ಪಿಎಂ ಕಿಸಾನ್ ಸಮ್ಮಾನ್ ನಿಧಿಯ 11 ನೇ ಕಂತನ್ನು ಮೇ 31 ರಂದು ರೈತರ ಖಾತೆಗೆ ವರ್ಗಾಯಿಸಲಾಗಿದೆ. ನಿಮಗೆ ಇನ್ನೂ ಹಣ ಬರದ ಇದ್ದರೆ ಕೂಡಲೇ ಪರಿಶೀಲಿಸಿ.
ಇದನ್ನೂ ಓದಿರಿ: Asani Cyclone ನ ಕಾರಣ ಕರ್ನಾಟದಲ್ಲಿ ಇನ್ನೂ ಮೂರು ದಿನ ಭಾರೀ ಮಳೆ ಸಾಧ್ಯತೆ!
PM Sinchayi: ರೈತರಿಗೆ ಇಲ್ಲಿದೆ ಭರ್ಜರಿ ಸಬ್ಸಿಡಿ: ನೀರಾವರಿ ಯೋಜನೆಗೆ ಶೇ.90ರಷ್ಟು ಸಹಾಯಧನ
ಪಿಎಂ ಕಿಸಾನ್ ಸಮ್ಮಾನ್ ನಿಧಿಯ 11 ನೇ ಕಂತನ್ನು ಮೇ 31 ರಂದು ರೈತರ ಖಾತೆಗೆ ವರ್ಗಾಯಿಸಲಾಗಿದೆ. ಈ ಬಾರಿ ನಿಮ್ಮ ಖಾತೆಗೆ ಕಂತು ಹಣ ಬರುತ್ತದೋ ಇಲ್ಲವೋ ಎಂಬುದನ್ನು ಮೊದಲೇ ಪರಿಶೀಲಿಸುವುದು ಮುಖ್ಯವಾಗಿತ್ತು. ಈಗಲೂ ಪರಿಶೀಲಿಸಿ ಬರದೆ ಇದ್ದರೆ ಸೂಕ್ತ ಕ್ರಮದ ಮೂಲಕ ಪಡೆಯಬಹುದು.
ದೇಶದ ರೈತರನ್ನು ಆರ್ಥಿಕವಾಗಿ ಸದೃಢರನ್ನಾಗಿಸಲು ಕೇಂದ್ರ ಸರ್ಕಾರವು ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿಯನ್ನು ಘೋಷಿಸಿದೆ. ಇದರಲ್ಲಿ ಈವರೆಗೆ 10 ಕಂತುಗಳನ್ನು ಫಲಾನುಭವಿ ರೈತರ ಖಾತೆಗೆ ವರ್ಗಾಯಿಸಲಾಗಿತ್ತು.
ಈ ಸಲ 11ನೇ ಕಂತನ್ನು ಮೇ 31 ರಂದು ಖಾತೆಗಳಿಗೆ ಕಳುಹಿಸಲಾಗಿದೆ. 11 ನೇ ಕಂತಿನ ಮೊದಲು ಇ-ಕೆವೈಸಿ ಪ್ರಕ್ರಿಯೆಯನ್ನು ಪೂರ್ಣಗೊಳಿಸಲು ರೈತರಿಗೆ ಸೂಚಿಸಲಾಗಿತ್ತು ಕೂಡ.
ರಾಜ್ಯ ಸರ್ಕಾರಿ ನೌಕರರಿಗೆ Good News: ವರ್ಷಾಂತ್ಯಕ್ಕೆ ದೊರೆಯಲಿದೆ ಕೇಂದ್ರ ಮಾದರಿ ವೇತನ! ಯಾವಾಗ ದೊರೆಯಲಿದೆ ಗೊತ್ತೆ?
ಆನ್ಲೈನ್ ಅಥವಾ ಆಫ್ಲೈನ್ನಲ್ಲಿ ಮಾಡಿಸಬಹುದು ಇ-ಕೆವೈಸಿ :
ಈ ಬಾರಿ 11ನೇ ಕಂತಿನ 2000 ರೂಪಾಯಿ ನಿಮ್ಮ ಖಾತೆಗೆ ಬರುತ್ತದೋ ಇಲ್ಲವೋ ಎಂಬುದನ್ನು ತಿಳಿದುಕೊಳ್ಳುವುದು ಬಹಳ ಮುಖ್ಯ. ಪಿಎಂ ಕಿಸಾನ್ ಸಮ್ಮಾನ್ ನಿಧಿ ವೆಬ್ಸೈಟ್ನಲ್ಲಿ ಎಲ್ಲಾ ಫಲಾನುಭವಿಗಳು ಇ-ಕೆವೈಸಿ ಮಾಡುವುದು ಅವಶ್ಯಕ ಎಂಬ ಮಾಹಿತಿ ನೀಡಲಾಗಿದೆ.
