ಈಗಾಗಲೇ ಜಗತ್ತಿನ ಎಲ್ಲೆಡೆ ರಾಸಾಯನಿಕಯುಕ್ತ ಬೀಜ, ಗೊಬ್ಬರ, ಔಷಧಿ ಹೀಗೆ ಎಲ್ಲವೂ ರಾಸಾಯನಿಕಯುಕ್ತ ಆಗುತ್ತಿದೆ. ಇದರಿಂದ ಜನಸಾಮಾನ್ಯರ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರಲಿದ್ದು ಇದನ್ನು ತಪ್ಪಿಸುವ ನಿಟ್ಟಿನಲ್ಲಿ ಸರ್ಕಾರ ಸಾವಯವ ಕೃಷಿಗೆ ಬೆಂಬಲ ನೀಡುತ್ತಿದೆ. ಪರಂಪರಾಗತ್ ಕೃಷಿ ವಿಕಾಸ ಯೋಜನೆ (Paramparagata Krishi Vikas Yojane) ಆರಂಭಿಸುವ ಮೂಲಕ ಸಾವಯವ ಕೃಷಿ ಮಾಡುವ ರೈತರಿಗೆ ಸಹಾಯ ಧನ ನೀಡುವ ಮೂಲಕ ಇದು ರೈತರನ್ನು ಸಾವಯವದತ್ತ ಸೆಳೆಯುತ್ತಿದೆ.
ಸಾವಯವ ಕೃಷಿಯತ್ತ ರೈತರನ್ನು ಉತ್ತೇಜಿಸುವುದು
ಸಾವಯವ ಕೃಷಿಯತ್ತ ರೈತರನ್ನು ಉತ್ತೇಜಿಸುವುದು ಈ ಯೋಜನೆಯ ಮುಖ್ಯ ಉದ್ದೇಶವಾಗಿದೆ. ಈ ಯೋಜನೆಯಡಿ ರೈತರಿಗೆ ಸಾವಯವ ಕೃಷಿ ಮಾಡಲು ಆರ್ಥಿಕ ನೆರವು ನೀಡಲಾಗುವುದು. ಈ ಯೋಜನೆಯು ಮಣ್ಣಿನ ಗುಣಮಟ್ಟವನ್ನು ಹೆಚ್ಚಿಸುವಲ್ಲಿ ಸಹ ಪ್ರಯೋಜನಕಾರಿಯಾಗಿದೆ.
ಇದನ್ನೂ ಓದಿರಿ:
PM ಕಿಸಾನ್ 11ನೇ ಕಂತು ಕೆಲವೇ ದಿನಗಳು ಬಾಕಿ ಇವೆ..ಈ ಕೆಲಸಗಳನ್ನು ಇಂದೇ ಪೂರ್ಣಗೊಳಿಸಿ
ಪಿಎಂ ಕಿಸಾನ್ : 46 ಲಕ್ಷಕ್ಕೂ ಹೆಚ್ಚು ರೈತರಿಗೆ 2,616 ಕೋಟಿ!
ಇದಲ್ಲದೆ, ಪರಂಪರಾಗತ್ ಕೃಷಿ ವಿಕಾಸ ಯೋಜನೆ (Paramparagata Krishi Vikas Yojane) ಮೂಲಕ, ಸಾವಯವ ಕೃಷಿಯಲ್ಲಿ ಕಡಿಮೆ ಕೀಟನಾಶಕಗಳನ್ನು ಬಳಸುವುದರಿಂದ ರಾಸಾಯನಿಕ ಮುಕ್ತ ಮತ್ತು ಪೌಷ್ಟಿಕ ಆಹಾರವನ್ನು ಉತ್ಪಾದಿಸಲಾಗುತ್ತದೆ. ಪರಂಪರಾಗತ್ ಕೃಷಿ ವಿಕಾಸ ಯೋಜನೆಯು ದೇಶದ ನಾಗರಿಕರ ಆರೋಗ್ಯವನ್ನು ಸುಧಾರಿಸಲು ಕೂಡ ಉಪಯುಕ್ತವಾಗಿದೆ. ಕ್ಲಸ್ಟರ್ ವಿಧಾನದಲ್ಲಿ ಸಾವಯವ ಕೃಷಿ ಉತ್ತೇಜಿಸುವ ಉದ್ದೇಶದಿಂದ ಈ ಯೋಜನೆಯನ್ನು ಸಹ ಪ್ರಾರಂಭಿಸಲಾಗಿದೆ.
