1. ಸುದ್ದಿಗಳು

ವಿಶೇಷ ಲಕ್ಷಣ ಹೊಂದಿರುವ 35 ಬೆಳ ತಳಿಗಳ ಲೋಕಾರ್ಪಣೆ ಮಾಡಿದ ಪ್ರಧಾನಿ ನರೇಂದ್ರ ಮೋದಿ

ಹವಾಮಾನ ಬದಲಾವಣೆ ಮತ್ತು ಅಪೌಷ್ಟಿಕತೆಯ ಅವಳಿ ಸವಾಲುಗಳನ್ನು ಎದುರಿಸಲು ಭಾರತೀಯ ಕೃಷಿ ಸಂಶೋಧನಾ ಮಂಡಳಿ(ಐಸಿಎಆರ್) ಅಭಿವೃದ್ಧಿಪಡಿಸಿದ ವಿಶೇಷ ಗುಣಲಕ್ಷಣಗಳನ್ನು ಹೊಂದಿದ 35 ಬೆಳೆ ತಳಿಗಳನ್ನು ಪ್ರಧಾನಿ ನರೇಂದ್ರ ಮೋದಿ ಮಂಗಳವಾರ ಬಿಡುಗಡೆ ಮಾಡಿದ್ದಾರೆ.

ಹೌದು, ಹವಾಮಾನ ಬದಲಾವಣೆ ಮತ್ತು ಅಪೌಷ್ಠಿಕತೆಯನ್ನು ಪರಿಹರಿಸಲು ಭಾರತೀಯ ಕೃಷಿ ಸಂಶೋಧನಾ ಮಂಡಳಿ (ಐಸಿಎಆರ್) ಅಭಿವೃದ್ಧ ಪಡಿಸಿದ ವಿಶೇಷ ಬೆಳೆ ತಳಿಗಳನ್ನು ನರೇಂದ್ರ ಮೋದಿಯವರು ಬಿಡುಗಡೆ ಮಾಡಿದರು.

. ಈ ಬೆಳೆ ಪ್ರಭೇದಗಳು ಹವಾಮಾನ ಸ್ಥಿತಿಸ್ಥಾಪಕತ್ವ ಮತ್ತು ಹೆಚ್ಚಿನ ಪೋಷಕಾಂಶಗಳ ಅಂಶದಂತಹ ವೈಶಿಷ್ಟ್ಯಗಳನ್ನು ಹೊಂದಿವೆ. ಈ ತಳಿಗಳಿಂದ ರೈತರಿಗೆ ಲಾಭವಾಗುವುದರೊಂದಿಗೆ ಆರೋಗ್ಯಕ್ಕೆ ಹೆಚ್ಚು ಉಪಯುಕ್ತವಾಗಿವೆ. ರೈತರು ವಿಶೇಷ ತಳಿಗಳನ್ನು ಬೆಳೆದು ಆರ್ಥಿಕವಾಗಿ ಸಬಲರಾಗಬೇಕೆಂದು ಕರೆ ನೀಡಿದ್ದಾರೆ. ವಿಶೇಷ ಗುಣಗಳಿರುವ ಈ ತಳಿಗಳು ಪೌಷ್ಟಿಕಾಂಶ ನಿರೋಧಕ ಶಕ್ತಿಯನ್ನೂ ಹೊಂದಿವೆ. ಕೆಲವು ತಳಿಗಳಲ್ಲಿರುವ ಅಂಶಗಳು ಮನುಷ್ಯ, ಪ್ರಾಣಿಗಳ ಆರೋಗ್ಯದ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತಿದ್ದವು. ಇದು ಆ ಕೊರತೆ ನೀಗಿಸಲಿದೆ. ರೈತರಿಗೆ ಹೆಚ್ಚಿನ ಖರ್ಚು ಬರದೆ ಅತೀ ಕಡಿಮೆ ನೀರಿನಲ್ಲಿ ಬೆಳೆದು ಹೆಚ್ಚು ಇಳುವರಿ ಪಡೆದುಕೊಳ್ಳಬಹುದು ಎಂದು ಪ್ರಧಾನಿ ನರೇಂದ್ರ ಮೋದಿಯವರು ಕರೆ ನೀಡಿದ್ದಾರೆ.

