1. ಸುದ್ದಿಗಳು

Heavy Rain ಈಶಾನ್ಯ ಮುಂಗಾರು: ಕರ್ನಾಟಕ, ತಮಿಳುನಾಡು, ಕೇರಳದಲ್ಲಿ ಭಾರೀ ಮಳೆ!

Hitesh
Hitesh
ದಕ್ಷಿಣ ಭಾರತದಲ್ಲಿ ಮುಂದಿನ ಎರಡು ದಿನ ವ್ಯಾಪಕ ಮಳೆಯಾಗಲಿದೆ ಎಂದು ಐಎಂಡಿ ಮುನ್ಸೂಚನೆ ನೀಡಿದೆ.

ಈಶಾನ್ಯ ಮುಂಗಾರು ಚುರುಕುಗೊಂಡಿದ್ದು ದಕ್ಷಿಣ ಭಾರತದ ಕರ್ನಾಟಕ ಸೇರಿದಂತೆ ವಿವಿಧ ರಾಜ್ಯಗಳಲ್ಲಿ ಭಾರೀ ಮಳೆಯಾಗಲಿದೆ

ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

rain ಈಶಾನ್ಯ ಮುಂಗಾರು: ರಾಜ್ಯದ ಈ ಜಿಲ್ಲೆಗಳಲ್ಲಿ ಭಾರೀ ಮಳೆ!

ಈಶಾನ್ಯ ಮುಂಗಾರು ಈ ಭಾರೀ ತೀವ್ರವಾಗಿದೆ. ಹೀಗಾಗಿ, ಕರ್ನಾಟಕ, ಕೇರಳ, ತಮಿಳುನಾಡು, ಆಂಧ್ರಪ್ರದೇಶ ಹಾಗೂ ತೆಲಂಗಾಣ ಸೇರಿದಂತೆ

ಉತ್ತರ ಭಾರತದ ಕೆಲವು ರಾಜ್ಯಗಳಲ್ಲಿಯೂ ಭಾರೀ ಮಳೆ ಮುಂದುವರಿಯಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ವರದಿ ತಿಳಿಸಿದೆ. 

ತಮಿಳುನಾಡು, ಪುದುಚೇರಿ, ಕೇರಳ ಹಾಗೂ ಕರ್ನಾಟಕದ ದಕ್ಷಿಣ ಒಳನಾಡಿನ ಕೆಲವು ಭಾಗಗಳಲ್ಲಿ ಭಾರೀ ಮಳೆಯಾಗಲಿದೆ

ಎಂದು ಭಾರತೀಯ ಹವಾಮಾನ ಇಲಾಖೆ ವರದಿ ತಿಳಿಸಿದೆ.  

ಇನ್ನು ಕರಾವಳಿ ಆಂಧ್ರಪ್ರದೇಶ, ಯಾನಂ, ರಾಯಲಸೀಮಾ ಸೇರಿದಂತೆ ವಿವಿಧ ಭಾಗದಲ್ಲಿ ಗುಡುಗು ಸಹಿತ ವ್ಯಾಪಕ ಮಳೆಯಾಗಲಿದೆ.

ಅಲ್ಲದೇ ಗುಡುಗು ಸಹಿತ ಚದುರಿದ ಮಳೆಯು ಅಂಡಮಾನ್-ನಿಕೋಬಾರ್ ದ್ವೀಪಗಳ ಮೇಲೆ ಪರಿಣಾಮ ಬೀರಬಹುದು ಎಂದು ಐಎಂಡಿ ವರದಿ ತಿಳಿಸಿದೆ.  

ತಮಿಳುನಾಡಿನ ಚೆನ್ನೈನಲ್ಲಿ ಧಾರಾಕಾರ ಮಳೆ

ಈಶಾನ್ಯ ಮುಂಗಾರು ಮಳೆಯ ಪ್ರಭಾವ ದಕ್ಷಿಣ ಭಾರತದ ಹಲವು ರಾಜ್ಯಗಳ ಜಿಲ್ಲೆಗಳು ಹಾಗೂ ಮಹಾನಗರದ ಮೇಲೆ ಪ್ರಭಾವ ಬೀರಿದೆ.

ಹೀಗಾಗಿ, ಚೆನ್ನೈ ಹಾಗೂ ಬೆಂಗಳೂರು ಸೇರಿದಂತೆ ವಿವಿಧ ಮಹಾನಗರದಲ್ಲಿ ಭಾರೀ ಮಳೆ ನಿರೀಕ್ಷಿಸಲಾಗಿದೆ.

