ಚಹಾ ಮೊದಲು ತಯಾರಾಗಿದ್ದು ಹೇಗೆ? ಎಲ್ಲಿ? ಯಾವಾಗ? ಗೊತ್ತೆ? ಚಹಾದ ಕುರಿತು ಸಿಕ್ಕಪಾಟ್ಟೆ ಇಂಟರೆಸ್ಟಿಂಗ್ ಮಾಹಿತಿಗಳನ್ನ ತಿಳಿಸಿದ್ದಾರೆ ಮಾನಿಕ್‌ಎನ್. ಸೂಕಿಯವರು. ಚಹಾ ಪ್ರೇಮಿಗಳು ತಪ್ಪದೇ ಓದಬೇಕಾದ ಲೇಖನ...
ಎಡೆಬಿಡದೆ ಸುರಿವ ಈ ಜಡಿಮಳೆಗೆ ಒಂದೊಳ್ಳೆ ಚಹಾ ಜೊತೆ ಬಜ್ಜಿಯೋ ಮಿರ್ಚಿ ಮಂಡಕ್ಕಿಯೋ ಇದ್ರೆ ಆಹಾ ! ಸ್ವರ್ಗಕ್ಕೆ ಮೂರೇ ಗೇಣು ಅಲ್ಲವೇ ? ಚಹಾನೆ ಹಾಗೆ
ಎಂಥಾ ಒತ್ತಡವಿದ್ದರೂ ಕೆಲಸದ ನಡುವೆ ಚಹಾದ ಒಂದು ಗುಟುಕು ಗಂಟಲಲ್ಲಿ ಇಳಿದರೆ ಸಾಕು, ಎಲ್ಲ ಆಯಾಸ ನೀಗಿ ಹೋಗುತ್ತದೆ .
ಒಂದು ಚಹಾ ಹಿಡಿದು ದಿನಪತ್ರಿಕೆ ಓದುವುದು, ಸಂಜೆ ಚಹಾ ಕುಡಿಯುತ್ತ ಗೆಳೆಯರೊಂದಿಗೆ ಹರಟುವ ಗಮ್ಮತ್ತೇ ಬೇರೆ.
ಬೆಳಿಗ್ಗೆಯ ಚಹಾಗೆಂದೆ ಹತ್ತಾರು ಕಿಲೋಮೀಟರ್ ಚುಮು-ಚುಮು ಚಳಿಯಲ್ಲಿ ಗೆಳೆಯರೊಂದಿಗೆ ಗಾಡಿ ಹೊಡೆಯುತ್ತ ಬೆಟ್ಟ ಗುಡ್ಡಗಳ ಹತ್ತಿರ ಚಹಾ ಕುಡಿಯುವ ಹುಡುಗರು ಇನ್ನೊಂದೆಡೆಯಾದರೆ
ಇನ್ನು ಕೆಲವರು ಚಹಾವನ್ನೆ ನೀರಿನಂತೆ ಬೆಳಗ್ಗೆ ಮಧ್ಯಾನ ಸಾಯಂಕಾಲ ಸೇವಿಸುವ ಚಹಾ ಪ್ರಿಯರಿದ್ದಾರೆ ! ಇನ್ನು ಕೆಲವರಂತೂ ಉರಿ ಬಿಸಿಲ ಮಧ್ಯಾಹ್ನವೆನ್ನದೆ
ಬೆವರಿಳಿಸುವ ಬೇಸಿಗೆ ಎನ್ನದೆ ನಿರಂತರವಾಗಿ ಬಿಸಿ ಬಿಸಿ ಕೆಂಡದಂಥ ಚಹಾ ಸವಿಯುವ ಚಹಾ ಆರಾಧಕರೂ ಇದ್ದರೆ.
ಚಹಾ ನಮ್ಮ ನಿತ್ಯ ಜೀವನದ ಬಹುಮುಖ್ಯ ಭಾಗವಾಗಿದೆ.
