1. ಸುದ್ದಿಗಳು

ಮಹದಾಯಿ ಯೋಜನೆಗೆ ವಿರೋಧ: ಗೋವಾದಲ್ಲಿ ನಿರ್ಣಯ

Hitesh
Hitesh
Opposition to Mahadai Yojana: Resolution in Goa

ಕೃಷಿ ಜಾಗರಣ ಅಗ್ರಿ ನ್ಯೂಸ್‌ ಪರಿಚಯಿಸಿದ್ದು, ಇಂದಿನ ಪ್ರಮುಖ ಹಾಗೂ ಕೃಷಿ ಸಂಬಂಧಿಸಿದ ಸುದ್ದಿಗಳ ವಿವರ ಈ ರೀತಿ ಇದೆ.  

ರಾಜ್ಯದಲ್ಲಿ ಹಾಲು ಸಂಗ್ರಹಣೆ ಕುಸಿತ: ಐದು ವರ್ಷಗಳಲ್ಲಿ ಇದೇ ಮೊದಲು

ಕೇಂದ್ರ ಮತ್ತು ರಾಜ್ಯ ಸರ್ಕಾರದಿಂದ 49 ಲಕ್ಷ ರೈತರಿಗೆ ಪಿ.ಎಂ ಕಿಸಾನ್‌ ಆರ್ಥಿಕ ನೆರವು

ಗಣರಾಜ್ಯೋತ್ಸವ ಪೆರೇಡ್‌: ನೌಕಾಪಡೆ ತುಕಡಿಗೆ ಕನ್ನಡತಿ ಸಾರಥಿ

ಭಾರತದ ಮೊದಲ FPO ಕಾಲ್‌ ಸೆಂಟರ್‌ಗೆ ಮಂಗಳವಾರ ಚಾಲನೆ

ರಾಜ್ಯ ಬಜೆಟ್‌ ಮಂಡನೆ: ಇಲಾಖಾವರು ಚರ್ಚೆ

ಮೂರು ರಾಜ್ಯಗಳಲ್ಲಿ ಫಾರ್ಮಾ ಪಾರ್ಕ್: ಕೇಂದ್ರ ಸಚಿವ ಖೂಬಾ

ಶಿವಮೊಗ್ಗದ ಪಶುವೈದ್ಯಕೀಯ ಮಹಾವಿದ್ಯಾಲಯದ ಮುಖ್ಯಸ್ಥ ಡಾ.ಎನ್‌.ಬಿ.ಶ್ರೀಧರ ಅವರಿಗೆ ಗೌರವ ಫೆಲೋಶಿಪ್‌

ಮಹದಾಯಿ ಯೋಜನೆಗೆ ವಿರೋಧ: ಗೋವಾದಲ್ಲಿ ನಿರ್ಣಯ

ದೇಶದಲ್ಲಿ ಗೋಧಿ ಬಿತ್ತನೆ ಪ್ರಮಾಣ ಗಣನೀಯ ಹೆಚ್ಚಳ

ಕೃಷಿ ವಿ.ವಿಗಳು ಕ್ಯಾಂಪಸ್‌ ಬಿಟ್ಟು ಹೊರ ಬರಲಿ: ಸಿ.ಎಂ

ಮೈಸೂರಿನಲ್ಲಿ ಚಿರತೆ ದಾಳಿ: ಮನೆಯಿಂದ ಹೊರ ಬರದಂತೆ ಸೂಚನೆ 

---------------
ರೈತರಿಗೆ ಆರ್ಥಿಕ ನೆರವು ನೀಡುವ ಯೋಜನೆ ಪಿ.ಎಂ‌ ಕಿಸಾನ್ ಸಮ್ಮಾನ್‌ ನಿಧಿ ಯೋಜನೆಯಾಗಿದ್ದು, ಈ ಯೋಜನೆಯಡಿ ಇದುವರೆಗೆ ಕೇಂದ್ರ ಸರ್ಕಾರದಿಂದ 49 ಲಕ್ಷ ರೈತರಿಗೆ 1,251 ಕೋಟಿ ರೂಪಾಯಿ ಆರ್ಥಿಕ ನೆರವು ಬಿಡುಗಡೆ ಮಾಡಲಾಗಿದೆ ಎಂದು ಸರ್ಕಾರ ಮಾಹಿತಿ ನೀಡಿದೆ. ಅದೇ ರೀತಿ ರಾಜ್ಯ ಸರ್ಕಾರದಿಂದಲೂ 47 ಲಕ್ಷ ಕೋಟಿ ರೈತರಿಗೆ 956 ಕೋಟಿ ರೂಪಾಯಿ ಆರ್ಥಿಕ ನೆರವು ನೀಡಲಾಗಿದೆ. ಈ ಆರ್ಥಿಕ ನೆರವನ್ನು ರೈತರಿಗೆ 2022-23ನೇ ಸಾಲಿನಲ್ಲಿ ನೀಡಲಾಗಿದೆ ಎಂದು ಸರ್ಕಾರದ ಪ್ರಕಟಣೆ ತಿಳಿಸಿದೆ.

