1. ಸುದ್ದಿಗಳು

ಕರ್ನಾಟಕದ ನಾಲ್ವರು ಸೇರಿ 43 ಮಂದಿ ಕೇಂದ್ರ ಸಚಿವರಾಗಿ ಪ್ರಮಾಣವಚನ ಸ್ವೀಕಾರ

ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎರಡನೇ ಅವಧಿಯ ಸರ್ಕಾರದಲ್ಲಿ ಮಂತ್ರಿ ಪರಿಷತ್ತಿನಿಂದ 12 ಸಚಿವರನ್ನು ಕೈಬಿಟ್ಟಿದ್ದಾರೆ. ಕರ್ನಾಟಕದ ನಾಲ್ವರು ಸೇರಿದಂತೆ 36 ಹೊಸ ಮುಖಗಳು ಕೇಂದ್ರ ಸಚಿವ ಸಂಪುಟದಲ್ಲಿ ಸ್ಥಾನ ಸಿಕ್ಕಿದೆ. ಹಲವು ಮಹತ್ವದ ಖಾತೆಗಳ ನಿರ್ವಹಣೆಯ ಜವಾಬ್ದಾರಿ ರಾಜ್ಯದ ಸಂಸದರ ಮೇಲಿದೆ.

ಕರ್ನಾಟಕದ ನಾರಾಯಣ ಸ್ವಾಮಿ, ಶೋಭಾ ಕರಂದ್ಲಾಜೆ, ಭಗವಂತ್ ಖೂಬಾ, ರಾಜೀವ್ ಚಂದ್ರಶೇಖರ್ ಸೇರಿದಂತೆ ಒಟ್ಟು 43 ಜನ ಹೊಸದಾಗಿ ಸೇರ್ಪಡೆಯಾದ ಸಚಿವರು ಪ್ರಮಾಣವಚನ ಸ್ವೀಕರಿಸಿದ್ದು, ಕೋವಿಡ್ 19 ಮಾರ್ಗಸೂಚಿಯಂತೆ ಎಲ್ಲರೂ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಂಡಿದ್ದರು.

ಪ್ರಮಾಣವಚನ ಸ್ವೀಕರಿಸಿದ ಕರ್ನಾಟಕದ ನಾಲ್ವರು ರಾಜ್ಯ ಸಚಿವರಾಗಿದ್ದಾರೆ. ಆದರೆ ಯಾರಿಗೂ ಸಂಪುಟ ದರ್ಜೆ ಸ್ಥಾನಮಾನ ನೀಡಿಲ್ಲ. ರಾಜ್ಯದಿಂದ 26 ಮಂದಿ ಸಂಸದರಾಗಿ ಆಯ್ಕೆಯಾಗಿದ್ದರೂ ಇಂದು ಪ್ರಮಾಣ ವಚನ ಸ್ವೀಕರಿಸಿದ ನಾಲ್ವರು ರಾಜ್ಯ ಖಾತೆಯ ಸಹಾಯಕ ಸಚಿವ ಸ್ಥಾನಕ್ಕೆ ತೃಪ್ತಿಪಟ್ಟುಕೊಳ್ಳಬೇಕಾಯಿತು.
ಕೇಂದ್ರ ಸಂಪುಟದಿಂದ ಡಿ.ವಿ.ಸದಾನಂದ ಗೌಡ ಅವರನ್ನು ಕೈಬಿಟ್ಟು ಚಿಕ್ಕಮಗಳೂರು-ಉಡುಪಿ ಸಂಸದೆ ಶೋಭ ಕರಂದ್ಲಾಜೆ ,ವೀರಶೈವ ಸಮುದಾಯದ ಬೀದರ್ ಸಂಸದ  ಭಗವಂತ ಖೂಬಾ, ಎಸ್ ಟಿ ಸಮುದಾಯದ ಚಿತ್ರದುರ್ಗ ಸಂಸದ ಆನೇಕಲ್ ನಾರಾಯಣ ಸ್ವಾಮಿ ಹಾಗೂ ಮೂರು ಬಾರಿ ರಾಜ್ಯಸಭಾ ಸಚಿವರಾಗಿ ಆಯ್ಕೆಯಾಗಿರುವ ಉದ್ಯಮಿ ರಾಜೀವ್ ಚಂದ್ರಶೇಖರ್ ಗೆ ಅವಕಾಶ ಕಲ್ಪಿಸಲಾಗಿದೆ.
ಒಟ್ಟಾರೆ ಮೋದಿ ಸಂಪುಟಕ್ಕೆ 15 ಮಂದಿ ಸಂಪುಟ ದರ್ಜೆ ಸಚಿವರಾಗಿ 28 ಮಂದಿ ರಾಜ್ಯಸಚಿವರಾಗಿ ಮೋದಿ ಮಂತ್ರಿ ಮಂಡಲಕ್ಕೆ ಸೇರ್ಪಡೆಯಾಗಿದ್ದಾರೆ. ಆಡಳಿತದಲ್ಲಿ ಅನುಭವ ಹೊಂದಿರುವವರಿಗೆ ಮತ್ತು ಮಹಿಳೆಯರಿಗೆ ಮೋದಿ ಅವಕಾಶ ಕಲ್ಪಿಸಿದ್ದಾರೆ.