ಚಹಾ ಪ್ರಪಂಚದ ಪಾನೀಯ ಸೇವನೆಯ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದೆ
ಮೊದಲನೇ ಸ್ಥಾನ ನೀರಿನದಾದರೆ ಎರಡನೆಯದು ಚಹಾಗೆ ಸೇರುತ್ತದೆ.
ಇಷ್ಟು ಸೇವಿಸಲ್ಪಡುವ ಈ ವಿಶೇಷ ಪಾನೀಯ ಹುಟ್ಟಿದ್ದಾದರು ಹೇಗೆ? ಮನುಷ್ಯ ಜೀವಿಯು ಇದನ್ನು ಕಂಡುಕೊಂಡಿದ್ದು ಹೇಗೆ ಎನ್ನುವ ನಮ್ಮ ಹಲವು ಪ್ರಶ್ನೆಗಳಿಗೆ ಇಲ್ಲಿದೆ ಉತ್ತರ.
ಚಹಾಗೆ ಸುಮಾರು 5000 ವರ್ಷಗಳ ಇತಿಹಾಸವಿದೆ. ಕ್ರಿ.ಪೂ 2732 ಚೀನಾದ ರಾಜ ಶೇನ್ ನಂಗ್ ಒಮ್ಮೆ ಕಾಡೊಂದರಲ್ಲಿ ಗಿಡಮೂಲಿಕೆಗಳ ಸಂಶೋಧನೆಗೆ ಹೋಗಿರುತ್ತಾನೆ.
ಸದಾ ಕುಡಿಯುವ ನೀರನ್ನು ಕಾಯಿಸಿ ಕುಡಿಯುವ ಅಭ್ಯಾಸವಿಟ್ಟುಕೊಂಡಿದ್ದ ರಾಜನಿಗೆ, ಆತನ ಆಳೊಬ್ಬನು ನೀರನ್ನು ಕಾಯಲು ಇಟ್ಟಿರುತ್ತಾನೆ.
ಕುದಿವ ನೀರಿಗೆ ಬಳಿಯಲ್ಲೇ ಇದ್ದ ಮರದ ಒಂದಷ್ಟು ತರಗೆಲೆಗಳು ನೀರಿನಲ್ಲಿ ಬಿದ್ದು ನೀರಿನ ಬಣ್ಣ ಹಾಗೂ ಸುವಾಸನೆ ಬದಲಾಗಿರುತ್ತದೆ.
ಅದನ್ನು ಕಂಡ ರಾಜ ಶೇನ್ ನಂಗ್, ಈ ವಿಶೇಷ ಪಾನೀಯವನ್ನು ಕುಡಿಯಬಯಸುತ್ತಾನೆ.
ದಿನವೆಲ್ಲಾ ಮೂಲಿಕೆಗಳ ಸಂಶೋಧನೆಯಲ್ಲಿ ಕಾಡು ಮೇಡುಗಳನ್ನು ಅಲೆದು ದಣಿದಿದ್ದ ರಾಜನಿಗೆ, ಈ ಪಾನೀಯ ಒಮ್ಮೆಲೆ ದಣಿವಾರಿಸಿದಲ್ಲದೆ ಮನಸ್ಸಿಗೆ ಮುದ ನೀಡಿತು.
ಈ ಹಿಂದೆ ಎಂದಿಗೂ ಇಂತಹ ಪಾನೀಯ ಸೇವಿಸದ ರಾಜನು ಇದರ ಮಹತ್ವವನ್ನು ಕೆಲವೇ ನಿಮಿಷಗಳಲ್ಲಿ ತಿಳಿದುಕೊಂಡನು,
ಇದನ್ನು "ಚಾ" ಎಂದು ಕರೆಯುತ್ತಾನೆ. ಅಂದಿನ "ಚಾ" ನೇ ಇಂದಿನ "ಚಹಾ" ಆಗಿ ನಮ್ಮೆಲ್ಲರ ಮನೆಮಾತಾಗಿದೆ.
