ಕೊರೋನಾ ಸಂಕಷ್ಟದಲ್ಲಿ ಜನರು ಚಿನ್ನದ ಮೇಲೆ ಸಾಲ ಹೆಚ್ಚು ಪಡೆಯುತಿದ್ದರಿಂದ ಆರ್.ಬಿ.ಐ ಜನಸಾಮಾನ್ಯರಿಗೆ ಅನುಕೂಲವವಾಗಲು ನೆಮ್ಮದಿಯ ಸುದ್ದಿಯೊಂದನ್ನು ನೀಡಿದೆ. ಭಾರತೀಯ ರಿಸರ್ವ್ ಬ್ಯಾಂಕ್ (RBI) ಚಿನ್ನದ ಸಾಲ ನೀಡುವ ಮಾನದಂಡಗಳನ್ನು ಸಡಿಲಗೊಳಿಸಿದೆ.
ಗ್ರಾಹಕರಿಗೆ ಈಗ ಬ್ಯಾಂಕುಗಳು ಮತ್ತು ಹಣಕಾಸು ಸಂಸ್ಥೆಗಳಲ್ಲಿ ಇಡುವ ತಮ್ಮ ಚಿನ್ನಕ್ಕಾಗಿ ಶೇ. 90 ರಷ್ಟು ಸಾಲ(Loan) ಸಿಗಲಿದೆ. ಮೊದಲು ಚಿನ್ನದ ಮೇಲೆ ಕೇವಲ ಶೇ. 75 ರಷ್ಟು ಸಾಲ ಸಿಗುತ್ತಿತ್ತು. ಈಗ ಅದನ್ನು ಹೆಚ್ಚಿಸಲಾಗಿದೆ.
ಏನಿದು ಹೊಸ ಅವಕಾಶ
ಪ್ರಸ್ತುತ ಅಡಮಾನ ಕ್ರಮದಲ್ಲಿ ಚಿನ್ನದ ಮೌಲ್ಯದ ಶೇ. 75ರ ವರೆಗೆ ಸಾಲ ನೀಡಲಾಗುತ್ತಿದೆ. ಆದರೆ ಇನ್ನು ಮುಂದೆ ಶೇ. 90ರಷ್ಟು ಸಾಲ ಪಡೆಯಬಹುದು. ಮುಂದಿನ ಮಾರ್ಚ್ 31ರ ವರೆಗೆ ಈ ಸೌಲಭ್ಯ ಲಭ್ಯವಾಗಲಿದೆ. ಅಂದ ಹಾಗೇ ನೀವು ಶೇ. 90ರಷ್ಟು ಸಾಲ ಪಡೆದರೆ ಬಡ್ಡಿದರವೂ ಹೆಚ್ಚಾಗಲಿದೆ.
ಶೇ. 90 ಅಂದರೆ ಹೇಗೆ?
ಪ್ರಸ್ತುತ ಚಾಲ್ತಿಯಲ್ಲಿದ್ದ ಕ್ರಮದಂತೆ, ಹಣಕಾಸು ಸಂಸ್ಥೆಗಳಲ್ಲಿ ಚಿನ್ನದ ಮೌಲ್ಯದ (Gold value) ಶೇ. 75ರಷ್ಟು ಸಾಲವನ್ನು ನೀಡಲಾಗುತ್ತದೆ. ಅಂದರೆ ಇಲ್ಲಿ ನಿಮ್ಮ ಚಿನ್ನದ ಮೌಲ್ಯ 1 ಲಕ್ಷ ಇರಲೇಬೇಕಾಗಿದೆ. ಅಂದರೆ ನೀವು 75,000 ರೂ. ಅನ್ನು ಸಾಲದ ರೂಪದಲ್ಲಿ ಪಡೆದುಕೊಳ್ಳಬಹುದು. ಆದರೆ ಈಗ ಅದರ ಪ್ರಮಾಣವನ್ನು ಹೆಚ್ಚಿಸಲಾಗಿದೆ. ನಿಮ್ಮ ಚಿನ್ನದ ಮೌಲ್ಯ 1 ಲಕ್ಷವಾಗಿದ್ದರೆ ಅದರ ಶೇ. 90 ಅಂದರೆ 90 ಸಾವಿರವನ್ನು ಸಾಲದ ರೂಪದಲ್ಲಿ ಪಡೆಯಲು ಅವಕಾಶ ಕಲ್ಪಿಸಲಾಗಿದೆ.
ಗೋಲ್ಡ್ ಲೋನ್ ಪ್ರಮಾಣ ಹೆಚ್ಚಳ
ಕೋವಿಡ್-19 ಆರಂಭವಾದಾಗಿನಿಮದ ಚಿನ್ನದ ಮೇಲೆ ಸಾಲ (Gold Loan) ಪಡೆಯುವವರ ಪ್ರಮಾಣ ಗಮನಾರ್ಹ ಏರಿಕೆಯಾಗಿದೆ. ಯಾಕೆಂದರೆ ಇದು ಬಹಳ ಬೇಗನೆ ದೊರೆಯುವುದು ಮಾತ್ರವಲ್ಲದೇ ಈ ಸಾಲಗಳು ಸುರಕ್ಷಿತವಾಗಿದೆ. ಬ್ಯಾಂಕಿನಲ್ಲಿಯೂ ಸಾಲ ಸುರಕ್ಷಿತವಾಗಿರುತ್ತದೆ. ವೈಯಕ್ತಿಕ ಸಾಲಗಳಿಗೆ ಹೋಲಿಸಿದರೆ ಗೋಲ್ಡ್‌ಲೋನ್‌ನ ಬಡ್ಡಿದರಗಳು ಕಡಿಮೆ. ಚಿನ್ನದ ಬೆಲೆಯಲ್ಲಿನ ಏರಿಕೆಯು ಈ ಸಾಲಗಳ ಬೇಡಿಕೆಯನ್ನು ಹೆಚ್ಚಿಸಿದೆ. ತಮ್ಮಲ್ಲಿರುವ ಚಿನ್ನಕ್ಕೆ ಹೆಚ್ಚಿನ ಸಾಲವನ್ನು ಪಡೆಯಬಹುದು.
Share your comments