ಸಂಪುಟ ದರ್ಜೆ ಸಚಿವರು;

ನಾರಾಯಣ್ ಠಾಕೂರ್ ರಾಣೆ, ಅಸ್ಸಾಂನ ಮಾಜಿ ಮುಖ್ಯಮಂತ್ರಿ ಸರ್ಬಾನಂದ್ ಸೋನಾವಾಲ್,  ಡಾ. ವೀರೇಂದ್ರಕುಮಾರ್, ಜ್ಯೋತಿರಾದಿತ್ಯ ಮಾಧವರಾವ್ ಸಿಂಧಿಯಾ, ರಾಮಚಂದ್ರ ಪ್ರತಾಪ್ ಸಿಂಗ್, ಅಶ್ಚಿನಿ ವೈಷ್ಣವ್, ಬಿಹಾರ- ಪಶುಪತಿ‌‌ ಕುಮಾರ್  ರಸ್ , ಅರುಣಾಚಲ ಪ್ರದೇಶ ಕಿರಣ್ ರಿಜಿಜು ಎರಡನೇ ಬಾರಿ ಸಚಿವರಾಗಿ  ಬಿಹಾರ- ರಾಜ್ ಕುಮಾರ್ ಸಿಂಗ್, ಪಂಜಾಬಿನ ರ್ದೀಪ್ ಸಿಂಗ್ ಪುರಿ, ಗುಜರಾತ್ ನ ಮನ್ಸುಕ್ ಮಾಂಡವಿಯಾ,  ರಾಜಸ್ತಾನದ ಭೂಪೇಂದ್ರ ಯಾದವ್, ಗುಜರಾತ್ ಪುರಿಷೋತ್ತಮ್ ರೂಪಾಲಾ, *ಸಿಂಕಂದರಾಬಾದ್ ಜಿ.ಕಿಶನ್ ರೆಡ್ಡಿ,  ಹಿಮಾಚಲ ಪ್ರದೇಶ (ಅನುರಾಗ್ ಸಿಂಗ್ ಠಾಕೂರ್