---------------
ನವದೆಹಲಿಯಲ್ಲಿ ನಡೆಯಲಿರುವ ಗಣರಾಜ್ಯೋತ್ಸವ ಪೆರೇಡ್‌ ನೌಕಾಪಡೆಯ ತುಕಡಿಗೆ ಮಂಗಳೂರಿನ ದಿಶಾ ಅಮೃತ್‌ ಅವರು ಸಾರಥ್ಯ ವಹಿಸಲಿದ್ದಾರೆ. 26ರಂದು ನೌಕಾಪಡೆಯ 144 ಸೈನಿಕರನ್ನು ಒಳಗೊಂಡ ತುಕಡಿ ಹಾಗೂ ಸ್ತಬ್ಧಚಿತ್ರವು ಈ ಕವಾಯತಿನಲ್ಲಿ ನಾರಿಶಕ್ತಿಯನ್ನು ಪ್ರದರ್ಶಿಸಲಿದೆ. ಈ ಅವಕಾಶದ ಕುರಿತು ಪ್ರತಿಕ್ರಿಯಿಸಿರುವ ದಿಶಾ ಅವರು ನಾನು 2008ರಲ್ಲಿ ಎನ್‌ಸಿಸಿ ಕೆಡೆಟ್‌ ಆಗಿ ಗಣರಾಜ್ಯೋತ್ಸವದ ಕವಾಯತಿನಲ್ಲಿ ಭಾಗವಹಿಸಿದ್ದೆ. ಆಗಲೇ ಸೇನಾ ಅಧಿಕಾರಿಯಾಗಿ ಕವಾಯತಿನಲ್ಲಿ ಭಾಗವಹಿಸುವ ಕನಸು ಕಂಡಿದ್ದೆ. ನನ್ನ ಕನಸು ಇದೀಗ ಈಡೇರಿದೆ ಎಂದು ಸಂಭ್ರಮ ಹಂಚಿಕೊಂಡಿದ್ದಾರೆ. 
---------------
ಕೃಷಿ ಜಾಗರಣ ಮತ್ತು AFC ಇಂಡಿಯಾ ಲಿಮಿಟೆಡ್ ಸಹಯೋಗದಲ್ಲಿ ಭಾರತದ ಮೊದಲ FPO ಕಾಲ್ ಸೆಂಟರ್ ಪರಿಚಯಿಸಲಾಗುತ್ತಿದ್ದು, ಮಂಗಳವಾರ ಉದ್ಘಾಟನೆಯಾಗಲಿದೆ. ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ಸಚಿವಾಲಯದ ಮಾರ್ಕೆಟಿಂಗ್‌ ವಿಭಾಗದ ಜಂಟಿ ಕಾರ್ಯದರ್ಶಿ ಐಎಎಸ್‌ ಅಧಿಕಾರಿ ಡಾ. ವಿಜಯಲಕ್ಷ್ಮಿ ನಾದೆಂದ್ಲಾ ಅವರು ಭಾಗವಹಿಸಲಿದ್ದಾರೆ. ಎಫ್‌ಪಿಒ ಅಂದರೆ ರೈತ ಉತ್ಪಾದಕ ಸಂಸ್ಥೆಗಳು ತಮ್ಮ ಸಂಸ್ಥೆಯ ಸುಗಮ ಕಾರ್ಯನಿರ್ವಹಣೆಗೆ ಉತ್ತಮ ಪರಿಹಾರಗಳನ್ನು ಕಂಡುಕೊಳ್ಳುವ ಉದ್ದೇಶದಿಂದ ಈ ಕಾಲ್‌ ಸೆಂಟರ್‌ ಪರಿಚಯಿಸಲಾಗುತ್ತಿದೆ. ಇದು ರೈತರು ಹಾಗೂ ಕೃಷಿ ಉತ್ಪಾದಕರ ನಡುವೆ ಕೊಂಡಿಯಾಗಿ ಕಾರ್ಯನಿರ್ವಹಿಸಲಿದೆ. ಅಲ್ಲದೇ ಕೃಷಿ ಹಾಗೂ ಕೃಷಿಗೆ ಪೂರಕವಾದ ವ್ಯಾಪಾರ ಯೋಜನೆ, ROC- ಸಂಬಂಧಿತ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವುದು, ಉತ್ಪಾದನೆ, ಸಂಗ್ರಹಣೆ, ಹಣಕಾಸು ನಿರ್ವಹಣೆ, ದಸ್ತಾನು ಸಂಗ್ರಹಣೆ ಮತ್ತು ಸಂಸ್ಕರಣೆ ಮುಂತಾದ ಸಮಸ್ಯೆಗಳಿಗೆ ಮಾರ್ಗದರ್ಶನ ನೀಡುವ ಉದ್ದೇಶದಿಂದ ಎಫ್‌ಪಿಒ ಪರಿಚಯಿಸಲಾಗುತ್ತಿದೆ.  

