ಸಾಮಾನ್ಯವಾಗಿ ಕುರಿಗಳು ಸಾವಿರ , ಲಕ್ಷದ ಲೆಕ್ಕದಲ್ಲಿ ಮಾರಾಟವಾಗೋದು ಸಾಮಾನ್ಯ. ಆದರೆ ಇಲ್ಲೊಂದು ಕುರಿ ನೀವ ಊಹಿಸಲು ಆಗದ ಮೊತ್ತಕ್ಕೆ ಮಾರಾಟವಾಗಿ ಎಲ್ಲರ ಹುಬ್ಬೇರಿಸುವಂತೆ ಮಾಡಿದೆ.. ಹೌದು ಈ ಕುರಿಯ ವಿಶೇಷತೆ ಏನು,,ಎಲ್ಲಿ ಮಾರಾಟವಾಯ್ತು, ಇಷ್ಟು ಬೆಲೆ ನೀಡಲು ಕಾರಣವೇನು ಎಂಬುದನ್ನು ಈ ಲೇಖನದಲ್ಲಿ ನೋಡೋಣ.
ಆಸ್ಟ್ರೇಲಿಯನ್ ವೈಟ್ ಸ್ಟಡ್ ಶೀಪ್ ಅನ್ನು ಸುಮಾರು 2 ಕೋಟಿ ರೂಪಾಯಿಗಳಿಗೆ ಎಲೈಟ್ ಆಸ್ಟ್ರೇಲಿಯನ್ ವೈಟ್ ಸಿಂಡಿಕೇಟ್ ಈ ಆಸ್ಟ್ರೇಲಿಯನ್ ವೈಟ್ ಸ್ಟಡ್ ಕುರಿಯನ್ನು ಖರೀದಿಸಿದೆ. ಈ ಸಿಂಡಿಕೇಟ್ನ 4 ಸದಸ್ಯರು ನ್ಯೂ ಸೌತ್ ವೇಲ್ಸ್ನಿಂದ ಮೂಲದವರಾಗಿದ್ದು ಈ ಸಿಂಡಿಕೇಟ್ ಸದಸ್ಯ ಸ್ಟೀವ್ ಪೆಡ್ರಿಕ್ ಇದನ್ನು "ಗಣ್ಯ ಕುರಿ" ಎಂದು ಉಲ್ಲೇಖಿಸಿದ್ದಾರೆ.
ಕುರಿಯನ್ನು ಖರೀದಿಸಿದ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು "ಈ ಕುರಿಯನ್ನು ಗುಂಪಿನಲ್ಲಿರುವ ಪ್ರತಿಯೊಬ್ಬರೂ ಇಷ್ಟ ಪಡುತ್ತಾರೆ. ಇದೇ ರೀತಿಯಲ್ಲಿ ಇತರ ಕುರಿಗಳನ್ನು ಸಂವರ್ಧಿಸಲು ಈ ಕುರಿಯ ತಳಿಶಾಸ್ತ್ರವನ್ನು ಬಳಸಲಾಗುವುದು. ಈ ಕುರಿಯು ಉತ್ತಮ ಬೆಳವಣಿಗೆಯ ದರವನ್ನು ಹೊಂದಿದೆ. ಈ ನಿರ್ದಿಷ್ಟ ಕುರಿ ವೇಗವಾಗಿ ಬೆಳೆಯುತ್ತದೆ ಎಂದಿದ್ದಾರೆ,.
ಕುರಿಯ ಮಾಲೀಕ ಗ್ರಹಾಂ ಗಿಲ್ಮೋರ್ ಅವರು ಕುರಿಗಳು ಇಷ್ಟು ಹೆಚ್ಚಿನ ಬೆಲೆಯನ್ನು ಪಡೆದುಕೊಳ್ಳುವುದನ್ನು ನಿರೀಕ್ಷಿಸಿರಲಿಲ್ಲ ಎಂದು ಹೇಳಿದ್ದಾರೆ. ಇಷ್ಟು ಹಣಕ್ಕೆ ಕುರಿಯನ್ನು ಮಾರಿದ್ದು ನಿಜಕ್ಕೂ ನಂಬಲು ಆಗುತ್ತಿಲ್ಲ ಎಂದು ಸಂತಸ ವ್ಯಕ್ತಪಡಿಸಿದ್ದಾರೆ.
ಸೆಂಟ್ರಲ್ ನ್ಯೂ ಸೌತ್ ವೇಲ್ಸ್ ಮಾರಾಟದಲ್ಲಿ ಕುರಿಗಳನ್ನು ಮಾರಾಟ ಮಾಡಲಾಗುತ್ತದೆ. ಆಸ್ಟ್ರೇಲಿಯನ್ ವೈಟ್ ಸ್ಟಡ್ ಅನಿಮಲ್ ಈ ಹಿಂದೆ ವಿಶ್ವದ ಅತ್ಯಂತ ದುಬಾರಿ ಕುರಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಿತ್ತು. ಒಂದು ಕುರಿಯನ್ನು ರೂ. 2021 ರಲ್ಲಿ 1.35 ಕೋಟಿ ರೂ. ಗೆ ಮಾರಾಟ ಮಾಡಲಾಗಿತ್ತು.
Share your comments