1. ಸುದ್ದಿಗಳು

ಮತ್ತೇ ಚಲಾವಣೆಗೆ ಬರುತ್ತಾ 1000 ರೂ ನೋಟು..? RBI ನೀಡಿದ ಉತ್ತರವೇನು?

Maltesh
Maltesh
Rs 1000 note coming into circulation again..? RBI clarification

ಅಮಾನ್ಯಗೊಂಡ 2000 ರೂಪಾಯಿ ನೋಟುಗಳ ಬದಲಾವಣೆ ಪ್ರಕ್ರಿಯೆ ಇದೀಗ ಆರಂಭವಾಗಿದೆ. ಜನರು ತಮ್ಮ ಬಳಿ ಇರುವ 2 ಸಾವಿರ ರೂಪಾಯಿಯ ನೋಟುಗಳನ್ನು ಬ್ಯಾಂಕ್‌ ಹಾಗೂ ಪೋಸ್ಟ್‌ ಆಫೀಸ್‌ಗಳಲ್ಲಿ ಬದಲಾವಣೆ ಮಾಡುತ್ತಿದ್ದಾರೆ. ಪಿಂಕ್‌ ನೋಟ್‌ ಇನ್ನೇನು ಕೆಲವೇ ದಿನಗಳಲ್ಲಿ ಮಾರ್ಕೆಟ್‌ನಿಂದ ಜಾಗ ಖಾಲಿ ಮಾಡುತ್ತಿದ್ದು ಈ ವೇಳೆ ಮತ್ತೇ ಹಳೆ ನೋಟು ಚಾಲ್ತಿಗೆ ಬರುತ್ತವೆಯೇ ಎನ್ನಲಾಗುತ್ತಿದೆ. ಹೌದು 2016 ರಲ್ಲಿ ಅಮಾನ್ಯಗೊಂಡಿದ್ದ 1000 ರೂಪಾಯಿಯ ನೋಟು ಮತ್ತೇ ಚಲಾವಣೆಗೆ ಬರುತ್ತದೆಯೇ ಎಂಬ ಹೊಸ ಚರ್ಚೆಯೊಂದು ಇದೀಗ ಸದ್ದು ಮಾಡುತ್ತಿದೆ. ಈ ಚರ್ಚೆಗೆ RBI ಗವರ್ನರ್‌ ಶಕ್ತಿಕಾಂತ್‌ ದಾಸ್‌ ಅವರು ಕೂಡ ಸ್ಪಷ್ಟನೆ ನೀಡಿದ್ದಾರೆ.

ಭಾರತೀಯ ರಿಸರ್ವ್ ಬ್ಯಾಂಕ್ ಗವರ್ನರ್ ಶಕ್ತಿಕಾಂತ ದಾಸ್ ಅವರು ಇತ್ತೀಚಿಗೆ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದರು. ಆಗ 1000 ನೋಟಿನ ಮತ್ತೇ ಚಲಾವಣೆ ಯಾವುದೇ ಕಾರಣಕ್ಕು ಇಲ್ಲ ಎಂದಿದ್ದಾರೆ. ಅಷ್ಟೇ ಅಲ್ಲದೆ ಅಂತಹ ಯಾವುದೇ ಯೋಜನೆ ಇಲ್ಲ, ಅಂತರ್ಜಾಲದಲ್ಲಿ ಹರಡಿರುವ ಮಾಹಿತಿ ಸುಳ್ಳು  ಎಂದು ಶಕ್ತಿಕಾಂತ ದಾಸ್ ವಿವರಿಸಿದರು.

ಮುಂದುವರಿದು ಮಾತನಾಡಿದ ಅವರು, ಗ್ರಾಹಕರು ತಮ್ಮ ಬಳಿ ಇರುವ 2000 ರೂಪಾಯಿ ನೋಟುಗಳನ್ನು ಬದಲಾಯಿಸಿಕೊಳ್ಳುವ ಪ್ರಕ್ರಿಯೆ ಆರಂಭವಾಗಿದೆ. ಸಾರ್ವಜನಿಕರು ಭಯಪಡುವ ಅಗತ್ಯವಿಲ್ಲ. ಹಿಂದಿನ ನೋಟು ಅಮಾನ್ಯೀಕರಣದ ಅವಧಿಯಂತೆ ಸಾರ್ವಜನಿಕರು ಒಂದೇ ಬಾರಿಗೆ ಬ್ಯಾಂಕ್‌ಗಳಿಗೆ ಧಾವಿಸಬಾರದು ಎಂದು ಅವರು ಮನವಿ ಮಾಡಿದ್ದಾರೆ. 2000 ರೂಪಾಯಿ ನೋಟುಗಳನ್ನು ಬದಲಾಯಿಸಿಕೊಳ್ಳಲು ಸಾಕಷ್ಟು ಕಾಲಾವಕಾಶ ನೀಡಲಾಗಿದೆ,'' ಎಂದು ಹೇಳಿದರು.

