1. ಸುದ್ದಿಗಳು

“ರಾಷ್ಟ್ರೀಯ ಮಟ್ಟದ ತೋಟಗಾರಿಕೆ ಮೌಲ್ಯ ಸರಪಳಿ” ಕಾರ್ಯಕ್ರಮ ನವೆಂಬರ್‌ 1ಕ್ಕೆ

Hitesh
Hitesh
Horticulture Value Chain

ಪುಣೆಯಲ್ಲಿ ನವೆಂಬರ್‌ 1ಕ್ಕೆ ರಾಷ್ಟ್ರೀಯ ಮಟ್ಟದ ತೋಟಗಾರಿಕೆ ಮೌಲ್ಯ ಸರಪಳಿ ಕಾರ್ಯಕ್ರಮ ನಡೆಯಲಿದೆ. ತೋಟಗಾರಿಕೆಯಲ್ಲಿ ತೊಡಗಿಸಿಕೊಂಡಿರುವವರಿಗೆ ಈ ಕಾರ್ಯಕ್ರಮ ಮಹತ್ವದ್ದಾಗಿದೆ.

ಪಡಿತರ ಚೀಟಿದಾರರಿಗೆ ಇಲ್ಲಿದೆ ಸಿಹಿ ಸುದ್ದಿ, ಇನ್ಮುಂದೆ ನೀವು ಎಲ್ಲೆ ಇದ್ದರೂ ಈ ಸೌಲಭ್ಯ ಪಡೆಯಬಹುದು! ಏನದು ಗೊತ್ತೆ? 

ಪುಣೆಯಲ್ಲಿ ನವೆಂಬರ್‌ 1ಕ್ಕೆ ರಾಷ್ಟ್ರೀಯ ಮಟ್ಟದ ತೋಟಗಾರಿಕೆ ಮೌಲ್ಯ ಸರಪಳಿ ಕಾರ್ಯಕ್ರಮ ನಡೆಯಲಿದೆ.

ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ಸಚಿವ ನರೇಂದ್ರ ಸಿಂಗ್ ತೋಮರ್ ಅವರು ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ.

ತೋಟಗಾರಿಕೆ ಕ್ಷೇತ್ರ ಅಪಾರ ಕೊಡುಗೆ ನೀಡಿದ ರೈತರು, ಎಫ್‌ಪಿಒಗಳು, ಅಗ್ರಿ ಸ್ಟಾರ್ಟ್‌ಅಪ್‌ ಪ್ರಾರಂಭಿಸಿದವರು,

ಉದ್ಯಮಿಗಳು, ಬ್ಯಾಂಕ್‌ನ ಉದ್ಯೋಗಿಗಳಿಗೆ ಕೇಂದ್ರ ಸಚಿವ ನರೇಂದ್ರ ಸಿಂಗ್‌ ತೋಮರ್‌ ಅವರು ಸನ್ಮಾನಿಸಲಿದ್ದಾರೆ.  

ಕೃಷಿ ಮತ್ತು ರೈತರ ಕಲ್ಯಾಣ ಸಚಿವಾಲಯ ಈ ಕಾರ್ಯಕ್ರಮವನ್ನು ಆಯೋಜಿಸುತ್ತಿದೆ.  

“ಭಾರತದಲ್ಲಿ ತೋಟಗಾರಿಕೆ ಮೌಲ್ಯ ಸರಪಳಿಯ ವಿಸ್ತರಣೆ – ಸಂಭಾವ್ಯ ಮತ್ತು ಅವಕಾಶಗಳು” ಕುರಿತು ಚರ್ಚೆ ನಡೆಯಲಿದೆ.   

ಇದೇ ಸಂದರ್ಭದಲ್ಲಿ “ತೋಟಗಾರಿಕಾ ಬೆಳೆಗಳಿಗೆ ಸಾವಯವ ಪ್ಯಾಕೇಜಿಂಗ್” ಎಂಬ ಪುಸ್ತಕವನ್ನು ಸಚಿವರು ಬಿಡುಗಡೆ ಮಾಡಲಿದ್ದಾರೆ.

ಇದರಲ್ಲಿ ತೋಟಗಾರಿಕೆ ಕ್ಷೇತ್ರದ ಯಶಸ್ಸಿನ ಕಥೆಗಳು, ಮಿಷನ್ ಸಾವಯವ ಮೌಲ್ಯ ಸರಪಳಿಯನ್ನು ಒಳಗೊಂಡಿದೆ.  

