಸೇರಿದಂತೆ ದೇಶದ ಹಲವೆಡೆ ಗೋಚರಿಸಿದೆ.
ಭಾರತ ಹೊರತುಪಡಿಸಿ ಈ ಸೂರ್ಯಗ್ರಹಣ ಕಾಂಗೋ, ಸೂಡಾನ್, ಇಥಿಯೋಪಿಯಾ, ಯೆಮೆನ್, ಸೌದಿ ಅರೇಬಿಯಾ, ಓಮಾನ್, ಪಾಕಿಸ್ತಾನ ಹಾಗೂ ಚೀನಾದಲ್ಲಿಯೂ ಗೋಚರವಾಗಿದೆ.
ಕರ್ನಾಟಕದ ಬೀದರ್, ರಾಯಚೂರು, ಕಲಬುರಗಿ, ಯಾದಗಿರಿ ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಯಲ್ಲಿ ಮೋಡ ಮುಸುಕಿದ ಹಾಗೂ ಮಳೆಯ ವಾತಾವರಣದಿಂದಾಗಿ ಕಂಕಣ ಸೂರ್ಯ ಗ್ರಹಣ ಕೌತುಕ ವೀಕ್ಷಣೆಗೆ ಅಡ್ಡಿಯಾಯಿತು.
ವಿಜ್ಞಾನ ಕೇಂದ್ರಗಳಲ್ಲಿ ಸೂರ್ಯಗ್ರಹಣ ವೀಕ್ಷಣೆಗೆ ಅವಕಾಶ ಮಾಡಿಕೊಟ್ಟಿದ್ದರೂ ಸಹ ಮಕ್ಕಳಿಗೆ ಅನುಮತಿ ನೀಡಿರಲಿಲ್ಲ. ಹಾಗಾಗೀ ಸೂರ್ಯಗ್ರಹಣ ವೀಕ್ಷಣೆ ಯಾರೂ ಮಾಡಲಿಲ್ಲ. ಬಹುತೇಕ ಎಲ್ಲಾ ವಿಜ್ಞಾನ ಕೇಂದ್ರಗಳು ಬಿಕೋ ಎನ್ನುತ್ತಿದ್ದವು. ಕೆಲವೆಡೆ ದೇವಸ್ಥಾನಗಳ ಬಾಗಿಲು ತೆರೆದರೆ ಇನ್ನೂ ಕೆಲವು ಕಡೆ ಬಾಗಿಲು ಮುಚ್ಚಿದ್ದವು. ಇದರ ನಡುವೆ ಕೊರೋನಾ ಭಯದ ನಡುವೆ ಜನತೆಯೂ ಸಹ ಹೊರ ಬರಲಿಲ್ಲ.
ಸೂರ್ಯಗ್ರಹಣ ಹೇಗಾಗುತ್ತದೆ?
ಸೂರ್ಯ ಮತ್ತು ಭೂಮಿಯ ನಡುವೆ ಚಂದ್ರ ಬಂದಾಗ ಸೂರ್ಯಗ್ರಹಣ ಉಂಟಾಗುತ್ತದೆ. ಚಂದ್ರನ ನೆರಳು ಭೂಮಿಯ ಮೇಲೆ ಬಿದ್ದು, ಸೂರ್ಯ ಒಂದು ಬಳೆಯಂತೆ ಕಾಣುವ ಸೌರ ವಿದ್ಯಾಮಾನ ಇದಾಗಿದೆ.
ಹಳ್ಳಿಗಳಲ್ಲಿ ಮೌಢ್ಯತೆ:
ಸೂರ್ಯಗ್ರಹಣದ ಸಮಯದಲ್ಲಿ ಹಳ್ಳಿಗಳಲ್ಲಿ ಇನ್ನೂ ಮೌಢ್ಯತೆಯಿದೆ. ಈ ಸಮಯದಲ್ಲಿ ಊಟ ಮಾಡದಿರುವುದು, ಒನಕೆ ನಿಲ್ಲಿಸುವುದು ಸೇರಿದಂತೆ ಅಂಗವೈಕಲ್ಯ ಮಕ್ಕಳನ್ನು ತಿಪ್ಪಿಗುಂಡಿಗಳಲ್ಲಿ ಹೂತಿಟ್ಟರೆ ಮಕ್ಕಳ ಅಂಗವೈಕಲ್ಯ ನಿವಾರಣೆಯಾಗುತ್ತದೆ ಎಂಬ ನಂಬಿಕೆಗಳಿವೆ. ವೈಜ್ಞಾನಿಕವಾಗಿ ಎಷ್ಟೇ ಮುಂದುವರೆದಿದ್ದರೂ ಸಹ ಇನ್ನೂ ಜನತೆ ಅವೈಜ್ಞಾನಿಕ ಪದ್ದತಿ ಅನುಸರಿಸುವುದನ್ನು ಬಿಟ್ಟಿಲ್ಲ
ಒನಕೆ ನಿಲ್ಲಿಸುವುದು:
ಗ್ರಹಣದ ಸಂದರ್ಭದಲ್ಲಿ ಕಂಚಿನ ತಟ್ಟೆಯಲ್ಲಿ ನೀರು ಹಾಕಿ, ಅದರಲ್ಲಿ ಒನಕೆ ನಿಲ್ಲಿಸುವುದರಿಂದ ಗ್ರಹಣ ಆರಂಭದಿಂದ ಕೊನೆಯವರೂ ಒನಕೆ ನಿಲ್ಲುತ್ತದೆ ಎಂಬ ನಂಬಿಕೆ. ಇದನ್ನೂ ಈಗಲು ಗ್ರಾಮಾಂತರ ಪ್ರದೇಶದಲ್ಲಿ ಅನುಸರಿಸಲಾಯಿತು. ಒನಕೆ ನೇರವಾಗಿ ನಿಂತರೆ ಗ್ರಹಣ ಹಿಡಿದಿರುವುದು ಎಂಬ ನಂಬಿಕೆಯಿದೆ.
Share your comments