1. ಸುದ್ದಿಗಳು

ಜ.9 ರಂದು ಭಾರತದ 242 ಜಿಲ್ಲೆಗಳಲ್ಲಿ ಪಿಎಂ  ರಾಷ್ಟ್ರೀಯ ಅಪ್ರೆಂಟಿಸ್‌ಶಿಪ್‌ ಮೇಳ ಆಯೋಜನೆ..ಏನಿದರ ವಿಶೇಷತೆ

Maltesh
Maltesh
National Apprenticeship Mela to be conducted in 242 districts of India on January 9

ಸ್ಕಿಲ್ ಇಂಡಿಯಾ ಮಿಷನ್ ಅಡಿಯಲ್ಲಿ ಭಾರತದ ಯುವಕರಿಗೆ ವೃತ್ತಿ ಅವಕಾಶಗಳನ್ನು ಹೆಚ್ಚಿಸುವ ನಿಟ್ಟಿನಲ್ಲಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ದೃಷ್ಟಿಕೋನದ  ಭಾಗವಾಗಿ, ಕೌಶಲ್ಯ ಅಭಿವೃದ್ಧಿ ಮತ್ತು ಉದ್ಯಮಶೀಲತೆ ಸಚಿವಾಲಯ (MSDE) ಜನವರಿ 9, 2023 ರಂದು ಭಾರತದ 28 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಾದ್ಯಂತ 242 ಜಿಲ್ಲೆಗಳಲ್ಲಿ ಪ್ರಧಾನಮಂತ್ರಿ ರಾಷ್ಟ್ರೀಯ ಅಪ್ರೆಂಟಿಸ್‌ಶಿಪ್ ಮೇಳವನ್ನು (PMNAM) ಆಯೋಜಿಸುತ್ತಿದೆ.

ಶಿಷ್ಯವೃತ್ತಿ ತರಬೇತಿಯ ಮೂಲಕ ಸ್ಥಳೀಯ ಯುವಕರಿಗೆ ತಮ್ಮ ವೃತ್ತಿಜೀವನವನ್ನು ರೂಪಿಸಲು ಸೂಕ್ತವಾದ ಅವಕಾಶಗಳನ್ನು ಒದಗಿಸಲು ಹಲವಾರು ಸ್ಥಳೀಯ ವ್ಯಾಪಾರಗಳು ಮತ್ತು ಸಂಸ್ಥೆಗಳನ್ನು ಈ ಅಪ್ರೆಂಟಿಸ್‌ಶಿಪ್ ಮೇಳದಲ್ಲಿ ಭಾಗವಹಿಸಲು ಆಹ್ವಾನಿಸಲಾಗಿದೆ.

1987 ರಲ್ಲಿ ಒಂದು ಕೆಜಿ ಗೋಧಿಯ ಬೆಲೆ ಎಷ್ಟಿತ್ತು ಗೊತ್ತಾ..?ವೈರಲ್‌ ಆಯ್ತು 36 ವರ್ಷ ಹಳೆಯ ಬಿಲ್‌

ಈ ಕಾರ್ಯಕ್ರಮ ವಿವಿಧ ವಲಯಗಳನ್ನು ಪ್ರತಿನಿಧಿಸುವ ಅನೇಕ ಕಂಪನಿಗಳ ಭಾಗವಹಿಸುವಿಕೆಗೆ ಸಾಕ್ಷಿಯಾಗಲಿದೆ. ಭಾಗವಹಿಸುವ ಸಂಸ್ಥೆಗಳು ಒಂದೇ ವೇದಿಕೆಯಲ್ಲಿ ಜೀವನೋಪಾಯವನ್ನು ಬಲಪಡಿಸಲು ಮತ್ತು ಹೊಸ ಕೌಶಲ್ಯಗಳನ್ನು ಕಲಿಕೆಗೆ ಅವಕಾಶವನ್ನು ಒದಗಿಸಲು ಸಂಭಾವ್ಯ ಶಿಷ್ಯವೃತ್ತಿ ಅಸಕ್ತರನ್ನು ಭೇಟಿ ಮಾಡಲು ಮತ್ತು ಸ್ಥಳದಲ್ಲೇ ಅರ್ಜಿದಾರರನ್ನು ಆಯ್ಕೆ ಮಾಡಲು ಅವಕಾಶವನ್ನು ಹೊಂದಿರುತ್ತವೆ,

