Petrol Price ಮತ್ತು Diesel Price 137 ದಿನಗಳ ಕಾಲ ಪರಿಷ್ಕರಣೆಯಾಗದಿರುವುದನ್ನು (Price Hike) ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಸಮರ್ಥಿಸಿಕೊಂಡಿದ್ದಾರೆ. ಇಂಧನ ಪೂರೈಕೆ ಸರಪಳಿಯಲ್ಲಿನ ಅಡಚಣೆ, ಉಕ್ರೇನ್ ಯುದ್ಧದಿಂದಾಗಿ ಜಾಗತಿಕ ತೈಲ ಬೆಲೆಯಲ್ಲಿ ಏರಿಕೆಯಾಗಿರುವುದರಿಂದ ಕಳೆದ ವಾರದಿಂದ ಇಂಧನ Price Hike ಆಗುತ್ತಿದೆ ಎಂದು ಅವರು ಹೇಳಿದ್ದಾರೆ.
ಇದನ್ನು ಓದಿರಿ: ಟ್ರೈನಿ ಹುದ್ದೆಗಳಿಗೆ IFFCO ನೇಮಕಾತಿ
ಗ್ರಾಹಕರೇ ದಯವಿಟ್ಟು ಗಮನಿಸಿ.. ಏಪ್ರಿಲ್ 1 ರಿಂದ ಬದಲಾಗುತ್ತಿರುವ ಈ ನಿಯಮಗಳ ಬಗ್ಗೆ ನಿಮಗೆಷ್ಟು ಗೊತ್ತು..?
ರಾಜ್ಯಸಭೆಯಲ್ಲಿ ಮಾತನಾಡಿದ ಅವರು, ಜಾಗತಿಕ Fuel Price hike ಮತ್ತು ಅಡಚಣೆ ಒಂದೆರಡು ವಾರಗಳ ಹಿಂದಿನಿಂದ ನಡೆಯುತ್ತಿದೆ. ಅದಕ್ಕೆ ಪ್ರತಿಯಾಗಿ ಬೆಲೆ ಏರಿಕೆಯಾಗುತ್ತಿದೆ. ಆದರೆ ಚುನಾವಣೆಗಾಗಿ ಇಂಧನ ಬೆಲೆ ಪರಿಷ್ಕರಣೆ ನಿಲ್ಲಿಸಲಾಗಿತ್ತು ಎಂಬುದು ಸುಳ್ಳು ಎಂದು ಹೇಳಿದರು.
ರಷ್ಯಾ ಆಕ್ರಮಣಕ್ಕೂ ಮೊದಲೇ ಅಂತಾರಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆ ಏರಿಕೆಯಾಗಿತ್ತು. ಈ ಸಮಯದಲ್ಲಿ ಭಾರತ ಒಂದು ಬ್ಯಾರಲ್ಗೆ 100.71 ಡಾಲರ್ ನೀಡಿ ಖರೀದಿಸುತ್ತಿತ್ತು.
ಆದರೆ ಕಳೆದ ನವೆಂಬರ್ನಲ್ಲಿ ಒಂದು ಬ್ಯಾರಲ್ ಕಚ್ಚಾ ತೈಲದ ಬೆಲೆ ಬ್ಯಾರಲ್ಗೆ 82 ಡಾಲರ್ ಇತ್ತು. ಪಂಚರಾಜ್ಯ ಚುನಾವಣೆಗಳು ಘೊಷಣೆಯಾದ ನಂತರ ಇಂಧನ ಬೆಲೆ ಪರಿಷ್ಕರಣೆಯನ್ನು ಸರ್ಕಾರಿ ಸ್ವಾಮ್ಯದ ತೈಲ ಕಂಪನಿಗಳು ನಿಲ್ಲಿಸಿದ್ದವು.
Bottle Gourd Home Gardening! ಮನೆಯಲ್ಲಿಯೇ ಬೆಳೆಯಿರಿ!
