1. ಸುದ್ದಿಗಳು

ದಕ್ಷಿಣ ಕೊರಿಯಾದತ್ತ 25 ಕ್ಷಿಪಣಿ ಉಡಾಯಿಸಿದ ಉತ್ತರ ಕೊರಿಯಾ!

Hitesh
Hitesh
missiles

ಉತ್ತರ ಕೊರಿಯಾ ಮತ್ತು ದಕ್ಷಿಣ ಕೊರಿಯಾದ ನಡುವೆ ಮಕ್ಕಳಾಟದಂತೆ ಕ್ಷಿಪಣಿಗಳ ಉಡಾವಣೆ ನಡೆದಿದೆ.

ರೈತರಿಗೆ ಸಿಹಿಸುದ್ದಿ: ಹಿಂಗಾರು; ಭತ್ತ ಖರೀದಿಯಲ್ಲಿ ಶೇ 12% ಹೆಚ್ಚಳ

ಈಗಾಗಲೇ ವಿಶ್ವದ ಹಲವು ರಾಷ್ಟ್ರಗಳು ರಷ್ಯಾ ಮತ್ತು ಉಕ್ರೇನ್‌ನ ನಡುವೆ ನಡೆಯುತ್ತಿರುವ ಯುದ್ಧದಿಂದಾಗಿ ಇನ್ನೂ ಚೇತರಿಸಿಕೊಂಡಿಲ್ಲ.

ಇದೀಗ ಉತ್ತರ ಕೊರಿಯಾ ಮತ್ತು ದಕ್ಷಿಣ ಕೊರಿಯಾದ ನಡುವೆಯೂ ಯುದ್ಧದ ಕಾರ್ಮೋಡಗಳು ಕಾಣಿಸಿಕೊಳ್ಳುತ್ತಿವೆ.   

ಇದನ್ನೂ ಓದಿರಿ: ದೇಶದ ವಿವಿಧೆಡೆ ಗೋಧಿ ಬೆಲೆ ಹೆಚ್ಚಳ: ಪ್ರತಿ ಕ್ವಿಂಟಾಲ್‌ಗೆ 900 ರೂ. ಏರಿಕೆ !  

ಮೊದಲು ಉತ್ತರ ಕೊರಿಯಾ ಕ್ಷಿಪಣಿಯನ್ನು ದಕ್ಷಿಣ ಕೊರಿಯಾದ ಮೇಲೆ ಉಡಾವಣೆ ಮಾಡಿದ ನಂತರ ದಕ್ಷಿಣ ಕೊರಿಯಾ ಉತ್ತರ ಕೊರಿಯಾದ ಮೇಲೆ ಮೂರು ಕ್ಷಿಪಣಿಗಳನ್ನು ಉಡಾವಣೆ ಮಾಡಿತ್ತು.

ಇದೀಗ ಬುಧವಾರ ದಕ್ಷಿಣ ಕೊರಿಯಾದತ್ತ 25 ಕ್ಷಿಪಣಿಗಳನ್ನು ಉತ್ತರ ಕೊರಿಯಾ ಉಡಾಯಿಸಿದ್ದು, ಆತಂಕದ ವಾತಾವರಣ ಸೃಷ್ಟಿಯಾಗಿದೆ.

ಇದರಲ್ಲಿ ಒಂದು ಕ್ಷಿಪಣಿಯು ದಕ್ಷಿಣ ಕೊರಿಯಾ ಕಡಲ ಜಲಗಡಿಗೆ ಅಪ್ಪಳಿಸಿದೆ.

ಉತ್ತರ ಕೊರಿಯಾದ ಮಿಲಿಟರಿಯು ಬುಧವಾರ ನಸುಕಿನಲ್ಲಿ 19 ಕ್ಷಿಪಣಿಗಳನ್ನು ಉಡಾಯಿಸಿತ್ತು. ಮಧ್ಯಾಹ್ನ ಮತ್ತೆ ಆರು ಕ್ಷಿಪಣಿಗಳನ್ನು ತನ್ನ ಪೂರ್ವ ಮತ್ತು ಪಶ್ಚಿಮ ಕರಾವಳಿಯಿಂದ ಪ್ರಯೋಗಿಸಿದೆ!  

ದಕ್ಷಿಣ ಕೊರಿಯಾದ ದ್ವೀಪದಲ್ಲಿ ವಾಯುದಾಳಿ ಎಚ್ಚರಿಕೆಯ ಗಂಟೆ ಇಡೀ ದಿನ ಮೊಳಗಿತ್ತು.  

ವಾರಪೂರ್ತಿ 12 ತಾಸು ದುಡಿಯಿರಿ ಎಂದ ಎಲಾನ್‌ ಮಸ್ಕ್‌! 