https://www.apprenticeshipindia.gov.in/ ಗೆ ಭೇಟಿ ನೀಡುವ ಮೂಲಕ ವೈಯಕ್ತಿಕವಾಗಿ ಹತ್ತಿರದ ಮೇಳದ ಸ್ಥಳವನ್ನು ಹುಡುಕುವ ಮೂಲಕ ಮೇಳಕ್ಕೆ ನೋಂದಾಯಿಸಿಕೊಳ್ಳಬಹುದು. 5 ನೇ ತರಗತಿಯಿಂದ 12 ನೇ ತರಗತಿಯವರೆಗೆ ಓದಿರುವವರು ಮತ್ತು ಕೌಶಲ್ಯ ತರಬೇತಿ ಪ್ರಮಾಣಪತ್ರಗಳನ್ನು ಹೊಂದಿರುವ ಅಭ್ಯರ್ಥಿಗಳು ಅಥವಾ ITI ಡಿಪ್ಲೋಮಾ ಹೊಂದಿರುವವರು ಅಥವಾ ಪದವೀಧರರು ಈ ಅಪ್ರೆಂಟಿಸ್‌ಶಿಪ್ ಮೇಳದಲ್ಲಿ ಅರ್ಜಿ ಸಲ್ಲಿಸಬಹುದು.

ಅಭ್ಯರ್ಥಿಗಳು ತಮ್ಮ ಸ್ವವಿವರದ ಮೂರು ಪ್ರತಿಗಳು, ಎಲ್ಲ ಅಂಕಪಟ್ಟಿ ಮತ್ತು ಪ್ರಮಾಣಪತ್ರಗಳ ಮೂರು ಪ್ರತಿಗಳು, ಫೋಟೋ ಐಡಿ (ಆಧಾರ್ ಕಾರ್ಡ್ / ಡ್ರೈವಿಂಗ್ ಲೈಸೆನ್ಸ್ ಇತ್ಯಾದಿ) ಮತ್ತು ಮೂರು ಪಾಸ್‌ಪೋರ್ಟ್ ಅಳತೆಯ ಭಾವಚಿತ್ರಗಳನ್ನು ಜೊತೆಗೆ ಕೊಂಡೊಯ್ಯಬೇಕು.

ಈಗಾಗಲೇ ದಾಖಲಾದವರು ಎಲ್ಲ ಸಂಬಂಧಿತ ದಾಖಲೆಗಳೊಂದಿಗೆ ಸ್ಥಳಕ್ಕೆ ತಲುಪಲು ವಿನಂತಿಸಲಾಗಿದೆ. ಈ ಮೇಳದ ಮೂಲಕ, ಅಭ್ಯರ್ಥಿಗಳು ನ್ಯಾಶನಲ್ ಕೌನ್ಸಿಲ್ ಫಾರ್ ವೊಕೇಶನಲ್ ಎಜುಕೇಶನ್ ಅಂಡ್ ಟ್ರೈನಿಂಗ್ (NCVET) ಮಾನ್ಯತೆ ಪಡೆದ ಪ್ರಮಾಣ ಪತ್ರವನ್ನು ಸಹ ಗಳಿಸುತ್ತಾರೆ ಮತ್ತು ತರಬೇತಿ ಅವಧಿಯ ನಂತರ ತಮ್ಮ ಉದ್ಯೋಗದ ಅವಕಾಶಗಳ ಸಾಧ್ಯತೆಯನ್ನು ಹೆಚ್ಚಿಸಿಕೊಳ್ಳುತ್ತಾರೆ.

ಪ್ರಧಾನ ಮಂತ್ರಿ ರಾಷ್ಟ್ರೀಯ ಶಿಷ್ಯವೇತನ ಮೇಳದ ಕುರಿತು ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ ಕೌಶಲ್ಯ ಅಭಿವೃದ್ಧಿ ಮತ್ತು ಉದ್ಯಮಶೀಲತೆ ಸಚಿವಾಲಯದ ಕಾರ್ಯದರ್ಶಿ ಶ್ರೀ ಅತುಲ್ ಕುಮಾರ್ ತಿವಾರಿ, ಕೌಶಲ್ಯ ಮತ್ತು ಜ್ಞಾನವು ದೇಶದ ಆರ್ಥಿಕ ಬೆಳವಣಿಗೆ ಮತ್ತು ಸಾಮಾಜಿಕ ಅಭಿವೃದ್ಧಿಯ ಪ್ರೇರಕ ಶಕ್ತಿಗಳಾಗಿವೆ ಎಂದು ಹೇಳಿದರು.

