ನವೆಂಬರ್ 2ರಿಂದ 5ರ ವರೆಗೆ ರಾಷ್ಟ್ರಪತಿ ದ್ರೌಪತಿ ಮುರ್ಮು ಅವರು ಭೇಟಿ ನೀಡಲಿದ್ದಾರೆ.
ಇದನ್ನೂ ಓದಿರಿ: TWITTER ದೂರುವುದಿದ್ದರೆ ದೂರಿ; ತಿಂಗಳಿಗೆ ಎಂಟು ಡಾಲರ್ ಕೊಡಿ ಎಂದ ಎಲಾನ್ ಮಸ್ಕ್!
ಭಾರತದ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ನಾಗಾಲ್ಯಾಂಡ್, ಮಿಜೋರಾಂ ಮತ್ತು ಸಿಕ್ಕಿಂಗೆ ನವೆಂಬರ್ 2 ರಿಂದ 5 ರವರೆಗೆ ಭೇಟಿ ನೀಡಲಿದ್ದಾರೆ.
ಬುಧವಾರ (ನವೆಂಬರ್ 2ರಂದು) ಕೊಹಿಮಾದಲ್ಲಿ ನಾಗಾಲ್ಯಾಂಡ್ ಸರ್ಕಾರವು ಅವರ ಗೌರವಾರ್ಥವಾಗಿ ಆಯೋಜಿಸುವ ನಾಗರಿಕ ಸ್ವಾಗತ ಕಾರ್ಯಕ್ರಮದಲ್ಲಿ ಮುರ್ಮು ಅವರು ಭಾಗವಹಿಸಲಿದ್ದಾರೆ.
LPG ಗ್ರಾಹಕರಿಗೆ ಸಿಹಿಸುದ್ದಿ: ಸಿಲಿಂಡರ್ ದರದಲ್ಲಿ ಭಾರೀ ಇಳಿಕೆ!
ಆ ಸಂದರ್ಭದಲ್ಲಿ, ಅವರು ರಾಜ್ಯದಲ್ಲಿ ಶಿಕ್ಷಣ ಮತ್ತು ಮೂಲಸೌಕರ್ಯಕ್ಕೆ ಸಂಬಂಧಿಸಿದ ವಿವಿಧ ಯೋಜನೆಗಳಿಗೆ ಉದ್ಘಾಟನೆ ಮತ್ತು ಶಿಲಾನ್ಯಾಸವನ್ನು ನೆರವೇರಿಸಲಿದ್ದಾರೆ.
ನವೆಂಬರ್ 3 ರಂದು, ಕೊಹಿಮಾ ಯುದ್ಧ ಸ್ಮಶಾನದಲ್ಲಿ ಹುತಾತ್ಮರಿಗೆ ಗೌರವ ನಮನ ಸಲ್ಲಿಸಲಿದ್ದಾರೆ. ನಂತರದಲ್ಲಿ ಕಿಗ್ವೆಮಾ ಗ್ರಾಮಕ್ಕೆ ಭೇಟಿ ನೀಡಲಿದ್ದಾರೆ ಗ್ರಾಮ ಕೌನ್ಸಿಲ್ ಸದಸ್ಯರು ಮತ್ತು ಸ್ವಸಹಾಯ ಗುಂಪುಗಳ ಸದಸ್ಯರೊಂದಿಗೆ ಸಂವಾದ ನಡೆಸುತ್ತಾರೆ.
ಅದೇ ದಿನ, ಅವರು ಐಜ್ವಾಲ್‌ನಲ್ಲಿ ಮಿಜೋರಾಂ ವಿಶ್ವವಿದ್ಯಾಲಯದ 17ನೇ ಘಟಿಕೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದು, ಮಿಜೋರಾಂ ರಾಜ್ಯದಲ್ಲಿ ವಿವಿಧ ಶಿಕ್ಷಣ ಸಂಬಂಧಿತ ಯೋಜನೆಗಳನ್ನು ಉದ್ಘಾಟಿಸಲಿದ್ದಾರೆ.
ಸಂಜೆ ಐಜ್ವಾಲ್‌ನ ರಾಜಭವನದಲ್ಲಿ ಅವರ ಗೌರವಾರ್ಥವಾಗಿ ಮಿಜೋರಾಂ ಸರ್ಕಾರವು ಆಯೋಜಿಸುವ ನಾಗರಿಕ ಸ್ವಾಗತ ಸಮಾರಂಭದಲ್ಲಿ ಅವರು ಭಾಗವಹಿಸಲಿದ್ದಾರೆ.
ನವೆಂಬರ್ 4 ರಂದು, ರಾಷ್ಟ್ರಪತಿಗಳು ಐಜ್ವಾಲ್‌ನಲ್ಲಿ ಮಿಜೋರಾಂ ವಿಧಾನಸಭೆಯ ಸದಸ್ಯರನ್ನು ಉದ್ದೇಶಿಸಿ ಮಾತನಾಡಲಿದ್ದಾರೆ.
ಅದೇ ದಿನ, ಅವರು ತಮ್ಮ ಗೌರವಾರ್ಥ ಸಿಕ್ಕಿಂ ಸರ್ಕಾರವು ಆಯೋಜಿಸುವ ನಾಗರಿಕ ಸ್ವಾಗತ ಸಮಾರಂಭದಲ್ಲಿ ಭಾಗವಹಿಸುತ್ತಾರೆ ಮತ್ತು ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ವಿವಿಧ ಯೋಜನೆಗಳಿಗೆ ಶಂಕುಸ್ಥಾಪನೆ ಮತ್ತು ಉದ್ಘಾಟನೆ ಮಾಡಲಿದ್ದಾರೆ.
ನವೆಂಬರ್ 5 ರಂದು ರಾಷ್ಟ್ರಪತಿಗಳು ದೆಹಲಿಗೆ ಹಿಂದಿರುಗುವ ಮೊದಲು ರಾವೊಂಗ್ಲಾದ ತಥಾಗತ ತ್ಸಾಲ್‌ನಲ್ಲಿ ಮಹಿಳಾ ಸಾಧಕರು ಮತ್ತು ಸ್ವಸಹಾಯ ಗುಂಪುಗಳ ಸದಸ್ಯರೊಂದಿಗೆ ಸಂವಾದ ನಡೆಸಲಿದ್ದಾರೆ.
Share your comments