ಈಗಾಗಲೇ ಕೇರಳದ ಮೂಲಕ ಭಾರತ ಪ್ರವೇಶ ಮಾಡಿದ ಮಾನ್ಸೂನ್ ದಕ್ಷಿಣ ಭಾರತ ಮತ್ತು ಮಧ್ಯಭಾರತದಲ್ಲಿ ಕಳೆದ ನಾಲ್ಕೈದು ದಿನಗಳಿಂದ ಮಳೆಯಾಗುತ್ತಿದೆ.ಬಂಗಾಳ, ಮಹಾರಾಷ್ಟ್ರ, ಒಡಿಶಾ ಮತ್ತು ಛತ್ತೀಸ್‌ಗಢಕ್ಕೂ ಮುಂಗಾರು ತಲುಪಿದೆ.
ಬೇಸಿಗೆಯ ಬಿಸಿಲಿನ ಝಳದಿಂದ ತತ್ತರಿಸಿರುವ ಉತ್ತರ ಭಾರತದ ಜನತೆ ಇನ್ನು ಮುಂದೆ ನೆಮ್ಮದಿಯ ಉಸಿರು ಬಿಡುವಂತಾಗಿದೆ. ಬಂಗಾಳದ ರಾಜಧಾನಿ ಕೋಲ್ಕತಾ, ಹೌರಾ, ಹೂಗ್ಲಿ ಸೇರಿದಂತೆ ಹಲವು ಪ್ರದೇಶಗಳಲ್ಲಿ ಮಳೆಯಾಗುತ್ತಿದೆ.
ದೇಶದ ಅನೇಕ ಭಾಗಗಳಲ್ಲಿ ವಿರಳ ಮಳೆಯಿಂದಾಗಿ ತಾಪಮಾನವು ಸಾಮಾನ್ಯಕ್ಕಿಂತ ಕಡಿಮೆಯಾಗಿದೆ. ಮಾನ್ಸೂನ್ ಕೆಲವು ಭಾಗಗಳನ್ನು ತಲುಪಿದೆ. ಇದಲ್ಲದೆ ಬಂಗಾಳಕೊಲ್ಲಿಯಲ್ಲಿ ಕಡಿಮೆ ಒತ್ತಡ ಮತ್ತು ತೇವವಾದ ಗಾಳಿಯಿಂದಾಗಿ ಜೂನ್ 13 ರಂದು ದೆಹಲಿಯಲ್ಲಿ ಮಳೆಯಾಗುವ ಸಾಧ್ಯತೆಯಿದೆ. ಇದರೊಂದಿಗೆ ಮುಂದಿನ ಮೂರು ದಿನಗಳವರೆಗೆ ದಕ್ಷಿಣ ಬಂಗಾಳದ ಜಿಲ್ಲೆಗಳಲ್ಲಿ ಕೆಲವು ಸ್ಥಳಗಳಲ್ಲಿ ಗುಡುಗು ಸಹಿತ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ. ಜೂನ್ 15 ರೊಳಗೆ ಬಿಹಾರ ಮತ್ತು ಜಾರ್ಖಂಡಗೆ ಮಾನ್ಸೂನ್ ತಲುಪಬಹುದು ಎಂದು ಹವಾಮಾನ ಇಲಾಖೆ ತಿಳಿಸದೆ.

Share your comments