1. ಸುದ್ದಿಗಳು

Karnataka Politics ಸಿಂಗಾಪುರದಲ್ಲಿಆಪರೇಷನ್‌, 30 ಶಾಸಕರ Complaint: ರಾಜ್ಯ ರಾಜಕೀಯದಲ್ಲಿ ಏನಾಗ್ತಿದೆ!

Hitesh
Hitesh

ಕಾಂಗ್ರೆಸ್‌ ಸರ್ಕಾರ ಅಧಿಕಾರಕ್ಕೆ ಬಂದು ಇನ್ನೂ ಎರಡು ತಿಂಗಳಷ್ಟೇ ಪೂರ್ಣಗೊಂಡಿದೆ. ಅಷ್ಟರಲ್ಲೇ ಕಾಂಗ್ರೆಸ್‌ ಸರ್ಕಾರಕ್ಕೆ ಅಪರೇಷನ್‌ ಭೀತಿ ಎದುರಾಗಿದೆ.

ಕಾಂಗ್ರೆಸ್‌ ಸರ್ಕಾರ 135 ವಿಧಾನಸಭಾ ಕ್ಷೇತ್ರದಲ್ಲಿ ಗೆಲುವು ಸಾಧಿಸುವ ಮೂಲಕ ಪೂರ್ಣಬಹುಮತವನ್ನು ಗಳಿಸಿದೆ.

ಇದಾಗಿಯೂ ಆಪರೇಷನ್‌ ಭೀತಿ ಹೇಗೆ ಎದುರಾಯಿತಿ ಎನ್ನುವುದೇ ಈಗ ರಾಜಕೀಯ ವಲಯದಲ್ಲಿ ತೀವ್ರವಾದ ಚರ್ಚೆಗೆ ಕಾರಣವಾಗಿದೆ.

ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ್ದ ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್‌ ಅವರು,

ರಾಜ್ಯ ಕಾಂಗ್ರೆಸ್‌ ಸರ್ಕಾರವನ್ನು ಕೆಳಗಿಳಿಸಲು ದೂರದ ಸಿಂಗಾಪುರದಲ್ಲಿ ಚರ್ಚೆಗಳು ನಡೆಯುತ್ತಿವೆ.

ಇಲ್ಲಿ ಚರ್ಚೆ ಮಾಡಿದರೆ ತಿಳಿಯುತ್ತದೆ ಎನ್ನುವ ಉದ್ದೇಶದಿಂದ ಸಿಂಗಾಪುರದಲ್ಲಿ ಚರ್ಚೆ ನಡೆಯುತ್ತಿದೆ ಎಂದು ಹೇಳಿದ್ದರು.

ಇದು ರಾಜ್ಯ ರಾಜಕೀಯದಲ್ಲಿ ಸಂಚಲನವನ್ನೇ ಮೂಡಿಸಿತ್ತು. 

ಮುಖ್ಯಮಂತ್ರಿಗೆ 30 ಶಾಸಕರ ದೂರು !

ಕೆಲವು ಸಚಿವರು ಶಾಸಕರ ಮನವಿಗಳಿಗೆ ಸ್ಪಂದಿಸುತ್ತಿಲ್ಲ. ಅನುದಾನದ ಬಗ್ಗೆ ಮಾತನಾಡುತ್ತಿಲ್ಲ.

ನಮ್ಮನ್ನು ಗುರುತಿಸುತ್ತಲ್ಲೇ ಇಲ್ಲ ಎನ್ನುವುದು ಸೇರಿದಂತೆ ವಿವಿಧ ಕಾರಣಗಳನ್ನು ನೀಡಿ, 30ಕ್ಕೂ ಹೆಚ್ಚು ಶಾಸಕರು

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ದೂರು ನೀಡಿದ್ದಾರೆ ಎಂದು ಹೇಳಲಾಗಿದೆ.

ಆದರೆ, ಈ ಆರೋಪವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಳ್ಳಿ ಹಾಕಿದ್ದಾರೆ.

ಶಾಸಕಾಂಗ ಪಕ್ಷದ ಸಭೆಯನ್ನು ಕರೆಯಬೇಕಾಗಿತ್ತು. ಆದರೆ, ಕಾಂಗ್ರೆಸ್‌ ಮುಖಂಡ ರಾಹುಲ್‌ ಗಾಂಧಿ ಅವರು ಸಹ ಸಭೆ ಕರೆಯುವ ಸಾಧ್ಯತೆ

ಇದ್ದ ಹಿನ್ನೆಲೆಯಲ್ಲಿ ಸಭೆಯನ್ನು ಕರೆಯಲು ಸಾಧ್ಯವಾಗಿರಲಿಲ್ಲ.

