ವಿಧಾನಸಭೆಯಲ್ಲಿ ಮಸೂದೆಯ ಪ್ರತಿಗಳನ್ನ ಹರಿದು ಪೀಠದಲ್ಲಿದ್ದ ಉಪ ಸಭಾಧ್ಯಕ್ಷರ ಮೇಲೆಸೆದು, ಸದನದ ಪಾವಿತ್ರ್ಯತೆಯನ್ನು ಹಾಳು ಮಾಡಿರುವ ಬಿಜೆಪಿ ಶಾಸಕರ ಈ ದುರ್ವರ್ತೆನೆಯನ್ನು, ರಾಜ್ಯದ ಜನತೆ ಎಂದಿಗೂ ಕ್ಷಮಿಸುವುದಿಲ್ಲ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಸಚಿವ ಪ್ರಿಯಾಂಕ್ ಖರ್ಗೆ ಕಿಡಿಕಾರಿದ್ದಾರೆ.
ಇದು ಸದನಕ್ಕೆ ತೋರಿದ ಅಗೌರವವಷ್ಟೇ ಅಲ್ಲಾ, ಬದಲಾಗಿ ಸಂವಿಧಾನಕ್ಕೆ ಮಾಡಿದ ಅಪಮಾನ. ವಿಧಾನಸಭೆಯ ಪೀಠದ ಮೇಲೆ ಅನೇಕ ವರ್ಷಗಳ ನಂತರ ದಲಿತರೊಬ್ಬರು ಆಸೀನರಾಗಿರುವುದನ್ನು ನೋಡಿ ಬಿಜೆಪಿಗರಿಗೆ ಸಹಿಸಲಾಗುತ್ತಿಲ್ಲ.
ಕಡು ಬಡತನದಲ್ಲಿ ತಾಂಡಾದಿಂದ ಬಂದು ಈ ಮಟ್ಟಕ್ಕೆ ಬೆಳೆದು ಜನರ ಆಶೀರ್ವಾದ ಗಳಿಸಿ ಉಪಸಭಾಧ್ಯಕ್ಷರಾಗಿರುವ ಧೀಮಂತ ನಾಯಕನಿಗೆ ಹೀಗೆ ಅಪಮಾನ ಮಾಡಿರುವ ಬಿಜೆಪಿಗರು ಬೇರೆ ಯಾರಾದರೂ ಆ ಸ್ಥಾನದಲ್ಲಿದಿದ್ದರೆ ಇದೇ ದುರ್ವರ್ತನೆ ತೋರುತ್ತಿದ್ದರೆ? ಅವರು ದಲಿತರೆಂದೇ ಈ ರೀತಿ ಕೇವಲದಿಂದ ವರ್ತಿಸಿದ್ದಾ?
ಅಧಿಕಾರದಲ್ಲಿದ್ದಾಗ 4 ವರ್ಷಗಳಲ್ಲಿ ಒಮ್ಮೆಯೂ ಶೋಷಿತ ಸಮುದಾಯಗಳ ಭೂ ಹಕ್ಕು ಸಂರಕ್ಷಣೆಗಾಗಿ PTCL ಕಾಯ್ದೆ ತಿದ್ದುಪಡಿ ಜಾರಿ ಮಾಡಲು ಮುಂದಾಗಲಿಲ್ಲ. ಆದರೆ ಇಂದು ನಾವು ಅದನ್ನು ಸದನದಲ್ಲಿ ಮಂಡಿಸುವಾಗ ಈ ರೀತಿ ಕೃತಕವಾಗಿ ಕೋಲಾಹಲ ಎಬ್ಬಿಸಿ ದಲಿತ ಸಮಾಜಕ್ಕೆ ನ್ಯಾಯವನ್ನು ಇನ್ನಷ್ಟು ವಿಳಂಬ ಮಾಡುವ ದುರುದ್ದೇಶ ಬಿಜೆಪಿಯದ್ದಾಗಿದೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ತಮ್ಮ ವೈಫಲ್ಯಗಳನ್ನು ಮುಚ್ಚಿಕೊಳ್ಳಲು ಹೀಗೆ ಕುಚೋಧ್ಯಕ್ಕೆ ಮುಂದಾಗುವುದು ಬಿಜೆಪಿ ಹಿಂದಿನಿಂದಲೂ ನಡೆಸಿಕೊಂಡು ಬಂದಿರುವ ದುರಭ್ಯಾಸ. ಆದರೆ, ಇವರ ದಲಿತ ವಿರೋಧಿ ವರ್ತನೆ ಹಾಗೂ ನಾಟಕವನ್ನು ರಾಜ್ಯದ ಪ್ರಜ್ಞಾವಂತ ಜನ ಖಂಡುತ ಒಪ್ಪುವುದಿಲ್ಲಾ. ಲಂಬಾಣಿ ನಾಯಕನ ಮೇಲಿನ ಬಿಜೆಪಿಗರ ಈ ದುರ್ವತನೆಯನ್ನು ನಾನು ತೀಕ್ಷ್ಣವಾಗಿ ಖಂಡಿಸುತ್ತೇನೆ ಎಂದು ಅವರು ಹೇಳಿದ್ದಾರೆ.