--------------- 

ರಾಜ್ಯ ಸರ್ಕಾರದಿಂದ 33 ಲಕ್ಷ ರೈತರಿಗೆ ಶೂನ್ಯ ಬಡ್ಡಿ ದರದಲ್ಲಿ ಸಾಲ

ಪ್ರಸಕ್ತ ಸಾಲಿನ ಬಜೆಟ್‌ ಅಂತಿಮಗೊಳಿಸುವುದಕ್ಕಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಶನಿವಾರ ಇಲಾಖಾವಾರು ಚರ್ಚೆ ನಡೆಸಿದರು. ಮೊದಲ ದಿನ ಹಲವು ಇಲಾಖೆಗಳ ಸಚಿವರು ಅಧಿಕಾರಿಗಳ ಜತೆ ಅವರು ಸಮಾಲೋಚನೆ ನಡೆಯಿತು. ಅಲ್ಲದೇ ಮೊದಲ ದಿನ ಆರು ಇಲಾಖೆಗಳಿಗೆ ಸಂಬಂಧಿಸಿದ ಚರ್ಚೆ ಪೂರ್ಣಗೊಂಡಿದೆ. ಉನ್ನತ ಶಿಕ್ಷಣ, ಶಾಲಾ ಶಿಕ್ಷಣ ಮತ್ತು ಸಾಕ್ಷರತೆ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇರಿದಂತೆ ಆರು ಇಲಾಖೆಗಳ ಬೇಡಿಕೆಗಳ ಪಟ್ಟಿಯನ್ನು ಸಚಿವರು, ಅಧಿಕಾರಿಗಳು ಸಲ್ಲಿಸಿದರು. ಕೆಲವು ಇಲಾಖೆಗಳಲ್ಲಿ ಹೊಸ ಯೋಜನೆಗಳ ಅನುಷ್ಠಾನಕ್ಕೆ ಬೇಡಿಕೆ ಸಲ್ಲಿಸಲಾಗಿದೆ ಎನ್ನಲಾಗಿದೆ.

