1. ಸುದ್ದಿಗಳು

Nitin Gadkari ಕೃಷಿ ಉತ್ಪಾದನೆಯ ವೆಚ್ಚವನ್ನು ಕಡಿಮೆ ಮಾಡಿ: ರೈತರಿಗೆ ಕೇಂದ್ರ ಸಚಿವ ನಿತಿನ್‌ ಗಡ್ಕರಿ ಸಲಹೆ

Hitesh
Hitesh
ಮಿಲಿನಿಯೇರ್‌ ಫಾರ್ಮರ್‌ ಆಫ್‌ ಇಂಡಿಯಾ 2023 ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಗಣ್ಯರು

ಮಿಲಿನಿಯೇರ್‌ ಫಾರ್ಮರ್‌ ಆಫ್‌ ಇಂಡಿಯಾ 2023 ಮಹೀಂದ್ರ ಟ್ರಾಕ್ಟರ್‌ ಪ್ರಯೋಜಿತದ ಮೊದಲ ದಿನದಲ್ಲಿ ಕೇಂದ್ರ ಸಾರಿಗೆ ಸಚಿವ ನಿತಿನ್‌ ಗಡ್ಕರಿ ಅವರು ಮಾತನಾಡಿ ರೈತರಿಗೆ ಹಲವು ಸಲಹೆಗಳನ್ನು ನೀಡಿದರು. 

ಕೃಷಿಜಾಗರಣವು ರೈತರು ಸಹ ಶ್ರೀಮಂತರಾಗಬಹುದು. ಕೋಟಿಗಳಲ್ಲಿ ಮಾತನಾಡಬಹುದು ಎನ್ನುವುದನ್ನು ನಂಬುತ್ತದೆ. ದೇಶಕ್ಕೆ ಅನ್ನ ನೀಡುವ ಕೈಗಳನ್ನು ಗುರುತಿಸುವ ಪ್ರಯತ್ನ ನಮ್ಮದಾಗಿದೆ. ಇದೇ ಕಾರಣಕ್ಕಾಗಿ ಮಿಲಿಯೇನರ್‌ ಫಾರ್ಮರ್‌ ಆಫ್‌ ಇಂಡಿಯಾ 2023ಅನ್ನು ಆಯೋಜಿಸಲಾಗಿದೆ. ಇದಕ್ಕೆ ಮಹೀಂದ್ರ ಟ್ರಾಕ್ಟರ್ಸ್‌ ಮುಖ್ಯ ಪ್ರಾಯೋಜಿಕತ್ವ ವಹಿಸಿದ್ದು, ಹಲವು ಸಂಸ್ಥೆಗಳು ಸಹಕಾರ ನೀಡಿವೆ. RFOI ಅಂದರೆ ರಿಚೆಸ್ಟ್‌ ಫಾರ್ಮರ್‌ ಆಫ್‌ ಇಂಡಿಯಾ ಹಾಗೂ ಮಿಲಿಯನೇರ್‌ ಫಾರ್ಮರ್‌ ಆಫ್‌ ಇಂಡಿಯಾ 2023ರನ್ನು ನಾವು ಪರಿಚಯಿಸಿದ್ದೇವೆ. ರೈತರಿಗೆ ಪ್ರಶಸ್ತಿ ನೀಡುವ ಕೃಷಿ ಜಾಗರಣದ ಈ ಪ್ರಯತ್ನ ದೇಶದಲ್ಲೇ ಮೊದಲು ಎನ್ನುವುದು ನಮ್ಮ ಹೆಮ್ಮೆ.

ಎಂ.ಸಿ ಡೊಮಿನಿಕ್‌ ಕೃಷಿ ಜಾಗರಣದ ಸಂಸ್ಥಾಪಕ ಹಾಗೂ ಮುಖ್ಯ ಸಂಪಾದಕ ಹಾಗೂ ಕೃಷಿ ಜಾಗರಣದ ಮ್ಯಾನೇಜಿಂಗ್‌ ಡೈರೆಕ್ಟರ್‌ ಶೈನಿ ಡೊಮಿನಿಕ್‌.

 

ಸಂಜೆ ನಡೆದ ಸಮಾರಂಭ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನಮ್ಮ ದೇಶದಲ್ಲಿ ಬೇಡಿಕೆಗೆ ಅನುಗುಣವಾಗಿ ನಾವು ಉತ್ಪಾದನೆಯನ್ನು ಮಾಡಬೇಕು.

ರಸಗೊಬ್ಬರದ, ಬೀಜ ಉತ್ಪಾದನೆಗಳ ಬೇಡಿಕೆ ಪ್ರಮಾಣ ಹೆಚ್ಚಳವಾಗಿದೆ. ನಮ್ಮ ದೇಶದಲ್ಲಿ ಉತ್ಪನ್ನಗಳ ಬೇಡಿಕೆಗೆ ಅನುಗುಣವಾಗಿ ನಾವು ಉತ್ಪಾದನೆಯನ್ನು ಮಾಡಬೇಕು.

