1. ಸುದ್ದಿಗಳು

ಕೃಷಿ ಸಾಲದ ಚಕ್ರಬಡ್ಡಿ ಮನ್ನಾ ಇಲ್ಲ-ಕೇಂದ್ರ ಸ್ಪಷ್ಟನೆ

ಕಳೆದ ವಾರ ಕೇಂದ್ರ ಸರ್ಕಾರ ಘೋಷಿಸಿದ  ಸಾಲದ ಮೇಲಿನ  ಚಕ್ರಬಡ್ಡಿ ಮನ್ನಾ ಸೌಲಭ್ಯವು ಬೆಳೆ ಸಾಲ  ಮತ್ತು ಟ್ರ್ಯಾಕ್ಟರ್ ಸಾಲ ಪಡೆದವರಿಗೆ ಅನ್ವಯವಿಸುವದಿಲ್ಲ ಎಂದು ಹಣಕಾಸು ಸಚಿವಾಲಯ ಸ್ಪಷ್ಟಪಡಿಸಿದೆ.

ಮೊರಟೋರಿಯಂ ಸೌಲಭ್ಯ ಪಡೆದವರಿಗೆ ಆರು ತಿಂಗಳ ಚಕ್ರ ಬಡ್ಡಿ ಮನ್ನಾ ಮಾಡುವುದಾಗಿ ಕೇಂದ್ರ ಸರಕಾರವು ಕಳೆದ ವಾರ ಘೋಷಿಸಿತ್ತು. ಮೊರಟೋರಿಯಂ ಸೌಲಭ್ಯ ಪಡೆಯದವರಿಗೆ ಕ್ಯಾಶ್‌ ಬ್ಯಾಕ್‌ ನೀಡುವುದಾಗಿಯೂ ಸಹ ಹೇಳಿತ್ತು. ಫೆ.29ರ ವರೆಗಿನ ಕ್ರೆಡಿಟ್‌ ಕಾರ್ಡ್‌ ಬಾಕಿಗಳಿಗೂ ಇದು ಅನ್ವಯವಾಗುತ್ತದೆ. ಆದರ ಬೆಳೆಸಾಲ ಮತ್ತು ಟ್ರ್ಯಾಕ್ಟರ್ ಸಾಲ ಪಡೆದವರಿಗೆ ಅನ್ವಯವಿಸುವುದಿಲ್ಲವೆಂದು ಸ್ಪಷ್ಟನೆ ನೀಡಿದ್ದರಿಂದ ಬೆಳೆ ಮತ್ತು ಟ್ರ್ಯಾಕ್ಟರ್ ಸಾಲ ಪಡೆದವರಿಗೆ ನಿರಾಶೆಯನ್ನುಂಟು ಮಾಡಿದೆ.

ಬೆಳೆ ಮತ್ತು ಟ್ರ್ಯಾಕ್ಟರ್ ಸಾಲಗಳು  ಕೃಷಿ ಮತ್ತು ಈ ಸಂಬಂಧಿ ಸಾಲಗಳ ವ್ಯಾಪ್ತಿಗೆ ಬರುತ್ತವೆ. ಹೀಗಾಗಿ ಮೊರಟೋರಿಯಂ ಸ್ಕೀಮ್‌ನಡಿ ಬರುವ ಎಂಟು ವಿಭಾಗಗಳಡಿಯಲ್ಲಿ ಬರುವುದಿಲ್ಲ. ಎಂಎಸ್‌ಎಂಇ, ಶಿಕ್ಷಣ, ಗೃಹ, ಗ್ರಾಹಕೋಪಯೋಗಿ ವಸ್ತುಗಳ ಸಾಲಗಳು, ಕ್ರೆಡಿಟ್ ಕಾರ್ಡ್ ಬಾಕಿಗಳು, ಆಟೋಮೊಬೈಲ್ ಸಾಲಗಳು,ವಾಹನ ಸಾಲಗಳು, ವೈಯಕ್ತಿಕ ಸಾಲಗಳು ಈ ವ್ಯಾಪ್ತಿಗೆ ಬರುತ್ತವೆ ಎಂದು ಸಚಿವಾಲಯವು ಹೇಳಿದೆ.

ಸರಕಾರ ನಿರ್ಧರಿಸಿದಂತೆ ನವೆಂಬರ್ 5ರ ವೇಳೆಗೆ ಆರು ತಿಂಗಳ ಅವಧಿಯ ವರೆಗಿನ ಸಾಲಗಳಿಗೆ 2 ಕೋಟಿ ರೂ.ವರೆಗಿನ ಸಾಲಗಳ ಮೇಲಿನ ಬಡ್ಡಿ ಮನ್ನಾ ಯೋಜನೆ ಜಾರಿಗೆ ಬರುವಂತೆ ಬ್ಯಾಂಕೇತರ ಹಣಕಾಸು ಸಂಸ್ಥೆಗಳು ಸೇರಿದಂತೆ ಎಲ್ಲ ಸಾಲ ನೀಡುವ ಸಂಸ್ಥೆಗಳಿಗೆ ರಿಸರ್ವ್ ಬ್ಯಾಂಕ್ ಸೂಚಿಸಿದೆ.

Published On: 30 October 2020, 09:23 PM English Summary: moratorium crop tractor loans not part of interest on interest waiver

Share your comments

Latest feeds

More News
Krishi Jagran Kannada Magazine Subscription Online Subscription

CopyRight - 2024 Krishi Jagran Media Group. All Rights Reserved.