ದಿನದಿಂದ ದಿನಕ್ಕೆ ಗ್ರಾಮೀಣ ಪ್ರದೇಶದಲ್ಲಿ ಕೊರೋನಾ ಸೋಂಕು ಹೆಚ್ಚಾಗುತ್ತಿರುವುದರಿಂದ ಹಳ್ಳಿ ಜನರು ಇದ್ದಲ್ಲಿಗೆ ವೈದ್ಯರನ್ನು ಕಳುಹಿಸುವುದಕ್ಕೆ ರಾಜ್ಯ ಸರ್ಕಾರ ಹೊಸ ಆದೇಶ ಹೊರಡಿಸಿದೆ. ಹೌದು, ಕೊರೋನಾ ಸೋಂಕನ್ನು ಹೇಗಾದರೂ ಮಾಡಿ ನಿಯಂತ್ರಣ ತರುವುದಕ್ಕಾಗಿ ಪ್ರತಿಯೊಬ್ಬರನ್ನು ಕೋವಿಡ್ ಪರೀಕ್ಷೆಗೆ ಒಳಪಡಿಸಲು ಅನುಕೂಲವಾಗುವಂತೆ ವೈದ್ಯರ ನಡೆ ಹಳ್ಳಿಯ ಕಡೆ (ಮೊಬೈಲ್ ಕ್ಲೀನಿಕ್ ) ಕಾರ್ಯಕ್ರಮ ಹಮ್ಮಿಕೊಳ್ಳಲು ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.
ಈಗ ಪ್ರತಿ ಹಳ್ಳಿಹಳ್ಳಿಗಳಲ್ಲಿ ಸಂಚಾರಿ ಕ್ಲಿನಿಕ್ ಗಳು ಕಾಣಸಿಗಲಿವೆ. ನಿಮ್ಮ ಗ್ರಾಮಗಳಿಗೆ ಬರುವ ವೈದ್ಯರು ಸ್ಥಳದಲ್ಲಿಯೇ ತಪಾಸಣೆ ನಡೆಸಿ ಚಿಕಿತ್ಸೆ ನೀಡಲಿದ್ದಾರೆ.
ರಾಜ್ಚದ ಗ್ರಾಮೀಣ ಪ್ರದೇಶಗಳಲ್ಲಿ ಕೋವಿಡ್ ಉಲ್ಬಣಿಸುತ್ತಿದ್ದರೂ ಜನ ಪರೀಕ್ಷೆಗೆ ಒಳಗಾಗಲು ಆಸಕ್ತಿ ತೋರದ ಕಾರಣ ವೈದ್ಯರ ನಡೆ ಹಳ್ಳಿಗಳ ಕಡೆ ಕಾರ್ಯಕ್ರಮ ತ್ವರಿತ ಅನುಷ್ಠಾನಕ್ಕೆ ಸರ್ಕಾರ ಆದೇಶಿಸಿದೆ. ಈ ಕಾರ್ಯಕ್ರಮ ಆರಂಭಿಸುವುದಕ್ಕೂ ಎರಡು ದಿನ ಮೊದಲು ಗ್ರಾಮ ಪಂಚಾಯತಿಗಳು ಜನರಿಗೆ ಮಾಹಿತಿ ನೀಡುವಂತೆ ತಿಳಿಸಲಾಗಿದೆ.
ಅಂತಿಮ ವರ್ಷದ ವೈದ್ಯ ಪದವಿ ವ್ಯಾಸಂಗ ಮಾಡುತ್ತಿರುವ ಇಂಟರ್ನ್ ಶಿಪ್ ವಿದ್ಯಾರ್ಥಿಗಳು, ಬಿಎಸ್ಸಿ ನರ್ಸಿಂಗ್, ಬಿಡಿಎಸ್, ಎಂಡಿಎಸ್, ಆಯುಷ್ ಪದವೀಧರ ವೈದ್ಯರ ಸೇವೆಯನ್ನು ಎರವಲು ಪಡೆಯಲಾಗುತ್ತದೆ.ಗ್ರಾಮೀಣ ಪ್ರದೇಶದಲ್ಲಿ ಒಂದೇ ಕಡೆ ವೈದ್ಯರು, ಆರೋಗ್ಯ ಸಿಬ್ಬಂದಿ ಲಭ್ಯವಿದ್ದು, ಭೌತಿಕ ಪರೀಕ್ಷೆ, ಗಂಟಲು ಮಾದರಿ ಪರೀಕ್ಷೆ ನಡೆಸಿ, ಸ್ಥಳಧಲ್ಲಿಯೇ ಚಿಕಿತ್ಸೆ ನೀಡಲಾಗುತ್ತದೆ. ಅಗತ್ಯವಿದ್ದವರಿಗೆ ವೈದ್ಯಕೀಯ ಕಿಟ್ ವಿತರಿಸುವ ಸಂಚಾರಿ ಕ್ಲೀನಿಕ್ ಕೂಡ ಅಲ್ಲಿರುತ್ತದೆ.
ಕೋವಿಡ್ ಸೋಂಕನ್ನು ತಡೆಗಟ್ಟುವ ನಿಟ್ಟಿನಲ್ಲಿ ಜಿಲ್ಲಾಡಳಿತದ ವತಿಯಿಂದ ಅಗತ್ಯ ವೈದ್ಯಕೀಯ ಕೀಟ್ ಗಳನ್ನು ಈಗಾಗಲೇ ಬಿಡುಗಡೆ ಮಾಡಲಾಗಿರುವ ಎಸ್.ಡಿ.ಆರ್.ಎಫ್ ಅನುದಾನದಡಿ ಖರೀದಿ ಮಾಡಿ,ವೈದ್ಯರು, ದಾದಿಯರು, ಎಂಎಸ್ಎಂ, ಆಶಾ ಕಾರ್ಯಕರ್ತೆಯರು ಮತ್ತು ಗ್ರಾಮಟ್ಟದ ಟಾಸ್ಕ್ ಫೋರ್ಸ್ ಸಮಿತಿಯ ಸದಸ್ಯರಿಗೆ ನೀಡವುದು. ಸ್ಥಳೀಯ ಆಶಾ ಕಾರ್ಯಕರ್ತೆಯರು ಎನ್-95 ಮತ್ತು ಇತರೆ ಪಿಪಿಇ ಸಾಮಗ್ರಿ ಧರಿಸಿ ಗ್ರಾಮದ ಪ್ರತಿಯೊಂದು ಮನೆಗೆ ಭೇಟಿ ನೀಡಿ, ವ್ಯಕ್ತಿಗಳನ್ನು ಸಂದರ್ಶಿಸಿ ಕೋವಿಡ್-19 ವೈರಾಣು ಲಕ್ಷಣಗಳಿರುವ ಬಗ್ಗೆ ಕಂಡುಬಂದಲ್ಲಿ ಅವರನ್ನು ಸೂಕ್ತ ತಪಾಸಣೆ ಒಳಪಡಿಸಲು ಸಂಚಾರಿ ಕ್ಲೀನಿಕ್ ತಂಡಕ್ಕೆ ಶಿಫಾರಸ್ಸು ಮಾಡಬೇಕು.
Share your comments