ನ್ಯಾನೋ ಯೂರಿಯಾ ಹಾಗೂ ಡ್ರೋಣದ ಬಗ್ಗೆ ಮಾತು

ನಮ್ಮ ದೇಶದಲ್ಲಿ ನ್ಯಾನೋ ಯೂರಿಯಾ ಹಾಗೂ ಡ್ರೋಣ್‌ಗಳ ಬಳಕೆಯಿಂದ ಸಾಕಷ್ಟು ಅನುಕೂಲವಾಗುತ್ತಿದೆ ಎಂದರು.

ನ್ಯಾನೋ ಯೂರಿಯದ ಬಳಕೆಯಿಂದ ಭಾರೀ ಪ್ರಮಾಣದಲ್ಲಿ ರಸಗೊಬ್ಬರವನ್ನು ಬಳಸುವುದು ಕಡಿಮೆಯಾಗಿದೆ.

ಅಲ್ಲದೇ ಇದನ್ನು ಕಡಿಮೆ ಪ್ರಮಾಣದಲ್ಲಿಯೂ ಬಳಕೆ ಮಾಡಿಕೊಳ್ಳಬಹುದಾಗಿದೆ ಎಂದು ಹೇಳಿದರು.

ನ್ಯಾನೋ ಯೂರಿಯಾದಿಂದಾಗಿ ದೇಶದ ರೈತರಿಗೆ ಸಾಕಷ್ಟು ಲಾಭವಾಗಿದೆ. ಅಲ್ಲದೇ ಡ್ರೋಣದ ಬೆಳಕೆಯಿಂದಾಗಿ ರೈತರಿಗೆ ಅನುಕೂಲವಾಗಿದೆ.

ಪ್ರತಿ ಹೇಕ್ಟರ್‌ ವ್ಯಾಪ್ತಿಯಲ್ಲಿ ನೀವು ಕೃಷಿ ಮಾಡುವ ಮೊತ್ತವನ್ನು ಹಾಗೂ ಖರ್ಚು ಎಲ್ಲಿಯ ವರೆಗೆ  

ಕಡಿಮೆ ಮಾಡುವುದಿಲ್ಲವೋ ಅಲ್ಲಿಯ ವರೆಗೆ ರೈತರಿಗೆ ಅಲ್ಪ ಪ್ರಮಾಣದಲ್ಲಿ ಕೃಷಿಗೆ ಕಷ್ಟವಾಗಲಿದೆ.

ರೈತರು ತಮ್ಮ ಹೊಲಗಳಲ್ಲಿ ಖರ್ಚು ಮಾಡುವ ಪ್ರಮಾಣವನ್ನು ಕಡಿಮೆ ಮಾಡಬೇಕು.

ಜೀವನಾಮೃತದಿಂದ ರೈತರು ಸಾಕಷ್ಟು ಲಾಭವನ್ನು ಗಳಿಸುತ್ತಿದ್ದಾರೆ.

ಈ ಸಾವಯವ ಪದ್ಧತಿಯನ್ನು ಎಲ್ಲ ರೈತರೂ ಮೈಗೂಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು. 

ಮಿಲಿನಿಯೇರ್‌ ಫಾರ್ಮರ್‌ ಆಫ್‌ ಇಂಡಿಯಾ 2023 ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಗಣ್ಯರು

ಕೃಷಿಯಲ್ಲಿ ಯಾವುದೂ ವ್ಯರ್ಥವಲ್ಲ

ಕೃಷಿಯಲ್ಲಿ ಯಾವುದೂ ವ್ಯರ್ಥವಲ್ಲ ಎಂದು ಕೇಂದ್ರ ಸಾರಿಗೆ ಸಚಿವ ನಿತಿನ್‌ ಗಡ್ಕರಿ ಅವರು ಹೇಳಿದರು.  

Ethanol (ಈಥೈಲ್ ಆಲ್ಕೋಹಾಲ್) ಉತ್ಪಾದನೆಯ ಬಗ್ಗೆ  ಮಾತನಾಡಿದ ಅವರು,

ರೈತರು ಕೃಷಿ ತ್ಯಾಜ್ಯವನ್ನು ಸುಡುವುದನ್ನು ಬಿಟ್ಟು Ethanol (ಈಥೈಲ್ ಆಲ್ಕೋಹಾಲ್)

ಉತ್ಪಾದನೆಯಲ್ಲಿ ತೊಡಗಿಸಿಕೊಳ್ಳಬೇಕು ಎಂದು ಹೇಳಿದರು. ಈಗ ಬಸ್‌ಗಳನ್ನು ಓಡಿಸುವುದಕ್ಕೂ ಇಥೆನಾಲ್‌ಅನ್ನು ಬಳಸಲಾಗುತ್ತಿದೆ.

ಮುಂದಿನ ದಿನಗಳಲ್ಲಿ Ethanol (ಈಥೈಲ್ ಆಲ್ಕೋಹಾಲ್) ಬಹಳಷ್ಟು ಉಪಯೋಗ ಇದೆ.

ರೈತರು ಇದರಿಂದ ಸಾವಿರಾರು ರೂಪಾಯಿಯನ್ನು ಗಳಿಸಬಹುದು ಎಂದರು.

Published On: 06 December 2023, 07:22 PM English Summary: Reduce cost of agricultural production: Union Minister Nitin Gadkari's advice to farmers

Share your comments

Latest feeds

More News
Krishi Jagran Kannada Magazine Subscription Online Subscription

CopyRight - 2024 Krishi Jagran Media Group. All Rights Reserved.