ಈ ಯೋಜನೆಯಡಿ ಮಾದರಿ ಸಾವಯವ ಪ್ರಾತ್ಯಕ್ಷಿಕೆ ಗ್ರಾಮೀಣ ಯುವಕರು, ರೈತರು, ಗ್ರಾಹಕರು ಮತ್ತು ವ್ಯಾಪಾರಸ್ಥರು ಸಾವಯವ ಕೃಷಿ ಮಾಡುವಂತೆ ಮಾದರಿ ಸಾವಯವ ತರಗತಿ ಅಧ್ಯಯನ ಸೂಚನೆಯ ಮೂಲಕ ಸಾವಯವ ಕೃಷಿಯ ಆಧುನಿಕ ತಂತ್ರಗಳ ಬಗ್ಗೆ ಅರಿವು ಮೂಡಿಸಲಾಗುವುದು. ಪರಂಪರಾಗತ ಕೃಷಿ ವಿಕಾಸ ಯೋಜನೆ ಮೂಲಕ ಈ ಅರಿವು ಅನುಷ್ಠಾನಗೊಳಿಸಲಾಗುವುದು.
Tractors Subsidy! ಸರ್ಕಾರದಿಂದ ನಿಮಗೆ 50% Tractor ಖರೀದಿಸಲು Subsidy ಸಿಗಲಿದೆ!
ಗುಡ್ ನ್ಯೂಸ್! e-Shram Portalನಲ್ಲಿ ನೋದಾಯಿಸಿಕೊಳ್ಳಿ ಮತ್ತು ಉದ್ಯೋಗ ಪಡೆಯಿರಿ!
Paramparagata Krishi Vikas Yojane ಪ್ರಯೋಜನಗಳು
ಭಾರತ ಸರ್ಕಾರದಿಂದ ಪರಂಪರಾಗತ್ ಕೃಷಿ ವಿಕಾಸ್ ಯೋಜನೆಯನ್ನು ಪ್ರಾರಂಭಿಸಲಾಗಿದೆ. ಮಣ್ಣು ಆರೋಗ್ಯ ಯೋಜನೆಯಡಿ ಈ ಯೋಜನೆ ಆರಂಭಿಸಲಾಗಿದೆ. ಈ ಯೋಜನೆಯ ಮೂಲಕ ಸಾವಯವ ಕೃಷಿ ಮಾಡಲು ರೈತರಿಗೆ ಉತ್ತೇಜನ ನೀಡಲಾಗಿದೆ. ಸಾವಯವ ಕೃಷಿಗೆ ಪ್ರೋತ್ಸಾಹಿಸಲು ರೈತರಿಗೆ ಆರ್ಥಿಕ ನೆರವು ನೀಡಲಾಗುತ್ತಿದೆ.