---------------

ಗುಜರಾತ್, ಆಂಧ್ರಪ್ರದೇಶ ಹಾಗೂ ಹಿಮಾಚಲ ಪ್ರದೇಶಗಳಲ್ಲಿ ಫಾರ್ಮಾ ಪಾರ್ಕ್ ಸ್ಥಾಪಿಸಲು ಕೇಂದ್ರ ಸರ್ಕಾರ ಅನುಮತಿ ನೀಡಿದೆ ಎಂದು ಕೇಂದ್ರ ನವೀಕರಿಸಬಹುದಾದ ಇಂಧನ ಮೂಲ, ರಾಸಾಯನಿಕ ಹಾಗೂ ರಸಗೊಬ್ಬರ ಖಾತೆ ರಾಜ್ಯ ಸಚಿವ ಭಗವಂತ ಖೂಬಾ ಹೇಳಿದರು. ಕರ್ನಾಟವೂ ಸೇರಿದಂತೆ ವಿವಿಧ ರಾಜ್ಯಗಳಿಂದ ಫಾರ್ಮಾ ಪಾರ್ಕ್ ಸ್ಥಾಪಿಸಲು ಅರ್ಜಿಗಳು ಸಲ್ಲಿಕೆಯಾಗಿದ್ದವು. ಕರ್ನಾಟಕದ ಯಾದಗಿರಿಯಲ್ಲಿಯೂ ಫಾರ್ಮ್‌ ಪಾರ್ಕ್‌ ಸ್ಥಾಪಿಸಲು  ರಾಜ್ಯ ಸರ್ಕಾರದಿಂದ ಪ್ರಸ್ತಾವನೆ ಸಲ್ಲಿಕೆಯಾಗಿತ್ತು. ರಾಜ್ಯ ಸರ್ಕಾರಗಳು ನೀಡಿದ ಸೌಲಭ್ಯ ಹಾಗೂ ಅನುಕೂಲತೆಗಳನ್ನು ಪರಿಗಣಿಸಿ ನೀತಿ ಆಯೋಗ ಮೂರು ರಾಜ್ಯಗಳನ್ನು ಆಯ್ಕೆ ಮಾಡಿದೆ ಎಂದು ಹೇಳಿದರು. ಇನ್ನು ದೇಶದಲ್ಲಿ ನ್ಯಾನೋ ಗೊಬ್ಬರ ಪ್ರಖ್ಯಾತಿ ಗಳಿಸುತ್ತಿದ್ದು, ರೈತರಲ್ಲಿ ಈ ಕುರಿತು ಜಾಗೃತಿ ಮೂಡಿಸುವ ಅವಶ್ಯಕತೆ ಇದೆ. ನ್ಯಾನೋ ಗೊಬ್ಬರದಿಂದ ಕಡಿಮೆ ವೆಚ್ಚದಲ್ಲಿ ಅಧಿಕ ಇಳುವರಿ ಪಡೆಯಲು ಸಾಧ್ಯವಿದೆ ಎಂದರು. 

---------------

ಶಿವಮೊಗ್ಗ ಪಶುವೈದ್ಯಕೀಯ ಮಹಾವಿದ್ಯಾಲಯದ ಪ್ರಾಧ್ಯಾಪಕ ಮತ್ತು ಮುಖ್ಯಸ್ಥರಾದ ಡಾ.ಎನ್‌.ಬಿ.ಶ್ರೀಧರ ಅವರಿಗೆ ಭಾರತೀಯ ಪಶುವೈದ್ಯಕೀಯ ಔಷಧಶಾತ್ರಜ್ಞರ ಮತ್ತು ವಿಷಶಾಸ್ತ್ರಜ್ಞರ ಸಂಘವು ಫೆಲೋಶಿಪ್ ನೀಡಿ ಗೌರವಿಸಿದೆ. ಪಶುವೈದ್ಯಕೀಯ ಔಷಧಶಾಸ್ತ್ರ ಮತ್ತು ವಿಷಶಾಸ್ತ್ರ ವಿಷಯದಲ್ಲಿ ಸಲ್ಲಿಸಿದ ಸೇವೆಯನ್ನು ಗುರುತಿಸಿ ಈ ಗೌರವ ನೀಡಲಾಗಿದೆ. ಡಾ. ಎನ್‌.ಬಿ. ಶ್ರೀಧರ್‌ ಅವರು ಪಶುವೈದ್ಯಕೀಯ ವಿಭಾಗದಲ್ಲಿ ಹಲವು ಸಾಮಾಜಿಕ ಕೆಲಸಗಳನ್ನು ಮಾಡಿದ್ದಾರೆ. ಅಲ್ಲದೇ ಕೃಷಿ ಜಾಗರಣದೊಂದಿಗೂ ಕೃಷಿ ಹಾಗೂ ಪಶುವೈದ್ಯಕೀಯಕ್ಕೆ ಸಂಬಂಧಿಸಿದ ಮಾಹಿತಿಗಳನ್ನು ಹಂಚಿಕೊಳ್ಳುವ ಮೂಲಕ ರೈತರಿಗೆ ನೆರವಾಗುತ್ತಿದ್ದಾರೆ. ಇದರೊಂದಿಗೆ ವೆಬಿನಾರ್‌, ಫೇಸ್‌ಬುಕ್‌ ಲೈವ್‌ಗಳ ಮೂಲಕ ರೈತರಿಗೆ ಉಪಯುಕ್ತ ಮಾಹಿತಿಯನ್ನು ನೀಡುತ್ತಿದ್ದಾರೆ. ಡಾ.ಎನ್‌.ಬಿ.ಶ್ರೀಧರ ಅವರಿಗೆ ಕೃಷಿ ಜಾಗರಣದ ಪರವಾಗಿಯೂ ತುಂಬು ಹೃದಯದ ಅಭಿನಂದನೆಗಳು.

