ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ (Pradhana mantra kisan samman scheme) ಯೋಜನೆಯ 7 ನೇ ಕಂತಿನ ಹಣ ಇಂದಿನಿಂದಲೇ ಜಮೆಯಾಗಲಿದೆ ಈ ಯೋಜನೆಯಡಿ 10 ಕೋಟಿಗೂ ಹೆಚ್ಚು ರೈತರು ಈಗಾಗಲೇ ನೋಂದಣಿ ಮಾಡಿಸಿಕೊಂಡು ಲಾಭ ಪಡೆಯುತ್ತಿದ್ದಾರೆ.
ಈ ಮುಂದಿ ಲಿಂಕ್ ಕ್ಲಿಕ್ ಮಾಡಿ ನಿಮ್ಮ ಸ್ಟೇಟಸ್ ತಿಳಿದುಕೊಳ್ಳಬಹುದು. https://pmkisan.gov.in/beneficiarystatus.aspx ಅಥವಾ ಗೂಗಲ್ ನಲ್ಲಿ pm kisan status ಅಂತ ಟೈಪ್ ಮಾಡಿ Beneficiary status-pm kisan ಮೇಲೆ ಕ್ಲಿಕ್ ಮಾಡಿ ನಿಮ್ಮ ಆಧಾರ್ ನಂಬರ್, ಅಥವಾ ಬ್ಯಾಂಕ್ ಅಕೌಂಟ್ ಅಥವಾ ಮೊಬೈಲ್ ನಂಬರ್ ಈ ಮೂರರಲ್ಲಿ ಯಾವುದಾದರೊಂದನ್ನು ಆಯ್ಕೆ ಮಾಡಿಕೊಳ್ಳಬೇಕು.
ಉದಾಹರಣೆ ಮೊಬೈಲ್ ನಂಬರ್ ಆಯ್ಕೆ ಮಾಡಿಕೊಂಡರೆ ನಿಮ್ಮ ಮೊಬೈಲ್ ನಂಬರ್ ಟೈಪ್ ಮಾಡಿ ಗೆಟ್ ಡಾಟಾ ಮೇಲೆ ಕ್ಲಿಕ್ ಮಾಡಿದರೆ ಸಾಕು ಪಿಎಂ ಕಿಸಾನ್ ಸಮ್ಮಾನ್ ನಿಧಿ ಯೋಜನೆಯಡಿ ಎಷ್ಟು ಕಂತಿನ ಹಣ ಜಮೆಯಾಗಿದೆ. ಡಿಸೆಂಬರ್ ತಿಂಗಳ 7ನೇ ಕಂತಿನ ಹಣದ ಸ್ಟೇಟಸ್ ಕ್ಷಣಾರ್ಧದಲ್ಲಿ ತಿಳಿದುಕೊಳ್ಳಬಹುದು.
ಕೇಂದ್ರ ಸರ್ಕಾರ ವಾರ್ಷಿಕವಾಗಿ ಘೋಷಿಸಿದ ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ 6,000 ರೂಪಾಯಿ ಸಹಾಯ ಧನ ನಿಮ್ಮ ಖಾತೆಯಲ್ಲಿ ಜಮಾವಾಗಿದೆಯೇ ಎಂಬುದನ್ನು ನೋಡಿಕೊಳ್ಳಲು ಬ್ಯಾಂಕಿಗೆ ಹೋಗುವ ಅವಶ್ಯಕತೆಯಿಲ್ಲ. ನೋಂದಣಿ ಮಾಡಿಸಿಕೊಂಡ ರೈತರು ಇನ್ನುಮುಂದೆ ಮನೆಯಲ್ಲಿಯೇ ಕುಳಿತು ನೋಡಿಕೊಳ್ಳಬಹುದು.
ಅಕೌಂಟಿಗೆ ಹಣ ಜಮೆಯಾಗದಿದ್ದರೆ ಅಕೌಂಟಿಗೆ ಜಮೆಯಾಗಲು ಯಾವ ಸ್ಥಿತಿಯಲ್ಲಿದೆ ಎಂಬುದನ್ನು ಮೇಲಿನ ಲಿಂಕ್ ಮೂಲಕ ಪರಿಶೀಲಿಸಬಹುದು.
Share your comments