ಇದರ ಮಹತ್ವ ಕಂಡ ರಾಜನು ಮರದಿಂದ ಒಂದಷ್ಟು ಚಹಾದ (ಕ್ಯಾಮಲಿಯ ಸೇನೆಸಿಸ್ ) ಬೀಜಗಳನ್ನು ತನ್ನ ಸಾಮ್ರಾಜ್ಯಕ್ಕೆ ತರುತ್ತಾನೆ.
ಹೌದು, ಚಹಾ 30 ಅಡಿಯ ಎತ್ತರದ ಮರವಾಗಿತ್ತು ! 30 ಅಡಿ ಎತ್ತರದಿಂದ ಎಲೆಗಳನ್ನು ಕೀಳುವುದು ಬಹಳ ಕಷ್ಟವೆಂದೇ ಇಂದಿನ ಟೀ ಎಸ್ಟೇಟ್‌ಗಳಲ್ಲಿ ನಾವೆಲ್ಲಾ
ನೋಡುವಂತೆ ಗಿಡ್ಡವಾಗಿ ಬೆಳೆಸುತ್ತಾರೆ. ಕಡಿಮೆ ಜಾಗದಲ್ಲಿ ಅತಿ ಹೆಚ್ಚು ಟೀ ಸೊಪ್ಪನ್ನು ಬೆಳೆಯಬಹುದು . ಚಹಾವನ್ನು ಕೇವಲ ಔಷಧಿಯಾಗಿ ಬಳಸುತ್ತಿದ್ದರು.
ಕೇವಲ ರಾಜ ಮನೆತನಗಳಿಗೆ ಸೀಮಿತವಾಗಿದ್ದ ಚಹಾ, ನಿಧಾನವಾಗಿ ಎಲ್ಲೆಡೆ ಪಸರಿಸಿತು. ಒಂದೆರೆಡು ಸಸಿಗಳನ್ನು ಚೀನಾದಿಂದ ಅಸ್ಸಾಂ ಪ್ರದೇಶಕ್ಕೆ ಒಬ್ಬ
ಬೌದ್ಧ ಮುನಿಯು ತಂದು ನೆಡುತ್ತಾನೆ. ಅಲ್ಲಿಂದ ನಮ್ಮ ಭಾರತದ ಹಲವೆಡೆ ಚಹಾದ ಸಸಿಗಳು ಹರಡಿದವು. ಟೀ ಕೇವಲ ಪಾನೀಯವಾಗಿ ಉಳಿಯದೆ ಒಂದು ಕಮಾಡಿಟಿ ಆಗಿ ಬದಲಾಯಿತು.
ಬ್ರಿಟಿಷರು ಚೀನಾ ದಿಂದ ಟೀ ಖರೀದಿಸಿ ಇಂಗ್ಲೆಂಡ್‌ಗೆ ರಫ್ತು ಮಾಡಿದರು. ಕೇವಲ ಕಾಫಿ ಮತ್ತು ಚಾಕೋಲೇಟ್ ಕುಡಿಯುತ್ತಿದ್ದ ಜನಕ್ಕೆ
ಟೀ ಒಂದು ಶ್ರೀಮಂತಿಕೆಯ ವಸ್ತುವಾಯಿತು. ಟೀ ಯನ್ನು ಒಂದು ರೀತಿಯ ಸೆರೆಮೋನಿ ಆಚರಣೆಯಂತೆ ತಯಾರು ಮಾಡಲಾಯಿತು.
ಇಂಗ್ಲೆಂಡ್ ನ ಶ್ರೀಮಂತ ಹೆಂಗಸರು ಟೀ ಪಾರ್ಟಿಗಳನ್ನು ಆರಂಭಿಸಿದರು. ಹೀಗೆ ಒಂದೆಡೆಯಿಂದ ಮತ್ತೊಂದೆಡೆಗೆ ಪ್ರಪಂಚದಾದ್ಯಂತ ಚಹಾ ಎಲ್ಲರ ಮನೆಗಳಿಗೆ ಮನಗಳಿಗೆ ತಲುಪಿತು.
