ಕೋರೋನಾ ಸೋಂಕು ದಿನದಿಂದ ದಿನಕ್ಕೆ ರಾಜ್ಯದಲ್ಲಿ ಹೆಚ್ಚಾಗುತ್ತಿದ್ದರಿಂದ ಜನರು ಮನೆಯಲ್ಲಿಯೇ ಹೆಚ್ಚು ತಿನಿಸುಗಳನ್ನು ಸಿದ್ದಪಡಿಸುತ್ತಿದ್ದು, ಇದನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಕರ್ನಾಟಕ ಹಾಲು ಮಹಾಮಂಡಳಿ (ಕೆಎಂಎಫ್), ನಂದಿನಿ ಪನ್ನೀರ್ ನಲ್ಲಿ ವಿಶೇಷ ಕೊಡುಗೆಗಳನ್ನು ನೀಡಿದೆ.
ನಂದಿನಿ ಪನ್ನೀರ್ (Nandini Paneer) ಬಳಕೆ ಕುರಿತು ಗ್ರಾಹಕರಲ್ಲಿ ಅರಿವು ಮೂಡಿಸಲು ಕೆಎಂಎಫ್ ಇದೇ ಮೊದಲ ಬಾರಿಗೆ ರಾಜ್ಯಾದ್ಯಂತ 85 ರೂಪಾಯಿ ಮೌಲ್ಯದ ಪ್ರತಿ 200 ಗ್ರಾಂ ನಂದಿನ ಪನ್ನೀರ್ ಖರೀದಿಸುವವರಿಗೆ 75 ರೂಪಾಯಿ ಮೌಲ್ಯದ 100 ಗ್ರಾಂ ನಂದಿನಿ ಚೀಸ್ ಸ್ಲೈಸ್ (Nandini cheese slice) ಉಚಿತವಾಗಿ ನೀಡಲಿದೆ.
ಈ ಯೋಜನೆಯನ್ನು ಕೆಎಂಎಫ್ ವ್ಯವಸ್ಥಾಪಕ ನಿರ್ದೇಶಕ ಬಿ.ಸಿ. ಸತೀಶ್ ಸಾಂಕೇತಿಕವಾಗಿ ಚಾಲನೆ ನೀಡಿದ ನಂತರ ಮಾತನಾಡಿ, ಈ ಯೋಜನೆಯು ಜುಲೈ 12ರವರೆಗೆ ಇರಲಿದೆ. ಈ ಯೋಜನೆಗೆ ಸುಮಾರು 12 ಮೆಟ್ರಿಕ್ ಟನ್ ನಂದಿನಿ ಚೀಸ್ ಸ್ಲೈಸ್ ಉತ್ಪನ್ನವನ್ನು ಬಳಕೆ ಮಾಡಿಕೊಳ್ಳಲಾಗುತ್ತಿದೆ.
ಚೀಸ್ ನಲ್ಲಿ ಕ್ಯಾಲ್ಸಿಯಂ, ಪ್ರೋಟಿನ್, ಜೀವಸತ್ವಗಳು ಮತ್ತು ಖನೀಜಗಳು ಹೆಚ್ಚಾಗಿರುವುದರಿಂದ ಸ್ನಾಯು ಮತ್ತು ಮೂಳೆಗಳನ್ನು ಬಲಪಡಿಸುತ್ತದೆ. ಕ್ಯಾಲ್ಸಿಯಂ ಸಮೃದ್ಧವಾಗಿದ್ದು, ಹಲ್ಲುಗಳನ್ನು ದೃಢಗೊಳಿಸಲು ಸಹಾಯಕಾರಿಯಾಗಿದೆ. ರಕ್ತದೊತ್ತಡ ಕಡಿಮೆ ಮಾಡಲು ಉಪಯುಕ್ತ. ನಂದಿನಿ ಚೀಸ್ 200 ಗ್ರಾಂನಿಂದ ಒಂದು ಕೆಜಿಯವರಿಗೆ ಬಾಕ್ಸ್, ಕ್ಯೂಬ್ಸ್ ಸೇರಿದಂತೆ ವಿವಿಧ ಮಾದರಿಗಳಲ್ಲಿ ಲಭ್ಯವಿದೆ. ನಂದಿನಿ ಪನೀರ್ ಕೂಡ 200 ಗ್ರಾಂನಿಂದ 1 ಕೆಜಿಯವರಿಗೆ ವಿವಿಧ ಪ್ರಕಾರದ ಪ್ಯಾಕೇಟ್ಗಳಲ್ಲಿ ಲಭ್ಯವಿರಲಿದೆ ಎಂದರು.
Share your comments