ಇಲ್ಲಿಯವರೆಗೆ ನೀವು ಸಾಮಾಜಿಕ ಮಾಧ್ಯಮದಲ್ಲಿ ಕಾರುಗಳು, ಮೋಟಾರ್‌ಸೈಕಲ್‌ಗಳು ಮತ್ತು ಗೃಹೋಪಯೋಗಿ ಉಪಕರಣಗಳ ಖರೀದಿ ಮತ್ತು ಮಾರಾಟದ ಪ್ರಕರಣಗಳನ್ನು ಕೇಳಿರಬೇಕು. ಆದರೆ ಎಮ್ಮೆ ಮಾರಾಟದ ಹೆಸರಿನಲ್ಲಿ ಫೇಸ್‌ಬುಕ್‌ನಲ್ಲಿ ತೋರಿಸಿ ರೈತರೊಬ್ಬರಿಗೆ ಖದೀಮರು 80 ಸಾವಿರ ರೂಪಾಯಿಯನ್ನು ವಂಚನೆ ಮಾಡಿರುವ ಘಟನೆ ಮಧ್ಯಪ್ರದೇಶದ ಗ್ವಾಲಿಯರ್‌ನಲ್ಲಿ ಬೆಳಕಿಗೆ ಬಂದಿದೆ.
ಏನಿದು ಪ್ರಕರಣ..?
ಮಧ್ಯಪ್ರದೇಶದ ಗ್ವಾಲಿಯರ್‌ನ ರೈತರೊಬ್ಬರು ಹೈನುಗಾರಿಕೆ ನಡೆಸುವ ಉದ್ದೇಶದಿಂದ ಎಮ್ಮೆಯೊಂದನ್ನು ಖರೀದಿ ಮಾಡುವ ಯೋಚನೆಯಲ್ಲಿದ್ದರು. ಅವರು ಇತ್ತೀಚಿಗೆ ಫೇಸ್‌ಬುಕ್‌ನಲ್ಲಿ ಪ್ರದರ್ಶಿತಗೊಂಡ ಅಶೋಕ್ ಶರ್ಮಾ ಡೈರಿ ಫಾರ್ಮ್ ಜಾಹೀರಾತಿನಿಂದ ಎಮ್ಮೆ ಖರೀದಿಗೆ ಯೋಚನೆ ಮಾಡಿದರು.
Viral: ತಿನ್ನುವ ನೂಡಲ್ಸ್‌ನಿಂದ ರಸ್ತೆ ಗುಂಡಿ ಮುಚ್ಚುತ್ತಿದ್ದಾರೆ ಈ ವ್ಯಕ್ತಿ!
ಅದರಂತೆ ಎಮ್ಮೆಯು ದಿನ್ಕೆ 15 ಲೀಟರ್ ಹಾಲು ನೀಡುತ್ತದೆ ಅದರ ಬೆಲೆ 80 ಸಾವಿರ ರೂಪಾಯಿಗಳು ಎಂದು ಮೊದಲ ಹಂತದ ಮಾತುಕತೆಯೂ ನಡೆಯಿತು. ಅದಾದ ಬಳಿಕ ರೈತ ತನ್ನ ಹೆಂಡತಿಯ ಒಡವೆಗಳನ್ನು ಮಾರಿ ಹಣವನ್ನು ಜಮಾ ಮಾಡಿ ಹಂತ ಹಂತವಾಗಿ ಆನ್‌ಲೈನ್ ಮೂಲಕ ಹಣ ಪಾವತಿ ಮಾಡಿದ್ದಾನೆ. 80 ಸಾವಿರ ರೂಪಾಯಿ ಹಣ ಜಮಾ ಮಾಡಿದರು ಅತ್ತ ಎಮ್ಮೆ ನೀಡುವ ಬಗ್ಗೆ ಯಾವುದೇ ಸುಳಿವು ಸಿಗದ ಕಾರಣ ಆತನಿಗೆ ತಾನು ವಂಚನೆಗೆ ಒಳಗಾಗಿರುವುದು ಖಾತ್ರಿಯಾಗಿದೆ.
ಮರುದಿನ ಎಮ್ಮಯನ್ನು ಲಾರಿ ಮೂಲಕ ಕಳಿಸಲಾಗುತ್ತದೆ ಎಂದು ಮಾಹಿತಿ ಬಂದ ಬಳಿಕ ರೈತ ಸಾವಧಾನವಾಗಿ ಕಾಯುತ್ತ ಕುಳಿತಿದ್ದ. ಆದರೆ ಮರುದಿನ ಮತ್ತೇ 12 ಸಾವಿರ ರೂಪಾಯಿಯನ್ನು ವರ್ಗಾಯಿಸುವಂತೆ ಹೇಳಲಾಗಿದೆ. ಆಗ ಕೂಡ ರೈತ 12 ಸಾವಿರ ರೂಪಾಯಿಯನ್ನು ವರ್ಗಾವಣೆ ಮಾಡಿದ್ದಾನೆ.
ಗ್ರಾಹಕರೇ ಇಲ್ನೋಡಿ: LPG ಸಿಲಿಂಡರ್ ಬೆಲೆಯಲ್ಲಿ ಭಾರೀ ಇಳಿಕೆ..ಹೊಸ ರೇಟ್ ಎಷ್ಟು ಗೊತ್ತಾ..?
ನಂತರ ಲಾರಿ ಚಾಲಕ ಕರೆ ಮಾಡಿ ತಮ್ಮ ಅಡ್ರೆಸ್‌ಗೆ ಮ್ಯಾಪ್ ಕಂಡು ಬರುತ್ತಿಲ್ಲ ಎಂದು ಹೇಳಿದ ಕೆಲ ಸಮಯ ಬಳಿಕ ಎಮ್ಮೆ ಲಾರಿ ಅಪಘಾತದಲ್ಲಿ ಸಾವನ್ನಪ್ಪಿದೆ ಎಂದು ಹೇಳಿದ್ದಾನೆ. ಇದರಿಂದ ಶಾಕ್ ಆದ ರೈತ ತನ್ನ ಹಣವನ್ನು ವಾಪಸ್ ನೀಡುವಂತೆ ಕೇಳಿದ್ದಾನೆ. ಆದರೆ ದುಷ್ಕರ್ಮಿ ಹಣ ನೀಡಲು ನಿರಾಕರಿಸಿ ರೈತನಿಗೆ ಮೋಸ ಮಾಡಿ ಟಾಟಾ ಬೈ ಬೈ ಹೇಳಿದ್ದಾನೆ. ಇದೀಗ ಪ್ರಕರಣ ಕುರಿತು ಅಪರಾಧ ವಿಭಾಗದ ಸೈಬರ್ ಸೆಲ್‌ನಲ್ಲಿ ದೂರು ದಾಖಲಾಗಿದೆ.
Share your comments