1. ಸುದ್ದಿಗಳು

ಬಾಡಿಗೆದಾರರಿಗೆ ಶಾಕಿಂಗ್‌ ಸುದ್ದಿ; ಇನ್ಮುಂದೆ ಬಾಡಿಗೆ ಮನೆ ವಾಸಕ್ಕೂ ಬೀಳಲಿದೆ GST!

Kalmesh T
Kalmesh T
Shicking news; GST on rental Houses

ಜುಲೈ 18ರಿಂದ ಜಾರಿಗೆ ಬರಲಿರುವ ಹೊಸ ಜಿಎಸ್ ಟಿ ನಿಯಮಗಳ ಪ್ರಕಾರ ಜಿಎಸ್ ಟಿ ನೋಂದಾಯಿತ ಬಾಡಿಗೆದಾರ ಒಂದು ನಿವಾಸ ಬಾಡಿಗೆ ಪಡೆದರೆ ಶೇ.18ರಷ್ಟು ಸರಕು ಹಾಗೂ ಸೇವಾ ತೆರಿಗೆ ಪಾವತಿಸಬೇಕು.

ಇದನ್ನೂ ಓದಿರಿ: Breaking News: IT ದಾಳಿಯಲ್ಲಿ ಬರೋಬ್ಬರಿ 390 ಕೋಟಿ ಮೌಲ್ಯದ ಅಕ್ರಮ ಹಣ, ಬಂಗಾರ, ವಜ್ರ ಪತ್ತೆ!

47ನೇ ಜಿಎಸ್ ಟಿ ಮಂಡಳಿ ಸಭೆಯ ಶಿಫಾರಸ್ಸುಗಳ ಪ್ರಕಾರ ರಿವರ್ಸ್ ಚಾರ್ಜ್ (RCM) ಆಧಾರದಲ್ಲಿ ಬಾಡಿಗೆದಾರ ಶೇ.18 ಜಿಎಸ್ ಟಿ ಪಾವತಿಸಬೇಕು.

ಆ ಬಳಿಕ ಆತ ಇನ್ ಪುಟ್ ತೆರಿಗೆ ಕ್ರೆಡಿಟ್ ಅಡಿಯಲ್ಲಿ ಇದನ್ನು ತೆರಿಗೆ ಕಡಿತವೆಂದು ಕ್ಲೇಮ್ ಮಾಡಲು ಅವಕಾಶವಿದೆ. ಆದರೆ, ವೈಯಕ್ತಿಕ ಬಳಕೆಗಾಗಿ ಖಾಸಗಿ ವ್ಯಕ್ತಿಗೆ ಮನೆಯನ್ನು ಬಾಡಿಗೆಗೆ ನೀಡಿದರೆ ಅದಕ್ಕೆ ಯಾವುದೇ ಜಿಎಸ್ ಟಿ ಅನ್ವಯಿಸುವುದಿಲ್ಲ.

ಹಾಗೆಯೇ ಮಾಲೀಕ ಅಥವಾ ಆ ಸಂಸ್ಥೆಯ ಪಾಲುದಾರ ಮನೆಯನ್ನು ವೈಯಕ್ತಿಕ ಬಳಕೆಗೆ ನೀಡಿದ್ರೆ ಆಗ ಕೂಡ ಯಾವುದೇ ಜಿಎಸ್ ಟಿ ಪಾವತಿಸಬೇಕಾಗಿಲ್ಲ. ಮನೆ ಅಥವಾ ವಾಸ್ತವ್ಯದ ಕಟ್ಟಡವನ್ನು ಉದ್ಯಮ ಸಂಸ್ಥೆಗೆ ಬಾಡಿಗೆ ನೀಡಿದ್ರೆ ಮಾತ್ರ ಜಿಎಸ್ ಟಿ ಅನ್ವಯಿಸುತ್ತದೆ.

ಗುಡ್‌ನ್ಯೂಸ್‌: SSLC - PUC ವಿದ್ಯಾರ್ಥಿಗಳಿಗೆ ಇಲ್ಲಿದೆ ಬರೋಬ್ಬರಿ ₹1,25,000 ವಿದ್ಯಾರ್ಥಿ ವೇತನ! ಅರ್ಜಿ ಸಲ್ಲಿಕೆ ಹೇಗೆ ಗೊತ್ತೆ?