ಚೀನಾದಲ್ಲಿ ಇಂದಿಗೂ ಸಹ ಟೀ ಮಾಡುವುದನ್ನು ಒಂದು ರೀತಿಯ ವಿಧಿ ವಿಧಾನಗಳನ್ನು ಅನುಸರಿಸುತ್ತಾರೆ. ಅತಿಹೆಚ್ಚು ಬಿಸಿಲು ಬೀಳದಂತೆ ಟೀ ಗಿಡಗಳ ಅತಿ ತಾಜಾ
ಮತ್ತು ಕೋಮಲವಾದ ಹೊಸ ಎಳೆಯ ಎಲೆಗಳನ್ನು ಕಡಿಮೆ ಉರಿಯಲ್ಲಿ ತಿಳಿ ಹಸಿರು ಬಣ್ಣ ಬದಲಾಗದಂತೆ ಒಣಗಿಸಿ, ಬಿಸಿ ತಾಗದಂತೆ ನುಣ್ಣಗೆ ಪುಡಿಮಾಡಲಾಗುವುದು.
ಇದನ್ನು " ಮಾಚಾ " ಎಂದು ಕರೆಯುತ್ತಾರೆ .ಅತಿ ಹೆಚ್ಚು ಆಂಟಿ ಆಕ್ಸಿಡೆಂಟ್ ಗಳಿರುವ ಈ ಮಾಚ , ಸರ್ವತೋಮುಖ ಆರೋಗ್ಯಕ್ಕೆ ಅತ್ಯುನ್ನತವಾಗಿದೆ.
ಕ್ಯಾನ್ಸರ್, ಲಿವರ್ ಗೆ, ಮೆದುಳಿಗೆ, ಹೃದಯದ ಆರೋಗ್ಯಕ್ಕೆ ಅಮೃತ ಎಂದೇ ಹೇಳಬಹುದು.
ಮಾಚ ಪುಡಿಯು 1ಕೆಜಿ ಗೆ 3-5 ಸಾವಿರ ರೂಪಾಯಿಗಳಾಗಬಹುದು. ಸೆರೆಮೋನಿಯಲ್ ಗ್ರೇಡ್ ಮಾಚ 10 ಪಟ್ಟು (30 ಗ್ರಾಂ ಗೆ 2000 ರೂಪಾಯಿಗಳು) ಹೆಚ್ಚಿನ ಬೆಲೆಯಾಗುತ್ತದೆ.
ಪ್ರಪಂಚಾದ್ಯಂತ ಚಹಾ
ಚೀನಾ:
ಚಹಾದ ಜನ್ಮಸ್ಥಳವಾದ ಚೀನಾದಲ್ಲಿ ಚಹಾ ಎಲೆಗಳನ್ನು ಫರ್ಮೇಂಟ್ ಮಾಡಿ ಪುಡಿಯಾಗಿಸಿ ಶೇಖರಿಸಿ ಇಡುತ್ತಾರೆ. ಈ ಪುಡಿಯನ್ನು
ಬಿಸಿ ನೀರಿನಲ್ಲಿ ಹಾಕಿ ಕೆಲ ನಿಮಿಷಗಳ ನಂತರ ಚಹಾದ ಎಲೆಗಳ ಇನ್ಫ್ಯೋಶುನ್ ಆದ ಪಾನೀಯವನ್ನು ಸೇವಿಸುತ್ತಾರೆ.
ಅರ್ಜೆಂಟೀನ:
ಯೂರ್ಬ ಮಾಟೆ ಎಂದು ಕರೆಯಲ್ಪಡುವ ಈ ಚಹಾವನ್ನು ಮಾಚ ಎಲೆಗಳನ್ನು ಉಪಯೋಗಿಸಿ ನೀರಿನೊಂದಿಗೆ ಬೆರೆಸಿ ಸ್ಟ್ರಾ ಮೂಲಕ ಕುಡಿಯುತ್ತಾರೆ.