ಕಾರ್ಯಕ್ರಮದಲ್ಲಿ ಭಾರತದಲ್ಲಿ ತೋಟಗಾರಿಕೆ ಮೌಲ್ಯ ಸರಪಳಿಯ ವಿಸ್ತರಣೆ - ಸಂಭಾವ್ಯ ಮತ್ತು ಅವಕಾಶಗಳ ಬಗ್ಗೆ ವಿಸ್ತೃತವಾದ ಚರ್ಚೆ ನಡೆಯಲಿದೆ.   

ಕಾರ್ಯಕ್ರಮದಲ್ಲಿ ರೈತರು, ಅಗ್ರಿ ಸ್ಟಾರ್ಟ್-ಅಪ್‌ಗಳು, ಸಂಶೋಧಕರು, ನೀತಿ ನಿರೂಪಕರು, ಬ್ಯಾಂಕ್‌ ಸಿಬ್ಬಂದಿಯನ್ನು ಉದ್ದೇಶಿಸಿ ಮಾತನಾಡಲಿದ್ದಾರೆ.  

ಕಾರ್ಯಕ್ರಮವು ರೈತರು, ಎಫ್‌ಪಿಒಗಳು, ವಿವಿಧ ಬೆಳೆಗಳಲ್ಲಿನ ಉತ್ಕೃಷ್ಟತೆಯ ಕೇಂದ್ರ (ಸಿಒಇ), ಐಸಿಎಆರ್ ಬೆಳೆ

ನಿರ್ದಿಷ್ಟ ರಾಷ್ಟ್ರೀಯ ಸಂಶೋಧನಾ ಕೇಂದ್ರಗಳು, ನಿಖರವಾದ ಕೃಷಿ ಅಭಿವೃದ್ಧಿ ಕೇಂದ್ರಗಳನ್ನು ಒಂದೇ ವೇದಿಕೆಯಲ್ಲಿ ಒಳಗೊಂಡಿರಲಿದೆ.   

ಸ್ಥಳೀಯ ಮಟ್ಟದ ತೋಟಗಾರಿಕಾ ಬೆಳೆಗಳ ಕುರಿತು ಚರ್ಚೆ

ಈ ಕಾರ್ಯಕ್ರಮದಲ್ಲಿ ಕೃಷಿ ಮತ್ತು ರೈತರ ಕಲ್ಯಾಣ ಇಲಾಖೆಯ ಪ್ರತಿನಿಧಿಯಿಂದ ವಿದೇಶಿ, ಸ್ಥಳೀಯ ಮತ್ತು ಹೆಚ್ಚಿನ ಮೌಲ್ಯದ ತೋಟಗಾರಿಕಾ ಬೆಳೆಗಳಲ್ಲಿನ ಅವಕಾಶಗಳ ಅವಲೋಕನದ ಕುರಿತು ಚರ್ಚೆ ನಡೆಯಲಿದೆ.

ಅಲ್ಲದೆ, ರೈತರು ವಿದೇಶಿ ಹಣ್ಣಿನ ಯಶಸ್ಸಿ ಬಗ್ಗೆ ಚರ್ಚೆ ನಡೆಯಲಿದೆ.

ಸಾವಯವ ಕೃಷಿಯಲ್ಲಿ  ಮೌಲ್ಯ ಸರಪಳಿಯನ್ನು ಉತ್ತಮಗೊಳಿಸುವ ಕುರಿತು ತಜ್ಞರು ಮಾತನಾಡಲಿದ್ದಾರೆ.

ಇದನ್ನೂ ಓದಿರಿ: 10ನೇ ತರಗತಿ ಪಾಸಾಗಿದ್ದರೇ ಸಾಕು KMF ನಲ್ಲಿವೆ ಉದ್ಯೋಗಾವಕಾಶ; ರೂ.97100 ಸಂಬಳ! 

ಹೂವು ಕೃಷಿ ಕಾರ್ಯಕ್ರಮ ಮತ್ತು ಅವಕಾಶಗಳು

ಈ ಕಾರ್ಯಕ್ರಮದಲ್ಲಿ ICAR-ಡೈರೆಕ್ಟರೇಟ್ ಆಫ್ ಫ್ಲೋರಿಕಲ್ಚರಲ್ ರಿಸರ್ಚ್‌ನ ಪ್ರತಿನಿಧಿಯಿಂದ ಪುಷ್ಪ ಕೃಷಿಯಲ್ಲಿನ ಅವಕಾಶಗಳು,

ಸವಾಲುಗಳು ಹಾಗೂ ಯಶಸ್ಸು ಸಾಧಿಸುವ ಮಾರ್ಗಗಳ ಬಗ್ಗೆ ತಿಳಿಸಲಿದ್ದಾರೆ.

