1. ಸುದ್ದಿಗಳು

ಕರ್ನಾಟಕದ ಹಲವೆಡೆ ಮಳೆ; ಸಿಡಿಲು ಬಡಿದು ಸಾವು!

Kalmesh T
Kalmesh T
Rains in Karnataka: Two peoples and 18 sheep killed!

ಕಲ್ಯಾಣ ಕರ್ನಾಟಕದ (Kalyana Karnataka) ಕೆಲಭಾಗಗಳಲ್ಲಿ ಶುಕ್ರವಾರ ಬೇಸಿಗೆ ಮಳೆಯಾಗಿದ್ದು(Rain) ಬಾಲಕ ಸೇರಿ ಇಬ್ಬರು ಸಿಡಿಲಿಗೆ (Lightning Strike) ಬಲಿಯಾಗಿದ್ದಾರೆ. ಹಗರಿಬೊಮ್ಮನಹಳ್ಳಿ ತಾಲೂಕಿನ ಚಿಂತ್ರಪಳ್ಳಿ ಗ್ರಾಮದ ಬಾಲಕ ನಾಗರಾಜ ಹೊಲಕ್ಕೆ ಹೋಗಿದ್ದಾಗ ಸಿಡಿಲು ಬಡಿದು ಮೃತಪಟ್ಟಿದ್ದಾನೆ. ಕಲಬುರಗಿ ಜಿಲ್ಲೆ ರೇವನೂರ ಗ್ರಾಮದಲ್ಲಿರುವ ತನ್ನ ಜಮೀನಿನಲ್ಲಿ ಶುಕ್ರವಾರ ಸಂಜೆ ಶೇಂಗಾ ಬಿಡಿಸುತ್ತಿದ್ದ ರೈತ ಮಹಾದೇವಪ್ಪ ಸಿಡಿಲಿಗೆ ಬಲಿಯಾಗಿದ್ದಾರೆ.

ಇದನ್ನೂ ಓದಿರಿ:

ರೈತರಿಗೆ ಶಾಕಿಂಗ್ ಸುದ್ದಿ: ಈ ವರ್ಷದ ಬೆಳೆಗಳಿಗೆ ಕಾದಿದೆ ಗಂಡಾಂತರ!

ಆತ್ಮಹತ್ಯೆ ಮಾಡಿಕೊಂಡ ರೈತ ಕುಟುಂಬಗಳಿಗೆ ಶೀಘ್ರ ಪರಿಹಾರ ನೀಡುವಂತೆ ಹೈಕೋರ್ಟ್‌ ಸೂಚನೆ

ನೆಲಕ್ಕುರುಳಿದ ಕೋಳಿ ಫಾರ್ಮ್ ಶೆಡ್‌ಗಳು

ಬಿರುಗಾಳಿ ಜತೆ ಆಲಿಕಲ್ಲು ಮಳೆ ಸುರಿದ ಪರಿಣಾಮ ಹತ್ತಕ್ಕೂ ಹೆಚ್ಚು ಕೋಳಿ ಫಾರ್ಮ್ ಶೆಡ್‌ಗಳು ನೆಲಕ್ಕುರುಳಿ ಲಕ್ಷಾಂತರ ಮೌಲ್ಯದ ನಷ್ಟ ಸಂಭವಿಸಿದ ಘಟನೆ ತಾಲೂಕಿನ ಏಳುಬೆಂಚಿ ಗ್ರಾಮದ ಬಳಿ ಜರುಗಿದೆ. ದೇವರಮನಿ ಹೊನ್ನೂರ ಸ್ವಾಮಿ, ಹೋಗಪ್ಪ, ಸಂಪತ್‌ಕುಮಾರ್‌ ಹಾಗೂ ಮಾರುತಿ ಎಂಬವರಿಗೆ ಸೇರಿದ ಕೋಳಿ ಫಾಮ್‌ರ್‍ನಲ್ಲಿ 35 ಸಾವಿರಕ್ಕೂ ಹೆಚ್ಚು ಕೋಳಿಗಳನ್ನು ಸಾಕಲಾಗಿತ್ತು.

ಮಣ್ಣು ಪರೀಕ್ಷೆ ಮಾಡಿ ದುಪ್ಪಟ್ಟು ಲಾಭ ಪಡೆಯಿರಿ!