ಈ ಯೋಜನೆಯು ಸಾಂಪ್ರದಾಯಿಕ ಜ್ಞಾನ ಮತ್ತು ಆಧುನಿಕ ಅಭಿವೃದ್ಧಿಯ ಮೂಲಕ ಸುಸ್ಥಿರ ಮಾದರಿಯ ಕೃಷಿಯನ್ನು ಅಭಿವೃದ್ಧಿಪಡಿಸಲು ಸಹಾಯ ಮಾಡುತ್ತದೆ. ಈ ಯೋಜನೆಯ ಮೂಲಕ ಮಣ್ಣಿನ ಫಲವತ್ತತೆ ಹೆಚ್ಚಿಸಲು ಉತ್ತೇಜನ ನೀಡಲಾಗುವುದು. ಪರಂಪರಾಗತ್ ಕೃಷಿ ವಿಕಾಸ ಯೋಜನೆ ಮೂಲಕ, ಕ್ಲಸ್ಟರ್ ನಿರ್ಮಾಣ, ಸಾಮರ್ಥ್ಯ ವೃದ್ಧಿ, ಒಳಹರಿವು, ಮೌಲ್ಯವರ್ಧನೆ ಮತ್ತು ಮಾರುಕಟ್ಟೆಗೆ ಪ್ರೋತ್ಸಾಹಧನ ನೀಡಲಾಗುವುದು.
ಕಿಸಾನ್ ಕ್ರೆಡಿಟ್ ಕಾರ್ಡ್ ನವೀಕರಣ: ಡೈರಿ ರೈತರಿಗೆ 15 ಲಕ್ಷ ಮಂಜೂರು!
PM ಕಿಸಾನ್ ರೈತರಿಗೆ ಬಿಗ್ ನ್ಯೂಸ್: OTP ಮೂಲಕ ಆಧಾರ್ ಕಾರ್ಡ್ e-KYC ರದ್ದು..
ಕ್ಲಸ್ಟರ್ ವಿಧಾನದಲ್ಲಿ ರಾಸಾಯನಿಕ ಮುಕ್ತ ಸಾವಯವ ಕೃಷಿಯನ್ನು ಉತ್ತೇಜಿಸಲು ಈ ಯೋಜನೆಯನ್ನು 2015-16 ರಲ್ಲಿ ಪ್ರಾರಂಭಿಸಲಾಗಿದೆ. ಪರಪರಾಗತ ಕೃಷಿ ವಿಕಾಸ ಯೋಜನೆಯಡಿ ಸಾವಯವ ಕೃಷಿಗೆ 3 ವರ್ಷಕ್ಕೆ ಪ್ರತಿ ಹೆಕ್ಟೇರ್ಗೆ ₹ 50000 ಧನಸಹಾಯ ನೀಡಲಾಗುವುದು. ಈ ಮೊತ್ತದಲ್ಲಿ ಸಾವಯವ ಗೊಬ್ಬರಗಳು, ಕೀಟನಾಶಕಗಳು, ಬೀಜಗಳು ಇತ್ಯಾದಿಗಳಿಗೆ ಪ್ರತಿ ಹೆಕ್ಟೇರ್ಗೆ ₹31000 ನೀಡಲಾಗುತ್ತದೆ.
ಮೌಲ್ಯವರ್ಧನೆ ಮತ್ತು ವಿತರಣೆಗೆ ₹8800 ನೀಡಲಾಗುವುದು.
ಇದಲ್ಲದೇ ಕ್ಲಸ್ಟರ್ ರಚನೆ ಮತ್ತು ಸಾಮರ್ಥ್ಯ ನಿರ್ಮಾಣಕ್ಕೆ ಪ್ರತಿ ಹೆಕ್ಟೇರ್ಗೆ ₹ 3000 ನೀಡಲಾಗುವುದು. ಈ ಯೋಜನೆಯಡಿ ಲಾಭದ ಮೊತ್ತವನ್ನು ನೇರ ಲಾಭ ವರ್ಗಾವಣೆಯ ಮೂಲಕ ರೈತರ ಖಾತೆಗೆ ನೇರವಾಗಿ ವಿತರಿಸಲಾಗುತ್ತದೆ.
ರೈತರಿಗೆ ಗುಡ್ ನ್ಯೂಸ್: ಸರ್ಕಾರಿ ಭೂಮಿಯಲ್ಲಿ ಕೃಷಿ: ಕೃಷಿ ಆಕಾಂಕ್ಷಿಗಳಿಗೆ ವರದಾನ ಈ ಯೋಜನೆ
Share your comments