1. ಸುದ್ದಿಗಳು

ಬ್ರೇಕಿಂಗ್‌: ಜುಲೈ 1 ರಿಂದ ದೇಶಾದ್ಯಂತ ಪ್ಲಾಸ್ಟಿಕ್‌ ಬ್ಯಾನ್‌ಗೆ ಮೋದಿ ಸರ್ಕಾರ ನಿರ್ಧಾರ..!

Kalmesh T
Kalmesh T
ಜುಲೈ 1 ರಿಂದ ದೇಶಾದ್ಯಂತ ಪ್ಲಾಸ್ಟಿಕ್‌ ಬ್ಯಾನ್‌ಗೆ ಮೋದಿ ಸರ್ಕಾರ ನಿರ್ಧಾರ..

ದೇಶದಾದ್ಯಂತ ಸಿಂಗಲ್‌ ಯೂಸ್‌ ಬಳಕೆಯ ಪ್ಲಾಸ್ಟಿಕನ್ನು ಬ್ಯಾನ್‌ ಮಾಡಲು ಮೋದಿ ಸರ್ಕಾರ ಕ್ರೀಯಾ ಯೋಜನೆ ರೂಪಿಸಿದೆ. ಜುಲೈ 1 ರಿಂದ ದೇಶಾದ್ಯಂತ ಸಿಂಗಲ್ ಯೂಸ್ ಪ್ಲಾಸ್ಟಿಕ್ ಅನ್ನು ಸಂಪೂರ್ಣವಾಗಿ ನಿಷೇಧಿಸಲಾಗುವುದು ಎಂದು ಮಾಧ್ಯಮ ವರದಿಗಳು ತಿಳಿಸಿವೆ.

ಇದನ್ನೂ ಓದಿರಿ: ಹೈನುಗಾರಿಕೆಯಲ್ಲಿ ಯಶಸ್ಸು ಪಡೆದ ವಿಜಯಪುರದ ಯುವ ರೈತ!

ರೈತರಿಗೆ ಸಿಹಿಸುದ್ದಿ: ಪ್ರತಿ ಜಿಲ್ಲೆಯಲ್ಲೂ ಮಿನಿ "ಫುಡ್‌ ಪಾರ್ಕ್‌" ಸ್ಥಾಪಿಸಲು ನಿರ್ಧಾರ..!

ಇದಕ್ಕಾಗಿ ಪ್ರಧಾನಿ ಮೋದಿ ನೇತೃತ್ವದ ಸರ್ಕಾರ ಕ್ರಿಯಾ ಯೋಜನೆಯನ್ನು ಸಿದ್ಧಪಡಿಸಿದೆ ಎಂದು ಹೇಳಲಾಗುತ್ತಿದೆ. ಯಾವುದೇ ಅಂಗಡಿಯಲ್ಲಿಯೂ ಏಕ ಬಳಕೆಯ ಪ್ಲಾಸ್ಟಿಕ್‌ನಿಂದ ತಯಾರಿಸಿದ ವಸ್ತುಗಳು ಕಂಡುಬಂದರೆ ಅಂತಹವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎನ್ನಲಾಗಿದೆ. 

ದೇಶದಲ್ಲಿ ಸಿಂಗಲ್ ಯೂಸ್ ಪ್ಲಾಸ್ಟಿಕ್ (Single Use Plastic Ban) ವಿರುದ್ಧ ಸರ್ಕಾರ ಕ್ರಿಯಾ ಯೋಜನೆಯನ್ನು ಸಿದ್ಧಪಡಿಸಿದೆ ಎನ್ನಲಾಗಿದೆ. ಒಮ್ಮೆ ಬಳಕೆಯ ಪ್ಲಾಸ್ಟಿಕ್ ಅನ್ನು ನಿಷೇಧಿಸಲು ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ (CPCB) ಕಟ್ಟುನಿಟ್ಟಿನ ನಿಯಮಗಳನ್ನು ಸಿದ್ಧಪಡಿಸಿದೆ ಎನ್ನಲಾಗಿದೆ.

ಹೀಗಾಗಿ ಜುಲೈ 1 ರಿಂದ ಯಾರಾದರು ಸಿಂಗಲ್ ಯೂಸ್  ಪ್ಲಾಸ್ಟಿಕ್ ಅನ್ನು ಮಾರಾಟ ಮಾಡಿದರೆ ಅಥವಾ ಬಳಸಿದರೆ ಅಂತಹವರ ವಿರುದ್ಧ ಕಠಿಣ ಕ್ರಮ ಜರುಗಿಸಲಾಗುವುದು ಎಂದು ಸಿಪಿಸಿಬಿ ಸ್ಪಷ್ಟವಾಗಿ ಹೇಳಿದೆ.