ಬಸವ ತತ್ವಕ್ಕೆ ಮಾಡಿದ ಅವಮಾನ!
ಬಿಜೆಪಿಗರ ಆಲೋಚನೆ ಮನುಸ್ಮೃತಿ ಆಲೋಚನೆ ದಲಿತ ಸಮುದಾಯದ ರುದ್ರಪ್ಪ ಲಮಾಣಿ ಅವರು ಪೀಠದ ಮೇಲೆ ಕೂತಿರುವುದನ್ನ ನೋಡಿ ಇವರಿಗೆ ಸಹಿಸಿಕೊಳ್ಳಲಾಗುತ್ತಿಲ್ಲ. ನಾವು ಎಂದಿಗೂ ಇವರ ರೀತಿ ಸದನದಲ್ಲಿ ನಡೆದುಕೊಂಡಿಲ್ಲ.ಬಿಜೆಪಿಗರ ನಡೆ ಸಮಾಜಕ್ಕೆ ಮಾಡಿದ ಅವಮಾನ, ಕರ್ನಾಟಕಕ್ಕೆ ಮಾಡಿದ ಅಪಮಾನ, ಬಸವ ತತ್ವಕ್ಕೆ ಮಾಡಿದ ಅವಮಾನ. ಬಿಜೆಪಿಗರ ದೂರನಡತೆಯಿಂದ ಉಪ ಸಭಾಪತಿಗಳಿಗೆ ಏನಾದ್ರೂ ನೋವಾಗಿದ್ದರೆ ವಯಕ್ತಿಕವಾಗಿ ಹಾಗೂ ಎಲ್ಲರ ಪರವಾಗಿ ನಾನು ಕ್ಷಮೆಯಾಚಿಸುತ್ತೇನೆ.
ತಾಲಿಬಾನಿಗಳಿಗಿಂತ ಅಸಭ್ಯವಾಗಿ ಗೂಂಡಾಗಿರಿ!
ಸದನದಲ್ಲಿ ತಾಲಿಬಾನಿಗಳಿಗಿಂತ ಅಸಭ್ಯವಾಗಿ ಸ್ಪೀಕರ್ ಮೇಲೆಯೇ ಗೂಂಡಾಗಿರಿ ನಡೆಸಿದ್ದಾರೆ ಬಿಜೆಪಿಯವರು, ಬೊಮ್ಮಾಯಿಯವರು ನಮಗೆ ತಾಲಿಬಾನ್ ಸರ್ಕಾರ ಎಂದಿದ್ದಾರೆ, ಆದರೆ ಬೊಮ್ಮಾಯಿಯವರು ಉತ್ತರಿಸಲೇಬೇಕಾದ ಪ್ರಶ್ನೆ ಒಂದಿದೆ, ಶ್ರೀ ಬೊಮ್ಮಾಯಿಯವರು ಪಾಕಿಸ್ತಾನದಲ್ಲಿ ಯಾವಾಗ ಮುಖ್ಯಮಂತ್ರಿಯಾಗಿದ್ದರು, ಯಾಕಾಗಿ ಆಗಿದ್ದರು? ಈ ಪ್ರಶ್ನೆ ನಾವು ಕೇಳುತ್ತಿರುವುದಲ್ಲ, ವಿರೋಧ ಪಕ್ಷದ ನಾಯಕನ ಸ್ಥಾನಕ್ಕೆ ಬೊಮ್ಮಾಯಿಯವರ ಪ್ರತಿಸ್ಪರ್ಧಿಯಾಗಿರುವ ಅವರದ್ದೇ ಪಕ್ಷದ ಯತ್ನಾಳ್ ಅವರು ಕೇಳುತ್ತಿರುವುದು. ಬೊಮ್ಮಾಯಿಯವರಿಗೆ ನೀವು ಕರ್ನಾಟಕದ ಮುಖ್ಯಮಂತ್ರಿಯೇ ಲಾಹೋರ್ ಮುಖ್ಯಮಂತ್ರಿಯೇ ಎಂದು ಕೇಳಿದ್ದರಂತೆ, ಬೊಮ್ಮಾಯಿಯವರು ಯತ್ನಾಳ್ ಅವರ ಈ ಮಾತಿಗೆ ಏನು ಹೇಳುತ್ತಾರೋ ಅದನ್ನು ಮೊದಲು ಸ್ಪಷ್ಟಪಡಿಸಲಿ, ನಂತರ ತಾಲಿಬಾನ್ ಕಡೆ ಹೋಗಲಿ ಎಂದು ಮಾಜಿ ಸಚಿವ ಬಸನಗೌಡ ಪಾಟೀಲ್ ಯತ್ನಾಳ್ ಅವರ ವಿಡಿಯೋ ಟ್ವೀಟ್ ಮಾಡಿ ಸಚಿವ ಖರ್ಗೆ ತಿರುಗೇಟು ನೀಡಿದ್ದಾರೆ.
Share your comments