ಇದೀಗ ಶಾಸಕಾಂಗ ಪಕ್ಷದ ಸಭೆಯನ್ನು ಕರೆಯುವ ಮೂಲಕ ಎಲ್ಲ ಚರ್ಚೆ ಮಾಡಲಾಗುವುದು

ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೇಳಿದ್ದಾರೆ.

ಕರ್ನಾಟಕದ ವಿರೋಧ ಪಕ್ಷದ ನಾಯಕ ಯಾರು ಎನ್ನುವುದಕ್ಕೆ ಉತ್ತರವೇ ಇಲ್ಲ!

ಶಾಸಕಾಂಗ ಪಕ್ಷದ ಸಭೆಯನ್ನು ಕರೆಯುವಂತೆ ಮನವಿ ಪತ್ರ ಸಲ್ಲಿಸಿದ್ದಾರೆ. ಯಾರೂ ದೂರು ನೀಡಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.

ಅಲ್ಲದೇ ಸಿಂಗಾಪುರದಲ್ಲಿ ಕಾಂಗ್ರೆಸ್‌ ಸರ್ಕಾರ ಬೀಳಿಸಲು ತೆರೆಮರೆಯ ಸಿದ್ಧತೆ ನಡೆಯುತ್ತಿದೆಯೇ ಎನ್ನುವ ಪ್ರಶ್ನೆಗೆ,

ಇದಕ್ಕೆ ಉತ್ತರವನ್ನು ಡಿ.ಕೆ ಶಿವಕುಮಾರ್‌ ಅವರ ಬಳಿಯೇ ಕೇಳಿ ಎಂದು ಅವರು ಉತ್ತರಿಸಿದ್ದಾರೆ.   

ಜನರೇ ದಂಗೆ ಏಳಲಿದ್ದಾರೆ ಎಂದ ಕಾಂಗ್ರೆಸ್‌!

ಈ ಬೆಳವಣಿಗೆಗಳಿಗೆ ಕಾಂಗ್ರೆಸ್‌ ಸಹ ಕಿಡಿಕಾರಿದೆ. ಕನ್ನಡಿಗರು ಅತೀವ ಭರವಸೆಯನ್ನಿಟ್ಟು ಗೆಲ್ಲಿಸಿದ

ನಮ್ಮ ಸರ್ಕಾರವನ್ನು ಅಸ್ಥಿರಗೊಳಿಸಲು ಪ್ರಯತ್ನಿಸಿದರೆ ಜನರೇ ದಂಗೆ ಏಳುತ್ತಾರೆ.

ಈಗ ಸಿಂಗಾಪುರಕ್ಕೆ ಹೋದವರು ನಂತರ ಮಂಗಾಪುರಕ್ಕೆ ಓಡುವ ಸ್ಥಿತಿ ಉಂಟಾಗಲಿದೆ.

ಪದೇ ಪದೇ ಪ್ರಜಾಪ್ರಭುತ್ವದ ಆಶಯಗಳ ವಿರುದ್ಧ ಕೆಲಸ ಮಾಡುವ BJP Karnataka ಈಗಲಾದರೂ ಜನರ ತೀರ್ಪನ್ನು ಗೌರವಿಸುವುದನ್ನು ಕಲಿಯಲಿ.

ಇನ್ನು ಜೆಡಿಎಸ್ ನಾಯಕರು ಬಿಜೆಪಿಯ ಲೆಟರ್ ಹೆಡ್ ಮೇಲೆ ಸಹಿ ಮಾಡಿ ತಮ್ಮದು ಅಡ್ರೆಸ್ ಇಲ್ಲದ ಪಕ್ಷ ಎಂದು ಸಾಬೀತು ಮಾಡಿದ್ದರು,

ಬೊಮ್ಮಾಯಿಯವರು ಜೆಡಿಎಸ್ ಕಚೇರಿಗೆ ತೆರಳಿ, ಪತ್ರಿಕಾಗೋಷ್ಠಿಗೆ ಜೆಡಿಎಸ್ ನೆರವು ಪಡೆದು

ತಮಗೆ ದಮ್ಮು ತಾಕತ್ತು ಇಲ್ಲ ಎಂದು ಸಾಬೀತು ಮಾಡಿದ್ದರು.

