5 ಲಕ್ಷ ರೈತರಿಗೆ ₹749 ಕೋಟಿ ಬೆಳೆ ವಿಮೆ ಇತ್ಯರ್ಥವಾಗಿದ್ದು, ಶೀಘ್ರದಲ್ಲಿಯೇ ಇನ್ನೂ ಬಾಕಿ ಉಳಿದ 18 ಕೋಟಿ ರೂಪಾಯಿ ಇತ್ಯರ್ಥಪಡಿಸಲಾಗುವುದು ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ ತಿಳಿಸಿದ್ದಾರೆ.
ಇದನ್ನೂ ಓದಿರಿ: 40 ವರ್ಷ ಮೇಲ್ಪಟ್ಟವರಿಗೆ ಸರ್ಕಾರದಿಂದ ಪ್ರತಿ ತಿಂಗಳು ದೊರೆಯಲಿದೆ ₹1000 ..! ಅರ್ಜಿ ಸಲ್ಲಿಸುವುದು ಹೇಗೆ ಗೊತ್ತೆ?
2021ರ ಮುಂಗಾರು ಹಂಗಾಮಿನ 5,95,772 ರೈತರಿಗೆ 749 ಕೋಟಿ ರೂ. ಬೆಳೆ ವಿಮೆ ಇತ್ಯರ್ಥಪಡಿಸಲಾಗಿದ್ದು, ಈ ಪೈಕಿ 5,67589 ರೈತರಿಗೆ 730.84ಕೋಟಿ ರೂ.ಇತ್ಯರ್ಥಪಡಿಸಲಾಗಿದೆ.
ಉಳಿದ 18 ಕೋಟಿ ರೂ.ಗಳನ್ನು ಶೀಘ್ರದಲ್ಲಿಯೇ ಇತ್ಯರ್ಥಪಡಿಸಲಾಗುವುದು ಎಂದು ಸಚಿವ ಬಿ.ಸಿ. ಪಾಟೀಲ ತಮ್ಮ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.
ಈ ಯೋಜನೆಯಡಿ ಬೋರ್ವೆಲ್ ಕೊರೆಸಲು ಸರ್ಕಾರವೇ ನೀಡಲಿದೆ ಹಣ! ಅರ್ಜಿ ಸಲ್ಲಿಕೆ ಹೇಗೆ ಗೊತ್ತೆ?
ಈ ಹಿಂದೆಯೇ ಸಭೆ ನಡೆಸಿ ನಿರ್ಧರಿಸಲಾಗಿತ್ತು..!
ಹಂಗಾಮುವಾರು ಬೆಳೆ ವಿಮೆ ಶೀಘ್ರ ಇತ್ಯರ್ಥಪಡಿಸುವ ನಿಟ್ಟಿನಲ್ಲಿ ಕೃಷಿ ಸಚಿವ ಬಿ.ಸಿ. ಪಾಟೀಲರ ಅಧ್ಯಕ್ಷತೆಯಲ್ಲಿ ವಿಕಾಸಸೌಧದಲ್ಲಿ ಮಹತ್ವದ ಸಭೆ ನಡೆದಿತ್ತು.
ಸಭೆಯಲ್ಲಿ ಇ-ಆಡಳಿತ ಹಾಗೂ ಆರ್ಥಿಕ ಸಾಂಖ್ಯಿಕ ಇಲಾಖಾಧಿಕಾರಿಗಳೊಂದಿಗೆ ತಾಂತ್ರಿಕ ದೋಷಗಳು, ಪರಿಹಾರಗಳ ಬಗ್ಗೆ ಸಚಿವ ಬಿ.ಸಿ. ಪಾಟೀಲ ಚರ್ಚೆ ಮಾಡಿದ್ದರು.
ಪಿಎಂ ಉಚಿತ ಹೊಲಿಗೆ ಯಂತ್ರ ಯೋಜನೆ; ಅರ್ಜಿ ಸಲ್ಲಿಸಿ ಉಚಿತ ಹೊಲಿಗೆ ಯಂತ್ರ ಪಡೆಯಿರಿ..! ಅರ್ಜಿ ಸಲ್ಲಿಕೆ ಹೇಗೆ?
ಬೆಳೆ ಕಟಾವು ಪ್ರಯೋಗಗಳ ದತ್ತಾಂಶ ಹಾಗೂ ಬೆಳೆ ಸಮೀಕ್ಷೆ ದತ್ತಾಂಶವನ್ನು ಅಧಿಕಾರಿಗಳು ತಾಳೆ ಮಾಡಿ ಅಪ್ಲೋಡ್ ಮಾಡಿ, ಬೆಳೆ ವಿಮೆಯನ್ನು ಘಟಕವಾರು ಇತ್ಯರ್ಥಪಡಿಸಬೇಕು ಎಂದು ಸೂಚನೆ ನೀಡಿದ್ದರು.
2022ರ ಬೆಳೆ ವಿಮೆಯನ್ನು 2022ರ ನವೆಂಬರ್ ನೊಳಗೆ ಇತ್ಯರ್ಥಪಡಿಸಬೇಕು ಎಂದು ಸಭೆಯಲ್ಲಿ ತೀರ್ಮಾನಿಸಲಾಗಿತ್ತು.
ಇದರ ಪ್ರಕಾರ ಶೀಘ್ರದಲ್ಲೆ ಬೆಳೆ ವಿಮೆಯನ್ನು ರೈತರ ಖಾತೆಗೆ ತಲುಪುವಂತೆ ಮಾಡಲು ಸರ್ಕಾರ ಮತ್ತು ಅಧಿಕಾರಿಗಳು ಕಾರ್ಯಪ್ರವೃತ್ತರಾಗಿದ್ದಾರೆ ಎಂದು ಹೇಳಲಾಗಿದೆ.
Share your comments