ಪಾಕಿಸ್ತಾನದ ಅಂತಾರಾಷ್ಟ್ರೀಯ ವಿಮಾನವೊಂದು ಕರಾಚಿ ವಿಮಾನ ನಿಲ್ದಾಣ ಸಮೀಪ ಪತನಕ್ಕೀಡಾಗಿದ್ದು, ವಿಮಾನದಲ್ಲಿ 91 ಪ್ರಯಾಣಿಕರು ಸೇರಿದಂತೆ 107 ಜನ ಬದುಕುವ ಸಾಧ್ಯತೆಯಿಲ್ಲ ಎನ್ನಲಾಗಿದೆ.
ಕರಾಚಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಎ-320 ವಿಮಾನ ಇಳಿಯುವದಕ್ಕೂ ಕೆಲವೇ ಕ್ಷಣಗಳ ಮುಂಚೆ ವಿಮಾನ ಅಪಘಾತಕ್ಕಿಡಾಗಿದ್ದು, ಅಪಘಾತಕ್ಕೆ ನಿರ್ದಿಷ್ಟ ಕಾರಣ ತಿಳಿದುಬಂದಿಲ್ಲ.
ಕರಾಚಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಎ-320 ವಿಮಾನ ಇಳಿಯುವದಕ್ಕೂ ಕೆಲವೇ ಕ್ಷಣಗಳ ಮುಂಚೆ ವಿಮಾನ ಅಪಘಾತಕ್ಕಿಡಾಗಿದ್ದು, ಅಪಘಾತಕ್ಕೆ ನಿರ್ದಿಷ್ಟ ಕಾರಣ ತಿಳಿದುಬಂದಿಲ್ಲ.
ಕರಾಚಿಯ ಜಿನ್ನಾ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಸಮೀಪ ಈ ಘಟನೆ ನಡೆದಿದೆ. ಆದರೆ ಸಾವು-ನೋವಿನ ಬಗ್ಗೆ ಇನ್ನೂ ಖಚಿತ ಮಾಹಿತಿ ತಿಳಿದುಬಂದಿಲ್ಲ. ವಿಮಾನದಲ್ಲಿರುವ ಯಾರೊಬ್ಬರೂ ಬದುಕುಳಿದಿರುವ ಸಾಧ್ಯತೆಯಿಲ್ಲ ಎನ್ನಲಾಗಿದೆ.
ಇನ್ನೈದು ನಿಮಿಷದಲ್ಲಿ ಇಳಿಯಬೇಕಾಗಿದ್ದ ವಿಮಾನ ದುರಂತ ಅಂತ್ಯ ಕಂಡಾಗ:
ಕರಾಚಿಗೆ ವಿಮಾನ ನಿಲ್ದಾಣದಿಂದಸ್ವಲ್ಪ ದೂರದಲ್ಲಿರುವ ಮಾಲಿರ್ನ ಮಾಡೆಲ್ ಕಾಲೋನಿ ಬಳಿಯ ಜಿನ್ನಾ ಗಾರ್ಡ್ನ್ ವಸತಿ ಪ್ರದೇಶದಲ್ಲಿ ವಿಮಾನ ಅಪಘಾತಕ್ಕೀಡಾಗಿದ್ದರಿಂದ ಮನೆಗಳಿಗೆ ಬೆಂಕಿ ಹತ್ತಿಕೊಂಡಿದೆ. ಜನವಸತಿ ಪ್ರದೇಶದಲ್ಲಿ ವಿಮಾನ ಅಪಘಾತಕ್ಕೀಡಾಗಿರುವುದಿಂದ ಸಾವು-ನೋವಿನ ಸಂಖ್ಯೆ ಹೆಚ್ಚಳವಾಗುವ ಸಾಧ್ಯತೆ ಇದೆ ಎಂದು ಆತಂಕ ವ್ಯಕ್ತಪಡಿಸಲಾಗಿದೆ. ಸದ್ಯ ಸ್ಥಳದಲ್ಲಿ ದಟ್ಟ ಹೊಗೆ ಆವರಿಸಿದ್ದು, ಸಿಬ್ಬಂದಿಯೂ ಸೇರಿದಂತೆ ವಿಮಾನದಲ್ಲಿದ್ದ ಎಲ್ಲಾ 107 ಪ್ರಯಾಣಿಕರು ಸಾವನ್ನಪ್ಪಿರುವ ಶಂಕೆ ವ್ಯಕ್ತವಾಗಿದೆ.
Share your comments