ಮಧ್ಯಪ್ರದೇಶದ ಸರ್ಕಾರ ಪರಿಚಯಿಸಿರುವ ಯೋಜನೆಯೊಂದು ಇದೀಗ ವಿವಾದದ ಸ್ವರೂಪವನ್ನು ಪಡೆದುಕೊಂಡಿದೆ.
ಏನಿದು ವಿವಾದ, ಆ ಯೋಜನೆಯಾದರೂ ಎನ್ನುವುದರ ಸಂಪೂರ್ಣ ವಿವಿರ ಈ ಲೇಖನದಲ್ಲಿದೆ.
ದೇಶದಲ್ಲಿ ವಿವಿಧ ಸರ್ಕಾರಗಳು ಜನಪರ ಕಲ್ಯಾಣಗಳನ್ನು ಪರಿಚಯಿಸುತ್ತಲೇ ಇರುತ್ತವೆ.
ಕೆಲವು ಯೋಜನೆಗಳು ಕ್ಲಿಕ್ ಆದರೆ, ಇನ್ನೂ ಕೆಲವು ಯೋಜನೆಗಳಿಂದ ವಿವಾದ ಸೃಷ್ಟಿಯಾಗುವುದೂ ಇದೆ.
ಮಧ್ಯಪ್ರದೇಶದಲ್ಲಿ ಈಗ ಆಗಿರುವುದು ಅದೇ ಅಲ್ಲಿನ ಸರ್ಕಾರ ಮುಖ್ಯಮಂತ್ರಿ ಕನ್ಯಾ ವಿವಾಹ ಎನ್ನುವ ಯೋಜನೆಯನ್ನು ಪರಿಚಯಿಸಿತ್ತು.
ಆದರೆ, ಈ ಯೋಜನೆಯ ಅಡಿಯಲ್ಲಿ ವಿವಾಹವಾಗಲು ಮುಂದಾಗಿದ್ದ ಯುವತಿಯರನ್ನು ಪರೀಕ್ಷೆಗೆ ಒಳಪಡಿಸಿರುವುದು
ಹಾಗೂ ಪರೀಕ್ಷೆಯ ಫಲಿತಾಂಶ ಇದೀಗ ಮಧ್ಯಪ್ರದೇಶದಲ್ಲಿ ತೀವ್ರವಾದ ವಿವಾದದ ಸ್ವರೂಪವನ್ನು ಪಡೆದುಕೊಂಡಿದೆ.
ಮಧ್ಯಪ್ರದೇಶದ ಸರ್ಕಾರ ಪರಿಚಯಿಸಿರುವ ಮುಖ್ಯಮಂತ್ರಿ ಕನ್ಯಾ ವಿವಾಹ ಯೋಜನೆ ಇದೀಗ ವಿವಾದದ ಸ್ವರೂಪ ಪಡೆದುಕೊಂಡಿದೆ.
ಈ ಯೋಜನೆಯಡಿಯಲ್ಲಿ ವಿವಾಹವಾಗುವ ವಧುಗಳಿಗೆ ಮದುವೆಗೂ ಮುನ್ನ ಗರ್ಭಧಾರಣೆ ಪರೀಕ್ಷೆಯನ್ನು ನಡೆಸಲಾಗಿದ್ದು,
ನಾಲ್ವರು ಯುವತಿಯರು ಗರ್ಭಿಣಿಯರಾಗಿದ್ದಾರೆ ಎಂದು ವರದಿ ಬಂದಿದೆ.
Heavy Rain ರಾಜ್ಯದ ವಿವಿಧ ಭಾಗದಲ್ಲಿ ಮುಂದುವರಿದ ಮಳೆ!
ಹೀಗಾಗಿ, ಗರ್ಭಿಣಿಯಾಗಿರುವವರನ್ನು ಈ ಯೋಜನೆಯಿಂದ ಕೈಬಿಡಲಾಗಿದೆ. ಇದೀಗ ಈ ಪ್ರಕರಣ ತೀವ್ರ ಚರ್ಚೆಗೆ ಗ್ರಾಸವಾಗಿದೆ.
