ಎಲ್ಲೆಡೆ ವಾಯುಮಾಲಿನ್ಯ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಹೊಲದಲ್ಲಿನ ಕಳೆ ಅವಶೇಷ ಸುಡುವ ರೈತರಿಗೆ ಪಿಎಂ ಕಿಸಾನ್ ಸಬ್ಸಿಡಿ ರದ್ದು ಮಾಡಲು ಯೋಚಿಸಿದೆ. ಅಷ್ಟೇ ಅಲ್ಲದೇ ರೂ.5000 ದಂಡವನ್ನು ವಿಧಿಸಲಾಗುವುದು ಎಂದು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ತಿಳಿಸಿವೆ.
ಇದನ್ನೂ ಓದಿರಿ: Breaking: ಬರೋಬ್ಬರಿ 10 ಲಕ್ಷ ಜನರ ಪಡಿತರ ಚೀಟಿ ರದ್ದು ಮಾಡಿದ ಸರ್ಕಾರ! ಯಾಕೆ ಗೊತ್ತೆ?
ಉತ್ತರ ಭಾರತದಲ್ಲಿ ಕಳೆದ ಕೆಲವು ವಾರಗಳಲ್ಲಿ ಕಳೆ ಅವಶೇಷ ಸುಡುವಿಕೆ ಅಥವಾ ಜಮೀನಿಗೆ ಬೆಂಕಿ ಹಚ್ಚುವ ಪ್ರಕರಣಗಳು ಗಣನೀಯವಾಗಿ ಹೆಚ್ಚಿವೆ.
ಇದರ ಪರಿಣಾಮವಾಗಿ, ದೆಹಲಿ-ಎನ್ಸಿಆರ್ನಲ್ಲಿನ ವಾಯು ಗುಣಮಟ್ಟ ಸೂಚ್ಯಂಕವು (ಎಕ್ಯೂಐ) ಕಳೆದ ವಾರ ಅತ್ಯಂತ ತೀವ್ರವಾದ ಗತಿಯನ್ನು ತಲುಪಿತ್ತು. ಇದರಿಂದಾಗಿ ಶಾಲೆಗಳನ್ನು ಮುಚ್ಚಲು ಆಡಳಿತವನ್ನು ಒತ್ತಾಯಿಸಲಾಯಿತು.
ಹೆಚ್ಚುತ್ತಿರುವ ವಾಯು ಮಾಲಿನ್ಯಕ್ಕೆ ಮುಖ್ಯ ಕಾರಣವಾಗಿರುವ ಹುಲ್ಲು ಸುಡುವುದನ್ನು ನಿಯಂತ್ರಿಸಲು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಹಲವು ಯೋಜನೆಗಳು ಮತ್ತು ಕಾರ್ಯತಂತ್ರಗಳನ್ನು ಜಾರಿಗೆ ತಂದಿವೆ.
Dearness Allowance: ಡಿಎ ಬಾಕಿ ಕುರಿತಂತೆ ಸರ್ಕಾರಿ ನೌಕರರಿಗೆ ಸಿಹಿಸುದ್ದಿ: ಅಂದಾಜು ₹12,500 ಕೋಟಿ ಮೀಸಲು ಸಾಧ್ಯತೆ!
ಈ ನಿಟ್ಟಿನಲ್ಲಿ ಉತ್ತರ ಪ್ರದೇಶದ ಯೋಗಿ ಸರ್ಕಾರ ಕೂಡ ಮಹತ್ವದ ನಿರ್ಧಾರ ಕೈಗೊಂಡಿದೆ.
ಉತ್ತರ ಪ್ರದೇಶ ಸರ್ಕಾರವು ಬಿಡುಗಡೆ ಮಾಡಿದ ಹೇಳಿಕೆಯ ಪ್ರಕಾರ, ಬೆಳೆ ಅವಶೇಷಗಳನ್ನು ಸುಡುವುದನ್ನು ಕಂಡು ಬರುವ ರೈತರಿಗೆ ಪಿಎಂ ಕಿಸಾನ್ ಸಮ್ಮಾನ್ ನಿಧಿ ಯೋಜನೆಯಡಿ ವರ್ಷಕ್ಕೆ 6000 ರೂ ಧನಸಹಾಯವನ್ನು ನಿಲ್ಲಿಸಲಾಗುವುದು ಎಂದು ಹೇಳಿಕೆ ತಿಳಿಸಿದೆ.
ದೆಹಲಿ, ಹರಿಯಾಣ, ಪಂಜಾಬ್ ಮತ್ತು ಉತ್ತರ ಪ್ರದೇಶದಲ್ಲಿ ಹೆಚ್ಚುತ್ತಿರುವ ವಾಯು ಮಾಲಿನ್ಯವನ್ನು ಕಡಿಮೆ ಮಾಡಲು ಯೋಗಿ ಸರ್ಕಾರ ಈ ನಿರ್ಧಾರವನ್ನು ತೆಗೆದುಕೊಂಡಿದೆ. ಕಳೆ ಅವಶೇಷ ಸುಟ್ಟರೆ 5000 ದಂಡ!
