BUDGET 2022 : 2022-23 ರ ಹಣಕಾಸು ವರ್ಷಕ್ಕೆ ಕೇಂದ್ರ ಬಜೆಟ್ ಅನ್ನು ಮಂಡಿಸಿದ್ದಾರೆ. ಸರ್ಕಾರದ ಎರಡನೇ ಅವಧಿಯ ನಾಲ್ಕನೇ ಬಜೆಟ್ ಇದಾಗಿದೆ. ಈ ಬಜೆಟ್ಅನ್ನು ಕೊರೊನಾ ವೈರಸ್ ಯುಗದಲ್ಲಿ ಮಂಡಿಸಲಾಗಿದೆ.
ಹಣಕಾಸು ಸಚಿವ ಸೀತಾರಾಮನ್ ಅವರ ನಾಲ್ಕನೇ ಬಜೆಟ್ ಇದಾಗಿದೆ. ರಾಷ್ಟ್ರೀಯ ಪಿಂಚಣಿ ವ್ಯವಸ್ಥೆ ಅಂದರೆ NPSನಲ್ಲಿರುವ ರಾಜ್ಯ ಸರ್ಕಾರಿ ನೌಕರರಿಗೆ ಬಜೆಟ್ಒಳ್ಳೆಯ ಸುದ್ದಿ ತಂದಿದೆ. ಕೇಂದ್ರ ನೌಕರರ ಮಾದರಿಯಲ್ಲಿ ರಾಜ್ಯ ಸರ್ಕಾರಿ ನೌಕರರು ಕೂಡ ಸರ್ಕಾರದ ಶೇ 14ರಷ್ಟು ಕೊಡುಗೆಯ ಮೇಲೆ ತೆರಿಗೆ ಕಡಿತದ ಲಾಭ ಪಡೆಯಲಿದ್ದಾರೆ.
ಕೇಂದ್ರ ಸರ್ಕಾರಿ ನೌಕರರು ಸರ್ಕಾರದ ಕೊಡುಗೆಯ ಮೇಲೆ 14 ಪ್ರತಿಶತ ವಿನಾಯಿತಿಯನ್ನು ಪಡೆಯುತ್ತಿದ್ದರು ಮತ್ತು ರಾಜ್ಯ ನೌಕರರಿಗೆ ಈ ವಿನಾಯಿತಿಯು 10 ಪ್ರತಿಶತದಷ್ಟಿತ್ತು. ಉದ್ಯೋಗದಾತರು ಅಂದರೆ ಸರ್ಕಾರವು ಶೇಕಡಾ 14 ರಷ್ಟು ಕೊಡುಗೆ ನೀಡಿದ್ದರೂ, ವಿನಾಯಿತಿಯು 10% ವರೆಗೆ ಮಾತ್ರ ಲಭ್ಯವಿತ್ತು. ಆದರೆ ಈಗ ಅದನ್ನು ಶೇ.14ಕ್ಕೆ ಏರಿಸಲು ಅವಕಾಶ ಕಲ್ಪಿಸಲಾಗಿದೆ.
ಇದನ್ನು ಓದಿ:
7th PAY Commissionನಲ್ಲಿ Big Announcement!
NSPನಲ್ಲಿ ಚಂದಾದಾರರ ಸಂಖ್ಯೆಯಲ್ಲಿ ಹೆಚ್ಚಳ
ಉದ್ಯೋಗದಾತರ ಕೊಡುಗೆಯ ಮೇಲೆ ಲಭ್ಯವಿರುವ ತೆರಿಗೆ ಕಡಿತವು 80C ಯ ವಿನಾಯಿತಿಯ ಜೊತೆಗೆ ಲಭ್ಯವಿದೆ. ಎನ್‌ಪಿಎಸ್ ಪಿಂಚಣಿ ಯೋಜನೆಯಲ್ಲಿ ಚಂದಾದಾರರ ಸಂಖ್ಯೆ 46.3 ಮಿಲಿಯನ್ ಆಗಿದ್ದು, ಇದು ಹಿಂದಿನ ವರ್ಷಕ್ಕೆ ಹೋಲಿಸಿದರೆ ಶೇಕಡಾ 24 ರಷ್ಟು ಹೆಚ್ಚಾಗಿದೆ ಎಂದು ಆರ್ಥಿಕ ಸಮೀಕ್ಷೆ ಹೇಳಿದೆ. ನಿಸ್ಸಂಶಯವಾಗಿ ಈ ಬಜೆಟ್ ರಾಜ್ಯ ಸರ್ಕಾರದ ನೌಕರರಿಗೆ ನೆಮ್ಮದಿಯ ಸುದ್ದಿ ತಂದಿದೆ.
ಮಂಗಳವಾರ ಕೇಂದ್ರ ಬಜೆಟ್ ಮಂಡಿಸಿದ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ವರ್ಚುವಲ್ ಡಿಜಿಟಲ್ ಆಸ್ತಿಗಳಿಂದ ಬರುವ ಆದಾಯಕ್ಕೆ ಶೇಕಡಾ 30 ರಷ್ಟು ತೆರಿಗೆ ವಿಧಿಸಲಾಗುವುದು ಎಂದು ಹೇಳಿದರು. ಇದರೊಂದಿಗೆ, ಉಡುಗೊರೆಯಲ್ಲಿ ನೀಡಲಾಗುವ ಡಿಜಿಟಲ್ ಆಸ್ತಿಗಳನ್ನು ಸ್ವೀಕರಿಸುವವರು 30 ಪ್ರತಿಶತ ತೆರಿಗೆಯನ್ನು ಪಾವತಿಸಬೇಕಾಗುತ್ತದೆ. ಇದರೊಂದಿಗೆ, ಎಲ್ಲಾ ಡಿಜಿಟಲ್ ಆಸ್ತಿಗಳ ವಹಿವಾಟಿನ ಮೇಲೆ ಶೇಕಡಾ ಒಂದು ಟಿಡಿಎಸ್ ಅನ್ನು ಸಹ ವಿಧಿಸಲಾಗುತ್ತದೆ.
ಇನ್ನಷ್ಟು ಓದಿರಿ:
TMA Yojana! AGRICULTURAL TRANSPORT AND MARKET! ಬಂಪರ್ ನ್ಯೂಸ್!
Share your comments