ಇಂದಿನ ತಾಂತ್ರಿಕ ಯುಗದಲ್ಲಿ ಹೊಸ ಹೊಸ ತಂತ್ರಜ್ಞಾನಗಳು ಆವಿಷ್ಕಾರವಾಗುತ್ತಿವೆ. ರೈತರು ಆಧುನಿಕ ತಂತ್ರಜ್ಞಾನ ಅಳವಡಿಸಿಕೊಳ್ಳುವುದು ಅನಿವಾರ್ಯವಾಗಿದೆ.  ಸಣ್ಣ ರೈತರೂ ಸಹ ಆಧುನಿಕ ತಂತ್ರಜ್ಞಾನವನ್ನು ಅಳವಡಿಸಿಕೊಂಡು ಕೃಷಿಯಲ್ಲಿ ತೊಡಗಿಸಿಕೊಳ್ಳಬಹುದು ಎಂದು ಸಲಹೆ ನೀಡಿದ್ದಾರೆ.

ಹಾಗಾದರೆ 35 ವಿಶೇಷ ತಳಿಗಳು ಯಾವುವು?

ಕಡಲೆ, ಬೇಗನೆ ಪಕ್ವಗೊಳ್ಳುವ ವಿವಿಧ ಸೋಯಾಬಿನ್, ರೋಗ ನಿರೋಧಕ ತಳಿಯ ಭತ್ತ, ಜೈವಿಕ ಬಲವರ್ದಿತ ಗೋದಿ, ಮುತ್ತಿನ ನವಣೆ, ಮೆಕ್ಕೆಜೋಳ,  ಮಿಲ್ಟ್, ಕ್ರಿಮಿನಾಶಕ ಮೊಸಾಯಿಕ್ ನಿರೋಧಕ ಪಾರಿವಾಳಬಟಾಣೆ, , ಕ್ವಿನೋವಾ, ಬಕ್ ವೀಟ್, ರೆಕ್ಕೆಯ ಬೀನ್, ಫವಾ ಬೀನ್.

ಹವಾಮಾನ ಬದಲಾವಣೆಗೆ ಅನುಗುಣವಾಗಿ ತಂತ್ರಜ್ಞಾನ ಆಧಾರಿತ ಕೃಷಿ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಲು ಕೇಂದ್ರ ಸರ್ಕಾರದ ಮುಂದಾಗಿದ್ದು, ಇದಕ್ಕಾಗಿ ದೊಡ್ಡಮಟ್ಟದಲ್ಲಿ ಪ್ರಯತ್ನ ನಡೆಯಿದೆ. ಈ ನಿಟ್ಟಿನಲ್ಲಿ ವಿಶೇಷ ಲಕ್ಷಣಗಳನ್ನು ಹೊಂದಿರುವ 35 ಬೆಳೆಗಳ ತಳಿಗಳನ್ನು ಪ್ರಧಾನಿ ನರೇಂದ್ರ ಮೋದಿಯವರು ರಾಷ್ಟ್ರಕ್ಕೆ ಸಮರ್ಪಿಸಿದ್ದಾರೆ ಎಂದು ಪ್ರಧಾನಮಂತ್ರಿ ಕಾರ್ಯಾಲಯ ಮಾಹಿತಿ ನೀಡಿದೆ.

ಈ ಸಂದರ್ಭದಲ್ಲಿ ಮಾತನಾಡಿದ ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ ಅವರು, ದೇಶದಲ್ಲಿ ಶೇ 86ರಷ್ಟು ರೈತರು ಸಣ್ಣ ಮತ್ತು ಅತಿಸಣ್ಣ ಹಿಡುವಳಿದಾರರೇ ಆಗಿದ್ದಾರೆ. ಈ ಸಮೂಹದ ಕೃಷಿಕರ ಆದಾಯವನ್ನು ಹೆಚ್ಚಿಸುವುದು ಪ್ರಧಾನಮಂತ್ರಿಗಳ ಆದ್ಯತೆಯಾಗಿದೆ ಎಂದು ಹೇಳಿದರು.

Published On: 28 September 2021, 04:34 PM English Summary: PM Modi launches 35 crop varieties Special traits

Share your comments

Latest feeds

More News
Krishi Jagran Kannada Magazine Subscription Online Subscription

CopyRight - 2024 Krishi Jagran Media Group. All Rights Reserved.