ಪದ್ಮಶ್ರೀ ಪುರಸ್ಕೃತೆ ಸುಕ್ರಜ್ಜಿ ಸದ್ಯ ಅನಾರೋಗ್ಯದ ಕಾರಣ ಆಸ್ಪತ್ರೆಗೆ ದಾಖಲಾಗಿದ್ದಾರೆ. ಕಳೆದ ಮೂರು – ನಾಲ್ಕು ತಿಂಗಳಿನಿಂದ ಸುಕ್ರಜ್ಜಿ ಉಸಿರಾಟದ ಸಮಸ್ಯೆ ಎದುರಿಸುತ್ತಿದ್ದರು.
86 ವರ್ಷಗಳ ಸುಕ್ರಿ ಬೊಮ್ಮಗೌಡ ಅವರು ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದರು. ಈ ಹಿನ್ನೆಲೆಯಲ್ಲಿ ಕೃತಕ ಉಸಿರಾಟದ ಉಪಕರಣದ ಉಪಯೋಗದಲ್ಲಿದ್ದರು.
ಇದನ್ನೂ ಓದಿರಿ:
Bengaluru: ತಲೆ ಎತ್ತಲಿದೆ 85 ಕೋಟಿಯ ಕೆಂಪೆಗೌಡರ ಪ್ರತಿಮೆ: ದೆಹಲಿಯಿಂದ ಬೆಂಗಳೂರಿಗೆ 4 ಸಾವಿರ ಕೆ.ಜಿ ತೂಕದ ಖಡ್ಗ!
ಹಾವೇರಿಯಲ್ಲಿ “ಮೀನು ಹಬ್ಬ” ಆರಂಭ: ವಿಶೇಷ ಆಚರಣೆಯ ಬಗ್ಗೆ ನಿಮಗೆ ಗೊತ್ತೆ! ಇಲ್ಲಿದೆ ಕಂಪ್ಲಿಟ್ ಮಾಹಿತಿ.
ಪದ್ಮಶ್ರೀ ಪುರಸ್ಕೃತೆ, ಸುಪ್ರಸಿದ್ಧ ಜಾನಪದ ಗಾಯಕಿ ಸುಕ್ರಿ ಬೊಮ್ಮಗೌಡ ಉಸಿರಾಟದ ತೊಂದರೆಯಿಂದ ಮಂಗಳೂರಿನ ಕೆಎಂಸಿ (KMC) ಆಸ್ಪತ್ರೆಗೆ ದಾಖಲಾಗಿದ್ದಾರೆ. ಮೂಲಗಳ ಪ್ರಕಾರ ಸುಕ್ರಿ ಬೊಮ್ಮಗೌಡ ಅವರು ಐಸಿಯುನಲ್ಲಿದ್ದು (ICU), ಚಿಕಿತ್ಸೆಗೆ ಸ್ಪಂದಿಸುತ್ತಿದ್ದಾರೆ. ಆದರೆ ಇಂದು ಅವರ ದೇಹಸ್ಥಿತಿಯನ್ನು ಗಮನಿಸಿ ಆಂಜಿಯೋಗ್ರಾಫಿ ಮಾಡುವುದೋ, ಇಲ್ಲವೋ ಎಂದು ವೈದ್ಯರು ನಿರ್ಧರಿಸಲಿದ್ದಾರೆ.
3-4 ತಿಂಗಳಿನಿಂದ 86 ವರ್ಷಗಳ ಸುಕ್ರಿ ಬೊಮ್ಮಗೌಡ ಅವರು ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದರು. ಈ ಹಿನ್ನೆಲೆಯಲ್ಲಿ ಕೃತಕ ಉಸಿರಾಟದ ಉಪಕರಣದ ಉಪಯೋಗದಲ್ಲಿದ್ದರು. ಆದರೆ ಕಳೆದ ನಾಲ್ಕು ದಿನಗಳಿಂದ ಈ ಕೃತಕ ಉಸಿರಾಟ ಉಪಕರಣ ಇದ್ದಾಗ್ಯೂ ಅವರು ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದರು. ಈ ಹಿನ್ನೆಲೆಯಲ್ಲಿ ಅವರನ್ನು ಮಂಗಳೂರಿನ ಕೆಎಂಸಿ ಆಸ್ಪತ್ರೆಗೆ ದಾಖಲಿಸಲಾಗಿದೆ.
FaceBook: ನೀವು ಫೇಸಬುಕ್ ಬಳಸುತ್ತಿದ್ದರೇ ಹುಷಾರ್! ನಿಮ್ಮ ಖಾತೆ ಹ್ಯಾಕ್ ಆಗಿರಬಹುದು
ARU ಸ್ಪೋಟಕ ಮಾಹಿತಿ: ಸಿಗರೇಟ್ ತುಂಡಿನಿಂದ ಸಸ್ಯದ ಮೊಳೆಯುವಿಕೆ ಮೇಲೆ ಪರಿಣಾಮ!
ಸುಕ್ರಿ ಬೊಮ್ಮಗೌಡ ಅವರು ಸುಕ್ರಜ್ಜಿ ಎಂದೇ ಖ್ಯಾತಿ ಗಳಿಸಿದ್ದಾರೆ. ಸುಕ್ರಜ್ಜಿಗೆ ಸುಮಾರು 5000ಕ್ಕಿಂತಲೂ ಹೆಚ್ಚು ಹಾಲಕ್ಕಿ ಹಾಡುಗಳು ಕಂಠಪಾಠವಾಗಿವೆ. ಇವರು ನಾಡೋಜ ಪ್ರಶಸ್ತಿಯನ್ನು ಸಹ ಪಡೆದಿದ್ದಾರೆ. ಕುಡಿತದಿಂದ ಗಂಡ ಸಾವನ್ನಪ್ಪಿದ ಬಳಿಕ ಎಚ್ಚೆತ್ತುಕೊಂಡ ಸುಕ್ರಜ್ಜಿ, 1990 ದಶಕದಲ್ಲಿ ಮದ್ಯ ವಿರೋಧಿ ಆಂದೋಲನವನ್ನು ಪ್ರಾರಂಭಬಿಸಿದರು.
ಇವರಿಗೆ ಕರ್ನಾಟಕ ಜಾನಪದ ಮತ್ತು ಯಕ್ಷಗಾನ ಅಕಾಡಮಿ ಪ್ರಶಸ್ತಿ, ರಾಜ್ಯೋತ್ಸವ ಪ್ರಶಸ್ತಿ, ಜಾನಪದ ಶ್ರೀ ಪ್ರಶಸ್ತಿ, ಸಹ್ಯಾದ್ರಿ ಕನ್ನಡ ಸಂಘದ ಅಡಿಗ ಪ್ರಶಸ್ತಿ, ಮಾಧವ ಪ್ರಶಸ್ತಿ, ನಾಡೋಜ ಪ್ರಶಸ್ತಿ, ಸಂದೇಶ ಕಲಾ ಪ್ರಶಸ್ತಿ, ಆಳ್ವಾಸ್ ನುಡಿಸಿರಿ ಪ್ರಶಸ್ತಿ, ಪದ್ಮಶ್ರೀ ಲಭಿಸಿದೆ.
Share your comments