---------------

ಮಹದಾಯಿ ಯೋಜನೆಯ ಸಮಗ್ರ ಯೋಜನಾ ವರದಿಗೆ ಕೇಂದ್ರ ಜಲ ಆಯೋಗ ಅನುಮೋದನೆ ನೀಡಿರುವುದಕ್ಕೆ ಗೋವಾದಲ್ಲಿ ವಿರೋಧ ಪಕ್ಷಗಳಿಂದ ವಿರೋಧ ವ್ಯಕ್ತವಾಗಿರುವುದರಿಂದ ಈಚೆಗೆ ಗೋವಾದ ವಿಧಾನಸಭೆಯು ಮಹದಾಯಿ ನದಿ ಜಲಾನಯನ ಪ್ರದೇಶದಿಂದ ನೀರನ್ನು ಬೇರೆಡೆಗೆ ತಿರುಗಿಸುವ ಯಾವುದೇ ಪ್ರಯತ್ನವನ್ನು ವಿರೋಧಿಸಲು ಸರ್ವಾನುಮತದ ನಿರ್ಣಯವನ್ನು ತೆಗೆದುಕೊಳ್ಳಲಾಯಿತು. ಸುದೀರ್ಘ ಆರು ಗಂಟೆಗಳ ಚರ್ಚೆಯ ನಂತರ ಗುರುವಾರ ತಡರಾತ್ರಿ ನಿರ್ಣಯವನ್ನು ಅಂಗೀಕರಿಸಲಾಯಿತು. ಪ್ರತಿಯೊಬ್ಬ ಸದಸ್ಯರು ಈ ವಿಷಯದ ಬಗ್ಗೆ ಮಾತನಾಡಿದರು. ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಯೂರಿ ಅಲೆಮಾವೊ ಅವರು ಅಂತರರಾಜ್ಯ ನದಿ ನೀರು ಹಂಚಿಕೆ ವಿಷಯದಲ್ಲಿ ಬಿಜೆಪಿ ರಾಜಕೀಯ ಮಾಡಲು ಪ್ರಯತ್ನಿಸುತ್ತಿದೆ ಎಂದು ಆರೋಪಿಸಿದರೆ, ಗೋವಾದ ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಅವರು ಮಹದಾಯಿ ಜಲ ವಿವಾದ ನ್ಯಾಯಾಧಿಕರಣದ ತೀರ್ಪನ್ನು ನ್ಯಾಯಯುತವಾಗಿ ಜಾರಿಗೆ ತರಲು ಕೇಂದ್ರ ಸರ್ಕಾರ ಮಹದಾಯಿ ನೀರು ನಿರ್ವಹಣಾ ಪ್ರಾಧಿಕಾರ ರಚಿಸಬೇಕೆಂದು ಒತ್ತಾಯಿಸಿದರು.

--------------- 

ಕನ್ನಡಿಗರಿಗೆ ಸಿಹಿಸುದ್ದಿ: ಇನ್ಮುಂದೆ 11,400 ಕೇಂದ್ರ ಸರ್ಕಾರಿ ಹುದ್ದೆಗಳ ಪರೀಕ್ಷೆಯನ್ನು ಕನ್ನಡದಲ್ಲೇ ಬರೆಯಬಹುದು!

