1. ಸುದ್ದಿಗಳು

Alert Karnataka: ಸೈಕ್ಲೋನ್ ಪರಿಣಾಮ ರಾಜ್ಯದ ಹಲವೆಡೆ ಭಾರೀ ಮಳೆ ಸಾಧ್ಯತೆ! ಮುನ್ನೆಚ್ಚರಿಕೆ ನೀಡಿದ ಹವಾಮಾನ ಇಲಾಖೆ

Kalmesh T
Kalmesh T
Rain in the cyclone impact state likely again! Meteorological Department

ಸೈಕ್ಲೋನ್‌ ಪರಿಣಾಮ ರಾಜ್ಯದ ಹಲವೆಡೆ ಭಾರೀ ಮಳೆ ಸಾಧ್ಯತೆ. ಮುನ್ನೆಚ್ಚರಿಕೆ ನೀಡಿದ ಹವಾಮಾನ ಇಲಾಖೆ.

ಬಂಗಾಳಕೊಲ್ಲಿಯಲ್ಲಿ ಉಂಟಾಗಿರುವ ವಾಯುಭಾರ ಕುಸಿತದ ಪರಿಣಾಮವಾಗಿ ಇಂದು ಮಧ್ಯಾನದ ನಂತರ ಕರ್ನಾಟಕದಲ್ಲೂ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ಇದನ್ನೂ ಓದಿರಿ: ರೈತರಿಗಾಗಿ ಪಶುಪಾಲನಾ ಸಹಾಯವಾಣಿ; ಮನೆಯಲ್ಲೆ ಕುಳಿತು ಮಾಹಿತಿ ಪಡೆದುಕೊಳ್ಳಿ!

ಹಾವೇರಿಯಲ್ಲಿ “ಮೀನು ಹಬ್ಬ” ಆರಂಭ: ವಿಶೇಷ ಆಚರಣೆಯ ಬಗ್ಗೆ ನಿಮಗೆ ಗೊತ್ತೆ! ಇಲ್ಲಿದೆ ಕಂಪ್ಲಿಟ್ ಮಾಹಿತಿ.

ಬಂಗಾಳಕೊಲ್ಲಿಯಲ್ಲಿ ಉಂಟಾಗಿರುವ ವಾಯುಭಾರ ಕುಸಿತ ಸೈಕ್ಲೋನ್ ಆಗಿ ಪರಿವರ್ತನೆ ಆಗಲಿದ್ದು, ಕಳೆದ 4 ದಿನಗಳಿಂದ ಸುರಿಯುತ್ತಿರುವ ಮಳೆ ಮತ್ತಷ್ಟು ಚುರುಕು ಪಡೆದುಕೊಳ್ಳಲಿದೆ. ಇಂದು ಮಧ್ಯಾಹ್ನದಿಂದಲೇ ಸೈಕ್ಲೋನ್ ಎಫೆಕ್ಟ್ ರಾಜ್ಯದಲ್ಲಿ ಕಾಣಿಸಲಿದೆ  ಎಂದು ಭಾರತೀಯ ಹವಾಮಾನ ಇಲಾಖೆ ಮುನ್ನೆಚ್ಚರಿಕೆ ನೀಡಿದೆ.

ಕರ್ನಾಟಕದಲ್ಲಿ ಕಳೆದ ಒಂದು ವಾರದಿಂದ ಮಳೆಯಾಗುತ್ತಿದೆ. ಗುಡುಗು-ಸಿಡಿಲು ಸಹಿತ ಮಳೆಯಾಗುತ್ತಿದ್ದು, ಪ್ರಾಣ ಹಾನಿ ಸಂಭವಿಸುತ್ತಿವೆ. ಮಧ್ಯಾಹ್ನದ ನಂತರ ಶುರುವಾಗುವ ಮಳೆ ಜನರನ್ನು ಹೈರಾಣಾಗಿಸಿದೆ.

ರಾಜಧಾನಿ ಬೆಂಗಳೂರಿನಲ್ಲಿಯೂ ಸಂಜೆ ಮಳೆಯಾಗಿದೆ. ರಾಜಾಜಿ ನಗರ, ಯಶವಂತರಪುರ, ಜಾಲಹಳ್ಳಿ ಕ್ರಾಸ್, ಮೆಜೆಸ್ಟಿಕ್ ಸುತ್ತಮುತ್ತ ಮಳೆಯಾಗಿದೆ. 

ಜರ್ಮನಿಯ ಪ್ರಮುಖ ಇಂಧನ ಕಂಪನಿಗಳೊಂದಿಗೆ ಕೇಂದ್ರ ವಿದ್ಯುತ್ ಸಚಿವರು ದುಂಡು ಮೇಜಿನ ಸಭೆ!

ಏಪ್ರಿಲ್‌ನಲ್ಲಿ 1.68 ಲಕ್ಷ ಕೋಟಿ ರೂಪಾಯಿಗಳ GST ಆದಾಯ ಸಂಗ್ರಹ!