ಬಡ ಕುಟುಂಬದ ಹೆಣ್ಣು ಮಕ್ಕಳಿಗೆ ನೆರವಾಗುವ ಉದ್ದೇಶದಿಂದ ಈ ಯೋಜನೆಯನ್ನು ಪರಿಚಯಿಸಲಾಗಿದೆ.
ಯೋಜನೆಯಡಿ ಸಾಮೂಹಿಕ ವಿವಾಹವಾದ ದಂಪತಿಗೆ ನಗದು ಮತ್ತು ಗೃಹಬಳಕೆಯ ವಸ್ತುಗಳನ್ನು ನೀಡಲಾಗುತ್ತದೆ.
Karnataka Election 2023 ರಾಜ್ಯ ಚುನಾವಣೆಯಲ್ಲಿ ಮಾದಕವಸ್ತುಗಳ ಸದ್ದು!
ಕರ್ನಾಟಕದಲ್ಲೂ ವಿವಾದವಾಗಿತ್ತು …
ಕರ್ನಾಟಕದಲ್ಲಿಯೂ ಮಧ್ಯಪ್ರದೇಶದ ಮಾದರಿಯ ಯೋಜನೆಯೊಂದನ್ನು ಪರಿಚಯಿಸಲಾಗಿತ್ತು.
ಅದು ಸಹ ರಾಜಕೀಯ ವಾಗ್ವಾದ ಹಾಗೂ ವಿವಾದಕ್ಕೆ ಕಾರಣವಾಗಿತ್ತು.
ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಆಗಿದ್ದ ಸಂದರ್ಭದಲ್ಲಿ ಶಾದಿಭಾಗ್ಯ ಎನ್ನುವ ಯೋಜನೆಯನ್ನು ಪರಿಚಯಿಸಿದ್ದರು.
ಈ ಯೋಜನೆಯ ಮೂಲಕ ಆರ್ಥಿಕವಾಗಿ ಹಿಂದುಳಿದ ಅಲ್ಪಸಂಖ್ಯಾತರಿಗೆ ಆರ್ಥಿಕ ನೆರವು ನೀಡಲಾಗುತ್ತಿತ್ತು.
ಆರ್ಥಿಕವಾಗಿ ಹಿಂದುಳಿದಿರುವ ಅಲ್ಪಸಂಖ್ಯಾತರ ಕುಟುಂಬದ ಹೆಣ್ಣು ಮಕ್ಕಳಿಗೆ,
ವಿಚ್ಛೇದಿತ ಮಹಿಳೆಯರಿಗೆ ಹಾಗೂ ವಿಧವೆಯರಿಗೆ ಮದುವೆಯ ನಿಮಿತ್ತ ವಿವಾಹದ ಖರ್ಚು ವೆಚ್ಚಗಳು, ಜೀವನಾವಶ್ಯಕ ಸಾಮಗ್ರಿಗಳು
ಅಥವಾ ನಗದು ಮತ್ತು ಸಾಮಗ್ರಿಗಳನ್ನು ನೀಡಲು ರೂ. 50,000/-ಗಳ ಸಹಾಯಧನವನ್ನು ಷರತ್ತುಗಳಿಗೆ ಒಳಪಟ್ಟು ಮಂಜೂರು ಮಾಡಲಾಗುತ್ತಿತ್ತು.
Karnataka Election 2023 “ಹಾವಿನ ಹೆಡೆಯ ಮೇಲಿನ ಕಪ್ಪೆ ಹಾರುವ ನೊಣಕ್ಕೆ ಆಶಿಸಿದಂತೆ” ವಚನ ಉಲ್ಲೇಖಿಸಿದ್ದೇಕೆ ಸಿದ್ದರಾಮಯ್ಯ?
(Pic Credits: Pexels)
Share your comments