1. ಸುದ್ದಿಗಳು

ಭಾರತೀಯ ರಿಸರ್ವ್ ಬ್ಯಾಂಕಿನಲ್ಲಿ ಕಚೇರಿ ಸಹಾಯಕ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ

RBI

ಭಾರತೀಯ ರಿಸರ್ವ್ ಬ್ಯಾಂಕಿನಲ್ಲಿ ಕಚೇರಿ ಸಹಾಯಕ ಹುದ್ದೆಗಳ ಭರ್ತಿಗೆ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಒಟ್ಟು 841 ಹುದ್ದೆಗಳು ಖಾಲಿಯಿದ್ದು, ಅರ್ಹ ಆಸಕ್ತ ಅಭ್ಯರ್ಥಿಗಳು  online ಮೂಲಕ ಅರ್ಜಿ ಸಲ್ಲಿಸಬಹುದು.

ಒಬಿಸಿ/ಸಾಮಾನ್ಯ/ಇಡಬ್ಲ್ಯುಎಸ್ ಅಭ್ಯರ್ಥಿಗಳಿಗೆ - 450 ರೂಪಾಯಿ, ಎಸ್ಸಿ /ಎಸ್ಟಿ/ಪಿಡಬ್ಲುಡಿ/ಇಎಕ್ಸ್ ಎಸ್ : -50 ರೂಪಾಯಿ ಹಾಗೂ ಬ್ಯಾಂಕ್  ಸಿಬ್ಬಂದಿಗೆ ಯಾವುದೇ ಶುಲ್ಕ ಇರುವುದಿಲ್ಲ.  ಅಭ್ಯರ್ಥಿಗಳು  ಅರ್ಜಿ ಶುಲ್ಕವನ್ನು online ಮೂಲಕವೇ ಪಾವತಿಸಬೇಕು.

 ಫೆ. 24, ರಿಂದ ಅರ್ಜಿ ಸಲ್ಲಿಸಬಹುದು.  ಅರ್ಜಿ ಸಲ್ಲಿಸಲು ಕೊನೆಯ ದಿನ - ಮಾರ್ಚ್.15 ಆಗಿದೆ.  online ಪರೀಕ್ಷೆಯ (Exam) ಸಂಭಾವ್ಯ ದಿನಾಂಕ  - ಏಪ್ರಿಲ್ 9 ಮತ್ತು 10 ರಂದು ನಡೆಯಲಿದೆ.

ಅರ್ಹತೆ:

ಅಭ್ಯರ್ಥಿಗಲು  (01-02-2021ಕ್ಕೆ ಅನ್ವಯವಾಗುವಂತೆ) ಕನಿಷ್ಠ ವಯೋಮಿತಿ 18 ವರ್ಷ ಮತ್ತು ಗರಿಷ್ಠ ವಯೋಮಿತಿ 25 ವರ್ಷ
ಎಸ್ಸಿ/ಎಸ್ಟಿ/ಒಬಿಸಿ/ಪಿಡಬ್ಲುಡಿ/ನಿವೃತ್ತ ಯೋಧರಿಗೆ ವಯೋಮಾನದಲ್ಲಿ ಸಡಿಲಿಕೆ ಇದೆ. 

ವಿದ್ಯಾರ್ಹತೆ : ಹತ್ತನೇ ಕ್ಲಾಸ್ ಪಾಸ್ (ಎಸ್ ಎಸ್ ಸಿ /ಮೆಟ್ರಿಕ್ಯುಲೇಶನ್) ಪಾಸಾಗಿರಬೇಕು. ಹೆಚ್ಚಿನ ವಿವರ ಮತ್ತು ನೊಂದಣಿಗೆ www.rbi.org.in ಗೆ ಸಂಪರ್ಕಿಸಬಹುದು. ನೋಂದಣಿಗೆ  : ibpsonline.ibps.in/rbirpoafeb21/ ಲಿಂಕ್ ಮೇಲೆ ಕ್ಲಿಕ್ ಮಾಡಿ ಅರ್ಜಿ ಭರ್ತಿ ಮಾಡಬಹುದು.

Published On: 26 February 2021, 09:12 PM English Summary: RECRUITMENT FOR THE POST OF OFFICE ATTENDANTS

Share your comments

Latest feeds

More News
Krishi Jagran Kannada Magazine Subscription Online Subscription

CopyRight - 2024 Krishi Jagran Media Group. All Rights Reserved.