ಹಾಲಿನ ಉತ್ಪನ್ನಗಳ ದೊಡ್ಡ ಸಂಸ್ಥೆ ಕೆಎಂಎಫ್ನಿಂದ ಮೊಸರು, ಲಸ್ಸಿ, ಮಜ್ಜಿಗೆ ಮುಂತಾದ ಉತ್ಪನ್ನಗಳ ದರ ಇಳಿಕೆ ಮಾಡಿ ಆದೇಶ ಹೊರಡಿಸಿದೆ.
ಇದನ್ನೂ ಓದಿರಿ: Weather Update: ಮುಂದಿನ 24 ಗಂಟೆಗಳಲ್ಲಿ ಭಾರೀ ಮಳೆ ಎಚ್ಚರಿಕೆ! ಎಲ್ಲೆಲ್ಲಿ ಗೊತ್ತೆ?
ನಂದಿನಿ, ಮೊಸರು, ಲಸ್ಸಿ ಮತ್ತು ಮಜ್ಜಿಗೆ ದರ ಮತ್ತು ಇತರೆ ಹಾಲಿನ ಉತ್ಪನ್ನಗಳ ಮೇಲೆ ಇಂದಿನಿಂದ GST ಏರಿಕೆ ಮಾಡಿ ಆದೇಶ ಹೊರಡಿಸಿತ್ತು.
ಈ ನೂತನ ದರ ಜಾರಿಗೆ ಮಾಡಿ ಕೆಎಂಎಫ್ ಈ ದರ ಏರಿಕೆಯ ಕುರಿತು ತನ್ನ ಹಾಲು ಉತ್ಪನ್ನಗಳ ಪರಿಷ್ಕೃತ ದರ ಪಟ್ಟಿ ಜಾರಿಗೊಳಿಸಿತ್ತು.
ಜನತೆಯ ಆಕ್ರೋಶದ ನಂತರ ಇದನ್ನು ಗಮನಿಸಿದ ಕೆಎಂಫ್ ವ್ಯವಸ್ಥಾಪಕ ನಿರ್ದೇಶಕ ಸತೀಶ್, ಇದೀಗ ಕೆಲ ಉತ್ಪನ್ನಗಳ ದರಗಳನ್ನು ಇಳಿಕೆ ಮಾಡಿ ಆದೇಶ ಹೊರಡಿಸಿದ್ದಾರೆ.
ಎಲ್ಲ ಹಾಲಿನ ಉತ್ಪನ್ನಗಳ ದರಗಳನ್ನು 50 ಪೈಸೆಯಿಂದ 1.50 ರಷ್ಟು ಕಡಿಮೆ ಮಾಡಲಾಗಿದೆ. ಇಂದು ಬೆಳಿಗ್ಗೆಯಷ್ಟೇ ಈ ಉತ್ಪನ್ನಗಳ ಬೆಲೆಯನ್ನು 1 ರೂ. ನಿಂದ 3 ರೂ.ಗಳವರೆಗೆ ಹೆಚ್ಚಿಸಲಾಗಿತ್ತು.
ಆದರೆ ಗ್ರಾಹಕರಿಂದ ಈ ಬೆಲೆ ಏರಿಕೆಗೆ ತೀವ್ರ ಆಕ್ರೋಶ ವ್ಯಕ್ತವಾಗಿದ್ದರಿಂದ ಈ ಮೂತನ ಕ್ರಮ ಕೈಗೊಳ್ಳಲಾಗಿದೆ ಎಂದು ತನ್ನ ಆದೇಶದಲ್ಲಿ ಸತೀಶ್ ತಿಳಿಸಿದ್ದಾರೆ.
ಪರಿಷ್ಕರಿಸಿದ ದರಗಳ ಪ್ರಕಾರ 200 ಗ್ರಾಂ ಮೊಸರಿಗೆ ಬೆಲೆ ರೂ. 10.50ಕ್ಕೆ ನಿಗದಿಯಾಗಿದೆ.
ಒಟ್ಟಿನಲ್ಲಿ ಎಲ್ಲ ಹಾಲು ಉತ್ಪನ್ನಗಳ ದರ ಹಿಂದಿನ ದರಕ್ಕಿಂತ 50 ಪೈಸೆಯಷ್ಟು ಮಾತ್ರ ಹೆಚ್ಚಿಸಿದಂತಾಗಿದೆ ಎಂಬುದು ಇಲ್ಲಿ ಗಮನಾರ್ಹ ಸಂಗತಿಯಾಗಿದೆ.
Share your comments