ರಾಜ್ಯ ಸರ್ಕಾರವು ಸರ್ಕಾರಿ ನೌಕರರಿಗೆ ವೇತನ ಹೆಚ್ಚಳ ಮಾಡುವ ನಿಟ್ಟಿನಲ್ಲಿ ಈಗಾಗಲೇ (7th Pay Commission)
7ನೇ ವೇತನ ಆಯೋಗವನ್ನು ರಚನೆ ಮಾಡಿದ್ದು, ಇದೀಗ ಈ ಪ್ರಕ್ರಿಯೆಯನ್ನು ಚುರುಕುಗೊಳಿಸಿದೆ.
PMFBY | ಬೆಳೆ ಹಾನಿ: ರೈತರಿಗೆ ಫಸಲ್ ಭೀಮಾ ಯೋಜನೆಯಡಿ ₹1,25,662 ಕೋಟಿ ಪಾವತಿ! |Crop Insurance
7ನೇ ವೇತನ (7th Pay Commission) ಆಯೋಗವನ್ನು ಈಗಾಗಲೇ ರಚನೆ ಮಾಡಿದ್ದು, ಕಚೇರಿಗೆ ತಾತ್ಕಾಲಿಕವಾಗಿ ಸ್ಥಳ ನಿಗದಿ ಮಾಡಿದೆ.
ಆಯೋಗಕ್ಕೆ 44 ಹುದ್ದೆಗಳನ್ನು ಸಹ ಸೃಜಿಸಿ ಆದೇಶ ಹೊರಡಿಸಲಾಗಿದೆ.
Heavy Rain| ರಾಜ್ಯದ ವಿವಿಧೆಡೆ ಧಾರಾಕಾರ ಮಳೆ!
ಸರ್ಕಾರದ ಅಧೀನ ಕಾರ್ಯದರ್ಶಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಶೈಲಾ ಆರ್. ಗೊರವರ ಅವರು ಈ ಸಂಬಂಧ ಸುತ್ತೋಲೆ ಹೊರಡಿಸಿದ್ದಾರೆ.
ಸಮಿತಿಯು ಕಾರ್ಯ ನಿರ್ವಹಿಸಲು ಔಷಧ ನಿಯಂತ್ರಣ ಇಲಾಖೆಯ ಜಾಗವನ್ನು ತಾತ್ಕಾಲಿಕವಾಗಿ ನೀಡಬೇಕು ಎಂದು ಸೂಚಿಸಲಾಗಿದೆ.
ರಾಜ್ಯದ ಸರ್ಕಾರಿ ನೌಕರರ ವೇತನ ಪರಿಷ್ಕರಣೆಗಾಗಿ ಏಳನೆಯ ವೇತನ ಆಯೋಗವನ್ನು ರಚಿಸಲಾಗಿದ್ದು, ಆಯೋಗವು ಸುಗುಮವಾಗಿ
ಕಾರ್ಯನಿರ್ವಹಿಸಲು ಸುಸಜ್ಜಿತವಾದ ಕಟ್ಟಡದ ಅವಶ್ಯಕತೆ ಇದೆ. ಈ ಹಿನ್ನೆಲೆಯಲ್ಲಿ ಆಯೋಗವು ಅಧ್ಯಕ್ಷರು,
ಇಬ್ಬರು ಸದಸ್ಯರು ಮತ್ತು ಕಾರ್ಯದರ್ಶಿ ಒಳಗೊಂಡಿದ್ದು, ಅವರುಗಳಿಗೆ ಒಂದು ಸಭಾಂಗಣ ಕೊಠಡಿ, ಪ್ರೇಕ್ಷಕರ ಕೊಠಡಿ ಮತ್ತು
ಆರು ಕೊಠಡಿಗಳ ಅವಶ್ಯಕತೆ ಇದೆ ಎಂದು ಹೇಳಲಾಗಿದೆ.
Urea Fertilizer| ರೈತರಿಗೆ ಸಬ್ಸಿಡಿ ದರದಲ್ಲಿ ಯೂರಿಯಾ ಗೊಬ್ಬರ !
ಸುಸಜ್ಜಿತವಾದ ಕಟ್ಟಡ ಒಳಗೊಂಡ ಕೊಠಡಿಗಳನ್ನು ಮತ್ತು ಇತರೆ ಮೂಲ ಸೌಕರ್ಯಗಳನ್ನು ಒದಗಿಸುವಂತೆ
ಅವಶ್ಯಕತೆ ಇರುವುದರಿಂದ ಹಳೆಯ Drug Controller ಕಚೇರಿಯನ್ನು ತಾತ್ಕಾಲಿಕವಾಗಿ ಆಯೋಗ
ಜಾರಿಯಲ್ಲಿರುವವರೆಗೆ ಬಳಸಿಕೊಳ್ಳಲು ಅವಕಾಶ ಮಾಡಿಕೊಡಬೇಕಾಗಿ ಕೋರಿ ಪ್ರಸ್ತಾವನೆ ಸಲ್ಲಿಸಿರುತ್ತಾರೆ.
PMFBY | ಬೆಳೆ ಹಾನಿ: ರೈತರಿಗೆ ಫಸಲ್ ಭೀಮಾ ಯೋಜನೆಯಡಿ ₹1,25,662 ಕೋಟಿ ಪಾವತಿ! |Crop Insurance
ಔಷಧ ನಿಯಂತ್ರಕರು, ಔಷಧ ನಿಯಂತ್ರಣ ಇಲಾಖೆ ಇವರ ಪತ್ರದಲ್ಲಿ ಬೆಂಗಳೂರು ಔಷಧ ಪರೀಕ್ಷಾ ಪ್ರಯೋಗಾಲಯ,
ಕಟ್ಟಡದಲ್ಲಿನ 03ನೇ ಮಹಡಿಯಲ್ಲಿ ಲಭ್ಯವಿರುವ ಸ್ಥಳವಕಾಶದಲ್ಲಿ ಕೇಂದ್ರ ಪುರಸ್ಕೃತ ಯೋಜನೆಯಡಿ ಮಾಡ್ಯೂಲರ್
ಲ್ಯಾಗ್ 3 ವಿಭಾಗಗಳನ್ನು ಸ್ಥಾಪಿಸಲು ಉದ್ದೇಶಿಸಲಾಗಿರುತ್ತದೆ. ಆ ಸಂಬಂಧ ಟೆಂಡರ್ ಪುಕ್ರಿಯೆ ಸಹ ಪ್ರಾರಂಭಿಸಲಾಗಿದೆ.
ಆದ್ದರಿಂದ 3ನೇ ಮಹಡಿಯ ಪೂರ್ವ ಹಾಗೂ ದಕ್ಷಿಣ ಭಾಗದಲ್ಲಿನ ಪೂರ್ವ ಹಾಗೂ ಉತ್ತರಭಾಗದಲ್ಲಿನ
ಈ ಹಿಂದಿನ ಔಷಧ ನಿಯಂತ್ರಕರ ಆಡಳಿತ ವಿಭಾಗದಲ್ಲಿನ ಕೊಠಡಿಗಳನ್ನು
ಮಾತ್ರ ತಾತ್ಕಾಲಿಕವಾಗಿ 7ನೇ ವೇತನ ಆಯೋಗಕ್ಕೆ ನೀಡುವಂತೆ ಸೂಚಿಸಿದ್ದಾರೆ.
Heavy Rain ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತ: ರಾಜ್ಯದ ವಿವಿಧೆಡೆ ಮೂರು ದಿನ ಮಳೆ
Share your comments