1. ಸುದ್ದಿಗಳು

PMFBY: ಬೆಳೆ ವಿಮೆ ನೋಂದಣಿಗೆ ಅರ್ಜಿ ಆಹ್ವಾನ.. 31 ಕೊನೆ ದಿನ!

Kalmesh T
Kalmesh T
PM Fasal Insurance Scheme: Application for Registration of Crop Insurance

2022ನೇ ಸಾಲಿನ ಮುಂಗಾರು ಹಂಗಾಮಿನ ಹವಾಮಾನ ಆಧಾರಿತ ಬೆಳೆ ವಿಮೆ ನೋಂದಣಿಗೆ ಅರ್ಜಿ ಆಹ್ವಾನಿಸಲಾಗಿದೆ.

ಇದನ್ನೂ ಓದಿರಿ: 

ರೈತರಿಗೆ ರೂ.1,25,000 ಭರ್ಜರಿ ಸಹಾಯಧನ: ವಿವಿಧ ಕೃಷಿ ಚಟುವಟಿಕೆಗೆ ಈ ಸಬ್ಸಿಡಿ!

ರೈತರಿಗೆ ಸಿಹಿಸುದ್ದಿ: ಸಿರಿಧಾನ್ಯ ಬೆಳೆಗಾರರಿಗೆ ರಾಜ್ಯ ಸರ್ಕಾರ ನೀಡುತ್ತಿದೆ ₹10,000 ಸಬ್ಸಿಡಿ..!

2022ನೇ ಸಾಲಿನ ಮುಂಗಾರು ಹಂಗಾಮಿನ ಮರು ವಿನ್ಯಾಸಗೊಳಿಸಲಾದ ಹವಾಮಾನ ಆಧಾರಿತ ಬೆಳೆ ವಿಮೆ ಯೋಜನೆ ವ್ಯಾಪ್ತಿಗೆ ಕೋಲಾರ ಜಿಲ್ಲೆಯ ಎಲ್ಲ ತಾಲೂಕುಗಳು ಹಾಗೂ ಕರ್ನಾಟಕ ರೈತ ಸುರಕ್ಷಾ ಪ್ರಧಾನ ಮಂತ್ರಿ ಫಸಲ್‌ ಭೀಮಾ ಯೋಜನೆ ವ್ಯಾಪ್ತಿಗೆ ಬಂಗಾರಪೇಟೆ, ಕೆಜಿಎಫ್‌ ಕೋಲಾರ, ಮಾಲೂರು ಮತ್ತು ಮುಳ ಬಾಗಿಲು ತಾಲೂಕುಗಳನ್ನು ಒಳಪಡಿಸಲಾಗಿದೆ.

ವಿಮೆ ಯೋಜನೆಯಡಿ ಮಾವು ಬೆಳೆಗೆ ಪ್ರತಿ ಹೆಕ್ಟೇರ್‌ಗೆ ವಿಮಾ ಮೊತ್ತ 80 ಸಾವಿರಗಳಾಗಿದ್ದು, ಶೇ.5 ರಷ್ಟು ರೈತರು ಪಾವತಿಸಬೇಕಾದ ವಿಮಾಕಂತಿನ ಮೊತ್ತ 4 ಸಾವಿರ ರೂ.ಗಳಾಗಿರುತ್ತದೆ. ಕರ್ನಾಟಕ ರೈತ ಸುರಕ್ಷಾ ಪ್ರಧಾನ ಮಂತ್ರಿ ಫಸಲ್‌ ಭೀಮಾ ಯೋಜನೆಯಡಿ ಟೊಮೇಟೊ ಬೆಳೆಗೆ ಪ್ರತಿ ಹೆಕ್ಟೇರ್‌ಗೆ ವಿಮಾ ಮೊತ್ತ 11,8000 ರೂ.ಗಳಾಗಿದ್ದು, ರೈತರು ಪಾವತಿಸಬೇಕಾದ ವಿಮಾಕಂತಿನ ಮೊತ್ತ 5,900 ರೂ. ಆಗಿದೆ.

ಈ ಯೋಜನೆಯಲ್ಲಿ ಕೃಷಿ ಹೊಂಡ ನಿರ್ಮಾಣಕ್ಕೆ ಸಿಗಲಿದೆ ಬರೋಬ್ಬರಿ 37,500 ರೂ ಸಬ್ಸಿಡಿ

ಮಿನಿ ಟ್ರ್ಯಾಕ್ಟರ್, ಟಿಲ್ಲರ್ ಖರೀದಿಗೆ ಸಿಗಲಿದೆ ಬರೋಬ್ಬರಿ ಶೇ. 90 ರಷ್ಟು ಸಬ್ಸಿಡಿ..!