ಅಲ್ಲದೆ, ಇ-ಕಾಮರ್ಸ್ ಆಫ್ ಫ್ಲೋರಿಕಲ್ಚರ್ ಮತ್ತು ವೇಸ್ಟ್ ಟು ವೆಲ್ತ್ ಸ್ಟಾರ್ಟ್ ಅಪ್ ಕುರಿತು ಕ್ರಮವಾಗಿ ಬೆಳವಣಿಗೆ ಮತ್ತು ಯಶಸ್ಸಿನ ಬಗ್ಗೆ ಪರಿಚಯ ನೀಡಲಿದ್ದಾರೆ.  

ತೋಟಗಾರಿಕೆಯಲ್ಲಿ GAP ಮತ್ತು ವಿಸ್ತರಣೆ ಆವಿಷ್ಕಾರಗಳು

ಇದರಲ್ಲಿ ಇನ್ನೂ ಮುಖ್ಯವಾಗಿ ICAR-ಇಂಡಿಯನ್ ಇನ್ಸ್‌ಟಿಟ್ಯೂಟ್ ಆಫ್ ಹಾರ್ಟಿಕಲ್ಚರಲ್ ರಿಸರ್ಚ್‌ನ ಪ್ರತಿನಿಧಿಯಿಂದ

ಭಾರತದಲ್ಲಿ ತೋಟಗಾರಿಕೆಯಲ್ಲಿ ತಂತ್ರಜ್ಞಾನ ಮತ್ತು ನಾವೀನ್ಯತೆಗಳ ಪಾತ್ರದ ಬಗ್ಗೆ ವಿವರ ನೀಡಲಾಗುವುದು.  

ಅಲ್ಲದೆ, ತಾಜಾ ಕೃಷಿ ಉತ್ಪನ್ನಗಳಲ್ಲಿ ತಂತ್ರಜ್ಞಾನದ ಪಾತ್ರಗಳು ಮತ್ತು ತೋಟಗಾರಿಕೆಗಾಗಿ ಯಶಸ್ವಿ FPOಗಳ ಬಗ್ಗೆ  ತಜ್ಞರು ಪರಿಚಯ ನೀಡಲಿದ್ದಾರೆ.  

ಸುಗ್ಗಿಯ ನಂತರದ ತಂತ್ರಜ್ಞಾನ, ಮೂಲಸೌಕರ್ಯ, ಸಂಸ್ಥೆಗಳು ಮತ್ತು ಸವಾಲುಗಳು

ರಾಷ್ಟ್ರೀಯ ಆಹಾರ ತಂತ್ರಜ್ಞಾನ ಉದ್ಯಮಶೀಲತೆ ಮತ್ತು ನಿರ್ವಹಣೆಯ (NIFTEM) ಪ್ರತಿನಿಧಿಯಿಂದ ತೋಟಗಾರಿಕೆಯಲ್ಲಿ ಸುಗ್ಗಿಯ

ನಂತರದ ತಂತ್ರಜ್ಞಾನಗಳ ಅವಲೋಕನದ ಕುರಿತು ಮಾತನಾಡುತ್ತಾರೆ.

ಅಲ್ಲದೆ, ತೋಟಗಾರಿಕೆಯಲ್ಲಿ ನಾವೀನ್ಯತೆ ಮತ್ತು ಕೇಂದ್ರ ಆಹಾರ ತಾಂತ್ರಿಕ ಸಂಶೋಧನಾ ಸಂಸ್ಥೆಯ (CFTRI) ಪಾತ್ರದ ಮೂಲಕ

ಆಹಾರ ತಂತ್ರಜ್ಞಾನವನ್ನು ಅವರ ಪ್ರತಿನಿಧಿಯಿಂದ ಮುನ್ನಡೆಸುವ ಕುರಿತು ಚರ್ಚೆ ನಡೆಯಲಿದೆ.   