ಹೊಸ ಪ್ರಪಂಚ ಒಡ್ಡಿದಂತಹ ಸವಾಲುಗಳು ಮತ್ತು ಅವಕಾಶಗಳಿಗೆ ಉನ್ನತ ಮಟ್ಟದ ಮತ್ತು ಉತ್ತಮ ಕೌಶಲ್ಯಗಳನ್ನು ಹೊಂದಿರುವ ದೇಶಗಳು  ಹೆಚ್ಚು ಪರಿಣಾಮಕಾರಿಯಾಗಿ ಹೊಂದಿಕೊಳ್ಳುತ್ತವೆ ಎಂಬುದು ಸಾಬೀತಾಗಿದೆ. ನಮ್ಮ ಶಿಷ್ಯವೃತ್ತಿ ಕಾರ್ಯಕ್ರಮಗಳ ಮೂಲಕ ನಾವು ಸಾಮಾಜಿಕ-ಆರ್ಥಿಕ ಸ್ಥಿತಿಯನ್ನು ಸುಧಾರಿಸುವ ಮತ್ತು ಭಾರತದ ಆರ್ಥಿಕ ಎಂಜಿನ್ ಅನ್ನು ಮುನ್ನಡೆಸುವ ಸಾಮರ್ಥ್ಯವನ್ನು ಹೊಂದಿರುವ ಸ್ವತಃ ಸಮರ್ಥ ಕಾರ್ಯಪಡೆಯನ್ನು ನಿರ್ಮಿಸುವ ಗುರಿಯನ್ನು ಹೊಂದಿದ್ದೇವೆ ಎಂದು ಅವರು ಹೇಳಿದರು.

EPFO Update: ಈ ಸದಸ್ಯರು ಇದೀಗ  ಹೆಚ್ಚಿನ ಪೆನ್ಷನ್‌ ಪಡೆಯುತ್ತಾರೆ!

ಪಿಎಂಎನ್‌ಎಎಂ ಅಪ್ರೆಂಟಿಸ್‌ಶಿಪ್ ಆಕಾಂಕ್ಷಿಗಳು ಮತ್ತು ಉದ್ಯೋಗದಾತರ ಭೇಟಿಯನ್ನು ತ್ವರಿತವಾಗಿ ಕಾರ್ಯರೂಪಕ್ಕೆ ತರುವ ವೇದಿಕೆಯಾಗಿದೆ ಮತ್ತು ಉದ್ಯೋಗದಾತರೊಂದಿಗೆ ಆಕಾಂಕ್ಷಿಗಳು ಸಂವಹನ ನಡೆಸಲು ಮತ್ತು ಅವರು ತರಬೇತಿ ನೀಡಲು ಬಯಸುವ ಉದ್ಯಮದ ಬಗ್ಗೆ ತಿಳಿದುಕೊಳ್ಳಲು, ತಮ್ಮ ವೃತ್ತಿ ಜೀವನವನ್ನು ರೂಪಿಸಿಕೊಳ್ಳು ಅವಕಾಶವನ್ನು ಒದಗಿಸುತ್ತದೆ ಎಂದು ಅವರು ಹೇಳಿದರು.

ಈ ಮೇಳಗಳು ಸರಿಯಾದ ಅವಕಾಶಗಳನ್ನು ಹುಡುಕುವ ಹೊಸಬರಿಗೆ ಹೆಚ್ಚು ಉಪಯುಕ್ತವೆನಿಸಿವೆ, ವ್ಯಾಪಾರಗಳು, ಸಮುದಾಯಗಳು ಮತ್ತು ಕುಟುಂಬಗಳಿಗೆ ಅಪಾರ ಪ್ರಯೋಜನಗಳನ್ನು ಒದಗಿಸುತ್ತವೆ. ಎಲ್ಲ ವೃತ್ತಿಪರ ಮತ್ತು ಶೈಕ್ಷಣಿಕ ಹಿನ್ನೆಲೆಯ ಅಭ್ಯರ್ಥಿಗಳು ಈ ಮೇಳದಲ್ಲಿ ಭಾಗವಹಿಸುವಂತೆ ನಾವು ಪ್ರೋತ್ಸಾಹಿಸುತ್ತೇವೆ,  ಇಲ್ಲಿ ತಮ್ಮ ಜೀವನದಲ್ಲಿ ಸಕಾರಾತ್ಮಕ ಬದಲಾವಣೆಯನ್ನು ಕಂಡುಕೊಳ್ಳಲು ಮತ್ತು ಅದ್ಭುತ  ವೃತ್ತಿಜೀವನ ಹೊಂದಲು ಅವಕಾಶವಿದೆ ಎಂದು ಅವರು ಹೇಳಿದರು. 

Published On: 07 January 2023, 02:51 PM English Summary: National Apprenticeship Mela to be conducted in 242 districts of India on January 9

Share your comments

Latest feeds

More News
Krishi Jagran Kannada Magazine Subscription Online Subscription

CopyRight - 2024 Krishi Jagran Media Group. All Rights Reserved.