1. ಸುದ್ದಿಗಳು

ರೈತರಿಗೆ ಬ್ಯಾಂಕ್‌ ಸಾಲದ ಮಿತಿ ಹೆಚ್ಚಿಸಲು ವೈಜ್ಞಾನಿಕ ವರದಿ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

Hitesh
Hitesh

ಮುಂದಿನ ದಿನಗಳಲ್ಲಿ ರಾಜ್ಯ ಸರ್ಕಾರ ರೈತ ಕೇಂದ್ರೀಕೃತವಾದ ಕಾರ್ಯಕ್ರಮಗಳನ್ನು ಕೃಷಿಯಲ್ಲಿ ಪರಿಚಯಿಸಲಿದೆ.

ರಾಜ್ಯದಲ್ಲಿ ಬಿಡುವು ನೀಡಿದ ಮಳೆ, ವಿವಿಧೆಡೆ ಚಳಿ

ಇದರಲ್ಲಿ ರೈತರಿಗೆ ಬ್ಯಾಂಕ್‌ ಸಾಲದ ಮಿತಿ ಹೆಚ್ಚಿಸಲು ವೈಜ್ಞಾನಿಕ ವರದಿಯೂ ಸೇರಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಗ್ರಾಮೀಣ ಸಾಲ ವ್ಯವಸ್ಥೆಗಳನ್ನು ಬದಲಾಯಿಸಬೇಕು. ರೈತರ ಅನಿಶ್ಚಿತತೆಯ ಬದುಕು ಬದುಕುತ್ತಿದ್ದಾನೆ. ಅವನ ಬದುಕಿಗೆ ನಿಶ್ಚಿತತೆಯನ್ನು ತಂದುಕೊಡುವ ಕಾರ್ಯಕ್ರಮಗಳು ಆಗಬೇಕು. ಈ ಬಾರಿ ಬಜೆಟ್‍ನಲ್ಲಿ ಇದಕ್ಕೆ ಮಹತ್ವವನ್ನು ನೀಡಲಿದ್ದೇವೆ ಎಂದರು. 

ಭೂಮಿಗೆ ಎಷ್ಟು ಸಾಲದ ಮೊತ್ತ ನೀಡಬೇಕೆಂಬ ವೈಜ್ಞಾನಿಕ ಪದ್ಧತಿಯಿದೆ. ಆದರೆ ಇದುವರೆಗೂ ಯಾವ ಬ್ಯಾಂಕುಗಳೂ ಪಾಲನೆ ಮಾಡುತ್ತಿಲ್ಲ. ಸಮಗ್ರ ಗ್ರಾಮೀಣ ಕೃಷಿ ಆಧಾರಿತ ವ್ಯವಸಾಯಕ್ಕೆ ಗ್ರಾಮೀಣ ಸಾಲ ವ್ಯವಸ್ಥೆಗಳನ್ನು ಅಮೂಲಾಗ್ರವಾಗಿ ಬದಲಾಯಿಸಬೇಕಿದೆ. ಇದಕ್ಕೆ ನಾವು ಹೊಸ ಯೋಜನೆಗಳನ್ನು ರೂಪಿಸುತ್ತಿದ್ದೇವೆ ಎಂದರು.

ಸಾಲದ ಮಿತಿಗಳನ್ನು ಹೆಚ್ಚಿಸಲು ವೈಜ್ಞಾನಿಕ ವರದಿ ತರಿಸಿಕೊಳ್ಳಲಾಗುವುದು.  ಬೀಜಗೊಬ್ಬರಗಳನ್ನು ವಿತರಿಸುವ ವ್ಯವಸ್ಥೆಯಲ್ಲಿ ರೈತರಿಗೆ ಸಾಕಷ್ಟು ತೊಂದರೆ
ಯಾಗುತ್ತಿದೆ. ಅದನ್ನು ನಿವಾರಿಸಲು ವಿಶೇಷವಾಗಿ ಸಣ್ಣ ಮತ್ತು ಮಧ್ಯಮ ರೈತರಿಗೆ ಕಾರ್ಯಕ್ರಮಗಳನ್ನು ರೂಪಿಸಲು  ಚಿಂತನೆ ನಡೆಸಲಾಗಿದೆ. ಸಾಲದ ಮಿತಿಗಳನ್ನು ಹೆಚ್ಚಿಸಲು ವೈಜ್ಞಾನಿಕವಾಗಿ ವರದಿಯನ್ನು ನೀಡಲು ಸೂಚಿಸಲಾಗಿದೆ. ವರದಿ ಬಂದ ಕೂಡಲೇ ರೈತ ಸಾಲದ ಮಿತಿಯನ್ನು ಹೆಚ್ಚಿಸಲು ಬಜೆಟ್ ನಲ್ಲಿ ಕ್ರಮ ಕೈಗೊಳ್ಳಲಾಗುವುದು ಎಂದರು.  ರೈತನ ಬೆಳೆಗೆ ಸಂಬಂಧಿಸಿದಂತೆ  10 ವರ್ಷಗಳ ಮಳೆಯ ವಿಧಾನವನ್ನು ಅನುಸರಿಸಿ ವೈಜ್ಞಾನಿಕ ವರದಿ ತಯಾರಿಸುವ ವ್ಯವಸ್ಥೆ ಇಲ್ಲಿಯೂ ಜಾರಿಗೆ ಬರಬೇಕು. ಆಗ ರೈತರ ನಷ್ಟ ತಗ್ಗಲಿದೆ ಎಂದರು.