ರೈತರಿಗೆ ಗುಡ್ ನ್ಯೂಸ್: ಸರ್ಕಾರಿ ಭೂಮಿಯಲ್ಲಿ ಕೃಷಿ: ಕೃಷಿ ಆಕಾಂಕ್ಷಿಗಳಿಗೆ ವರದಾನ ಈ ಯೋಜನೆ

ದಿಢೀರನೆ ಸುರಿದ ಆಲಿಕಲ್ಲು ಮಳೆಗೆ ಶೆಡ್‌ಗಳೆಲ್ಲಾ ಸಂಪೂರ್ಣವಾಗಿ ನಾಶವಾಗಿವೆ. ಮೂರು ಸಾವಿರಕ್ಕೂ ಹೆಚ್ಚು ಕೋಳಿಗಳು (Chicken) ಸತ್ತಿವೆ ಹಾಗೂ ಶೆಡ್‌ಗೆ ಹಾನಿಯಾಗಿದೆ. ಶೆಡ್‌ಗಳ ನಿರ್ಮಾಣಕ್ಕೆಂದು ಸಾಕಷ್ಟುಹಣ ಖರ್ಚು ಮಾಡಲಾಗಿತ್ತು, ಭಾರಿ ಪ್ರಮಾಣದಲ್ಲಿ ನಷ್ಟಸಂಭವಿಸಿದೆ. ರೈತರಿಗೆ ಧೈರ್ಯ ತುಂಬಲು ಸರ್ಕಾರ ಆರ್ಥಿಕ ಸಹಾಯ ಮಾಡಬೇಕೆಂದು ಕೋಳಿ ಸಾಕಣೆದಾರರಾದ ಸಂಪತ್‌ಕುಮಾರ್‌ ಆಗ್ರಹಿಸಿದರು. ಘಟನಾ ಸ್ಥಳಕ್ಕೆ ಕುರುಗೋಡು ತಹಸೀಲ್ದಾರ್‌ ಕೆ. ರಾಘವೇಂದ್ರ ರಾವ್‌ ಹಾಗೂ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದರು.

ಮುಂದಿನ 5 ದಿನಗಳ ಕಾಲ ಕೆಲವು ರಾಜ್ಯಗಳಲ್ಲಿ ಭಾರೀ ಮಳೆ ಸಾಧ್ಯತೆ: ಹವಾಮಾನ ಇಲಾಖೆ

ಸಿಡಿಲಿನ ಮುನ್ಸೂಚನೆ ನೀಡಲಿದ್ದಾಳೆ ಈ ದಾಮಿನಿ!

ಸಿಡಿಲಿಗೆ 18 ಕುರಿಗಳ ಸಾವು

ಸಿಡಿಲಿಗೆ 18 ಕುರಿಗಳು ಸಾವನ್ನಪ್ಪಿದ ಘಟನೆ ಹರಪನಹಳ್ಳಿ ತಾಲೂಕಿನ ತೆಲಿಗಿ ಗ್ರಾಮದ ಕೆರೆಯಲ್ಲಿ ಶುಕ್ರವಾರ ಸಂಜೆ ಜರುಗಿದೆ. ತಿಪ್ಪೇಶಪ್ಪ -3, ಮಂಜುನಾಥ -8, ತಳವಾರ ರೇವಣ್ಣಪ್ಪ -6 ಹೀಗೆ ಒಟ್ಟು 17 ಕುರಿಗಳು ಹಾಗೂ ಕುರಿಯಲ್ಲಿದ್ದ 1 ನಾಯಿ ಸಿಡಿಲಿಗೆ ಬಲಿಯಾಗಿವೆ.

ಮೇಯಿಸಿಕೊಂಡು ಕುರಿಗಳನ್ನು ವಾಪಸ್‌ ಮನೆಗೆ ಕರೆತರುವಾಗ ಕೆರೆಯಲ್ಲಿ ಕುರಿ ಹಿಂಡಿನ ಮೇಲೆ ಸಿಡಿಲು ಬಡಿದಿದೆ. ಕಂದಾಯ ಸಿಬ್ಬಂದಿ ಘಟನಾ ಸ್ಥಳಕ್ಕೆ ಹೋಗಿ ಪರಿಶೀಲನೆ ನಡೆಸಿದೆ. ಕುರಿಗಳ ಮಾಲಿಕರು ಹಲುವಾಗಲು ಪೊಲೀಸ್‌(Police) ಠಾಣೆಯಲ್ಲಿ ಪ್ರಕರಣ ದಾಖಲು ಮಾಡುವುದಾಗಿ ತಿಳಿಸಿದ್ದಾರೆ. ಸಾವನ್ನಪ್ಪಿದ ಕುರಿಗಳ ಮಾಲೀಕರಿಗೆ ಸೂಕ್ತ ಪರಿಹಾರ ಕಲ್ಪಿಸಿಕೊಡಬೇಕೆಂದು ತೆಲಿಗಿ ಗ್ರಾಮದ ಯುವಮುಖಂಡ ಕೆ. ಯೋಗೀಶ ತಾಲೂಕು ಆಡಳಿತವನ್ನು ಒತ್ತಾಯಿಸಿದ್ದಾರೆ.

ಭಾರತದ palm oil ಆಮದು ಹೆಚ್ಚಳ!

ಬೇಸಿಗೆಯಲ್ಲಿ ಕರೆಂಟ್ ಬಿಲ್ ಜಾಸ್ತಿ ಬರುತ್ತಿದೆಯೇ..? ಈ ಟ್ರಿಕ್ಸ್ ಬಳಸಿ.. ಹಣ ಉಳಿಸಿ

Published On: 23 April 2022, 05:17 PM English Summary: Rains in Karnataka: Two peoples and 18 sheep killed!

Share your comments

Latest feeds

More News
Krishi Jagran Kannada Magazine Subscription Online Subscription

CopyRight - 2024 Krishi Jagran Media Group. All Rights Reserved.