ಬಾಡಿಗೆದಾರ ಜಿಎಸ್ ಟಿ (GST) ಅಡಿಯಲ್ಲಿ ನೋಂದಣಿಯಾಗಿದ್ದು, ಜಿಎಸ್ ಟಿ ರಿಟರ್ನ್ಸ್ ಫೈಲ್ ಮಾಡಲು ಜವಾಬ್ದಾರಿಯುತನಾಗಿದ್ರೆ  ಮಾತ್ರ ಅಂಥವರಿಗೆ ಈ ತೆರಿಗೆ ಅನ್ವಯಿಸುತ್ತದೆ. ಉಳಿದಂತೆ ವೈಯಕ್ತಿಕ ಉದ್ದೇಶಕ್ಕೆ ಬಳಸುವ ಸಾಮಾನ್ಯ ಜನರಿಗೆ ಇದು ಅನ್ವಯಿಸೋದಿಲ್ಲ.

ಇನ್ನು ಜಿಎಸ್ ಟಿ ಪಾವತಿಸೋದು ಮನೆ ಮಾಲೀಕನ (Owner) ಜವಾಬ್ದಾರಿ ಕೂಡ ಅಲ್ಲ. 'ಒಂದು ವೇಳೆ ವೇತನ ಪಡೆಯುತ್ತಿರುವ ಯಾವುದೇ ಸಾಮಾನ್ಯ ವ್ಯಕ್ತಿ ವಾಸ್ತವ್ಯ ಯೋಗ್ಯ ಮನೆ ಅಥವಾ ಫ್ಲ್ಯಾಟ್ ಅನ್ನು ಬಾಡಿಗೆ ಅಥವಾ ಲೀಸ್ ಗೆ (Lease) ಪಡೆದಿದ್ರೆ ಆಗ ಆತ ಜಿಎಸ್ ಟಿ ಪಾವತಿಸಬೇಕಾಗಿಲ್ಲ.

ಆದರೆ, ಜಿಎಸ್ ಟಿ ನೋಂದಾಯಿತ ವ್ಯಕ್ತಿ ಮನೆಯನ್ನು ಬಾಡಿಗೆ ಪಡೆದು ಅಲ್ಲಿ ಉದ್ಯಮ (Business) ಅಥವಾ ವೃತ್ತಿ (Profession) ನಡೆಸುತ್ತಿದ್ರೆ, ಆಗ ಮಾತ್ರ ಆತ ಮಾಲೀಕರಿಗೆ ಪಾವತಿಸುವ ಬಾಡಿಗೆ (Rent) ಮೇಲೆ ಶೇ.18ರಷ್ಟು ಜಿಎಸ್ ಟಿ ಪಾವತಿಸೋದು ಕಡ್ಡಾಯ.

ರೈತರಿಗೆ ಸಿಹಿಸುದ್ದಿ: “ರಾಷ್ಟ್ರೀಯ ಗೋಪಾಲ ರತ್ನ ಪ್ರಶಸ್ತಿಗೆ ಅರ್ಜಿ ಆಹ್ವಾನ; 5 ಲಕ್ಷ ಬಹುಮಾನ! ಈಗಲೇ ಅರ್ಜಿ ಸಲ್ಲಿಸಿ..

ಜಿಎಸ್ ಟಿ ನೋಂದಾಯಿತ ವ್ಯಕ್ತಿ ಬಾಡಿಗೆ ಪಡೆದಿರುವ ಮನೆಯಿಂದ ಸೇವೆಗಳನ್ನು (Services) ನೀಡುತ್ತಿದ್ದರೆ ಆಗ ಆತ ಶೇ.18ರಷ್ಟು ಜಿಎಸ್ ಟಿ ಪಾವತಿಸೋದು ಅಗತ್ಯ.

ಜಿಎಸ್ ಟಿ ಕಾನೂನಿನ ಅಡಿಯಲ್ಲಿ ನೋಂದಾಯಿತರೆಂದ್ರೆ ಕಾರ್ಪೋರೇಟ್ ಸಂಸ್ಥೆಗಳು ಹಾಗೂ ವ್ಯಕ್ತಿಗಳು ಸೇರಿದ್ದಾರೆ.

ನಿಗದಿತ ಮಿತಿ ಮೀರಿದ ವಾರ್ಷಿಕ ವಹಿವಾಟು (Annual turnover) ನಡೆಸುವ ಉದ್ಯಮಗಳು ಅಥವಾ ವೃತ್ತಿಯನ್ನು ಹೊಂದಿರುವ ವ್ಯಕ್ತಿ ಜಿಎಸ್ ಟಿ ನೋಂದಣಿ ಮಾಡೋದು ಕಡ್ಡಾಯ.  

Published On: 13 August 2022, 02:50 PM English Summary: Shicking news; GST on rental Houses

Share your comments

Latest feeds

More News
Krishi Jagran Kannada Magazine Subscription Online Subscription

CopyRight - 2024 Krishi Jagran Media Group. All Rights Reserved.