ಸೌತ್ ಆಫ್ರಿಕಾ:
ರೋಬೋಸ್ ಎಂಬ ಕ್ಯಾಫಿನ್ ಮುಕ್ತ ಮೂಲಿಕೆಯೊಂದರಲ್ಲಿ ಮಾಡುವ ಈ ಚಹಾವು ಆಫ್ರಿಕಾಗೆ ಮಾತ್ರ ಸೀಮಿತವಾಗಿದೆ.
ಈ ಮೂಲಿಕೆಯು ಆಫ್ರಿಕಾದ ಬೆಟ್ಟ ಗುಡ್ಡಗಳ ಸೀಡರ್ ಬರ್ಗ್ ಪ್ರದೇಶದಲ್ಲಿ ಮಾತ್ರ ಬೆಳೆಯುತ್ತಾರೆ.
ಕೆಂಪು ಕೆಂಪಾಗಿ ಕಾಣುವ ಈ ಚಹಾವು ಸೌತ್ ಆಫ್ರಿಕಾದ ವಿಶೇಷ ಪಾನಿಯವೆಂದೆ ಕರೆಯಬಹುದು.
ತೈವಾನ್:
ಬಬಲ್ ಟೀ ಅಥವಾ ಬೋಬ ಎಂದು ಕರೆಯಲ್ಪಡುವ ಈ ಟೀ ಹಾಲಿನಲ್ಲಿ ಮಾಡಿದ ಟೀ ಗೆ ಸಬ್ಬಕ್ಕಿಯಂತಿರುವ ಚಿಕ್ಕ ಉಂಡೆಗಳನ್ನು
ಹಾಕಿ ತಣಿಸಿ ಕುಡಿಯುತ್ತಾರೆ. ಸಿಹಿಯಾಗಿ ಕೋಲ್ಡ್ ಕಾಫಿ ಇಷ್ಟಪಡುವವರಿಗೆ ಈ ಬಬಲ್ ಟೀ ಬಹಳ ಇಷ್ಟವಾಗುತ್ತದೆ.
ಕೊರಿಯಾ :
ಒಮಿಜ ಚಾ ಎಂದು ಕರೆಯಲ್ಪಡುವ ಈ ಚಹಾವು ಒಣಗಿದ ಮಗ್ನೋಲಿಯ ಹಣ್ಣುಗಳಿಂದ ಮಾಡುತ್ತಾರೆ. 5 ತರಹದ ರುಚಿಯಾದ ಉಪ್ಪು,
ಸಿಹಿ,ಕಹಿ, ಹುಳಿ ಹಾಗೂ ಪಂಜೆಂಟ್ ಅನ್ನು ಈ ಚಹಾವು ಒಳಗೊಂಡಿರುತ್ತದೆ. ಬಿಪಿ ಮತ್ತು ಸಕ್ಕರೆ ಖಾಯಿಲೆಯ ನಿಯಂತ್ರಣಕ್ಕೆ ಇದನ್ನು ಸೇವಿಸುತ್ತಾರೆ.
ಜಪಾನ್:
ಮೊದಲೇ ಹೇಳಿದಂತೆ, ಮಾಚವನ್ನೂ ಅತಿ ಹೆಚ್ಚಾಗಿ ಜಪಾನಿನಲ್ಲಿಯೂ ಸೇವಿಸುತ್ತಾರೆ. ಬಹಳ ಶ್ರದ್ಧೆ ಭಕ್ತಿಯಿಂದ ಮಾಡಲ್ಪಡುವ ಈ
ಚಹಾವು ಚವನ್ ಎಂಬ ಬಟ್ಟಲಲ್ಲಿ ಪುಡಿಯನ್ನು ಹಾಕಿ ನಿಧಾನವಾಗಿ ಬಿಸಿನೀರನ್ನು ಹಾಕಿ ಬಿದಿರಿನ ಚಾಸನ್ ಬಾಚಿಣಿಗೆಯಲ್ಲಿ ನೋರೆ ಬರುವಂತೆ ಕಲಕುತ್ತಾರೆ.
