1. ಸುದ್ದಿಗಳು

ರೈತ ಸಮುದಾಯಕ್ಕೆ ಗುಡ್‌ನ್ಯೂಸ್‌: ಈ ದಿನದಂದು ಬರಲಿದೆ ಪಿಎಂ ಕಿಸಾನ್‌ 12ನೇ ಕಂತು

Maltesh
Maltesh
PM Kisan Next Installment Day

PM kisan 11th Installment: ಕಳೆದ ತಿಂಗಳ ಮೇ 31 ರಂದು ಪಿಎಂ ಕಿಸಾನ್ ನಿಧಿಯ 11 ನೇ ಕಂತು ಬಂದ ನಂತರ, ಈಗ ಜನರು 12 ನೇ ಕಂತುಗಾಗಿ ಕಾಯಲು ಪ್ರಾರಂಭಿಸಿದ್ದಾರೆ. ಹೀಗಾಗಿ ಸರ್ಕಾರವು ಕೂಡ ಇದೇ  ಜುಲೈ 31 ರೊಳಗೆ  ರೈತರು ತಮ್ಮ ಇ-ಕೆವೈಸಿ ಮಾಡಿಸಿಕೊಳ್ಳಲು ಅವಕಾಶ ಮಾಡಿಕೊಟ್ಟಿದೆ.

ಪಿಎಂ ಕಿಸಾನ್‌ 12ನೇ ಕಂತು ಯಾವಾಗ ಬರುತ್ತದೆ..?

ಪ್ರಧಾನಮಂತ್ರಿ ಸಮ್ಮಾನ್ ಕಿಸಾನ್ ನಿಧಿಯ (PM Kisan) 11ನೇ ಕಂತಿನ ಹಣ ಮೇ 31ರಂದು ರೈತರ ಖಾತೆಗೆ ಬಂದಿದೆ. ಈ ಬಾರಿ 10.63 ಕೋಟಿ ರೈತರ ಖಾತೆಗಳಿಗೆ ಸರ್ಕಾರದಿಂದ ಹಣ ವರ್ಗಾವಣೆಯಾಗಿದೆ. ಪಿಎಂ ಕಿಸಾನ್ ನಿಧಿಯ 12 ನೇ ಕಂತು ಆಗಸ್ಟ್ ಮತ್ತು ನವೆಂಬರ್ ನಡುವೆ ರೈತರ ಖಾತೆಗೆ ಬರಲಿದೆ ಎಂದು ಅಂದಾಜಿಸಲಾಗುತ್ತಿದೆ. ಆದರೆ ಈ ಕಂತು ಬರುವ ಮೊದಲು, ನೀವು ಇ-ಕೆವೈಸಿ ಹೊಂದಿರುವುದು ಅವಶ್ಯಕ.

ಕಪ್ಪು ಗೋಧಿಯ ಬಗ್ಗೆ ನಿಮಗೆ ಗೊತ್ತೆ? ಇಲ್ಲಿದೆ ರೈತರಿಗೆ ಲಾಭದಾಯಕ ಕೃಷಿಯ ಐಡಿಯಾ!

Paddy: ಉತ್ತಮ ಇಳುವರಿ ನೀಡುವ ರೋಗ ನಿರೋಧಕ ಭತ್ತದ ತಳಿಗಳ ಕುರಿತು ಇಲ್ಲಿದೆ ಸಮಗ್ರ ಮಾಹಿತಿ…

ಆನ್‌ಲೈನ್ ಅಥವಾ ಆಫ್‌ಲೈನ್‌ನಲ್ಲಿ ಮಾಡಿಸಬಹುದು ಇ-ಕೆವೈಸಿ :

ಈ ಬಾರಿ 11ನೇ ಕಂತಿನ 2000 ರೂಪಾಯಿ ನಿಮ್ಮ ಖಾತೆಗೆ ಬರುತ್ತದೋ ಇಲ್ಲವೋ ಎಂಬುದನ್ನು ತಿಳಿದುಕೊಳ್ಳುವುದು ಬಹಳ ಮುಖ್ಯ. ಪಿಎಂ ಕಿಸಾನ್ ಸಮ್ಮಾನ್ ನಿಧಿ  ವೆಬ್‌ಸೈಟ್‌ನಲ್ಲಿ ಎಲ್ಲಾ ಫಲಾನುಭವಿಗಳು ಇ-ಕೆವೈಸಿ ಮಾಡುವುದು ಅವಶ್ಯಕ ಎಂಬ ಮಾಹಿತಿ ನೀಡಲಾಗಿದೆ.