ಒಬ್ಬರಿಗೆ ಹಲ್ಲಿಲ್ಲ, ಮತ್ತೊಬ್ಬರಿಗೆ ಕಡಲೆ ಇಲ್ಲ ಎಂಬಂತಹ ಸ್ಥಿತಿಯಲ್ಲಿರುವ ವಿಪಕ್ಷಗಳು ಕಾಂಗ್ರೆಸ್ ಸರ್ಕಾರವನ್ನು ಬೀಳಿಸುತ್ತೇವೆ

ಎನ್ನುವುದು ನರಿಯೊಂದು ದ್ರಾಕ್ಷಿಗೆ ಆಸೆ ಪಟ್ಟಂತೆ ಎಂದು ವ್ಯಂಗ್ಯವಾಡಿದೆ. 

ಸರ್ಕಾರ ಉಳಿಯುವ ಲಕ್ಷಣ ಇಲ್ಲ ಎಂದು ಬಿಜೆಪಿ ವ್ಯಂಗ್ಯ

ಜನತೆಯ ಕಿವಿಯ ಮೇಲೆ ಸದಾ ಹೂವಿಡುವ ಕಾಂಗ್ರೆಸ್, ತನ್ನ ಪರಂಪರೆಯನ್ನು ರಾಜ್ಯದಲ್ಲಿ ‌ಮುಂದುವರಿಸಿದೆ.

ತಮ್ಮ ಸರ್ಕಾರದ ಆಡಳಿತ ವೈಫಲ್ಯವನ್ನು ಮುಚ್ಚಿಕೊಳ್ಳಲು ಹಾಗೂ ಬೆಲೆಯೇರಿಕೆಯಿಂದ ತತ್ತರಿಸಿರುವ ರಾಜ್ಯದ ಜನರ

ಗಮನವನ್ನು ಬೇರೆಡೆಗೆ ಸೆಳೆಯಲು ಕನಕಪುರದವರು ಸಿಂಗಾಪುರ ಎನ್ನುತ್ತಿದ್ದಾರೆ.

ಈ ತುಘಲಕ್ ಸರ್ಕಾರ ಆಡಳಿತಕ್ಕೆ ಬಂದ ನಂತರ ಗ್ಯಾರಂಟಿಗಳ ವಿಷಯದಲ್ಲಿ ಉಲ್ಟಾ ಹೊಡೆದಿದೆ,

ವರ್ಗಾವಣೆ ದಂಧೆಯಲ್ಲಿ ನಿರತವಾಗಿ ಅಭಿವೃದ್ಧಿಯನ್ನು ಸಂಪೂರ್ಣವಾಗಿ ಕಡೆಗಣಿಸಿದೆ.

ದೇಶದ ಇತಿಹಾಸದಲ್ಲಿ ಇದೇ ಮೊದಲು ಎಂಬಂತೆ ಅಧಿಕಾರಕ್ಕೆ ಬಂದ ಎರಡು ತಿಂಗಳೊಳಗೆ ಸರ್ಕಾರಕ್ಕೆ ರಾಜ್ಯಾದ್ಯಂತ ಆಡಳಿತ ವಿರೋಧಿ ಅಲೆ ಸೃಷ್ಟಿಯಾಗಿದೆ.

ಬಡ, ಮಧ್ಯಮ, ಶ್ರಮಿಕ ವರ್ಗದವರು ಹೋದಲ್ಲಿ ಬಂದಲ್ಲಿ ಸರ್ಕಾರವನ್ನು ವಾಚಾಮಗೋಚರವಾಗಿ ನಿಂದಿಸಲು ಆರಂಭಿಸಿದ್ದಾರೆ.

ಪರಿಸ್ಥಿತಿ ಹೀಗೆಯೇ ಮುಂದುವರೆದರೆ, ತಮ್ಮ ಭವಿಷ್ಯ ಮಂಕಾಗಲಿದೆ ಎಂಬ ಕಾರಣಕ್ಕೆ ಡಿ. ಕೆ. ಶಿವಕುಮಾರ್ ಈಗ ಸಿಂಗಾಪುರದ ನಾಟಕ ಆರಂಭಿಸಿದ್ದಾರೆ.