Today Gold Rate| ವಾರಾಂತ್ಯದಲ್ಲಿ ಚಿನ್ನದ ಬೆಲೆ ತುಸು ಇಳಿಕೆ, ಎಷ್ಟಿದೆ ಇಂದಿನ ಚಿನ್ನದ ದರ!

ರೈತಶಕ್ತಿ ಚಾಲನೆ

ರೈತ ಶಕ್ತಿ ಯೋಜನೆಯಡಿ 500 ಕೋಟಿ ರೂ.ಗಳನ್ನು ರೈತರ  ಖಾತೆಗಳಿಗೆ ನೇರವಾಗಿ ಯಂತ್ರೋಪಕರಣ  ಹಾಗೂ ಡೀಸೆಲ್ ಸಬ್ಸಿಡಿಗಾಗಿ ಅನುದಾನವನ್ನು ಜನವರಿ 31 ರಂದು ಡಿಬಿಟಿ ಮೂಲಕ ವರ್ಗಾಯಿಸಲಾಗುತ್ತಿದೆ ಎಂದರು.

ಯೋಚನೆಗಳನ್ನು ಯೋಜನೆಗಳನ್ನಾಗಿ ಪರಿವರ್ತನೆ

ಯಶಸ್ವಿನಿ ಯೋಜನೆಯನ್ನು ಈ ವರ್ಷ ಮರುಪ್ರಾರಂಭ ಮಾಡಿದ್ದು, ಜನವರಿ ಒಂದರಿಂದ 36 ಲಕ್ಷ ರೈತರು ನೋಂದಣಿ ಮಾಡಿಸಿದದದು, 300 ಕೊಟಿ ರೂಪಾಯಿಗಳನ್ನು ಬಿಡುಗಡೆ ಮಾಡಲಾಗಿದೆ.

ಕೆಲವು ಮಾರ್ಪಾಡುಗಳನ್ನು ಇಂದಿನ ವೈದ್ಯಕೀಯ ವ್ಯವಸ್ಥೆಗಳಿಗೆ ತಕ್ಕಂತೆ ಮಾಡಲು ಸೂಚಿಸಲಾಗಿದೆ. ಈ ವರ್ಷ 31 ಲಕ್ಷ ಜನರಿಗೆ  ಸಹಕಾರಿ ಸಾಲವನ್ನು ಒದಗಿಸಲಾಗಿದೆ. ಅದರಲ್ಲಿ ಮೂರು ಲಕ್ಷ  ರೈತರಿಗೆ ಹೊಸದಾಗಿ ಸಾಲ ನೀಡುವ ವ್ಯವಸ್ಥೆ ಮಾಡಲಾಗಿದೆ.

ಹಲವಾರು ಯೋಚನೆಗಳನ್ನು ಯೋಜನೆಗಳನ್ನಾಗಿ ಪರಿವರ್ತಿಸಿ ನಮ್ಮ ಕಾರ್ಯಕ್ರಮಗಳನ್ನು ರೂಪಿಸುತ್ತಿದ್ದೇವೆ. ಹವಾಮಾನ ವೈಪರೀತ್ಯಗಳು, ಕೃಷಿ ಹಾಗೂ ಸಂಶೋಧನೆಗಳಲ್ಲಿ ಆಗುವ ಬದಲಾವಣೆ ರೈತರ ಮೇಲೆ ಪರಿಣಾಮ ಬೀರಲಿದೆ. 

ಕಾಲಕ್ಕೆ ತಕ್ಕಂತೆ ರೈತರು, ಸರ್ಕಾರ ಬದಲಾವಣೆಗಳನ್ನು ಮಾಡಿಕೊಂಡು ಸವಾಲುಗಳನ್ನು ಎದುರಿಸಬೇಕಿದೆ. ವಿಶ್ವದಲ್ಲಿ ಹವಾಮಾನ ವೈಪರೀತ್ಯ ಹಾಗೂ ಕೋವಿಡ್ ಕಾರಣದಿಂದ  ಆಹಾರದ ಭದ್ರತೆಗೆ ಬಹಳ ದೊಡ್ಡ ಸವಾಲಿದೆ. 

