ಕೇಂದ್ರ ಸರ್ಕಾರ ಜಾರಿಗೆ ತಂದಿದ್ದ 3 ಕೃಷಿ ಕಾನೂನುಗಳನ್ನು ಹಿಂತೆಗೆದುಕೊಳ್ಳುವಂತೆ ಒತ್ತಾಯಿಸಿ, ಸುಮಾರು ಒಂದು ವರ್ಷಗಳ ಕಾಲಕ್ಕು ಹೆಚ್ಚು ದಿನ ಮುಂಚೂಣಿಯಲ್ಲಿ ನಿಂತು ಪ್ರತಿಭಟನೆ ಕೈಗೊಂಡಿದ್ದ ಹಿರಿಯ ರೈತ ನಾಯ ರಾಕೇಶ ಟಿಕಾಯತ್ ಅವರನ್ನ ಭಾರತೀಯ ಕಿಸಾನ್ ಯುನಿಯನ್ ಉಚ್ಛಾಟನೆ ಮಾಡಿ ಆದೇಶ ಹೊರಡಿಸಿದೆ.
ರಾಕೇಶ ಟಿಕಾಯತ್ ಅವರ ಜೊತೆ ಅವರ ಸಹೋದರ ನರೇಶ್ ಟಿಕಾಯತ್ ಅವರನ್ನು ಕೂಡ ಬಿಕೆಯು ರಾಷ್ಟ್ರೀಯ ಅಧ್ಯಕ್ಷ ಸ್ಥಾನದಿಂದ ತೆಗೆದುಹಾಕಲಾಗಿದೆ. ಟಿಕಾಯತ್ ಸಹೋದರರು ಯುನಿಯನ್ನಲ್ಲಿ ರಾಜಕೀಯ ಮಾಡುತ್ತಿದ್ದಾರೆ. ಹಾಗೂ ಯುನಿಯನ್ನ ಹಿತಾಸಕ್ತಿಗೆ ವಿರುದ್ಧವಾಗಿ ನಡೆದುಕೊಳ್ಳುತ್ತಿದ್ದಾರೆ ಎಂಬ ಆರೋಪಗಳು ಕೇಳಿ ಬಂದ ಹಿನ್ನೆಲೆ ಈ ಕ್ರಮ ಕೈಗೊಂಡಿರುವುದಾಗಿ ಭಾರತೀಯ ಕಿಸಾನ್ ಯುನಿಯನ್ ಹೇಳಿದೆ.
ಗೋಧಿ ರಫ್ತು ನಿರ್ಬಂಧ ಆಹಾರದ ಬೆಲೆ ನಿಯಂತ್ರಿಸುತ್ತದೆ: ಭಾರತ ಸರ್ಕಾರ!
IMD: ರೈತಮಿತ್ರರಿಗೆ ಹವಾಮಾನ ಇಲಾಖೆಯಿಂದ ಶುಭ ಸುದ್ದಿ; ವಾಡಿಕೆಗಿಂತ ಮೊದಲೆ ರಾಜ್ಯದಲ್ಲಿ ಮುಂಗಾರು ಮಳೆ!
BKU ನ ಅನೇಕ ಸದಸ್ಯರು ಸಂಘಟನೆಯ ರಾಷ್ಟ್ರೀಯ ವಕ್ತಾರ ರಾಕೇಶ್ ಟಿಕಾಯತ್ ಅವರ ಚಟುವಟಿಕೆಗಳ ಬಗ್ಗೆ ಕೋಪಗೊಂಡಿದ್ದರು. ರಾಕೇಶ್ ಟಿಕಾಯಿತ್ ಅವರು ತಮ್ಮ ರಾಜಕೀಯ ಹೇಳಿಕೆಗಳು ಮತ್ತು ಚಟುವಟಿಕೆಗಳಿಂದ ತಮ್ಮ ಅರಾಜಕೀಯ ಸಂಘಟನೆಗೆ ರಾಜಕೀಯ ರೂಪವನ್ನು ನೀಡಿದರು ಎಂದು ಈ ರೈತ ಮುಖಂಡರು ಆರೋಪಿಸಿದ್ದಾರೆ.
3ನೇ ಮಗುವಿಗೆ ಜನ್ಮ ನೀಡಿದರೆ 11 ಲಕ್ಷ ರೂಪಾಯಿ ಬೋನಸ್ ನೀಡತ್ತೆ ಈ ಕಂಪನಿ.. ಜೊತೆಗೆ 1 ವರ್ಷ ರಜೆ! ಏನಿದು Policy?
ರೈತರಿಗೆ ಸಿಹಿ ಸುದ್ದಿ: ಮಾರುಕಟ್ಟೆಯಲ್ಲಿ ಗೋಧಿಗೆ ಬಂಪರ್ ಬೆಲೆ: ರೈತರ ಮುಖದಲ್ಲಿ ನಗೆ!
Share your comments