ಅದನ್ನು ರೈತರು ಆನ್‌ಲೈನ್ ಅಥವಾ ಆಫ್‌ಲೈನ್‌ ಹೀಗೆ  ಯಾವುದೇ ರೀತಿಯಲ್ಲಿ ಮಾಡಿಸಬಹುದು. ಇ-ಕೆವೈಸಿ ಪ್ರಕ್ರಿಯೆ ಪೂರ್ಣಗೊಳಿಸದೆ ಹೋದರೆ ಖಾತೆಗೆ ಪಿಎಂ ಕಿಸಾನ್ ಹಣ ಬರುವುದಿಲ್ಲ. ಹಾಗಾಗಿ ನಿಮ್ಮ ಖಾತೆಗೆ ಪಿಎಂ ಕಿಸಾನ್ ೧೧ನೇ ಕಂತು ಬರುತ್ತದೆಯೇ ಇಲ್ಲವೇ ಎನ್ನುವುದನ್ನು  ಪರಿಶೀಲಿಸಿಕೊಳ್ಳಿ.

ರೈತರಿಗೆ ಗುಡ್ ನ್ಯೂಸ್: ಸರ್ಕಾರಿ ಭೂಮಿಯಲ್ಲಿ ಕೃಷಿ: ಕೃಷಿ ಆಕಾಂಕ್ಷಿಗಳಿಗೆ ವರದಾನ ಈ ಯೋಜನೆ

PM ಉಚಿತ ಹೊಲಿಗೆ ಯಂತ್ರ ಯೋಜನೆ; ಒಂದು ಅರ್ಜಿ ಸಲ್ಲಿಸಿ ಉಚಿತ ಹೊಲಿಗೆ ಯಂತ್ರ ಪಡೆಯಿರಿ..! ಈಗಲೇ ಅರ್ಜಿ ಸಲ್ಲಿಸಿ

PM Kisan  ಯೋಜನೆಯ ಪ್ರಯೋಜನ ಯಾರು ಪಡೆಯುತ್ತಾರೆ?

ತಮ್ಮ ಹೆಸರಿನಲ್ಲಿ ಸಾಗುವಳಿ ಭೂಮಿ ಹೊಂದಿರುವ ಎಲ್ಲಾ ಭೂಮಾಲೀಕ ರೈತ ಕುಟುಂಬಗಳು ಈ ಯೋಜನೆಯ ಲಾಭವನ್ನು ಪಡೆಯುತ್ತಾರೆ. ಅವರು ಈ ಯೋಜನೆಯ ಲಾಭ ಪಡೆಯಲು ಅರ್ಹರಾಗಿದ್ದಾರೆ.

PM-KISAN ಯೋಜನೆಯ ಲಾಭವನ್ನು ಯಾರು ಪಡೆಯುವುದಿಲ್ಲ?

ಆರ್ಥಿಕವಾಗಿ ಸಬಲರಾಗಿರುವವರು ಮತ್ತು ಯಾವುದೇ ರೀತಿಯ ಕೊರತೆಯಿಲ್ಲದವರು ಈ ಯೋಜನೆಯಿಂದ ವಂಚಿತರಾಗಿದ್ದಾರೆ. ಈ ಯೋಜನೆಯ ಪ್ರಯೋಜನವನ್ನು ಮೊದಲು ಅಥವಾ ಪ್ರಸ್ತುತ ಸಾಂವಿಧಾನಿಕ ಹುದ್ದೆಗಳಲ್ಲಿ ಕೆಲಸ ಮಾಡುವ ಜನರಿಗೆ ನೀಡಲಾಗುವುದಿಲ್ಲ.

ಗುಡ್ ನ್ಯೂಸ್; 10 ಲಕ್ಷ ಹುದ್ದೆಗಳ ಭರ್ತಿ ಮಾಡಿಕೊಳ್ಳಲು ಕೇಂದ್ರ ಸರ್ಕಾರ ನಿರ್ಧಾರ..!

ಗುಡ್‌ನ್ಯೂಸ್‌: 40 ವರ್ಷ ಮೇಲ್ಪಟ್ಟವರಿಗೆ ಸರ್ಕಾರದಿಂದ ಪ್ರತಿ ತಿಂಗಳು ದೊರೆಯಲಿದೆ ₹1000 ..! ಅರ್ಜಿ ಸಲ್ಲಿಕೆ ಹೇಗೆ?

Published On: 20 June 2022, 09:36 AM English Summary: PM Kisan Next Installment Day

Share your comments

Latest feeds

More News
Krishi Jagran Kannada Magazine Subscription Online Subscription

CopyRight - 2024 Krishi Jagran Media Group. All Rights Reserved.