ವಾರದಲ್ಲಿ ಪೆಟ್ರೋಲ್, ಡೀಸೆಲ್ ಬೆಲೆ 4.80 ರು. ಏರಿಕೆ (Petrol Price -Diesel Price Hike)
ದೇಶದಲ್ಲಿ ಪೆಟ್ರೋಲ್, ಡೀಸೆಲ್ ಬೆಲೆಯಲ್ಲಿ ಸತತ ಏರಿಕೆ ಕಂಡು ಬರುತ್ತಿದ್ದು, ಮಂಗಳವಾರ ಮತ್ತೆ ಪೆಟ್ರೋಲ್ ಬೆಲೆ ಪ್ರತಿ ಲೀಟರಿಗೆ 80 ಪೈಸೆ ಹಾಗೂ Diesel Price 70 ಪೈಸೆಯಷ್ಟುಏರಿಕೆಯಾಗಿದೆ.
ಇದರಿಂದಾಗಿ ಕಳೆದ ಒಂದೇ ವಾರದಲ್ಲಿ ಪೆಟ್ರೋಲ್ ಹಾಗೂ ಡೀಸೆಲ್ 4.80 ರು. ತುಟ್ಟಿಯಾದಂತಾಗಿದೆ. ಈ ಮೂಲಕ ದೆಹಲಿ ಹಾಗೂ ಹಲವಾರು ರಾಜ್ಯಗಳ ರಾಜಧಾನಿಯಲ್ಲಿ Petrol Price 100ರ ಗಡಿಯನ್ನು ದಾಟಿದೆ.
Agriculture super app! ರೈತರಿಗೆ Super App!
ಮಾರ್ಚ್ 22 ರಿಂದ ಈವರೆಗೆ ಒಟ್ಟು 7 ಬಾರಿ ಇಂಧನದ ಬೆಲೆಯನ್ನು ಪರಿಷ್ಕರಿಸಲಾಗಿದೆ. ದೆಹಲಿಯಲ್ಲಿ Petrol Price ಪ್ರತಿ ಲೀಟರಿಗೆ 100.21 ರು.ಗೆ ಏರಿಕೆಯಾಗಿದ್ದು, Diesel Price 91.47 ರು. ಆಗಿದೆ. ಅದೇ ಮುಂಬೈಯಲ್ಲಿ ಪೆಟ್ರೋಲ್ ಬೆಲೆ 115.04 ರು. ಹಾಗೂ ಡೀಸೆಲ್ ಬೆಲೆ 99.25 ರಷ್ಟಿದೆ. ಬೆಂಗಳೂರಿನಲ್ಲಿ ಪೆಟ್ರೋಲ್ ಬೆಲೆ 105.62 ರು ಹಾಗೂ 89.70ಕ್ಕೆ ಏರಿಕೆಯಾಗಿದೆ.
ಆಂತಾರಾಷ್ಟ್ರೀಯ ಕಚ್ಚಾತೈಲದ ಬೆಲೆಯಲ್ಲಿ ಏರಿಕೆಯಾದರೂ ಪಂಚ ರಾಜ್ಯಗಳ ಚುನಾವಣೆಯ ಹಿನ್ನೆಲೆಯಲ್ಲಿ ನವೆಂಬರ್ ತಿಂಗಳಿನಿಂದಲೂ ಇಂಧನದ ಬೆಲೆಯು ಸ್ಥಿರವಾಗಿತ್ತು. ಈಗ ಉತ್ಪಾದನಾ ಹಾಗೂ ಮಾರಾಟದ ವೆಚ್ಚವನ್ನು ಸರಿದೂಗಿಸಲು ಇಂಧನದ ಬೆಲೆ ಪರಿಷ್ಕರಿಸಲಾಗುತ್ತಿದೆ.
ಹೊಲದಲ್ಲಿ ನಟಿಯರ Photos ! ದೃಷ್ಟಿಯಾಗದಿರಲೆಂದು ರೈತನ Idea!
Share your comments