1. ಸುದ್ದಿಗಳು

PM Kisan 14 ನೇ ಕಂತು ಯಾವಾಗ ಬರುತ್ತೆ? ನಿಮಗೆ ಹಣ ಬರುತ್ತೆ, ಇಲ್ಲವೋ ತಿಳಿಯೋದು ಹೇಗೆ..?

Maltesh
Maltesh
PM Kisan 14 installment latest update

ಪ್ರಧಾನ ಮಂತ್ರಿ ಕಿಸಾನ್‌ ಸಮ್ಮಾನ್‌ ಯೋಜನೆಯ 14ನೇ ಕಂತಿಗೆ ನೀರಿಕ್ಷೆ ಶುರುವಾಗಿದೆ. ಜನವರಿಯಲ್ಲಿ ಬೆಳಗಾವಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು, ದೇಶದ 11 ಕೋಟಿ ಫಲಾನುಭವಿಗಳಿಗೆ ಪಿಎಂ ಕಿಸಾನ್‌ ಸಮ್ಮಾನ್‌ ಹಣವನ್ನು ಡಿಬಿಟಿ ಮೂಲಕ ವರ್ಗಾವಣೆ ಮಾಡಿತ್ತು.

ಇದೀಗ 14 ನೇ ಕಂತಿನ ಪಿಎಂ ಕಿಸಾನ್‌ ಹಣ ಯಾವಾಗ ಬರುತ್ತದೆ ಎಂದು ಕೋಟ್ಯಾಂತರ ರೈತರು ಕಾಯುತ್ತಿದ್ದಾರೆ. ಸದ್ಯ ಈ ಕುರಿತು ಮಾಹಿತಿಯೊಂದು ಹರಿದಾಡುತ್ತಿದ್ದು ಪಿಎಂ ಕಿಸಾನ್‌ ಹಣ ರಿಲೀಸ್‌ ಡೇಟ್‌ ಫಿಕ್ಸ್‌ ಎನ್ನಲಾಗುತ್ತಿದೆ.

ಈ ತಾರೀಖಿನಂದು ಖಾತೆ ಸೇರುತ್ತೆ ಹಣ

ಕಳೆದ ಬಾರಿ ಮೇ 31 ಕ್ಕೆ ಪಿಎಂ ಕಿಸಾನ್‌ 11ನೇ ಕಂತಿನ ಹಣ ರಿಲೀಸ್‌ ಮಾಡಲಾಗಿತ್ತು. ಈ ತಾರೀಖಿನ ಲೆಕ್ಕಾಚಾರದ ಮೇಲೆ ಈ ತಿಂಗಳ ಕೊನೆಯಲ್ಲಿ ಪಿಎಂ ಕಿಸಾನ್‌ ಹಣ ರಿಲೀಸ್‌ ಆಗುವುದು ಕನ್ಫರ್ಮ್‌ ಎಂದು ಹೇಳಲಾಗುತ್ತಿದೆ. ಕೃಷಿ ಸಚಿವಾಲಯದ ಮೂಲಗಳು ಹೇಳಿಕೊಂಡಿವೆ ಎಂದು ವರದಿಗಳಾಗಿವೆ.

ನಿಮಗೆ 14ನೇ ಕಂತು ಸಿಗುತ್ತೇ ಇಲ್ವಾ ಚೆಕ್‌ ಮಾಡಿ

ನಿಮಗೆ 14ನೇ ಕಂತು ಸಿಗುತ್ತದೋ ಇಲ್ಲವೋ ಎಂಬುದನ್ನು ಹೀಗೆ ತಿಳಿದುಕೊಳ್ಳಿ 14 ನೇ ಕಂತಿನ ಫಲಾನುಭವಿಗಳ ಪಟ್ಟಿಯಲ್ಲಿ ಅವರ ಹೆಸರನ್ನು ಕಂಡುಹಿಡಿಯಲು, ಫಲಾನುಭವಿ ರೈತರು ರೈತರ ಅಧಿಕೃತ ವೆಬ್‌ಸೈಟ್ Pmkisan.gov.in ಗೆ ಭೇಟಿ ನೀಡಬೇಕು. ಅದರ ನಂತರ ವೆಬ್‌ಸೈಟ್‌ನ ಬಲಭಾಗದಲ್ಲಿ ನೀಡಲಾದ 'ಬೆನಿಫಿಶಿಯರಿ ಸ್ಟೇಟಸ್' ಮೇಲೆ ಕ್ಲಿಕ್ ಮಾಡಿ.

ಇದನ್ನು ಕ್ಲಿಕ್ ಮಾಡಿದಾಗ, ರೈತರು ತಮ್ಮ ಮೊಬೈಲ್ ಸಂಖ್ಯೆಯನ್ನು ನಮೂದಿಸಬೇಕಾಗುತ್ತದೆ. ಅಇದಲ್ಲದೆ, ರೈತರು ಯೋಜನೆಯ ನೋಂದಣಿ ತಮ್ಮ ಆಧಾರ್‌ ಸಂಖ್ಯೆಯನ್ನು ಸಹ ನಮೂದಿಸಬಹುದು. ನಂತರ ಪರದೆಯ ಮೇಲೆ ನಮೂದಿಸಲಾದ ಕ್ಯಾಪ್ಚಾ ಕೋಡ್ ಅನ್ನು ನಮೂದಿಸಬೇಕು. ಈ ಪ್ರಕ್ರಿಯೆಯನ್ನು ಮಾಡಿದ ನಂತರ, ಅಲ್ಲಿ ಬರೆದಿರುವ ಸಬ್ಮಿಟ್ ಬಟನ್ ಅನ್ನು ಕ್ಲಿಕ್‌ ಮಾಡಬೇಕು. ಅದರ ಮೇಲೆ ಕ್ಲಿಕ್ ಮಾಡುವುದರ ಮೂಲಕ, ನೀವು 14 ನೇ ಕಂತಿಗೆ ಅರ್ಹರಾಗಿದ್ದೀರಾ ಅಥವಾ ಇಲ್ಲದಿದ್ದರೂ ಫಲಾನುಭವಿಯ ಸಂಪೂರ್ಣ ವಿವರಗಳು ನಿಮ್ಮ ಪರದೆಯ ಮೇಲೆ ಗೋಚರಿಸುತ್ತವೆ.

Published On: 11 May 2023, 02:54 PM English Summary: PM Kisan 14 installment latest update

Share your comments

Latest feeds

More News
Krishi Jagran Kannada Magazine Subscription Online Subscription

CopyRight - 2024 Krishi Jagran Media Group. All Rights Reserved.