ಈಜಿಪ್ತ್:
ಹೈಬಿಸ್ಕಸ್ ಟೀ ಅನ್ನು ದಾಸವಾಳದ ಹೂಗಳ ದಳವನ್ನು ಒಣಗಿಸಿ , ಬಿಸಿನೀರಿನಲ್ಲಿ ಕುದಿಸಿ ಮಾಡುತ್ತಾರೆ.
ಈಜಿಪ್ಟಿನ ಬೇಸಿಗೆಯ ದೇಹದ ಉಷಣತೆ ತಣಿಸಲು ಸೇವಿಸುತ್ತಿದ್ದರು.
ಹೊಂಗ್ ಕೊಂಗ್:
ಸಿಲ್ಕ್ ಸ್ಟಾಕಿಂಗ್ ಟೀ ಎಂದು ಕರೆಯಲ್ಪಡುವ ಈ ಚಹಾವು ರೇಶಿಮೆಯ ಬಟ್ಟೆಯಲ್ಲಿ ಸೊಸಲಾಗುವುದರಿಂದ ಅದು ಪ್ರಕ್ಯಾತಿ ಪಡೆದಿದೆ.
ಟಿಬೆಟ್:
ಟೀ ಪುಡಿಯನ್ನು ಹಾಲಿನಲ್ಲಿ ಕುದಿಸಿ , ಸಕ್ಕರೆ ಸೇರಿಸಿ ಅದರೊಂದಿಗೆ ಸ್ವಲ್ಪ ಬೆಣ್ಣೆಯನ್ನು ಹಾಕುತ್ತಾರೆ. ಇದನ್ನು “ಪೋ ಚಾ” ಎಂದು ಕರೆಯುತ್ತಾರೆ.
ಭಾರತ :
ಇನ್ನು ನಮ್ಮ ದೇಶದಲ್ಲಿ ಕಡಕ್ ಚಾಯ್ ಮತ್ತು ಮಸಾಲ ಚಾಯ್ ಎಂದು ಎರಡು ವಿಧದ ಚಹಾ ತಯಾರಿಸಲಾಗುವುದು.
ಕಡಕ್ ಚಾಯ್ ಅನ್ನು ಹಾಲು , ಸಕ್ಕರೆ ಮತ್ತು ಟೀ ಪುಡಿಯಿಂದ ತಯಾರಿಸುತ್ತಾರೆ.
1 ಕಪ್ ಹಾಲಿಗೆ ಮುಕ್ಕಾಲು ಕಪ್ ನೀರು ಸೇರಿಸಿ ಬಿಸಿಯಾದ ನಂತರ ಸಕ್ಕರೆ , ಟೀ ಪುಡಿಯನ್ನು ಸೇರಿಸಿ ಕನಿಷ್ಠ 1೦-12 ನಿಮಿಷ ಕುದಿಸಬೇಕು.
ಟೀ ನಿಜವಾದ ರುಚಿ ಕುದಿಸುವುದರ ಮೇಲೆ ಇರುತ್ತದೆಯೇ ಹೊರತು ಅದಕ್ಕೆ ಹಾಕುವ ಪುಡಿಗಳ ಬಗ್ಗೆಯಲ್ಲ.
ಕುದಿಸಿದಷ್ಟು ರುಚಿಸುವ ಈ ಚಹಾವು ಗಲ್ಲಿ ಗಲ್ಲಿ ಸಣ್ಣ ಪುಟ್ಟ ಅಂಗಡಿಗಳಿಂದ ಹಿಡಿದು 5 ಸ್ಟಾರ್ ಹೋಟೆಲ್‌ಗಳವರೆಗೂ ಸಿಗುತ್ತದೆ.
ಇದೇ ಚಹಾಗೆ ಮಸಾಲ ಪದಾರ್ಥಗಳಾದ ಶುಂಠಿ, ಏಲಕ್ಕಿ, ಲವಂಗ, ಚಕ್ಕೆ, ಮೆಣಸು ಮತ್ತಷ್ಟು ಮೂಲಿಕೆಗಳನ್ನು ಹಾಕಿ ಕುದಿಸಿದರೆ ಮಸಾಲ ಚಾಯ್ ಆಗುತ್ತದೆ.