ಅಕ್ಕಪಕ್ಕದ ದೇಶಗಳಲ್ಲಿ ಆಹಾರ ದೊರಕದ ಸ್ಥಿತಿಯಿದೆ. ಭಾರತದಲ್ಲಿ ಮಾತ್ರ ಸಂಪೂರ್ಣವಾದ ಆಹಾರ ಭದ್ರತೆಯಿದೆ. ಪಡಿತರ ವ್ಯವಸ್ಥೆಯಿಂದ  ಹಿಡಿದು ಮಾರುಕಟ್ಟೆಗೆ ಬೇಕಾಗಿರುವ ವ್ಯವಸ್ಥೆ ಇದೆ. ರೈತ ಹಾಗೂ ಆತನ ಶ್ರಮ ಮತ್ತು ಸರ್ಕಾರದ ನೀತಿಗಳು ಇದಕ್ಕೆ ಕಾರಣ.  ನಮ್ಮ ಆಹಾರದ ಭದ್ರತೆಯನ್ನು ಕಾಪಾಡಿಕೊಂಡರೆ, ಸ್ವಾಭಿಮಾನಿ ರಾಷ್ಟ್ರವಾಗಲು ಸಾಧ್ಯ.

ಕರ್ನಾಟಕ ಪ್ರಗತಪರವಾದ ರಾಜ್ಯ.ರೈತರ ಪರವಾದ ನಿರ್ಣಯಗಳನ್ನು ತೆಗೆದುಕೊಳ್ಳುವ ಸರ್ಕಾರ ಎಂದರು.

ಆಧಾರ್ ಕಾರ್ಡ್‌ ಇ-ಕೆವೈಸಿ ವಹಿವಾಟು ಪ್ರಮಾಣ 84.8 ಕೋಟಿಗೆ ಏರಿಕೆ!

ಕೃಷಿಯಲ್ಲಿ ಸಂಶೋಧನೆ, ಹೊಸತನದ ಅಗತ್ಯವಿದೆ

ನಮ್ಮಲ್ಲಿ ಹಸಿರು ಕ್ರಾಂತಿಯಾಗಿದೆ. 133 ಕೋಟಿ ಜನಸಂಖ್ಯೆಯಾದರೂ ಎಲ್ಲರಿಗೂ ಅನ್ನ ನೀಡುವ ಸಾಮರ್ಥ್ಯ. ರೈತರಿಗೆ ಬಂದಿರುವುದು ರೈತನ ಶ್ರಮ ಮತ್ತು ಬೆವರು ಕಾರಣ. ಆದರೆ ಹಸಿರು ಕ್ರಾಂತಿ ತಂದಿರುವ ರೈತನ ಪರಿಸ್ಥಿತಿಯಲ್ಲಿ ಬದಲಾವಣೆಯಾಗಿಲ್ಲ. ಸರ್ಕಾರಗಳು ಚಿಂತನೆ ಮಾಡಬೇಕು. ಕೃಷಿ ನೀತಿಗಳನ್ನು ರೂಪಿಸಿದ್ದೇವೆ.  ಕೃಷಿಯಲ್ಲಿ ಸಂಶೋಧನೆ, ಹೊಸತನ, ನೈಸರ್ಗಿಕ, ಸಾವಯವ ಅಗತ್ಯವಿದೆ ಎಂದರು.

ಸುಸ್ಥಿರ ಕೃಷಿ ಅಭಿವೃದ್ಧಿಗೆ  ಕೃಷಿ ಮೇಳ ಪೂರಕ

ಕೃಷಿ ಮೇಳದ ಮೋಲಕ ಹೊಸ ತಳಿಗಳ ಪರಿಚಯ, ಕೃಷಿಯಲ್ಲಿ ಹೊಸ ಪದ್ದತಿ, ತಂತ್ರಜ್ಞಾನದ ಪರಿಚಯ. ಕೃಷಿ ಉತ್ಪನ್ನಗಳ ಪದಾರ್ಥಗಳಿಗೆ  ಮಾರುಕಟ್ಟೆ, ಹೀಗೆ ಸುಸ್ಥಿರ ಕೃಷಿ ಅಭಿವೃದ್ಧಿಗೆ  ಕೃಷಿ ಮೇಳ ಪೂರಕವಾಗಿದೆ ಎಂದರು.

EPFO ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆಯಿಂದ ಆಪ್ಕೆ ನಿಕಟ್‌ 2.0 ವಿಸ್ತರಣೆ! 

Published On: 28 January 2023, 04:46 PM English Summary: Scientific report to raise bank loan limit for farmers: Chief Minister Basavaraja Bommai

Share your comments

Latest feeds

More News
Krishi Jagran Kannada Magazine Subscription Online Subscription

CopyRight - 2024 Krishi Jagran Media Group. All Rights Reserved.