1. ಸುದ್ದಿಗಳು

ನೈಋರುತ್ಯ ಮಾನ್ಸೂನ್ ಈ ವರ್ಷವೂ ಸಹ ಜೂನ್ 1ಕ್ಕೆ ಕೇರಳ ಪ್ರವೇಶ

ನೈಋರುತ್ಯ ಮಾನ್ಸೂನ್ ಈವರ್ಷವೂ ಸಹ ಜೂನ್ 1ಕ್ಕೆ ಕೇರಳ ಪ್ರವೇಶಿಸಲಿದೆ  ಎಂದು ಹವಾಮಾನ ಇಲಾಖೆ ಹೇಳಿದೆ. ವಾಡಿಕೆಯಂತೆ ಸಕಾಲದಲ್ಲಿ ನೈಋತ್ಯ ಮುಂಗಾರು ಪ್ರವೇಶಿಸಲಿದೆ.ದೇಶದಲ್ಲಿ ಶೇ. 75 ರಷ್ಟು ಮಳೆಯಾಗುವ ನೈಋತ್ಯ ಮಾನ್ಸೂನ್ ಸಾಮಾನ್ಯ ಮಳೆಯಾಗಲಿದೆ. ಇದು ಈಗಿನ ಮುನ್ಸೂಚನೆಯಾಗಿದ್ದು, ಮೇ. 15 ರಂದು ವಿಸ್ತ್ರೃತ  ವರದಿ ಪ್ರಕಟಮಾಡಾಲಗುವುದು ಎಂದು ಅಧಿಕಾರಿಗಳು ಹೇಳಿದ್ದಾರೆ.

ಈ ವರ್ಷ ದೇಶದಲ್ಲಿ ಮಳೆ ಕೊರತೆ ಉಂಟಾಗುವ ಸಾಧ್ಯತೆ ಕಡಿಮೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಜೂನ್ ನಿಂದ ಸೆಪ್ಟೆಂಬರ್ ವರೆಗಿನ ಸಮಯದಲ್ಲಿ ಒಟ್ಟು ಮಳೆ ಪ್ರಮಾಣದ ಶೇ. 70 ರಷ್ಟು ಮಳೆ ಆಗಲಿದೆ. ಇದರಿಂದ ಕೃಷಿ ಚಟುವಟಿಕೆಗಳಿಗೆ ಅನುಕೂಲವಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

. ದೇಶದಲ್ಲಿ ಈಗಲೂ ಸಹ ಶೇ. 50 ರಷ್ಟು ರೈತರು ಮುಂಗಾರು ಮೇಲೆಯೇ ಅವಲಂಬನೆಯಾಗಿರುತ್ತಾರೆ. ಮಳೆಯ ಮೇಲೆಯೇ ಅವಲಂಬಿತ ಕೃಷಿಕರ ಕೃಷಿ ಆರ್ಥಿಕತೆಗೆ ನಿರ್ಣಾಯಕವಾಗಿದೆ.

ಜೂನ್ 1 ರ ಸುಮಾರಿಗೆ ಕೇರಳಕ್ಕೆ ಅಪ್ಪಳಿಸುವ ಮತ್ತು ಜುಲೈ ಮಧ್ಯಭಾಗದಲ್ಲಿ ದೇಶದ ಉಳಿದ ಭಾಗಗಳನ್ನು ಆವರಿಸುವ ಸಾಮಾನ್ಯ ಮಾನ್ಸೂನ್ ಕೃಷಿ ವಲಯಕ್ಕೆ, ವಿಶೇಷವಾಗಿ ಈ ವರ್ಷ ಅನಿವಾರ್ಯವಾಗಿದೆ. ಕೊರೋನಾದಿಂದ ಸಂಕಷ್ಟದಲ್ಲಿರುವ ರೈತರಿಗೆ ಮುಂಗಾರು ಮಳೆಯೇ ಜೀವನಾಧಾರವಾಗಿದೆ.

ಇಂದು ಒಂಬತ್ತು ಜಿಲ್ಲೆಗಳಲ್ಲಿ ಮಳೆ ಸಾಧ್ಯತೆ-ಯೆಲ್ಲೋ ಅಲರ್ಟ್

ಹವಾಮಾನ ವೈಪರೀತ್ಯದಿಂದಾಗಿ ಮೇ 7 ರಂದು ರಾಜ್ಯದ ಕರಾವಳಿ ಹಾಗೂ ದಕ್ಷಿಣ ಒಳನಾಡಿನ ಜಿಲ್ಲೆಗಳಲ್ಲಿ ಗುಡುಗು ಮಿಂಚಿನೊಂದಿಗೆ ಮಳೆಯಾಗುವ  ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ಉತ್ತರ ಕನ್ನಡ, ದಕ್ಷಿಣ ಕನ್ನಡ, ಉಡುಪಿ, ಚಿಕ್ಕಮಗಳೂರು, ಹಾಸನ, ಕೊಡಗು ಹಾಗೂ ಶಿವಮೊಗ್ಗ, ಚಿತ್ರದುರ್ಗ, ದಾವಣಗೆರೆ ಜಿಲ್ಲೆಗಳಲ್ಲಿ ಹೆಚ್ಚು ಮಳೆಯಾಗುವ ಸಾಧ್ಯತೆಯಿರುವುದರಿಂದ  ‘ಯೆಲ್ಲೊ ಅಲರ್ಟ್‌’ ಘೋಷಿಸಲಾಗಿದೆ’.

‘ಉಳಿದ ಜಿಲ್ಲೆಗಳಲ್ಲಿ ಗುಡುಗು ಮತ್ತು ಸಿಡಿಲಿನ ಆರ್ಭಟ ಇರಲಿದೆ.  ಉತ್ತರ ಒಳನಾಡಿನಲ್ಲಿ ಒಣಹವೆ ಮುಂದುವರಿಯಲಿದ್ದು, ಕೆಲವೆಡೆ ಸಾಧಾರಣ ಮಳೆಯಾಗಬಹುದು’ ಎಂದು ಮಾಹಿತಿ ನೀಡಿದೆ.

Published On: 07 May 2021, 01:23 PM English Summary: monsoon starts from june 1st

Share your comments

Latest feeds

More News
Krishi Jagran Kannada Magazine Subscription Online Subscription

CopyRight - 2024 Krishi Jagran Media Group. All Rights Reserved.