ಮಾರ್ಕೆಟಿಂಗ್ ಮತ್ತು ತೋಟಗಾರಿಕಾ ಸರಕು ರಫ್ತು  

ಕೃಷಿ ಮತ್ತು ಸಂಸ್ಕರಿಸಿದ ಆಹಾರ ಉತ್ಪನ್ನಗಳ ರಫ್ತು ಅಭಿವೃದ್ಧಿ ಪ್ರಾಧಿಕಾರದ (APEDA) ಪ್ರತಿನಿಧಿಯಿಂದ ಭಾರತೀಯ ತೋಟಗಾರಿಕೆಗೆ ರಫ್ತು ಅವಕಾಶಗಳ ಬಗ್ಗೆ ಚರ್ಚೆ ನಡೆಯಲಿದೆ.

ತೋಟಗಾರಿಕೆ ಮೌಲ್ಯ ಸರಪಳಿ ಚಟುವಟಿಕೆಯಲ್ಲಿ ತೊಡಗಿರುವವರು ಹಾಗೂ ತಜ್ಞರೊಂದಿಗೆ ಚರ್ಚೆ ನಡೆಯಲಿದೆ.  

ತೋಟಗಾರಿಕಾ ಸರಕುಗಳ ಮಾರುಕಟ್ಟೆ ಮತ್ತು ರಫ್ತು ಮತ್ತು ಕೃಷಿ, ಹೊರ್ಟಿ ಸ್ಟಾರ್ಟ್-ಅಪ್‌ಗಳ ವಿಷಯವೂ ಪ್ರಸ್ತಾಪವಾಗಲಿದೆ.  

ತೋಟಗಾರಿಕೆಯಲ್ಲಿ ಹೊಸ ಮಾದರಿ ಯಾಂತ್ರೀಕರಣ  

ಇನ್ನು ಮುಖ್ಯವಾಗಿ ತೋಟಗಾರಿಕೆಯಲ್ಲಿ ಯಾಂತ್ರೀಕರಣ ಮತ್ತು ಅವಲೋಕನ ಮತ್ತು ICAR-ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಹಾರ್ಟಿಕಲ್ಚರಲ್ ರಿಸರ್ಚ್‌ನ ಪಾತ್ರದ ಬಗ್ಗೆ ಚರ್ಚೆ ನಡೆಯಲಿದೆ.

ಅಲ್ಲದೆ, ಗ್ರಾಮೀಣ ಭಾರತಕ್ಕೆ ತೋಟಗಾರಿಕೆ ಮತ್ತು ಸುಸ್ಥಿರ ಕೃಷಿಗಾಗಿ ನವೀನ ಸಮಸ್ಯೆ ಚಾಲಿತ ಪರಿಹಾರಗಳ ಬಗ್ಗೆ ಮಾತನಾಡುತ್ತಾರೆ.

ಕೀಟ ಮುಕ್ತ ಪ್ರದೇಶ: ತೋಟಗಾರಿಕೆ ಉತ್ಪನ್ನದ ರಫ್ತಿನ ವಿಧಾನ

ಸಸ್ಯ ಸಂರಕ್ಷಣಾ, ಸಂಸ್ಕರಣೆ ಮತ್ತು ಶೇಖರಣಾ ನಿರ್ದೇಶನಾಲಯದ ಪ್ರತಿನಿಧಿಯಿಂದ ಕೀಟ ಮುಕ್ತ ತೋಟಗಾರಿಕೆ ಉತ್ಪನ್ನದ ಅವಲೋಕನದ ಕುರಿತು ಚರ್ಚೆ ನಡೆಯಲಿದೆ.

ಅಲ್ಲದೆ, ತೋಟಗಾರಿಕೆ ಉತ್ಪನ್ನಗಳ ರಫ್ತು ಅವಕಾಶಗಳು ಮತ್ತು ಸಾವಯವ ತೋಟಗಾರಿಕೆ

ರಫ್ತುಗಳಲ್ಲಿ ಮಹಿಳಾ ಉದ್ಯಮಿಗಳ ಯಶಸ್ಸಿನ ಕಥೆಗಳು ಚರ್ಚೆ ಆಗಲಿದೆ ಎಂದು ಪ್ರಕಟಣೆ ತಿಳಿಸಿದೆ.   

Published On: 31 October 2022, 10:58 AM English Summary: “National Level Horticulture Value Chain” Program on November 1

Share your comments

Latest feeds

More News
Krishi Jagran Kannada Magazine Subscription Online Subscription

CopyRight - 2024 Krishi Jagran Media Group. All Rights Reserved.