ಜುಲೈ 31 ಕೊನೆಯ ದಿನ

ಜಿಲ್ಲೆಯಲ್ಲಿ ಬೆಳೆ ಸಾಲ ಪಡೆದ ರೈತರು ಹಾಗೂ ಸಾಲಪಡೆಯದ ರೈತರು ನೋಂದಣಿ ಮಾಡಿಕೊಳ್ಳಬಹುದಾಗಿದ್ದು, ಆಯಾ ತಾಲೂಕಿಗೆ ಸಂಬಂಧಪಟ್ಟ ವಿಮೆ ಮಾಡಿಸುವ ರೈತರು ನಿಗದಿತ ಅರ್ಜಿಯೊಂದಿಗೆ ಪಹಣಿ, ಬ್ಯಾಂಕ್‌ ಖಾತೆ ಪಾಸ್‌ ಪುಸ್ತಕ, ಆಧಾರ ಕಾರ್ಡ್‌ ನಕಲು ಪತ್ರಿಗಳನ್ನು ಮತ್ತು ಸ್ವಯಂ ಘೋಷಿತ ಬೆಳೆ ವಿವರಗಳನ್ನು ಲಗತ್ತಿಸಬೇಕು.

ಆಯಾ ತಾಲೂಕಿನ ಯಾವುದಾದರೂ ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿ(ಖಾತೆ ಹೊಂದಿರುವ ಬ್ಯಾಂಕ್‌) ಮಾವು ಮತ್ತು ಟೊಮೇಟೊ ಬೆಳೆಗಳಿಗೆ ಜುಲೈ 31 ರೊಳಗಾಗಿ ನೋಂದಾಯಿಸಿಕೊಳ್ಳಬಹುದು. ಹೆಚ್ಚಿನ ಮಾಹಿತಿಗೆ ಇವರನ್ನು ಸಂಪರ್ಕಿಸಿ:  9448949104, ಕೋಲಾರ ತಾ. ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರ ದೂರವಾಣಿ ಸಂಖ್ಯೆ.

ಈ ಯೋಜನೆಗೆ ಕೆಲ ಷರತ್ತುಗಳು?

ಮೇಲೆ ತಿಳಿಸಲಾದ ಅರ್ಹತಾ ಮಾನದಂಡದ ಅಡಿ ಒಳಗೊಳ್ಳದವರು ಈ ಯೋಜನೆಗೆ ಅರ್ಹತೆ ಹೊಂದಲಾರರು. ಅದಲ್ಲದೇ ಈ ಕೆಳಗಿನ ಸಂದರ್ಭಗಳೂ ಅನರ್ಹತೆಗೆ ಕಾರಣವಾಗುತ್ತದೆ:

* ಯುದ್ಧ ಅಥವಾ ಪರಮಾಣು ವಿಕಿರಣಗಳ ಅಪಾಯದಿಂದಾಗುವ ಬೆಳೆ ಹಾನಿ

* ಗಲಭೆಗಳಿಂದಾಗುವ ಬೆಳೆ ಹಾನಿ   * ಕಳ್ಳತನ ಅಥವಾ ಪ್ರಾಣಿಗಳ ಮೇಯುವಿಕೆಯಿಂದಾಗುವ ಬೆಳೆ ಹಾನಿ

PM Sinchayi: ರೈತರಿಗೆ ಇಲ್ಲಿದೆ ಭರ್ಜರಿ ಸಬ್ಸಿಡಿ: ನೀರಾವರಿ ಯೋಜನೆಗೆ ಶೇ.90ರಷ್ಟು ಸಹಾಯಧನ

ರೈತರಿಗೆ ಸಿಹಿಸುದ್ದಿ : ಹಸು-ಎಮ್ಮೆ ಖರೀದಿಗೆ ರೂ.20 ಸಾವಿರ ಸಬ್ಸಿಡಿ! ರಾಜ್ಯ ಸರ್ಕಾರದ ಭರ್ಜರಿ ಕೊಡುಗೆ!

ಅರ್ಜಿ ಸಲ್ಲಿಕೆ ಹೇಗೆ?