ಹವಾಮಾನ ಇಲಾಖೆಯ ಪ್ರಕಾರ ಆಂಧ್ರ ಪ್ರದೇಶದ ದಕ್ಷಿಣ ಭಾಗ ಮತ್ತು ಒಡಿಶಾದಲ್ಲಿ ಹೆಚ್ಚು ಮಳೆಯಾಗುವ ನಿರೀಕ್ಷೆಗಳಿವೆ. ಚಂಡಮಾರುತದ ವೇಗ ಹೆಚ್ಚಾಗಿರುವ ಕಾರಣ ಮೀನುಗಾರರು ಸಮುದ್ರಕ್ಕೆ ಇಳಿಯಬಾರದು ಎಂದು ಹವಮಾನ ಇಲಾಖೆ ಮುನ್ಸೂಚನೆಯನ್ನು ನೀಡಿದೆ. 

ಕರ್ನಾಟಕದ ಬೆಂಗಳೂರು, ಬೆಂಗಳೂರು ಗ್ರಾಮಾಂತರ, ಚಿಕ್ಕಬಳ್ಳಾಪುರ, ಕೋಲಾರ, ರಾಮನಗರ, ಮಂಡ್ಯ, ಮೈಸೂರು, ಚಾಮರಾಜನಗರ, ತುಮಕೂರು,  ಚಿತ್ರದುರ್ಗ, ಬಳ್ಳಾರಿ, ದಾವಣಗೆರೆ, ಕೊಡಗು ಕರಾವಳಿ ಜಿಲ್ಲೆಗಳಾದ ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ ಜಿಲ್ಲೆಗಳಲ್ಲಿ ಹೆಚ್ಚಿನ ಮಳೆಯಾಗುವ ಸಾಧ್ಯತೆಗಳಿವೆ. ಮುನ್ನೆಚ್ಚರಿಕೆ ಕ್ರಮವಾಗಿ ಯೆಲ್ಲೋ ಅಲರ್ಟ್ (Yellow Alert) ಘೋಷಣೆ ಮಾಡಲಾಗಿದೆ.

ಮೀನುಗಾರರು ಹಾಗೂ ನೇಕಾರರ ಸಮುದಾಯಕ್ಕೆ ಬಂಪರ್‌ ಗಿಫ್ಟ್‌ ನೀಡಿದ ಸಿಎಂ ಬೊಮ್ಮಾಯಿ..!

ಮಣ್ಣು ಪರೀಕ್ಷೆ ಮಾಡಿ ದುಪ್ಪಟ್ಟು ಲಾಭ ಪಡೆಯಿರಿ!

ಚಂಡಮಾರುತಕ್ಕೆ ಅಸಾನಿ (Asani) ಎನ್ನಲಾಗಿದೆ. ಮಾರುತಗಳು ಓಡಿಶಾದತ್ತ ಚಲಿಸುತ್ತಿದ್ದು, ಮೇ 9 ಮತ್ತು ಮೇ 10 ರವರೆಗೆ ಮಳೆಯಾಗುವ ಸಾಧ್ಯತೆಗಳಿವೆ. ಗಾಳಿಯ ವೇಳೆ ಗಂಟೆಗೆ 80 ರಿಂದ 90 ಕಿಲೋ ಮೀಟರ್ ಇರಲಿದೆ ಎಂದು ಊಹಿಸಲಾಗಿದೆ.

ಮೇ 9 ಮತ್ತು 10 ರಂದು ಆಂಧ್ರ ಮತ್ತು ಓಡಿಶಾದ ಕರಾವಳಿ ಭಾಗದಲ್ಲಿ ಕಟ್ಟೆಚ್ಚರ ವಹಿಸಲಾಗಿದೆ. ಓಡಿಶಾದ 17 ಜಿಲ್ಲೆಗಳಲ್ಲಿ ಹೈ ಅಲರ್ಟ್ ಘೋಷಣೆ ಮಾಡಲಾಗಿದೆ. 

LPG ಸಿಲಿಂಡರ್‌ಗೆ ಹೆಚ್ಚಿನ ಬೆಲೆ ಕೇಳ್ತಿದ್ದಾರಾ..? ಹಾಗಾದ್ರೇ ಇಲ್ಲಿ ಕಂಪ್ಲೇಟ್‌ ಮಾಡಿ ಸಾಕು

ರಷ್ಯಾದಿಂದ ಅಪಾರ ಬೇಡಿಕೆಯಿದ್ದರೂ 200 ರೂ. ಕುಸಿತ ಕಂಡ ಗೋಧಿ..ಕಾರಣವೇನು..?

Published On: 08 May 2022, 12:29 PM English Summary: Rain in the cyclone impact state likely again! Meteorological Department

Share your comments

Latest feeds

More News
Krishi Jagran Kannada Magazine Subscription Online Subscription

CopyRight - 2024 Krishi Jagran Media Group. All Rights Reserved.