ತಮಿಳುನಾಡಿನ ದಕ್ಷಿಣ ಕರಾವಳಿಯ ಕೆಲವು ಜಿಲ್ಲೆಗಳು ಮತ್ತು ಪಶ್ಚಿಮ ಘಟ್ಟ ಭಾಗಗಳಲ್ಲಿ ಭಾನುವಾರ ಭಾರೀಯಿಂದ ಭಾರೀ ಮಳೆಯಾಗಲಿದೆ

ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಸೋಮವಾರ ಮಳೆಯ ತೀವ್ರತೆ ಇಳಿಕೆಯಾಗುವ ಸಾಧ್ಯತೆ ಇದೆ

ಎಂದು ಚೆನ್ನೈ  ಪ್ರಾದೇಶಿಕ ಹವಾಮಾನ ಕೇಂದ್ರವು ಮಾಹಿತಿ ನೀಡಿದೆ.

ಹೀಗಾಗಿ, ಈ ಭಾಗದಲ್ಲಿ ಹವಾಮಾನ ಇಲಾಖೆಯು ಆರೆಂಜ್‌ ಅಲರ್ಟ್‌ ನೀಡಿದೆ.  

ಕೇರಳದಲ್ಲಿ ಭಾರೀ ಮಳೆ

ಈಶಾನ್ಯ ಮುಂಗಾರು ಪ್ರಭಾವವು ಕೇರಳದ ಮೇಲೆ ತೀವ್ರವಾಗಿದೆ. ಕೇರಳದ ವಿವಿಧ ಜಿಲ್ಲೆಗಳಲ್ಲಿ ಭಾರೀ ಮಳೆಯಾಗುತ್ತಿದೆ. 

ಕೆಲವು ಜಿಲ್ಲೆಗಳಲ್ಲಿ ಆರೆಂಜ್‌ ಹಾಗೂ ಯೆಲ್ಲೋ ಅಲರ್ಟ್‌ ಘೋಷಿಸಲಾಗಿದೆ.  ಪತ್ತನಂತಿಟ್ಟ, ಇಡುಕ್ಕಿ, ಮಲಪ್ಪುರಂ ಭಾಗದಲ್ಲಿ

ಭಾರತೀಯ ಹವಾಮಾನ ಇಲಾಖೆಯು ಆರೆಂಜ್ ಅಲರ್ಟ್ ಘೋಷಿಸಿದೆ.

ಪ್ರತ್ಯೇಕ ಸ್ಥಳಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆಯಿದೆ ಎಂದು ಮುನ್ಸೂಚನೆ ನೀಡಲಾಗಿದೆ. ಅತಿ ಹೆಚ್ಚು ಮಳೆ

ಎಂದರೆ 24 ಗಂಟೆಗಳಲ್ಲಿ 115.6 ಮಿಮೀ ನಿಂದ 204.4 ಮಿಮೀ ಮಳೆಯಾಗಿದೆ ಎಂದು ಹವಾಮಾನ ಇಲಾಖೆ ಎಚ್ಚರಿಸಿದೆ.   

05-11-2023 : ಅಲಪ್ಪುಳ, ಎರ್ನಾಕುಲಂ, ಪಾಲಕ್ಕಾಡ್

06-11-2023 : ತಿರುವನಂತಪುರಂ, ಕೊಲ್ಲಂ, ಪತ್ತನಂತಿಟ್ಟ, ಆಲಪ್ಪುಳ, ಕೊಟ್ಟಾಯಂ, ಇಡುಕ್ಕಿ, ಎರ್ನಾಕುಲಂ, ತ್ರಿಶೂರ್, ಪಾಲಕ್ಕಾಡ್, ಮಲಪ್ಪುರಂ, ವಯನಾಡ್

07-11-2023 : ಎರ್ನಾಕುಲಂ ಭಾಗದಲ್ಲಿ ಕೇಂದ್ರ ಹವಾಮಾನ ಇಲಾಖೆಯು ಜಿಲ್ಲೆಗಳಲ್ಲಿ ಹಳದಿ ಅಲರ್ಟ್ ಘೋಷಿಸಿದೆ.    

ಚಂಡಮಾರುತದ ಉಲ್ಬಣದಿಂದಾಗಿ ಕೇರಳದ ಕರಾವಳಿಗಳಲ್ಲಿ ಪ್ರಬಲವಾಗುವ ಸಾಧ್ಯತೆಯಿರುವುದರಿಂದ ಅಪಾಯದ ವಲಯಗಳಲ್ಲಿ

ವಾಸಿಸುವ ಜನರು ಜಾಗರೂಕರಾಗಿರಬೇಕು. ಅಗತ್ಯ ಹಂತದಲ್ಲಿ ಮಾತ್ರ ಸಂಚಾರ ಮಾಡಬೇಕು.  

ಭಾರೀ ಮಳೆಯ ಸಂದರ್ಭದಲ್ಲಿ, ಯಾವುದೇ ಸಂದರ್ಭದಲ್ಲಿ ನದಿಗಳನ್ನು ದಾಟಬಾರದು, ಸ್ನಾನ, ಮೀನುಗಾರಿಕೆ ಅಥವಾ ಇತರ

ಉದ್ದೇಶಗಳಿಗಾಗಿ ನದಿಗಳು ಅಥವಾ ಇತರ ಜಲಮೂಲಗಳನ್ನು ಪ್ರವೇಶಿಸಬಾರದು ಎಂದು ಎಚ್ಚರಿಕೆ ನೀಡಲಾಗಿದೆ.  