ರಾಜ್ಯ ಖಾತೆ ಸಚಿವರು

ಉತ್ತರ ಪ್ರದೇಶ – ಪಂಕಜ್ ಚೌಧರಿ, ಉತ್ತರ ಪ್ರದೇಶ- ಅನುಪ್ರಿಯಾ ಸಿಂಗ್ ಪಟೇಲ್, ಉತ್ತರ ಪ್ರದೇಶ- ಸತ್ಯಾಪಾಲ್ ಸಿಂಗ್ ಬಘೇಲ್, ಕರ್ನಾಟಕ – ರಾಜೀವ್ ಚಂದ್ರಶೇಖರ್, ಕರ್ನಾಟಕ – ಶೋಭಾ ಕರಂದ್ಲಾಜೆ, ಉತ್ತರ ಪ್ರದೇಶ- ಭಾನುಪ್ರತಾಪ್ ಸಿಂಗ್ , ವರ್ಮಾ, ಗುಜರಾತ್ -ದರ್ಶನಾ ವಿಕ್ರಂ ಜರ್ದೋಶ್ ವಿಕ್ರಂ, ದೆಹಲಿ -ಮೀನಾಕ್ಷಿ ಲೇಖಿ, ಜಾರ್ಖಂಡ್ – ಅನ್ನಪೂರ್ಣ ದೇವಿ, ಕರ್ನಾಟಕ – ಆನೇಕಲ್ ಅಬ್ಬಯ್ಯ ನಾರಾಯಣ ಸ್ವಾಮಿ,  ಉತ್ತರ ಪ್ರದೇಶ- ಕೌಶಲ್ ಕಿಶೋರ್, ಉತ್ತರಾ ಖಂಡ್- ಅಜಯ್ , ಕುಮಾರ್ ಭಟ್, ಉತ್ತರ ಪ್ರದೇಶ- ವಿ.ಎಲ್.ವರ್ಮಾ, ಜಾರ್ಖಂಡ್ – ಅಜಯ್ ಕುಮಾರ್, ಗುಜರಾತ್ – ಚೌವಾಣ್ ದೇವಾಂಶ , ಕರ್ನಾಟಕ- ಭಗವಂತ ಗುರುಬಸಪ್ಖ ಖೂಬಾ, ಮಹಾರಾಷ್ಟ್ರ – ಕಪಿಲ್ ಮೋರೇಶ್ವರ್ ಪಾಟೀಲ್, ತ್ರಿಪುರಾ- ಸುಶ್ರೀ ಪ್ರತಿಮಾ ಭೌಮಿಕ್, ಪಶ್ಚಿಮ ಬಂಗಾಳ ಡಾ.ಸುಭಾಷ್ ಸರ್ಕಾರ್, ಮಹಾರಾಷ್ಟ್ರ -,ಭಗವತ್ ಕಿಶನ್ ರಾವ್ ಕರಡ್, ಡಿ.ಆರ್. ರಾಜ್‌ಕುಮಾರ್ ರಂಜನ್ ಸಿಂಗ್, ಡಾ. ಭಾರತಿ ಪ್ರವೀಣ್ ಪವಾರ್, ಬಿಶ್ವೇಶ್ವರ ತುಡು, ಶಾಂತನು ಠಾಕೂರ್, ಮುಂಜಾಪರ ಮಹೇಂದ್ರಭಾಯ್ ಜಾನ್ ಬಾರ್ಲಾ, ಡಿ.ಆರ್. ಎಲ್.ಮುರುಗನ್, ನಿಸಿತ್ ಪ್ರಮಣಿಕ್

ರಾಜೀನಾಮೆ ನೀಡಿರುವ ಸಚಿವರು

ಹರ್ಷವರ್ಧನ್, ರಮೇಶ್ ಪೊಕ್ರಿಯಾಲ್ ನಿಶಾಂಕ್, ಸಂತೋಷ್ ಗಂಗ್ವಾರ್, ಡಿ.ವಿ.ಸದಾನಂದ ಗೌಡ, ದೇಬಾಶ್ರಿ ಚೌಧರಿ, ಧನ್ವೆರಾವ್ ಸಾಹೇಬ್, ಸಂಜಯ್ ಧೋತೆ, ತಾವಲ್ ಚಂದ್ ಗೆಹ್ಲೋಟ್, ಅಶ್ವಿನ್ ಕುಮಾರ್ ಚೌಭೆ, ಬಾಬುಲ್ ಸುಪ್ರಿಯೊ, ಪ್ರತಾಪ್ ಸಾರಂಗಿ, ರತನ್ ಲಾಲ್ ಕಟಾರಿಯಾ, ರವಿಶಂಕರ್ ಪ್ರಸಾದ್, ಪ್ರಕಾಶ್ ಜಾವಡೇಕರ್

Published On: 08 July 2021, 09:02 AM English Summary: Portfolio of new ministers from Karnataka

Share your comments

Latest feeds

More News
Krishi Jagran Kannada Magazine Subscription Online Subscription

CopyRight - 2024 Krishi Jagran Media Group. All Rights Reserved.