ರೈತರ ಕಬ್ಬು ಬಾಕಿ ಹಣ ಶೀಘ್ರ ಪಾವತಿ ಮಾಡುವಂತೆ ಸಕ್ಕರೆ ಕಾರ್ಖಾನೆಗಳಿಗೆ ಸರ್ಕಾರ ಸೂಚನೆ!
ಅಲ್ಲದೆ ಕಳೆ ಅವಶೇಷ ಸುಡುವ ರೈತರಿಗೆ ದಂಡ ವಿಧಿಸಲಾಗುವುದು ಎಂದು ತಿಳಿಸಿದೆ. ಒಂದು ಎಕರೆಗಿಂತ ಕಡಿಮೆ ಜಮೀನು ಹೊಂದಿರುವ ರೈತರು ಬೆಳೆ ಅವಶೇಷಗಳನ್ನು ಸುಡುವುದು ಕಂಡುಬಂದರೆ 2500 ರೂ. ದಂಡ.
ಒಂದು ಎಕರೆಗಿಂತ ಹೆಚ್ಚು ಜಮೀನು ಹೊಂದಿರುವವರು 5000 ರೂಪಾಯಿ ದಂಡ ತೆರಬೇಕಾಗುತ್ತದೆ. ಮಾತ್ರವಲ್ಲದೆ ನಿಯಮ ಉಲ್ಲಂಘಿಸಿ ವಾಯುಮಾಲಿನ್ಯ ಉಂಟು ಮಾಡುವ ರೈತರ ಬಗ್ಗೆ ಈ ಸರ್ಕಾರ ಕಠಿಣ ಕ್ರಮ ಕೈಗೊಳ್ಳಲಿದೆ.
ರಾಜ್ಯದಲ್ಲಿ ಅತಿದೊಡ್ಡ ಬಹು-ಮಾದರಿ ಹೈಡ್ರೋಪೋನಿಕ್ಸ್ ಘಟಕವನ್ನು ಸ್ಥಾಪನೆ, ಡಿಸೆಂಬರ್ನಿಂದ ತರಬೇತಿ ಆರಂಭ
PM ಕಿಸಾನ್ 13 ಕಂತು ದಿನಾಂಕದಂದು ಬರಲಿದೆ
17 ಅಕ್ಟೋಬರ್ 2022 ರಂದು ನವದೆಹಲಿಯಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಸರ್ಕಾರವು ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯಡಿ ಕೊನೆಯ ಕಂತನ್ನು ಬಿಡುಗಡೆ ಮಾಡಿತು.
8 ಕೋಟಿಗೂ ಹೆಚ್ಚು ರೈತರು ಯೋಜನೆಯ ಲಾಭ ಪಡೆದಿದ್ದಾರೆ. ಆದಾಗ್ಯೂ, ಅಪೂರ್ಣ ಅಥವಾ ತಪ್ಪು ದಾಖಲಾತಿಗಳ ಕಾರಣದಿಂದ ಹಣವನ್ನು ಸ್ವೀಕರಿಸದ ಕೆಲವರು ಇದ್ದಾರೆ.
Diesel subsidy: ಅರ್ಜಿ ಸಲ್ಲಿಸಬೇಕಿಲ್ಲ, ಅಲೆದಾಡಬೇಕಿಲ್ಲ ನೇರವಾಗಿ ರೈತರ ಖಾತೆಗೆ ಡೀಸೆಲ್ ಸಬ್ಸಿಡಿ- ಬಿ.ಸಿ. ಪಾಟೀಲ್
ಮಾಧ್ಯಮ ವರದಿಗಳ ಪ್ರಕಾರ, ಸರ್ಕಾರವು 13 ನೇ ಅಥವಾ ಮುಂದಿನ ಕಂತು ಪಿಎಂ ಕಿಸಾನ್ ಅನ್ನು ಶೀಘ್ರದಲ್ಲೇ ಬಿಡುಗಡೆ ಮಾಡುವ ಸಾಧ್ಯತೆಯಿದೆ.
ಕಳೆದ ವರ್ಷ ಜನವರಿಯಲ್ಲಿ ಹಣಕಾಸಿನ ನೆರವನ್ನು ಬಿಡುಗಡೆ ಮಾಡಲಾಗಿತ್ತು ಆದ್ದರಿಂದ ಈ ಬಾರಿಯೂ ಸಹ, 2023 ರ ಜನವರಿಯಲ್ಲಿ ಪಿಎಂ ಕಿಸಾನ್ನ 13 ನೇ ಕಂತನ್ನು ಪ್ರಧಾನಿ ಮೋದಿ ವಿತರಿಸಲಿದ್ದಾರೆ ಎಂದು ಅಂದಾಜಿಸಲಾಗಿದೆ.
Share your comments