ಜಲಮೂಲಗಳ ಮೇಲಿರುವ ಮೇಲ್ಸೇತುವೆಗಳಲ್ಲಿ ವೀಕ್ಷಣೆ, ಸೆಲ್ಫಿ ತೆಗೆಯುವುದು ಅಥವಾ ಗುಂಪು ಸೇರುವುದನ್ನು ಅಗತ್ಯವಾಗಿ ನಿರ್ಬಂಧಿಸಲಾಗಿದೆ.  

ಅಣೆಕಟ್ಟುಗಳ ಕೆಳಭಾಗದಲ್ಲಿ ವಾಸಿಸುವ ನಿವಾಸಿಗಳು ಅಣೆಕಟ್ಟುಗಳಿಂದ ನೀರು ಉಕ್ಕಿ ಹರಿಯುವ ಸಾಧ್ಯತೆಯೂ

ಇರುವುದರಿಂದ ಅಗತ್ಯವಿದ್ದಲ್ಲಿ ಅಧಿಕಾರಿಗಳ ಸೂಚನೆಯಂತೆ ಸ್ಥಳಾಂತರ ಮಾಡಬೇಕು ಎಂದು ಸಾರ್ವಜನಿಕರಿಗೆ ಹೇಳಲಾಗಿದೆ.

ಕರ್ನಾಟಕದಲ್ಲಿಯೂ ಭಾರೀ ಮಳೆ !

ಭಾನುವಾರ ಹಾಗೂ ಸೋಮವಾರದಂದು ಕರ್ನಾಟಕದ ದಕ್ಷಿಣ ಒಳನಾಡಿನ ಕೊಡಗು ಜಿಲ್ಲೆಯಲ್ಲಿ ಭಾರಿಯಿಂದ ಅತಿ

ಭಾರಿ ಮಳೆಯಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.  

ಕರಾವಳಿಯ ಎಲ್ಲಾ ಜಿಲ್ಲೆಗಳ ಹಾಗೂ ದಕ್ಷಿಣ ಒಳನಾಡಿನ ಚಾಮರಾಜನಗರ, ಚಿಕ್ಕಮಗಳೂರು, ಹಾಸನ, ಮಂಡ್ಯ, ಮೈಸೂರು

ಮತ್ತು ಶಿವಮೊಗ್ಗ ಜಿಲ್ಲೆಗಳ ಒಂದೆರಡು ಕಡೆಗಳಲ್ಲಿ ಭಾರಿ ಮಳೆಯಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ವರದಿ ತಿಳಿಸಿದೆ.  

ಮುಂದಿನ 24 ಗಂಟೆಗಳು: ಕರಾವಳಿ ಮತ್ತು ದಕ್ಷಿಣ ಒಳನಾಡಿನ ಬಹುತೇಕ ಕಡೆಗಳಲ್ಲಿ ಹಗುರದಿಂದ ಸಾಧಾರಣ ಮಳೆಯಾಗುವ ಬಹಳಷ್ಟು ಸಾಧ್ಯತೆ ಇದೆ.

ಈ ರಾಜ್ಯಗಳಲ್ಲೂ ತೀವ್ರ ಮಳೆ ಮುನ್ಸೂಚನೆ!

ಈಶಾನ್ಯ ಮುಂಗಾರಿನ ಪ್ರಭಾವವಾಗಿ ಕೇವಲ ದಕ್ಷಿಣ ಭಾರತದಲ್ಲಿ ಮಾತ್ರವಲ್ಲದೇ ಉತ್ತರ ಹಾಗೂ ಈಶಾನ್ಯ ಭಾರತದ ಕೆಲವು

ರಾಜ್ಯಗಳ ಮೇಲೆಯೂ ತೀವ್ರ ಪ್ರಭಾವ ಬೀರಿವೆ. ಹೀಗಾಗಿ, ಒಡಿಶಾ, ಕೊಂಕಣ-ಗೋವಾ, ಮಹಾರಾಷ್ಟ್ರ, ಛತ್ತೀಸ್‌ಗಢ ಸೇರಿದಂತೆ

ವಿವಿಧ ರಾಜ್ಯಗಳಲ್ಲಿ ಮಳೆ ಮುಂದುವರಿಯಲಿದೆ ಎಂದು ಹವಾಮಾನ ಇಲಾಖೆ ವರದಿ ತಿಳಿಸಿದೆ.  

Published On: 05 November 2023, 12:21 PM English Summary: Northeast Monsoon: Heavy rains in Karnataka, Tamil Nadu, Kerala!

Share your comments

Latest feeds

More News
Krishi Jagran Kannada Magazine Subscription Online Subscription

CopyRight - 2024 Krishi Jagran Media Group. All Rights Reserved.