ಸಾರ್ವಜನಿಕರು ಮತ್ತು ವ್ಯಾಪಾರ ಸಂಸ್ಥೆಗಳು ರೂ.2,000 ನೋಟುಗಳನ್ನು ಖರೀದಿಸಲು ನಿರಾಕರಿಸುತ್ತಿರುವ ಪ್ರಶ್ನೆಗೆ ಪ್ರತಿಕ್ರಿಯಿಸಿದ ಆರ್‌ಬಿಐ ಗವರ್ನರ್, ರೂ.2000 ನೋಟುಗಳ ವಿನಿಮಯಕ್ಕೆ ನಿಗದಿಪಡಿಸಿದ ದಿನಾಂಕದವರೆಗೆ2000 ರೂಪಾಯಿ ನೋಟುಗಳ ಅಮಾನ್ಯೀಕರಣವು ಆರ್‌ಬಿಐನ ಕರೆನ್ಸಿ ನಿರ್ವಹಣೆ ಕ್ರಮಗಳ ಭಾಗವಾಗಿದೆ ಎಂದು ಅವರು ಹೇಳಿದರು.

ಸೆಪ್ಟೆಂಬರ್ 30ರೊಳಗೆ ಬಹುತೇಕ ನೋಟುಗಳು ಖಜಾನೆಗೆ ವಾಪಸಾಗಲಿದ್ದು, ಇತರೆ ನೋಟುಗಳ ಕೊರತೆಯಾಗುವುದಿಲ್ಲ ಎಂದು ತಿಳಿಸಿದರು. ಸೆಪ್ಟೆಂಬರ್ 30 ರೊಳಗೆ 2000 ರೂಪಾಯಿ ನೋಟುಗಳನ್ನು ಬದಲಾಯಿಸಲು ಅಥವಾ ಠೇವಣಿ ಮಾಡಲು ಆರ್‌ಬಿಐ ಸಾರ್ವಜನಿಕರನ್ನು ಒತ್ತಾಯಿಸಿದೆ. “ಚಲಾವಣೆಯಲ್ಲಿರುವ ಒಟ್ಟು ಕರೆನ್ಸಿಯ 10.8% ಮಾತ್ರ 2,000 ರೂಪಾಯಿ ಕರೆನ್ಸಿ ನೋಟುಗಳಾಗಿವೆ. ಆರ್‌ಬಿಐ ಮಾತ್ರವಲ್ಲದೆ ಬ್ಯಾಂಕ್‌ಗಳು ನಡೆಸುತ್ತಿರುವ ಕರೆನ್ಸಿ ಬ್ಯೂರೋಗಳಲ್ಲಿ ಈಗಾಗಲೇ ಸಾಕಷ್ಟು ಮುದ್ರಿತ ಕನ್ವರ್ಟಿಬಲ್ ನೋಟುಗಳಿವೆ. ಹೀಗಾಗಿ ಸಾರ್ವಜನಿಕರು ಅನಗತ್ಯ ಆತಂಕ ಪಡುವ ಅಗತ್ಯವಿಲ್ಲ. ನಮ್ಮ ಬಳಿ ಸಾಕಷ್ಟು ನಗದು ಮೀಸಲು ಇದೆ ಎಂದು ಆರ್‌ಬಿಐ ಗವರ್ನರ್ ಹೇಳಿದ್ದಾರೆ.

Published On: 26 May 2023, 11:46 AM English Summary: Rs 1000 note coming into circulation again..? RBI clarification

Share your comments

Latest feeds

More News
Krishi Jagran Kannada Magazine Subscription Online Subscription

CopyRight - 2024 Krishi Jagran Media Group. All Rights Reserved.