ಹಿಂಗಾರಿನ ಪ್ರಮುಖ ಬೆಳೆಯಾದ ಗೋಧಿ ಬಿತ್ತನೆ ಮತ್ತೆ ಏರಿಕೆ ಕಂಡಿದೆ. ಜನವರಿ 20 ರವರೆಗೂ ವಿವಿಧೆಡೆ ಬಿತ್ತನೆ ಕಾರ್ಯ ನಡೆದಿದೆ. ಇದರಿಂದ ಬಿತ್ತನೆ ಪ್ರಮಾಣದಲ್ಲಿ ಏರಿಕೆ ಆಗಿದೆ. ಕೇಂದ್ರ ಕೃಷಿ ಸಚಿವಾಲಯವು ಇತ್ತೀಚೆಗೆ ಬಿಡುಗಡೆ ಮಾಡಿದ ಅಂಕಿ ಅಂಶಗಳ ಪ್ರಕಾರ, 2022-23ರ ಪ್ರಸಕ್ತ ರಾಬಿ ಬೆಳೆಯ ಋತುವಿನಲ್ಲಿ (ಜುಲೈ-ಜೂನ್) ಇದುವರೆಗಿನ ಗೋಧಿ ಬಿತ್ತನೆ 341.13 ಲಕ್ಷ ಹೆಕ್ಟೇರ್‌ಗಿಂತಲೂ ಹೆಚ್ಚಾಗಿದೆ. ಪ್ರಸಕ್ತ ವರ್ಷ ಚಳಿಗಾಲ ಆರಂಭವಾಗುತ್ತಿದ್ದಂತೆ ಗೋಧಿ ಬಿತ್ತನೆ ಅಕ್ಟೋಬರ್‌ನಿಂದ ಆರಂಭವಾಯಿತು. ರಾಬಿ ಬೆಳೆಗಳಾದ ಜೋಳ ಹೆಸರು ಬೇಳೆ ಮತ್ತು ಸಾಸಿವೆ ಇತರ ಪ್ರಮುಖ ರಾಬಿ ಬೆಳೆಗಳು ಏಪ್ರಿಲ್‌ನಲ್ಲಿ ಕೊಯ್ಲಾಗುವ ಸಾಧ್ಯತೆ ಇದೆ.

--------------- 
ರೈತರ ಹೊಲಗಳಲ್ಲಿ ಹಲವು ಸಮಸ್ಯೆಗಳಿವೆ. ಹೀಗಾಗಿ, ಕೃಷಿ ವಿ.ವಿಗಳು ಕ್ಯಾಂಪಸ್‌ನ್ನು ಬಿಟ್ಟು ಹೊರ ಬರಬೇಕು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು. ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆದ ಅಂತರರಾಷ್ಟ್ರೀಯ ಸಿರಿಧಾನ್ಯ ಮತ್ತು ಸಾವಯವ ಮೇಳದಲ್ಲಿ ಅವರು ಮಾತನಾಡಿದರು. ಕೃಷಿಯಲ್ಲಿ ದೊಡ್ಡ ಪ್ರಮಾಣದ ಬದಲಾವಣೆ ಆಗಲಿದೆ. ಹವಾ