ಕ್ಷಿಪಣಿಗಳಲ್ಲಿ ಕೆಲವನ್ನು ಸಮೀಪದಲ್ಲೇ ಉತ್ತರ ಕೊರಿಯಾ ಹಾರಿಸಿದೆ. ಇನ್ನುಳಿದಂತೆ ಒಂದು ಕ್ಷಿಪಣಿ ಉಭಯ ರಾಷ್ಟ್ರಗಳ ನಡುವಿನ ವಾಸ್ತವಿಕ ಕಡಲ ಜಲಗಡಿ ದಾಟಿದೆ.

ಇದರಿಂದ ಉಲ್ಲುಂಗ್ಡೊ ದ್ವೀಪದ ನಿವಾಸಿಗಳಿಗೆ ಬಂಕರ್‌ಗಳಲ್ಲಿ ಆಶ್ರಯ ಪಡೆಯಲು ದಕ್ಷಿಣ ಕೊರಿಯಾ ಎಚ್ಚರಿಸಿದೆ.

ತನ್ನ ಗಡಿಯಲ್ಲಿ ಕ್ಷಿಪಣಿಗಳನ್ನು ಉಡಾಯಿಸುವ ಮೂಲಕ ತ್ವರಿತ ಪ್ರತ್ಯುತ್ತರವನ್ನೂ ದಕ್ಷಿಣ ಕೊರಿಯಾ ನೀಡಿದೆ.

missiles

ಹಿನ್ನೆಲೆ ಏನು

ಕಳೆದ ಕೆಲವು ದಿನಗಳಿಂದ ಎರಡೂ ದೇಶಗಳ ನಡುವೆ ಈ ಕ್ಷಿಪಣಿ ಉಡಾವಣೆಯ ತಂತ್ರ ಮತ್ತು ಪ್ರತಿತಂತ್ರ ಮುಂದುವರಿದಿದೆ.

ಮೊದಲು ಉತ್ತರ ಕೊರಿಯಾ, ನಂತರ ದಕ್ಷಿಣ ಕೊರಿಯಾ ಇದೀಗ ಮತ್ತೆ ಉತ್ತರ ಕೊರಿಯಾ ಕ್ಷಿಪಣೆ ಪ್ರಯೋಗವನ್ನು ಮಾಡಿದೆ.

ಸದ್ಯ ಅಮೆರಿಕ ಮತ್ತು ದಕ್ಷಿಣ ಕೊರಿಯಾ ನಡೆಸುತ್ತಿರುವ ಜಂಟಿ ವೈಮಾನಿಕ ತಾಲೀಮು ಮುಂದೆ ಉತ್ತರ ಕೊರಿಯಾದ ಮೇಲೆ ನಡೆಯಲಿರುವ ಆಕ್ರಮಣ ಎಂದೇ ಭಾವಿಸಿದ್ದು, ಈ ಆಕ್ರಮಣಗಳಿಗೆ ಕಾರಣವಾಗಿದೆ.

ಪಂಜಾಬ್‌ನಲ್ಲಿ ಕಳೆ ಸುಡುತ್ತಿರುವ ರೈತರು; ದೆಹಲಿಯಲ್ಲಿ ವಾಯುಮಾಲಿನ್ಯ ಹೆಚ್ಚಳ!   

missiles

ಅಮೆರಿಕಾ ಮತ್ತು ದಕ್ಷಿಣ ಕೊರಿಯಾದ ಜಂಟಿ ತಾಲೀಮಿಗೆ ಪ್ರತ್ಯುತ್ತರವಾಗಿ ಸಮುದ್ರ ಗಡಿಯ ಬಫರ್‌ ವಲಯದ ಮೇಲೆ ಉತ್ತರ ಕೊರಿಯಾ ಫಿರಂಗಿ ದಾಳಿ ನಡೆಸುತ್ತಿದ್ದು, ಅಣ್ವಸ್ತ್ರ ಪರೀಕ್ಷೆಗೆ ಮುಂದಾಗುವ ಆತಂಕವೂ ಇದೀಗ ಎದುರಾಗಿದೆ.  

ದೇಶದ ಶಿಕ್ಷಣ ವ್ಯವಸ್ಥೆಯಲ್ಲಿ ಭಾರೀ ಸುಧಾರಣೆ: 8 ಲಕ್ಷ ವಿದ್ಯಾರ್ಥಿಗಳು ದಾಖಲು!  

Published On: 03 November 2022, 05:18 PM English Summary: North Korea launched 25 missiles at South Korea!

Share your comments

Latest feeds

More News
Krishi Jagran Kannada Magazine Subscription Online Subscription

CopyRight - 2024 Krishi Jagran Media Group. All Rights Reserved.