ರಾಜ್ಯದಲ್ಲಿ ಕೊರೋನಾ ಸೋಂಕು ಹೆಚ್ಚು ಹರಡುತ್ತಿರುವುದಲ್ಲದೆ ಹೆಚ್ಚು ಪೊಲೀಸ್ ಸಿಬ್ಬಂದಿಗಳು ಕೋವಿಡ್ಗೆ ಒಳಗಾಗುತ್ತಿರುವುದರಿಂದ ಠಾಣೆಗಳಲ್ಲಿ ಅಗತ್ಯವಿರುವ ಸಿಬ್ಬಂದಿಯನ್ನಷ್ಟೇ ನಿಯೋಜಿಸಿ ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ಸೂಚನೆ ನೀಡಿದ್ದಾರೆ.
ಪೊಲೀಸ್ ಠಾಣೆಗಳಲ್ಲಿ ಕೋವಿಡ್ 19 ಹರಡುವ ಸ್ಥಳ ಆಗಿರುವುದರಿಂದ ಅವಶ್ಯವಿರುವ ಸಿಬ್ಬಂದಿಯನ್ನು ಮಾತ್ರ ಠಾಣೆಯಲ್ಲಿ ನಿಯೋಜಿಸಬೇಕು. ಕಾನ್ಸ್ಟೆಬಲ್ಗಳನ್ನು ಪಾಳಿಯಲ್ಲಿ ಕರ್ತವ್ಯ ನಿರ್ವಹಿಸುವಂತೆ ಸೂಚಿಸಬೇಕು. ಎಂದು ಹಿರಿಯ ಪೊಲೀಸ್ ಅಧಿಕಾರಿಗಳಿಗೆ ಗೃಹ ಸಚಿವ ಬಸವರಾಜ ಬೊಮ್ಮಾಯಿ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ. 50ಕ್ಕೂ ಹೆಚ್ಚು ವಯಸ್ಸಾದ ಸಿಬ್ಬಂದಿಯನ್ನು ಮನೆಯಿಂದಲೇ ಕೆಲಸ ಮಾಡಲು ಸೂಚನೆ ನೀಡಬೇಕು ಎಂದಿದ್ದಾರೆ.
ಆರೋಗ್ಯ ಭಾಗ್ಯ ಯೋಜನೆಯಡಿ ಎಲ್ಲಾ ಆಸ್ಪತ್ರೆಗಳಿಗೆ ತಕ್ಷಣ ಹಣ ಬಿಡುಗಡೆ ಮಾಡಿ ಕೋವಿಡ್ ಕಾಯಿಲೆ ಬಂದ ಪೊಲೀಸರಿಗೆ ಪ್ರತ್ಯೇಕವಾಗಿ ಚಿಕಿತ್ಸೆ ನೀಡಬೇಕು. ಸಾರ್ವಜನಿಕ ಸ್ಥಳಗಳು, ಕೋವಿಡ್ ಆಸ್ಪತ್ರೆ, ಸ್ಮಶಾನ ಮೊದಲಾದ ಸೋಂಕಿನ ಅಪಾಯವಿರುವ ಸ್ಥಳಗಳಲ್ಲಿ ಕೆಲಸ ಮಾಡುವ ಸಿಬ್ಬಂದಿಗೆ ಪಿಪಿಇ ಕಿಟ್ ನೀಡಬೇಕು. ಠಾಣೆಗಳಲ್ಲಿ ಗಾಜಿನ ಕ್ಯಾಬಿನ್ ಅಳವಡಿಸಿ ದೂರು ಸ್ವೀಕರಿಸಲು ಕ್ರಮಕೈಗೊಳ್ಳಬೇಕು. ಸಿಬ್ಬಂದಿಗೆ ಆಯುಷ್ ಹಾಗೂ ಇತರ ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಔಷಧ ನೀಡಬೇಕೆಂದು ಹೇಳಿದ್ದಾರೆ.
Share your comments