ವಿಶ್ವದ ಅತ್ಯಂತ ದುಬಾರಿ ಚಹಾಗಳು
ಡಾ ಹಾಂಗ್ ಪಾವೊ - ಪ್ರತಿ ಪೌಂಡ್‌ಗೆ $600,000 (₹4,99,30,200 - 500ಗ್ರಾಂ ಗೆ )
ಮಿಂಗ್ ರಾಜ ವಂಶಕ್ಕೆ ಸೇರಿದ ಈ ಡಾ ಹಾಂಗ್ ಪಾವೊ ಚಹಾವು ಭೂಮಿಯ ಮೇಲಿನ ಅತ್ಯಂತ ಬೆಲೆಬಾಳುವ ಕಪ್ಪು ಚಹಾಗಳಲ್ಲಿ ಒಂದಾಗಿದೆ.
ಬಿಗ್ ರೆಡ್ ರೋಬ್ ಟೀ ಎಂದೂ ಕರೆಯಲ್ಪಡುವ ಈ ಚೈನೀಸ್ ಚಹಾವು ವುಯಿ ಪರ್ವತಗಳ ಸತ್ವವನ್ನು ಒಳಗೊಂಡಿರುತ್ತದೆ.
ಅಪರೂಪದ ಈ ಚಹಾದ ಎಲೆಗಳನ್ನು 300 ವರ್ಷಗಳಿಗಿಂತ ಹೆಚ್ಚು ಕಾಲ ಪರ್ವತಗಳಲ್ಲಿ ಬೆಳೆದ ಸಸ್ಯಗಳಿಂದ ಕೊಯ್ಲು ಮಾಡಲಾಗುತ್ತದೆ.
ಈ ಹಳೆಯ ಸಸ್ಯಗಳು ಕೊನೆಯದಾಗಿ 2005 ರಲ್ಲಿ ಕೊಯ್ಲು ಮಾಡಲಾಯಿತು. ಈ ಚಹಾದ ಎಲೆಗಳ ತೂಕಕ್ಕೆ ಹೋಲಿಸಿದರೆ 30 ಪಟ್ಟು ಹೆಚ್ಚು ಚಿನ್ನವನ್ನು
ಕೊಳ್ಳಬಹುದು - ಅಂದರೆ ಒಂದು ಗ್ರಾಂ ಚಹಾ ಎಲೆಗಳ ಬೆಲೆ $1,400 (ಒಂದು ಲಕ್ಷ ರೂಪಾಯಿ) .
- ಪಾಂಡ ಡಂಗ್ ಟೀ
ಪಾಂಡಾ ಸಗಣಿ ಚಹಾದ ಉತ್ಪಾದನೆಯು ಹೆಸರೇ ಸೂಚಿಸುವಂತೆ, ಪಾಂಡಾ ಕರಡಿ ಮಲವಿಸರ್ಜನೆಯನ್ನು ಗೊಬ್ಬರವಾಗಿ ಬಳಸಬೇಕಾಗುತ್ತದೆ.
ಚಹಾವು ಅಡಿಕೆ ಪರಿಮಳವನ್ನು ಹೊಂದಿದೆ, ಇದು ಉತ್ಕರ್ಷಣ ನಿರೋಧಕಗಳಲ್ಲಿ ಅಧಿಕವಾಗಿದೆ ಮತ್ತು ಹಲವಾರು ಆರೋಗ್ಯ ಪ್ರಯೋಜನಗಳನ್ನು ನೀಡುತ್ತದೆ ಎಂದು ಹೇಳಲಾಗುತ್ತದೆ.