ಅಷ್ಟಕ್ಕೂ ಈ ಸರ್ಕಾರವನ್ನು ಬೀಳಿಸಲು ಹೊರಗಿನವರೇ ಬೇಕಾಗಿಲ್ಲ. ಅಸಲಿಗೆ ಸರ್ಕಾರದ ಪ್ರಮುಖ ಭಾಗವಾಗಿರುವವರಿಗೆ ಈ ಸರ್ಕಾರ ಬೇಕಾಗಿಲ್ಲ.

ಸಚಿವರಾದ ಜಮೀರ್ ಅಹಮದ್, ಎಂ. ಬಿ. ಪಾಟೀಲ್, ಸತೀಶ್ ಜಾರಕಿಹೊಳಿ ಗಟ್ಟಿಯಾಗಿ ಸಿದ್ದರಾಮಯ್ಯನವರು

ಮುಖ್ಯಮಂತ್ರಿಯಾಗಿ ಅವಧಿ ಪೂರ್ಣಗೊಳಿಸುತ್ತಾರೆ ಎಂದು ಹೇಳುವ ಹಾಗಿಲ್ಲ. ಹೇಳಿದರೆ ಡಿ. ಕೆ. ಶಿವಕುಮಾರ್ ಬಣ ಮುಗಿಬೀಳುತ್ತದೆ.

ಸಿದ್ದರಾಮಯ್ಯರವರ ವಿರುದ್ಧ ಮಾತನಾಡುವ ಹೊಸ ಗುಂಪಿನ ನಾಯಕ ಹರಿಪ್ರಸಾದ್ ಬಗ್ಗೆ ಕೆ.ಪಿ.ಸಿ.ಸಿ ಅಧ್ಯಕ್ಷರಾದ 

ಡಿ. ಕೆ. ಶಿವಕುಮಾರ್ ಪ್ರತಿಕ್ರಿಯೆ ಸಹ ನೀಡದೇ ಮೌನಂ ಸಮ್ಮತಿ ಲಕ್ಷಣಂ ಎಂಬಂತೆ ವರ್ತಿಸುತ್ತಾರೆ.

ಈ ಸರಕಾರ ಉಳಿಯುವ ಯಾವ ಲಕ್ಷಣವೂ ಇಲ್ಲ ಮತ್ತದಕ್ಕೆ ಹೊರಗಿನವರ ಶ್ರಮದ ಅಗತ್ಯವೇ ಇಲ್ಲ.

ಪರಸ್ಪರ ಗುದ್ದಾಡಿಕೊಳ್ಳುತ್ತಿರುವ ಒಳಗಿನ ನಾಲ್ಕು ಗುಂಪುಗಳೇ ಈ ಸರಕಾರವನ್ನು ಮುಗಿಸಲಿದೆ. ನಿಸ್ಸಂದೇಹವಾಗಿ ಎಂದು ಆರೋಪಿಸಿದೆ.   

ಸರ್ಕಾರ ರಚನೆಯಾದ ಎರಡೇ ತಿಂಗಳಲ್ಲಿ, ಸ್ವಪಕ್ಷೀಯ ಶಾಸಕರಿಂದಲೇ ಸಿದ್ದರಾಮಯ್ಯರವರ ಸರ್ಕಾರ ಅವಿಶ್ವಾಸವನ್ನು ಎದುರಿಸುತ್ತಿದೆ.

ಈ ಸರ್ಕಾರಕ್ಕೆ ಉಳಿಗಾಲವಿಲ್ಲ ಎಂಬುದನ್ನು ಬೇರೆ ಯಾರೂ ಹೇಳಬೇಕಾಗಿಲ್ಲ, ಕಾಂಗ್ರೆಸ್ ಶಾಸಕರೇ ಹೇಳಿದ್ದಾರೆ ಎಂದು ಟ್ವೀಟಿಸಿದೆ. 

Annabhagya ಅನ್ನಭಾಗ್ಯ ಯೋಜನೆ: ನಿಲ್ಲದ ಬಿಜೆಪಿ – ಕಾಂಗ್ರೆಸ್‌ ವಾಕ್ಸಮರ!

Published On: 25 July 2023, 05:02 PM English Summary: Operation in Singapore, Complaint of 30 MLAs: What is happening in state politics!

Share your comments

Latest feeds

More News
Krishi Jagran Kannada Magazine Subscription Online Subscription

CopyRight - 2024 Krishi Jagran Media Group. All Rights Reserved.