ಅದನ್ನು ರೈತರು ಆನ್ಲೈನ್ ಅಥವಾ ಆಫ್ಲೈನ್ ಹೀಗೆ ಯಾವುದೇ ರೀತಿಯಲ್ಲಿ ಮಾಡಿಸಬಹುದು. ಇ-ಕೆವೈಸಿ ಪ್ರಕ್ರಿಯೆ ಪೂರ್ಣಗೊಳಿಸದೆ ಹೋದರೆ ಖಾತೆಗೆ ಪಿಎಂ ಕಿಸಾನ್ ಹಣ ಬರುವುದಿಲ್ಲ. ಹಾಗಾಗಿ ನಿಮ್ಮ ಖಾತೆಗೆ ಪಿಎಂ ಕಿಸಾನ್ ೧೧ನೇ ಕಂತು ಬರುತ್ತದೆಯೇ ಇಲ್ಲವೇ ಎನ್ನುವುದನ್ನು ಪರಿಶೀಲಿಸಿಕೊಳ್ಳಿ.
ಕಪ್ಪು ಗೋಧಿಯ ಬಗ್ಗೆ ನಿಮಗೆ ಗೊತ್ತೆ? ಇಲ್ಲಿದೆ ರೈತರಿಗೆ ಲಾಭದಾಯಕ ಕೃಷಿಯ ಐಡಿಯಾ!
ಮೇ ತಿಂಗಳಲ್ಲಿ ಬಿತ್ತನೆ ಮಾಡಬೇಕಾದ ಬೆಳೆಗಳು! ಇದರಿಂದ ರೈತರಿಗಾಗಲಿದೆ ಹೆಚ್ಚಿನ ಲಾಭ
ಈ ರೀತಿ ಪರಿಶೀಲಿಸಿಕೊಳ್ಳಿ :
- ಮೊದಲು ಪ್ರಧಾನ ಮಂತ್ರಿ ಕಿಸಾನ್ ಯೋಜನೆಯ ಅಧಿಕೃತ ವೆಬ್ಸೈಟ್ https://pmkisan.gov.in ಗೆ ಹೋಗಿ .
- ಈಗ 'ಫಾರ್ಮರ್ ಕಾರ್ನರ್' ನಲ್ಲಿ ನೀಡಲಾದ Beneficiary List ಆಯ್ಕೆಯ ಮೇಲೆ ಕ್ಲಿಕ್ ಮಾಡಿ.
- ಇಲ್ಲಿ ಕ್ಲಿಕ್ ಮಾಡಿದಾಗ ತೆರೆಯುವ ವೆಬ್ಪುಟದಲ್ಲಿ, ರಾಜ್ಯ, ಜಿಲ್ಲೆ, ಉಪ ಜಿಲ್ಲೆ, ಬ್ಲಾಕ್ ಮತ್ತು ಗ್ರಾಮದ ಮಾಹಿತಿಯನ್ನು ಕೇಳಲಾಗುತ್ತದೆ.
- ಎಲ್ಲಾ ವಿವರಗಳನ್ನು ಸರಿಯಾಗಿ ಭರ್ತಿ ಮಾಡಿದ ನಂತರ, Get Report ಮೇಲೆ ಕ್ಲಿಕ್ ಮಾಡಿ.
- ಇಲ್ಲಿ ನಿಮ್ಮ ಮುಂದೆ ಒಂದು ಪಟ್ಟಿ ಇರುತ್ತದೆ, ಅದರಲ್ಲಿ ನಿಮ್ಮ ಹೆಸರನ್ನು ನೀವು ಕಾಣಬಹುದು.
- ಪಟ್ಟಿಯಲ್ಲಿ ನಿಮ್ಮ ಹೆಸರಿದ್ದರೆ, ಪಿಎಂ ಕಿಸಾನ್ ನಿಧಿಯ 2000 ರೂ .ನಿಮ್ಮ ಖಾತೆಗೆ ಬರುತ್ತದೆ.
ರೈತರಿಗೆ ಸಿಹಿ ಸುದ್ದಿ: ಮಾರುಕಟ್ಟೆಯಲ್ಲಿ ಗೋಧಿಗೆ ಬಂಪರ್ ಬೆಲೆ: ರೈತರ ಮುಖದಲ್ಲಿ ನಗೆ!
Paddy: ಉತ್ತಮ ಇಳುವರಿ ನೀಡುವ ರೋಗ ನಿರೋಧಕ ಭತ್ತದ ತಳಿಗಳ ಕುರಿತು ಇಲ್ಲಿದೆ ಸಮಗ್ರ ಮಾಹಿತಿ…
Share your comments