ಈ ಯೋಜನೆಗೆ ಅರ್ಜಿ ಸಲ್ಲಿಸುವ ಪ್ರಕ್ರಿಯೆ ಬಹಳ ಸರಳವಾಗಿದೆ ಮತ್ತು ರೈತರು ಈ ಕೆಳಕಾಣಿಸಿದ ಹಂತಗಳನ್ನು ಅನುಸರಿಸುವ ಮೂಲಕ ಸುಲಭವಾಗಿ ಅರ್ಜಿ ಸಲ್ಲಿಸಬಹುದು.

ಪ್ರಧಾನ ಮಂತ್ರಿ ಫಸಲ್ ಬೀಮಾ ಯೋಜನೆಯ ವೆಬ್ಸೈಟ್ ಗೆ ಲಾಗಿನ್ ಆಗಬೇಕು. ವೆಬ್‌ಸೈಟ್‌ ಲೋಡ್ ಅದ ನಂತರ ರೈತರ ಅರ್ಜಿ ಸಲ್ಲಿಸುವ ವಿಭಾಗಕ್ಕೆ ಹೋಗಿ.

ಅದು ನಿಮ್ಮನ್ನು ಅರ್ಜಿಸಲ್ಲಿಸುವ ಪುಟಕ್ಕೆ ನಿರ್ದೇಶಿಸುತ್ತದೆ. ಮುಂದಿನ ಪುಟದಲ್ಲಿ ಬರುವ ಅಪ್ಲಿಕೇಶನ್ ನಲ್ಲಿ ವಿವರ ತುಂಬಬೇಕು.

ಗುಡ್‌ ನ್ಯೂಸ್‌: ಸಾವಯವ ಕೃಷಿಕರಿಗೆ ಇಲ್ಲಿದೆ ಬರೋಬ್ಬರಿ ರೂ.50,000 ಸಬ್ಸಿಡಿ!

ರೈತರಿಗೆ ರೂ.1,25,000 ಭರ್ಜರಿ ಸಹಾಯಧನ: ವಿವಿಧ ಕೃಷಿ ಚಟುವಟಿಕೆಗೆ ಈ ಸಬ್ಸಿಡಿ!

ಮೂಲತಃ ಈ ಪುಟದಲ್ಲಿ ತಮ್ಮ ವೈಯುಕ್ತಿಕ ವಿವರಗಳನ್ನು ಹಾಗೂ ಬ್ಯಾಂಕ್ ಖಾತೆಯ ವಿವರಗಳನ್ನು ನಮೂದಿಸಲು ಕೇಳಲಾಗುತ್ತದೆ.

ನಂತರ ಪುಟದ ಕೆಳಭಾಗದಲ್ಲಿರುವ ಉಳಿಸಿ ಹಾಗೂ ಮುಂದುವರಿಯಿರಿ (click and save) ಬಟನ್‌ ಒತ್ತಿ ವಿವರ ನಮೂದಿಸಬೇಕು.

ಜಮೀನಿನ ವಿವರಗಳನ್ನು ಭರ್ತಿ ಮಾಡಿ, ನಿಗದಿತ ಪ್ರೀಮಿಯಂ ಮೊತ್ತ ಪಾವತಿಸಿದ ನಂತರ ನಿಮ್ಮ ಅರ್ಜಿಗಾಗಿ ಒಂದು ಟ್ರಾಕಿಂಗ್ ಸಂಖ್ಯೆ (tracking no.) ಬರುತ್ತದೆ.

ಇದನ್ನು ನಿಮ್ಮ ಅರ್ಜಿಯ ಸ್ಥಿತಿ ಅರಿಯಲು ಉಪಯೋಗಿಸಬಹುದು. ಯಾವುದಾರರೂ ತಪ್ಪುಗಳು ಅಥವಾ ಬದಲಾವಣೆ ಮಾಡಬೇಕಾದ ಸಂದರ್ಭವಿದ್ದರೆ ಅರ್ಜಿಯನ್ನು ನಂತರವೂ ಮಾರ್ಪಡಿಸಬಹುದು.

Published On: 22 May 2022, 04:56 PM English Summary: PM Fasal Insurance Scheme: Application for Registration of Crop Insurance

Share your comments

Latest feeds

More News
Krishi Jagran Kannada Magazine Subscription Online Subscription

CopyRight - 2024 Krishi Jagran Media Group. All Rights Reserved.