ಕೃಷಿ ನಮ್ಮ ದೇಶದ ಬೆನ್ನೆಲುಬು, ಆದರೆ ಕೈಗಾರಿಕರಣದ ಕಾರಣದಿಂದಾಗಿ ಇಂದು ಕೃಷಿ ಭೂಮಿಯು ಬಹು ರಾಷ್ಟ್ರ ಕಂಪನಿಗಳ ಪಾಲಾಗುತ್ತಿದೆ. ಎಕರೆಗೆ ಕೋಟಿಗಟ್ಟಲೆ ರೂಪಾಯಿಗಳನ್ನು ಕೊಟ್ಟು ಬಹು ರಾಷ್ಟ್ರ ಕಂಪನಿಗಳು ಭೂಮಿಯನ್ನು ಖರೀದಿಸುತ್ತಿದ್ದಾರೆ. ಉದಾಹರಣೆಗೆ ಆ್ಯಪಲ್ ಐಫೋನ್ ಉತ್ಪಾದಿಸುವ ವಿಸ್ಟ್ರಾನ್ ಇನ್ಫೋಕಾಮ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಕಂಪನಿಯು ನರಸಾಪುರ ಕೈಗಾರಿಕಾ ಪ್ರದೇಶದಲ್ಲಿ ಎಕರೆಗೆ ಒಂದು ಕೋಟಿ ರೂಪಾಯಿ ಹಣವನ್ನು ಕೊಟ್ಟು ಭೂಮಿಯನ್ನು ಖರೀದಿಸಿತ್ತು.
ಬೆಂಗಳೂರು ಹಾಗೂ ಸುತ್ತಮುತ್ತಲಿನ ಪ್ರದೇಶವು ಕೈಗಾರಿಕರಣ ಕಾರಣದಿಂದ ಅತ್ಯಂತ ದುಬಾರಿ ಬೆಲೆಗೆ ಮಾರಾಟವಾಗುತ್ತಿದೆ. ಕೃಷಿಗಿಂತ ಅಲ್ಲಿ ಕೈಗಾರಿಕೆಗೆ ಹೆಚ್ಚಿನ ಮಹತ್ವ ಸಿಗುತ್ತಿರುವ ಕಾರಣದಿಂದಾಗಿ ರೈತರ ಭೂಮಿಗೆ ಕೋಟ್ಯಾನು'ಗಟ್ಟಲೆ ಆಫರ್ ಗಳು ಬರುತ್ತಿವೆ. ನಮ್ಮ ರಾಜ್ಯದ ರಾಜಧಾನಿಯಾಗಿರುವ ಬೆಂಗಳೂರು ಎಲ್ಲಾ ಸೌಲಭ್ಯಗಳನ್ನು ಹೊಂದಿದೆ, ಬೆಂಗಳೂರಿನಲ್ಲಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಇರುವುದು ಹಾಗೂ ಎಲ್ಲಾ ಕಡೆಯಿಂದ ಸಾಮಗ್ರಿಗಳನ್ನು ಸಾಗಿಸಲು ಒಂದು ಅತ್ಯುತ್ತಮ ಅವಕಾಶವಿದೆ.
ಬೆಂಗಳೂರಿನಲ್ಲಿ ಕೈಗಾರಿಕಾ ಆರಂಭಿಸುವುದಕ್ಕೆ ಒಂದು ಒಳ್ಳೆಯ ಅವಕಾಶವಿದೆ, ಬಹುರಾಷ್ಟ್ರೀಯ ಕಂಪನಿಗಳು ಬೆಂಗಳೂರಿನಲ್ಲಿ ದುಬಾರಿಯಾದ ಕಾರಣ ಬೆಂಗಳೂರಿನ ಸುತ್ತಮುತ್ತ ಜಿಲ್ಲೆಗಳಾದ ತುಮಕೂರು ಕೋಲಾರದಲ್ಲಿ ಕೃಷಿ ಭೂಮಿ ಖರೀದಿಸಲು ಮುಂದಾಗಿದ್ದಾರೆ. ಹೀಗಾಗಿ ಪ್ರತಿ ಎಕರೆ ಒಂದು ಕೋಟಿ ರೂಪಾಯಿಗಿಂತ ಹೆಚ್ಚು ಬೆಲೆಗೆ ಮಾರಾಟವಾಗುತ್ತಿವೆ. ಹೀಗಾಗಿ ರೈತರು ಕೂಡ ಅತ್ತ ಸೋಲುತ್ತಿದ್ದಾರೆ.
ಮೊನ್ನೆ ನಾವು ನೋಡಿದ ಹಾಗೆ ತೈವಾನ್ ಮೂಲದ ಕಂಪನಿಯಾದ ವಿಸ್ಟ್ರಾನ್ ಕಂಪನಿಗೆ ಅಲ್ಲಿ ಕೆಲಸ ಮಾಡುವಂತಹ ಕಾರ್ಮಿಕರು ಬೆಂಕಿಯಿಟ್ಟು ದಾಂದಲೆ ಮಾಡಿದ್ದಾರೆ. ಈ ಕಂಪನಿಯ ಬಗ್ಗೆ ನೀವು ತಿಳಿದುಕೊಳ್ಳಬೇಕೆಂದರೆ ಇದು ಒಂದು ತೈವಾನ್ ಮೂಲದ ಆಪಲ್ ಐಫೋನ್ ಉತ್ಪಾದಿಸುವ ಕಂಪನಿಯಾಗಿದೆ. ಈ ಕಂಪನಿಯು ಎರಡು ವರ್ಷಗಳ ಹಿಂದೆ ಕೋಲಾರದ ನರಸಾಪುರ ಕೈಗಾರಿಕೋದ್ಯಮ ಪ್ರದೇಶದದಲ್ಲಿ 43 ಎಕರೆಯನ್ನು ಖರೀದಿಸಿದೆ. ಈ ಕಂಪನಿಯು ಜಿಲ್ಲೆಗೆ ಕಾಲಿಟ್ಟ ನಂತರ 20 ಲಕ್ಷ ಬೆಲೆಬಾಳುವ ಭೂಮಿ ಒಂದು ಕೋಟಿ ರೂಪಾಯಿ ತಲುಪಿದೆ. ಕಂಪನಿಯು ಒಂದು ಕೋಟಿ ರೂಪಾಯಿ ಪ್ರತಿ ಎಕರೆಗೆ ಕೊಟ್ಟು ಭೂಮಿಯನ್ನು ಖರೀದಿಸಿದೆ.
ದಶಕದ ಹಿಂದೆ ಕೃಷಿ ಭೂಮಿಯನ್ನು ಕೇಳುವರು ಇದ್ದಿದ್ದಿಲ್ಲ, ಆದರೆ ಇದೀಗ ಕೋಟ್ಯಾನು'ಗಟ್ಟಲೆ ಆಫರುಗಳು ಬರುತ್ತಿವೆ, ಇದನ್ನು ಕನಸಲ್ಲೂ ಕೂಡ ನಾವು ಉಳಿಸಿರಲಿಲ್ಲ ಎಂಬುದು ಬೆಂಗಳೂರು ಸುತ್ತಮುತ್ತ ಜಿಲ್ಲೆಗಳ ರೈತರ ಅಭಿಪ್ರಾಯ.
ಲೇಖಕರು:ಚಿನ್ನಪ್ಪ ಎಸ್. ಅಂಗಡಿ
Share your comments