ಮಾನದ ಬದಲಾವಣೆಗೆ ಅನುಗುಣವಾಗಿ ಕೃಷಿ ಕ್ಷೇತ್ರ ಸಜ್ಜುಗೊಳಿಸಲು ಕೃಷಿ ವಿಶ್ವವಿದ್ಯಾಲಯಗಳು ಸನ್ನದ್ಧವಾಗಬೇಕು. ಕೃಷಿ ಕ್ಷೇತ್ರದಲ್ಲಿನ ಇಂದಿನ ಸವಾಲುಗಳ ಬಗ್ಗೆ ಸಂಶೋಧನೆಗಳನ್ನು ಮಾಡಬೇಕು. ಹವಾಮಾನ ಬದಲಾವಣೆ, ಮಣ್ಣಿನ ಸವಕಳಿ, ಹೆಚ್ಚಿನ ನೀರು ಬಳಕೆ, ಜವುಳು, ಭೂಮಿಯ ಮೆಲೆ ರಾಸಾಯನಿಕದಿಂದ ಆಗುತ್ತಿರುವ ಸಮಸ್ಯೆ, ಕಳಪೆ ಹಾಗೂ ನಕಲಿ ಬೀಜ ಮಾರಾಟ ತಡೆಯುವ ಬಗ್ಗೆ ವಿಶ್ವ ವಿದ್ಯಾಲಯಗಳು ಕ್ರಮ ಕೈಗೊಳ್ಳಬೇಕು. ಕೃಷಿ ವಿ.ವಿಗಳು ಕ್ಯಾಂಪಸ್‌ ಬಿಟ್ಟು ಹೊರ ಬಂದು ರೈತನ ಹೊಲವನ್ನೇ ಕ್ಯಾಂಪಸನ್ನಾಗಿ‌ ಮಾಡಿಕೊಳ್ಳಬೇಕು ಎಂದರು. 
--------------- 
ಮೈಸೂರಿನಲ್ಲಿ ಚಿರತೆ ದಾಳಿ ಮಾಡಿದ ಪ್ರಕಣದ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಜನರಿಗೆ ಮನೆಯಲ್ಲೇ ಇರಲು ಸೂಚನೆ ನೀಡಿದ್ದಾರೆ. ಚಿರತೆ ಸೆರೆ ಹಿಡಿಯಲು ಸೂಚನೆ ನೀಡಿದ್ದೇನೆ. ಹಿರಿಯ ಅಧಿಕಾರಿಗಳಿಂದ ಮಾಹಿತಿ ಪಡೆದಿದ್ದೇನೆ. ವಿಶೇಷ ಪಡೆಗಳನ್ನು ಬಳಸಿ ಚಿರತೆ ಸೆರೆ ಹಿಡಿಯಲಾಗುವುದು ಎಂದಿದ್ದಾರೆ. ಚಿರತೆ ದಾಳಿ ಮಾಡಿದ ಐದಾರು ಕಿ.ಮೀ ದೂರದಲ್ಲಿ ವಿಶೇಷ ನಿಗಾ ವಹಿಸಲಾಗಿದೆ. ಸಂಜೆ ನಂತರ ಜನರು ಮನೆಯಿಂದ ಹೊರ ಬರುವುದು ಬೇಡ  ಈ ಸಂಬಂಧ ನಾವು ತ್ವರಿತ ಕ್ರಮ ಕೈಗೊಳ್ಳುತ್ತಿದ್ದೇವೆ ಎಂದು ಹೇಳಿದ್ದಾರೆ. ಮೈಸೂರು ಭಾಗದಲ್ಲಿ ಚಿರತೆ ದಾಳಿಯ ಬಗ್ಗೆ ಸಮಗ್ರ ಮಾಹಿತಿ ಪಡೆದಿದ್ದು, ಚಿರತೆಯನ್ನು ಸೆರೆ ಹಿಡಿಯಲು ಎಲ್ಲಾ ರೀತಿಯ ಕ್ರಮಗಳನ್ನು ಕೈಗೊಳ್ಳಲು ಸೂಚನೆ ನೀಡಲಾಗಿದೆ. ಅಗತ್ಯವಿದ್ದಲ್ಲಿ ವಿಶೇಷ ಪಡೆಗಳನ್ನು ಕರೆಸಿಕೊಳ್ಳಲು ಅರಣ್ಯ ಸಂರಕ್ಷಣಾಧಿಕಾರಿಗಳಿಗೆ  ನಿರ್ದೇಶನ ನೀಡಿದ್ದೇನೆ ಎಂದರು. ಚಿರತೆ ದಾಳಿಯಿಂದ ಬಲಿಯಾದ ಬಾಲಕನ ಕುಟುಂಬಕ್ಕೆ ಸರ್ಕಾರದಿಂದ ಪರಿಹಾರ ನೀಡಲು ಅಲ್ಲಿನ ಜಿಲ್ಲಾಧಿಕಾರಿಗಳಿಗೆ ಸೂಚಿಸಲಾಗಿದೆ ಎಂದರು.

South Western Railway ರೈಲ್ವೇ ಇಲಾಖೆಯಿಂದ ಸಿಹಿಸುದ್ದಿ: ಇನ್ಮುಂದೆ ಕನ್ನಡದಲ್ಲೆ ದೊರೆಯಲಿದೆ ರೈಲ್ವೆ ಸೇವೆ! 

Published On: 23 January 2023, 03:42 PM English Summary: Opposition to Mahadai Yojana: Resolution in Goa

Share your comments

Latest feeds

More News
Krishi Jagran Kannada Magazine Subscription Online Subscription

CopyRight - 2024 Krishi Jagran Media Group. All Rights Reserved.