ಇದಕ್ಕಾಗಿ ಸಿಪಿಸಿಬಿ ಒಮ್ಮೆ ಬಳಕೆಯ ಪ್ಲಾಸ್ಟಿಕ್ ಪಟ್ಟಿಯನ್ನು ಬಿಡುಗಡೆ ಮಾಡಿದ್ದು, ಜುಲೈ 1 ರಿಂದ ಅಬ್ವುಗಳನ್ನು ಸಂಪೂರ್ಣವಾಗಿ ನಿಷೇಧಿಸಲಾಗುವುದು ಎನ್ನಲಾಗಿದೆ. ಈ ಎಲ್ಲಾ ಉತ್ಪನ್ನಗಳಿಗೆ ಪರ್ಯಾಯವಾಗಿ 200 ಕಂಪನಿಗಳು ಬೇರೆ ಉತ್ಪನ್ನಗಳನ್ನು ತಯಾರಿಸುತ್ತಿವೆ ಮತ್ತು ಇದಕ್ಕಾಗಿ ಅವು ತಮ್ಮ ಪರವಾನಗಿಯನ್ನು ನವೀಕರಿಸುವ ಅಗತ್ಯವಿಲ್ಲ ಎಂದು ಹೇಳಿದೆ.

ಹಸು ಸಾಕಾಣಿಕೆಗೆ ₹60,249, ಎಮ್ಮೆ ಸಾಕಾಣಿಕೆಗೆ ₹40,783 ಸಹಾಯಧನ!

ಸಾಫ್ಟ್‌ವೇರ್ ಕೆಲಸ ಬಿಟ್ಟು ಕತ್ತೆ ಸಾಕಾಣಿಕೆ ಆರಂಭ; ಲೀ.ಹಾಲಿಗೆ 7ರಿಂದ 8 ಸಾವಿರ ಆದಾಯ! ಇಲ್ಲಿದೆ ಕಂಪ್ಲೀಟ್ ಡಿಟೇಲ್ಸ್‌..

ಜುಲೈ 1 ರಿಂದ ಈ ಉತ್ಪನ್ನಗಳ ಮೇಲೆ ನಿಷೇಧ

* ಪ್ಲಾಸ್ಟಿಕ್ ಕಡ್ಡಿ ಇರುವ ಇಯರ್ ಬಡ್ಸ್       * ಪ್ಲಾಸ್ಟಿಕ್ ಸ್ಟಿಕ್ ಗಳಿಂದ ತಯಾರಾದ ಆಕಾಶ ಬುಟ್ಟಿಗಳು

* ಪ್ಲಾಸ್ಟಿಕ್ ಧ್ವಜಗಳು   * ಕ್ಯಾಂಡಿ ಸ್ಟಿಕ್     *  ಐಸ್ ಕ್ರೀಮ್ ಸ್ಟಿಕ್   * ಥರ್ಮಾಕೋಲ್

* ಪ್ಲಾಸ್ಟಿಕ್ ಫಲಕಗಳು  *  ಪ್ಲಾಸ್ಟಿಕ್ ಕಪ್   *  ಪ್ಲಾಸ್ಟಿಕ್ ಪ್ಯಾಕಿಂಗ್ ವಸ್ತು

* ಪ್ಲಾಸ್ಟಿಕ್‌ನಿಂದ ಮಾಡಿದ ಆಮಂತ್ರಣ ಪತ್ರಗಳು   * ಸಿಗರೇಟ್ ಪ್ಯಾಕೆಟ್‌ಗಳು

* ಪ್ಲಾಸ್ಟರ್ ಮತ್ತು PVC ಬ್ಯಾನರ್‌ಗಳು (100 ಮೈಕ್ರಾನ್‌ಗಳಿಗಿಂತ ಕಡಿಮೆ)

ಕುರಿ ಸಾಕಾಣಿಕೆಯಲ್ಲಿ ಲಸಿಕೆಗಳ ಮಹತ್ವ..! ನೀವು ಇದರ ಬಗ್ಗೆ ತಿಳಿದಿರಲೇಬೇಕು..

ಮೇಕೆ ಸಾಕಾಣಿಕೆಗೆ ಲಾಭದಾಯಕವಾದ ತಳಿಗಳು ಯಾವು..? ಇಲ್ಲಿದೆ ಮಾಹಿತಿ

ಪ್ಲಾಸ್ಟಿಕ್ ಬಳಕೆ ಮಾಡುವವರ ವಿರುದ್ಧ ಕಠಿಣ ಕ್ರಮ!

ಸಿಪಿಸಿಬಿ ಅಂಗೀಕರಿಸಿದ ಆದೇಶದ ಪ್ರಕಾರ, ಯಾವುದೇ ಅಂಗಡಿಯಲ್ಲಿ ಸಿಂಗಲ್ ಯೂಸ್ ಪ್ಲಾಸ್ಟಿಕ್ ಬಳಸಿದರೆ, ಅಂತಹ ಅಂಗಡಿಗಳ ಟ್ರೇಡ್ ಲೈಸನ್ಸ್ ಅನ್ನು ರದ್ದುಗೊಳಿಸಲಾಗುವುದು ಎಂದು ಹೇಳಲಾಗಿದೆ.

ಮತ್ತೆ ಪರವಾನಗಿ ಪಡೆಯಲು ಅಂಗಡಿ ಮಾಲೀಕರು ದಂಡ ಪಾವತಿಸುವುದರ ಜೊತೆಗೆ ಲೈಸನ್ಸ್ ಗಾಗಿ ಮರು ಅರ್ಜಿಯನ್ನು ಸಲ್ಲಿಸಬೇಕು ಎನ್ನಲಾಗಿದೆ.

Published On: 20 June 2022, 05:03 PM English Summary: Plastic Ban from July 1..

Share your comments

Latest feeds

More News
Krishi Jagran Kannada Magazine Subscription Online Subscription

CopyRight - 2024 Krishi Jagran Media Group. All Rights Reserved.