ಚಹಾವು ಕುದಿಸಿದಾಗ ಸೂಕ್ಷ್ಮವಾದ ಬಿದಿರಿನ ಪರಿಮಳವನ್ನು ಹೊಂದಿರುತ್ತದೆ ಮತ್ತು ಸರಿಸುಮಾರು $70,000/ಕೆಜಿಗೆ (₹58,24,574.ರೂ)ಮಾರಾಟವಾಗುತ್ತದೆ.
- ಎಲ್ಲೋ ಗೋಲ್ಡ್ ಟೀ ಬಡ್ಸ್
ವರ್ಷಕ್ಕೊಮ್ಮೆ , ಸುವಾಸನೆಯ ಚಿನ್ನ ಚಿನ್ನದ ಚಹಾ ಮೊಗ್ಗುಗಳನ್ನು ಚಿನ್ನದ ಸ್ನಿಪ್ಪರ್‌ಗಳೊಂದಿಗೆ ಕೊಯ್ಲು ಮಾಡಲಾಗುತ್ತದೆ ಮತ್ತು ನಂತರ ಬಿಸಿಲಿನಲ್ಲಿ ಒಣಗಿಸಲಾಗುತ್ತದೆ.
ಚಹಾ ಎಲೆಗಳನ್ನು ನಂತರ ತಿನ್ನಬಹುದಾದ 24-ಕ್ಯಾರಟ್ ಚಿನ್ನದ ಪದರಗಳಿಂದ ಲೇಪಿಸಲಾಗುತ್ತದೆ.
ಈ ಐಷಾರಾಮಿ ಚಹಾವು ಪ್ರತಿ ಕಿಲೋಗ್ರಾಮ್‌ಗೆ ಸುಮಾರು $7,800 (₹6,49,023) ವೆಚ್ಚವಾಗುತ್ತದೆ.
ಚಹಾವು ಅಸಾಮಾನ್ಯ ಲೋಹೀಯ ಮತ್ತು ಹೂವಿನ ನಂತರದ ರುಚಿಯನ್ನು ಹೊಂದಿದೆ. TWG ಟೀ ಬ್ರ್ಯಾಂಡ್‌ನಿಂದ ಸಿಂಗಾಪುರದಲ್ಲಿ ಮಾತ್ರ ಲಭ್ಯವಿದೆ.
- ಸಿಲ್ವರ್ ಟಿಪ್ಸ್ ಇಂಪೀರಿಯಲ್ ಟೀ
ಈ ಊಲಾಂಗ್ ತಳಿಯು ಭಾರತದ ಡಾರ್ಜಿಲಿಂಗ್‌ನಿಂದ ಬಂದಿದೆ.
ಬೆಳ್ಳಿಯ ಸೂಜಿಗಳಂತೆ ಕಂಡುಬರುವ , ಹಣ್ಣಿನ ಪರಿಮಳವನ್ನು ಹೊಂದಿರುವ ಈ ವಿಶಿಷ್ಟ ಮೊಗ್ಗುಗಳ ಚಹಾವು
ಫ್ರಾಂಗಿಪಾನಿ ಮತ್ತು ಮಾವಿನ ಸುವಾಸನೆಯೊಂದಿಗೆ ಸಂಕೀರ್ಣ ಪರಿಮಳವನ್ನು ಹೊಂದಿದೆ. 2014 ರಲ್ಲಿ, ಸಿಲ್ವರ್ ಟಿಪ್ಸ್ ಇಂಪೀರಿಯಲ್ ಚಹಾವನ್ನು
ಸರಿಸುಮಾರು $1,850/ಕೆಜಿಗೆ (₹1,66,413.80) ಹರಾಜು ಮಾಡಲಾಯಿತು. ಇದು ಅತ್ಯಂತ ದುಬಾರಿ ಭಾರತೀಯ ಚಹಾವಾಗಿದೆ.
ಹೀಗೆ ನಾವೆಲ್ಲ ನಿತ್ಯ ಕುಡಿಯುತ್ತಿರುವ ಚಹಾದ ಹಿಂದೆ ಇಷ್ಟೊಂದು ರೋಚಕ ಕತೆಗಳಿವೆ.
Share your comments